ಬದಲಾಗುತ್ತಿರುವ ಋತುವಿಗೆ ತಕ್ಕಂತೆ ಗಟ್ ಹೆಲ್ದಿ ಆಗಿರಬೇಕಾದುದು ಅತ್ಯಗತ್ಯ, ಈ ಕುರಿತು ನಿಮಗೆಷ್ಟು ಗೊತ್ತು....?
ಗಟ್ ಹೆಲ್ತ್ ಕಡೆ ವಹಿಸಿದ ಆರೈಕೆ ಇಡೀ ದೇಹದ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಂತೆಯೇ ಸರಿ. ಗಟ್ ನಲ್ಲಿ ಗುಡ್/ಬ್ಯಾಡ್ ಎಲ್ಲಾ ತರಹದ ಮೈಕ್ರೋಬ್ಸ್ ಇರುತ್ತವೆ, ಇದರಿಂದಲೇ ನಮ್ಮ ಇಡೀ ದೇಹದ ಆರೋಗ್ಯ ಬ್ಯಾಲೆನ್ಸ್ಡ್ ಆಗಿರುತ್ತದೆ. ಋತುವಿನ ಬದಲಾವಣೆಗೆ ತಕ್ಕಂತೆ ಗಟ್ ಹೆಲ್ತ್ ಸಹ ಪ್ರಭಾವಿತಗೊಳ್ಳುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಇದರ ಪರಿಣಾಮ ಸ್ಪಷ್ಟ ಕಾಣುತ್ತದೆ. ಮುಖ್ಯವಾಗಿ ಮಳೆ ಕಾರಣ ಹೆಚ್ಚು ಆರ್ದ್ರತೆ, ಹೊಟ್ಟೆಯಲ್ಲಿ ಹಾನಿ ಹೆಚ್ಚಿಸುವ ರೋಗಾಣುಗಳನ್ನು ವೃದ್ಧಿಸುತ್ತದೆ. ಹೀಗಾದಾಗ ಒಟ್ಟಾರೆ ಆರೋಗ್ಯ ಖಂಡಿತಾ ಬಿಗಡಾಯಿಸುತ್ತದೆ.
ಗಟ್ ಹೆಲ್ತ್ ಕೆಡುವುದರಿಂದ ಎದೆಯಲ್ಲಿ ಉರಿ, ಹೊಟ್ಟೆ ಉಬ್ಬರಿಸುವಿಕೆ ಇತ್ಯಾದಿ ಸಮಸ್ಯೆ ಕಾಡುತ್ತದೆ. ಪಚನಕ್ರಿಯೆಯಲ್ಲಿ ಏರುಪೇರು, ನಿಶ್ಶಕ್ತಿ, ಸುಸ್ತು, ಸಂಕಟ, ಚರ್ಮದ ಆರೋಗ್ಯದಲ್ಲಿ ಹಾನಿ, ಹಾರ್ಮೋನ್ ಅಸಮತೋಲನ ಮುಂತಾದ ಹಲವು ಕಾಯಿಲೆ ಕಾಡುತ್ತದೆ. ಹೀಗಾಗಿ ಗಟ್ ಹೆಲ್ತ್ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಮಳೆಗಾಲದಲ್ಲಿ ಇದನ್ನು ಸುಧಾರಿಸು, ಸ್ವಸ್ಥವಾಗಿ ಇರಿಸಿಕೊಳ್ಳುವ ಕೆಳಗಿನ ವಿಧಾನಗಳನ್ನು ಅನುಸರಿಸಿ :
ನಿಮ್ಮ ಗಟ್ ಅಂದ್ರೆ ಹೊಟ್ಟೆ, ಸಣ್ಣ/ದೊಡ್ಡ ಕರುಳು ಸೇರಿವೆ. ನಾವು ಸೇವಿಸುವ ಪ್ರತಿ ಆಹಾರದಿಂದಲೂ ಇದು ಅದರಲ್ಲಿನ ಪೋಷಕಾಂಶಗಳನ್ನು ಜೀರ್ಣ ಮಾಡಿಸಿ, ರಕ್ತಗತವಾಗಲು ನೆರವಾಗುತ್ತದೆ. ಹಾಗೆಯೇ ಅನಗತ್ಯವಾದುದನ್ನು ಮಲವಿಸರ್ಜನೆ ಮೂಲಕ ಹೊರದೂಡುತ್ತದೆ.
ಇದರಲ್ಲಿ ಲಾಭ/ಹಾನಿ ಎರಡೂ ಉಂಟು ಮಾಡು ಮೈಕ್ರೋಬ್ಸ್ ಬೆರೆತಿರುತ್ತವೆ. ಇವುಗಳ ದೆಸೆ ಹಾಳಾದಾಗ ನಮ್ಮ ಒಟ್ಟಾರೆ ಆರೋಗ್ಯ ಬಿಗಡಾಯಿಸುತ್ತದೆ.
ಗಟ್ ಹೆಲ್ತ್ ಏಕೆ ಮುಖ್ಯ?
ವೈದ್ಯರ ಪ್ರಕಾರ, ಗಟ್ ಕೇವಲ ಆಹಾರವನ್ನು ಜೀರ್ಣಿಸುವ ಕೆಲಸವನ್ನಷ್ಟೇ ಮಾಡದು, ಇದು ಇಡೀ ದೇಹವನ್ನು ಗಂಭೀರ ರೋಗಗಳಿಂದ ದೂರವಿರಿಸುತ್ತಾ, ಇಮ್ಯುನಿಟಿ ಹೆಚ್ಚಿಸುವ ಪ್ರಯತ್ನ ಸತತ ಮಾಡುತ್ತಿರುತ್ತದೆ.
ಆಧುನಿಕ ವೈದ್ಯಕೀಯದ ಪ್ರಕಾರ, ನಮ್ಮ 80% ಇಮ್ಯುನಿಟಿ ಸಿಸ್ಟಂ ಗಟ್ ನಿಂದಲೇ ಆಗಿರುತ್ತದೆ, ಜೊತೆಗೆ ದೇಹದ ಅಧಿಕಾಂಶ ಸ್ಯಾರೊಟೊನಿನ್ ಹಾರ್ಮೋನ್, ಇದು ನಮ್ಮ ಮೆದುಳಿನಲ್ಲಿ ನ್ಯೂರೋಟ್ರಾನ್ಸ್ ಮೀಟರ್ ನ ಕೆಲಸ ಮಾಡುತ್ತಿದ್ದು, ಅದೂ ಸಹ ಗಟ್ ನಿಂದ ಪ್ರಭಾವಿತಗೊಳ್ಳುತ್ತದೆ. ಗಟ್ ಸರಿಯಾಗಿ ಕೆಲಸ ಕಾರ್ಯ ನಿರ್ವಹಿಸದಿದ್ದರೆ, ದೇಹದ ರೋಗ, ಸೋಂಕುಗಳು ಹೆಚ್ಚುತ್ತವೆ. ಇಮ್ಯುನಿಟಿ ಕುಗ್ಗುತ್ತಾ, ಹೋರಾಡುವ ಅದರ ಸಾಮರ್ಥ್ಯ ತಗ್ಗುತ್ತದೆ. ಹೀಗಾಗಿ ಹಾರ್ಮೋನ್ ಬ್ಯಾಲೆನ್ಸಿಂಗ್ ನಲ್ಲೂ ಸಮಸ್ಯೆ ಹುಟ್ಟುತ್ತದೆ. ಈ ಏರುಪೇರುಗಳಿಂದಾಗಿ ಹೆಂಗಸರಲ್ಲಿ ತೂಕ ಹೆಚ್ಚುವಿಕೆ, ಮುಟ್ಟಿನಲ್ಲಿ ಏರುಪೇರು, ಥೈರಾಯಿಡ್ ಸಮಸ್ಯೆ, ಇತ್ಯಾದಿ ಹಲವು ರೋಗಗಳು ಹೆಚ್ಚುತ್ತವೆ. ಇದು ಸಾಲದೆಂಬಂತೆ ಮಧುಮೇಹ, ಹೈ ಬಿಪಿ, ಕೊಲೆಸ್ಟ್ರಾಲ್, ಹೃದ್ರೋಗಗಳೂ ಕೂಡಿಕೊಳ್ಳುತ್ತವೆ. ಹೀಗಾಗಿ ಗಟ್ ಸಮರ್ಪಕವಾಗಿ ಕೆಲಸ ಮಾಡುವುದೊಂದೇ ದಾರಿ.
ಇದಕ್ಕಾಗಿ ನೀವು ನಿಮ್ಮ ಡೇಲಿ ರೊಟೀನ್ ನಿಂದ ಹಿಡಿದು ಡೇಲಿ ಈಟಿಂಗ್ ಹ್ಯಾಬಿಟ್ಸ್ ವರೆಗೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಲೈಫ್ ಸ್ಟೈಲ್‌ಡಯೆಟ್ ನಲ್ಲಿ ಬದಲಾವಣೆ ತಂದುಕೊಳ್ಳಬೇಕಾದುದು ಅನಿವಾರ್ಯ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯಕರ ಗಟ್ ನಿರ್ವಹಣೆ ಹೇಗೆ ಎಂದು ತಿಳಿಯೋಣವೇ? :





