– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಧಾರಾವಾಹಿಗಳ TRP ಪಟ್ಟಿ ಬಿಡುಗಡೆಯಾಗಿದ್ದು, ನಟ ಶಿಶಿರ್ ಶಾಸ್ತ್ರಿ ಭವಿಷ್ ಅಭಿನಯದ ಶ್ರೀಗಂಧದ ಗುಡಿ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರೀ ಗಂಧದ ಗುಡಿ ನಂಬರ್ 1 ಸೀರಿಯಲ್ ಆಗಿದ್ದು, ಅತೀ ಹೆಚ್ಚು ಟಿವಿಆರ್ ಪಡೆಯುತ್ತಿರುವ ಸೀರಿಯಲ್‌ಗಳ ಪೈಕಿ ಟಾಪ್ 3 ಸ್ಥಾನಕ್ಕೇರಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾಗೌಡ ಅಭಿನಯದ ಕರ್ಣ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಟಾಪ್ ಅಲ್ಲಿ ಇದೆ. ಆದರೆ ಈಗ ಕರ್ಣ ಸೀರಿಯಲ್ ಟಿಆರ್‌ಪಿಯಲ್ಲಿ ಕುಸಿತ ಕುಂಡು ಬಂದಿದೆ. ಪ್ರಸ್ತುತ ಕರ್ಣ ಧಾರಾವಾಹಿ ಅರ್ಬನ್ ಮತ್ತು ರೂರಲ್ ಮಾರ್ಕೆಟ್‌ನಲ್ಲಿ ನಂ.1 ಸ್ಥಾನದಲ್ಲೇ ಇದೆ. ಆದರೆ ಈ ಧಾರಾವಾಹಿಗೆ ಸಿಗುತ್ತಿರುವ ಟಿವಿಆರ್ ಕೇವಲ 5.7 ಅಷ್ಟೇ ಆಗಿದೆ.
ಇನ್ನೂ ಅಣ್ಣಯ್ಯ ಧಾರವಾಹಿ ಟಾಪ್ 2ಸ್ಥಾನದಲ್ಲಿದೆ ಕರ್ಣ ಧಾರಾವಾಹಿಗಿಂತ ಹೆಚ್ಚು ದೂರದಲ್ಲೇನಿಲ್ಲ ಅರ್ಬನ್ ರೂರಲ್ ಮಾರ್ಕೆಟ್‌ನಲ್ಲಿ ಅಣ್ಣಯ್ಯ ಸೀರಿಯಲ್‌ಗೆ 5.6 ಟಿವಿಆರ್ ಸಿಕ್ಕಿದೆ.ಅರ್ಬನ್ ಮಾರ್ಕೆಟ್‌ನಲ್ಲಿ ‘ಅಣ್ಣಯ್ಯ ಸೀರಿಯಲ್ ಮುನ್ನಡೆಯಲ್ಲಿದೆ. ಕೆಲವೇ ವಾರದ ಹಿಂದೆ TRPಯಲ್ಲಿ ಪೈಪೋಟಿಯಲ್ಲಿ ಲಕ್ಷ್ಮೀ ನಿವಾಸ, ಅಮೃತಧಾರೆ, ಮುದ್ದು ಸೊಸೆ ,ಮುದ್ದು ಸೊಸೆ, ನಂದಗೋಕುಲ ಸೀರಿಯಲ್‌ಗಳಿದ್ದವು. ಆದರೆ ಈಗ ಈ ಧಾರಾವಾಹಿಗಳನೆಲ್ಲಾ ಹಿಂದಿಕ್ಕಿ ಶ್ರೀಗಂಧದ ಗುಡಿ ಮೂರನೇ ಸ್ಥಾನಕ್ಕೆ ಏರಿದೆ.
ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳ TRP: ಕರ್ಣ – 5.7, ಅಣ್ಣಯ್ಯ – 5.6, ಲಕ್ಷ್ಮೀ ನಿವಾಸ – 5.1,ಅಮೃತಧಾರೆ – 5.0,ನಾ ನಿನ್ನ ಬಿಡಲಾರೆ – 4.7,ಆದಿಲಕ್ಷ್ಮೀ ಪುರಾಣ – 4.3, ಬ್ರಹ್ಮಗಂಟು – 3.9,ಕೃಷ್ಣ ರುಕ್ಕು – 2.7,ಶ್ರಾವಣಿ ಸುಬ್ರಹ್ಮಣ್ಯ – 1.9 ಇನ್ನೂ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳ TRP ಲೀಸ್ಟ್: ಶ್ರೀ ಗಂಧದ ಗುಡಿ – 5.3, ನಂದಗೋಕುಲ – 4.9, ಮುದ್ದು ಸೊಸೆ – 4.7, ಗೌರಿ ಕಲ್ಯಾಣ – 4.5, ಭಾಗ್ಯಲಕ್ಷ್ಮೀ – 3.9, ಭಾರ್ಗವಿ ಎಲ್‌ಎಲ್‌ಬಿ – 2.9, ಪವಿತ್ರ ಬಂಧನ – 2.8, ಪ್ರೇಮಕಾವ್ಯ – 2.9, ರಾಣಿ – 1.5





