ಬದಲಾಗುತ್ತಿರುವ ಋತುವಿಗೆ ತಕ್ಕಂತೆ ಗಟ್ಹೆಲ್ದಿ ಆಗಿರಬೇಕಾದುದು ಅತ್ಯಗತ್ಯ, ಕುರಿತು ನಿಮಗೆಷ್ಟು ಗೊತ್ತು….?

ಗಟ್‌ ಹೆಲ್ತ್ ಕಡೆ ವಹಿಸಿದ ಆರೈಕೆ ಇಡೀ ದೇಹದ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಂತೆಯೇ ಸರಿ. ಗಟ್‌ ನಲ್ಲಿ ಗುಡ್‌/ಬ್ಯಾಡ್‌ ಎಲ್ಲಾ ತರಹದ ಮೈಕ್ರೋಬ್ಸ್ ಇರುತ್ತವೆ, ಇದರಿಂದಲೇ ನಮ್ಮ ಇಡೀ ದೇಹದ ಆರೋಗ್ಯ ಬ್ಯಾಲೆನ್ಸ್ಡ್ ಆಗಿರುತ್ತದೆ. ಋತುವಿನ ಬದಲಾವಣೆಗೆ ತಕ್ಕಂತೆ ಗಟ್‌ ಹೆಲ್ತ್ ಸಹ ಪ್ರಭಾವಿತಗೊಳ್ಳುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಇದರ ಪರಿಣಾಮ ಸ್ಪಷ್ಟ ಕಾಣುತ್ತದೆ. ಮುಖ್ಯವಾಗಿ ಮಳೆ ಕಾರಣ ಹೆಚ್ಚು ಆರ್ದ್ರತೆ, ಹೊಟ್ಟೆಯಲ್ಲಿ ಹಾನಿ ಹೆಚ್ಚಿಸುವ ರೋಗಾಣುಗಳನ್ನು ವೃದ್ಧಿಸುತ್ತದೆ. ಹೀಗಾದಾಗ ಒಟ್ಟಾರೆ ಆರೋಗ್ಯ ಖಂಡಿತಾ ಬಿಗಡಾಯಿಸುತ್ತದೆ.

ಗಟ್‌ ಹೆಲ್ತ್ ಕೆಡುವುದರಿಂದ ಎದೆಯಲ್ಲಿ ಉರಿ, ಹೊಟ್ಟೆ ಉಬ್ಬರಿಸುವಿಕೆ ಇತ್ಯಾದಿ ಸಮಸ್ಯೆ ಕಾಡುತ್ತದೆ. ಪಚನಕ್ರಿಯೆಯಲ್ಲಿ ಏರುಪೇರು, ನಿಶ್ಶಕ್ತಿ, ಸುಸ್ತು, ಸಂಕಟ, ಚರ್ಮದ ಆರೋಗ್ಯದಲ್ಲಿ ಹಾನಿ, ಹಾರ್ಮೋನ್‌ ಅಸಮತೋಲನ ಮುಂತಾದ ಹಲವು ಕಾಯಿಲೆ ಕಾಡುತ್ತದೆ. ಹೀಗಾಗಿ ಗಟ್‌ ಹೆಲ್ತ್ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಮಳೆಗಾಲದಲ್ಲಿ ಇದನ್ನು ಸುಧಾರಿಸು, ಸ್ವಸ್ಥವಾಗಿ ಇರಿಸಿಕೊಳ್ಳುವ ಕೆಳಗಿನ ವಿಧಾನಗಳನ್ನು ಅನುಸರಿಸಿ :

ನಿಮ್ಮ ಗಟ್‌ ಅಂದ್ರೆ ಹೊಟ್ಟೆ, ಸಣ್ಣ/ದೊಡ್ಡ ಕರುಳು ಸೇರಿವೆ. ನಾವು ಸೇವಿಸುವ ಪ್ರತಿ ಆಹಾರದಿಂದಲೂ ಇದು ಅದರಲ್ಲಿನ ಪೋಷಕಾಂಶಗಳನ್ನು ಜೀರ್ಣ ಮಾಡಿಸಿ, ರಕ್ತಗತವಾಗಲು ನೆರವಾಗುತ್ತದೆ. ಹಾಗೆಯೇ ಅನಗತ್ಯವಾದುದನ್ನು ಮಲವಿಸರ್ಜನೆ ಮೂಲಕ ಹೊರದೂಡುತ್ತದೆ.

ಇದರಲ್ಲಿ ಲಾಭ/ಹಾನಿ ಎರಡೂ ಉಂಟು ಮಾಡು ಮೈಕ್ರೋಬ್ಸ್ ಬೆರೆತಿರುತ್ತವೆ. ಇವುಗಳ ದೆಸೆ ಹಾಳಾದಾಗ ನಮ್ಮ ಒಟ್ಟಾರೆ ಆರೋಗ್ಯ ಬಿಗಡಾಯಿಸುತ್ತದೆ.

ಗಟ್ಹೆಲ್ತ್ ಏಕೆ ಮುಖ್ಯ?

ವೈದ್ಯರ ಪ್ರಕಾರ, ಗಟ್‌ ಕೇವಲ ಆಹಾರವನ್ನು ಜೀರ್ಣಿಸುವ ಕೆಲಸವನ್ನಷ್ಟೇ ಮಾಡದು, ಇದು ಇಡೀ ದೇಹವನ್ನು ಗಂಭೀರ ರೋಗಗಳಿಂದ ದೂರವಿರಿಸುತ್ತಾ, ಇಮ್ಯುನಿಟಿ ಹೆಚ್ಚಿಸುವ ಪ್ರಯತ್ನ ಸತತ ಮಾಡುತ್ತಿರುತ್ತದೆ.

ಆಧುನಿಕ ವೈದ್ಯಕೀಯದ ಪ್ರಕಾರ, ನಮ್ಮ 80% ಇಮ್ಯುನಿಟಿ ಸಿಸ್ಟಂ ಗಟ್‌ ನಿಂದಲೇ ಆಗಿರುತ್ತದೆ, ಜೊತೆಗೆ ದೇಹದ ಅಧಿಕಾಂಶ ಸ್ಯಾರೊಟೊನಿನ್‌ ಹಾರ್ಮೋನ್‌, ಇದು ನಮ್ಮ ಮೆದುಳಿನಲ್ಲಿ ನ್ಯೂರೋಟ್ರಾನ್ಸ್ ಮೀಟರ್‌ ನ ಕೆಲಸ ಮಾಡುತ್ತಿದ್ದು, ಅದೂ ಸಹ ಗಟ್‌ ನಿಂದ ಪ್ರಭಾವಿತಗೊಳ್ಳುತ್ತದೆ. ಗಟ್‌ ಸರಿಯಾಗಿ ಕೆಲಸ ಕಾರ್ಯ ನಿರ್ವಹಿಸದಿದ್ದರೆ, ದೇಹದ ರೋಗ, ಸೋಂಕುಗಳು ಹೆಚ್ಚುತ್ತವೆ. ಇಮ್ಯುನಿಟಿ ಕುಗ್ಗುತ್ತಾ, ಹೋರಾಡುವ ಅದರ ಸಾಮರ್ಥ್ಯ ತಗ್ಗುತ್ತದೆ. ಹೀಗಾಗಿ ಹಾರ್ಮೋನ್‌ ಬ್ಯಾಲೆನ್ಸಿಂಗ್‌ ನಲ್ಲೂ ಸಮಸ್ಯೆ ಹುಟ್ಟುತ್ತದೆ. ಈ ಏರುಪೇರುಗಳಿಂದಾಗಿ ಹೆಂಗಸರಲ್ಲಿ ತೂಕ ಹೆಚ್ಚುವಿಕೆ, ಮುಟ್ಟಿನಲ್ಲಿ ಏರುಪೇರು, ಥೈರಾಯಿಡ್‌ ಸಮಸ್ಯೆ, ಇತ್ಯಾದಿ ಹಲವು ರೋಗಗಳು ಹೆಚ್ಚುತ್ತವೆ. ಇದು ಸಾಲದೆಂಬಂತೆ ಮಧುಮೇಹ, ಹೈ ಬಿ‌ಪಿ, ಕೊಲೆಸ್ಟ್ರಾಲ್, ಹೃದ್ರೋಗಗಳೂ ಕೂಡಿಕೊಳ್ಳುತ್ತವೆ. ಹೀಗಾಗಿ ಗಟ್‌ ಸಮರ್ಪಕವಾಗಿ ಕೆಲಸ ಮಾಡುವುದೊಂದೇ ದಾರಿ.

ಇದಕ್ಕಾಗಿ ನೀವು ನಿಮ್ಮ ಡೇಲಿ ರೊಟೀನ್‌ ನಿಂದ ಹಿಡಿದು ಡೇಲಿ ಈಟಿಂಗ್‌ ಹ್ಯಾಬಿಟ್ಸ್ ವರೆಗೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಲೈಫ್‌ ಸ್ಟೈಲ್‌ಡಯೆಟ್‌ ನಲ್ಲಿ ಬದಲಾವಣೆ ತಂದುಕೊಳ್ಳಬೇಕಾದುದು ಅನಿವಾರ್ಯ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯಕರ ಗಟ್‌ ನಿರ್ವಹಣೆ ಹೇಗೆ ಎಂದು ತಿಳಿಯೋಣವೇ? :

ಆಯ್ಲಿ ಫುಡ್ಬೇಡ

ಮಳೆಗಾಲದಲ್ಲಿ ಗಟ್‌ ಹೆಚ್ಚು ಸುಸ್ತು ಸಂಕಟಕ್ಕೆ ಒಳಗಾಗಬಾರದು ಎಂದರೆ, ಆದಷ್ಟೂ ಕರಿದ, ಹುರಿದ ಪದಾರ್ಥಗಳಿಂದ ದೂರವಿರಿ. ಅದರಲ್ಲೂ ಡೀಪ್‌ ಫ್ರೈಡ್‌ ತಿಂಡಿಗಳಾದ ವಡೆ, ಬೋಂಡಾ, ಪೂರಿ, ಸಮೋಸಾ, ಚೋಲೆಭಟೂರೆ ಇತ್ಯಾದಿ ಬೇಡವೇ ಬೇಡ. ಹಾಗೆ ಮಾಡದಿದ್ದರೆ, ಇಂಥವನ್ನು ಜೀರ್ಣ ಮಾಡಿಸಲು ಗಟ್‌ ಹರಸಾಹಸಪಟ್ಟು ಹಾನಿಗೆ ಒಳಗಾಗುತ್ತದೆ. ಇದರಿಂದ ಅಜೀರ್ಣ, ಗ್ಯಾಸ್ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ.

ನೋ ಹೆವಿ ಡೇರಿ ಪ್ರಾಡಕ್ಟ್ಸ್

ಮಳೆಗಾಲದಲ್ಲಿ ಹೆವಿ ಡೇರಿ ಉತ್ಪನ್ನಗಳನ್ನು ಸೇವಿಸಬೇಡಿ. ಇದರಿಂದ ಪಚನಕ್ರಿಯೆ ಬಲು ಕುಂಠಿತಗೊಳ್ಳುತ್ತದೆ. ಇದರ ಬದಲು ಮನೆಯಲ್ಲೇ ತಯಾರಿಸಲಾದ ತಾಜಾ ಸೂಪ್‌ ಮಾಡಿ ಸವಿಯಿರಿ. ಟೊಮೇಟೊ, ಪಾಲಕ್‌, ಮಿಕ್ಸ್ಡ್ ದಾಲ್ ಇತ್ಯಾದಿ ಬಗೆಬಗೆಯನ್ನು ಟ್ರೈ ಮಾಡಿ. ಇವನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಲೈಟ್‌ ಡೇರಿ ಪ್ರಾಡಕ್ಟ್ಸ್ ಆದ ಮೊಸರು, ಕ್ಯಾಫೇರ್‌ ಇತ್ಯಾದಿ ಸೇವಿಸಿ. ಇದು ಸುಲಭವಾಗಿ ಜೀರ್ಣವಾಗುತ್ತದೆ.

ಸದಾ ಹೈಡ್ರೇಟೆಡ್ಆಗಿರಿ

ಉತ್ತಮ ಗಟ್‌ ಹೆಲ್ತ್ ಗಾಗಿ ಸಾಕಷ್ಟು ಹೈಡ್ರೇಟೆಡ್‌ ಆಗಿರಬೇಕು, ಅಂದ್ರೆ ಹೆಚ್ಚು ಹೆಚ್ಚು ನೀರನ್ನು ಸೇವಿಸುತ್ತಿರಬೇಕು. ಇದರಿಂದ ದೇಹದಲ್ಲಿನ ವಿಷಾಣುಗಳನ್ನು ಹೊರಹಾಕಲು ಸುಲಭವಾಗುತ್ತದೆ. ಆಗ ಗಟ್‌ ಚಟುವಟಿಕೆಯಿಂದ ತನ್ನ ಕಾರ್ಯ ನಿರ್ವಹಿಸುತ್ತದೆ. ಇಷ್ಟು ಮಾತ್ರವಲ್ಲದೆ, ಪಚನಕ್ರಿಯೆ ಸುಧಾರಿಸಲು ಹನೀ, ಜಿಂಜರ್‌, ಬಿಸಿನೀರಿಗೆ ನಿಂಬೆರಸ, ಹರ್ಬಲ್ ಟೀ, ಎಳನೀರು, ಸೌತೇಕಾಯಿ, ಕಲ್ಲಂಗಡಿಹಣ್ಣು ಇತ್ಯಾದಿ ಹೆಚ್ಚಾಗಿ ಸೇವಿಸಬೇಕು. ಇದರಿಂದ ನಿಮ್ಮ ಹೈಡ್ರೇಶನ್‌ ಲೆವೆಲ್ ‌ಉತ್ತಮ ಸ್ಥಿತಿಗೇರುತ್ತದೆ. ಹಣ್ಣಿನ ರಸದ ಬದಲು ನೇರವಾಗಿ ಹಣ್ಣನ್ನೇ ಸೇವಿಸಿ.

ಲೈಟ್ಹಾಟ್ಫುಡ್

ಮಳೆಗಾಲದಲ್ಲಿ ಆಗ ತಾನೇ ತಯಾರಿಸಿದ ಬಿಸಿ ಅಡುಗೆ ಊಟ ಮಾಡುವುದೇ ಸರಿ. ಆದಷ್ಟೂ ತಂಗಳನ್ನು ಅವಾಯ್ಡ್ ಮಾಡಿ. ಬಿಸಿಯೂಟದ ಸೇವನೆ ಪಚನಾಗ್ನಿಯನ್ನು ಉತ್ತೇಜಿಸಲು ನೆರವಾಗುತ್ತದೆ. ಇದರಿಂದ ದೇಹಕ್ಕೆ ಆಹಾರದ ಫೈಬರ್ಸ್‌ ನ್ನು ಬ್ರೇಕ್ ಮಾಡಲು ಸುಲಭವಾಗುತ್ತದೆ. ನಿಮ್ಮ ಆಹಾರ ಎಂದೂ ಹೆವಿ ಬೇಡ, ಆದಷ್ಟೂ ಲೈಟ್‌ ಆಗಿರಲಿ. ಅದರಲ್ಲಿನ ಆಹಾರದ ಅಂಶಗಳು ಪಚನ ಕ್ರಿಯೆಗೆ ಸಪೋರ್ಟಿವ್ ‌ಆಗಿರಬೇಕು. ಸೂಪ್‌, ಸ್ಟ್ಯೂ, ಬೆಂದ ತರಕಾರಿ, ತಾಜಾ ಮೊಳಕೆಕಾಳು ಇತ್ಯಾದಿ ಸೇವಿಸುತ್ತಿರಿ.

ಮಾರುಕಟ್ಟೆಯಲ್ಲಿ ಹಲವು ರೆಡಿಮೇಡ್‌ ಸೂಪ್‌ ಮಿಕ್ಸ್ ಲಭ್ಯ. ಅವನ್ನು ತಂದು ಬಿಸಿನೀರಿಗೆ ಕದಡಿಕೊಂಡರೆ ಆಯ್ತು. ಇದರಿಂದ ಗಟ್ ಗೆ ಹೆವಿ ಟ್ಯಾಕ್ಸ್ ಆಗುವುದಿಲ್ಲ.

ಫೈಬರ್ಯುಕ್ತ ಆಹಾರ

ನಾರಿನಂಶವುಳ್ಳ ಆಹಾರ ಸಾಮಗ್ರಿಯ ಸೇವನೆಯಿಂದ ಪಚನಕ್ರಿಯೆ ಸುಲಭವಾದೀತು. ಹೀಗಾಗಿ ದಿನಕ್ಕೆ 2 ಸಲ ಫೈಬರ್‌ ಅಧಿಕವುಳ್ಳ ಆಹಾರ ಪದಾರ್ಥ ಸೇವಿಸಿ. ಅಂದ್ರೆ ಹಣ್ಣು, ತರಕಾರಿ, ಮೊಳಕೆಕಾಳು, ಇಡಿಯಾದ ಅಕ್ಕಿ, ಗೋದಿ, ಜೋಳದ ಆಹಾರ ಇತ್ಯಾದಿಗಳಿರಲಿ. ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ. ಇದರಲ್ಲಿನ ನಾರಿನಂಶದಿಂದ ಹೆಚ್ಚಿನ ಲಾಭವಿದೆ, ಅತ್ಯಗತ್ಯ ಪೋಷಕಾಂಶಗಳೂ ಸಿಗುತ್ತವೆ. ತಾಜಾ ಹಸಿ ತರಕಾರಿ ಹಣ್ಣನ್ನು ಮಾತ್ರ ನಿರ್ಲಕ್ಷಿಸಬೇಡಿ.

ಪ್ರೊಬಯೋಟಿಕ್ಆಹಾರ ಪದಾರ್ಥ

ಮಳೆಗಾಲದಲ್ಲಿ ಎಷ್ಟೋ ಮೈಕ್ರೋಬ್ಸ್ ಕಾರಣ ನಮ್ಮ ಗಟ್‌ ಗೆ ಬ್ಯಾಕ್ಟೀರಿಯಾ ದಾಳಿಯಿಂದಾಗಿ ಬ್ಯಾಲೆನ್ಸ್ ಬಿಗಡಾಯಿಸುತ್ತದೆ. ಹೀಗಾಗಿ ಪ್ರೊಬಯೋಟಿಕ್‌ ಯುಕ್ತ ಪದಾರ್ಥಗಳಾದ ಮೊಸರು, ಪನೀರ್‌, ಆಲಿವ್‌, ಈರುಳ್ಳಿ ಇತ್ಯಾದಿಗಳನ್ನು ಆಹಾರದಲ್ಲಿ ಬೆರೆಸಿಕೊಳ್ಳಿ. ಈ ರೀತಿ ಆರೋಗ್ಯಕರ ಬ್ಯಾಕ್ಟೀರಿಯಾ ಬ್ಯಾಲೆನ್ಸ್ ಆಗುವುದರಿಂದ ಗಟ್‌ ನ ಆರೋಗ್ಯ ಸುರಕ್ಷಿತವಾಗುತ್ತದೆ.

ನಿಧಾನವಾಗಿ ಆಹಾರ ಸೇವಿಸಿ

ಆಹಾರ ಸೇವಿಸುವಾಗ ಅರ್ಜೆಂಟ್‌, ಗಡಿಬಿಡಿ ಮಾಡಿಕೊಳ್ಳಬಾರದು, ಗಬಗಬ ಎಂದು ಬಾಯಿಗೆ ತುರುಕಿಕೊಳ್ಳಬಾರದು. ಹೀಗಾಗಿ ಪ್ರತಿ ಸಲ ಆಹಾರ ಸೇವಿಸುವಾಗ ಅದನ್ನು ನಿಧಾನವಾಗಿ ಅಗಿದು, ಶಾಂತ ಮನಸ್ಸಿನಿಂದ ಒಂದೆಡೆ ಕುಳಿತು ತಿನ್ನಬೇಕು. ಅದರಲ್ಲೂ ಮಳೆಗಾಲದಲ್ಲಿ ಪಚನಕ್ರಿಯೆ ಬಲು ನಿಧಾನ. ಹಾಗಾಗಿ ಇದು ಇಂಬ್ಯಾಲೆನ್ಸ್ ಆಗದಂತೆ ನೋಡಿಕೊಳ್ಳಿ. ದೊಡ್ಡ ದೊಡ್ಡ ತುತ್ತನ್ನು ಬಾಯಿಗೆ ತುರುಕಬಾರದು. ಇದರಿಂದ ಸಿಸ್ಟಂ ಅದನ್ನು ನೀಟಾಗಿ ಬ್ರೇಕ್‌ ಮಾಡಿ ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಮೊಬೈಲ್ ನಲ್ಲಿ ಕಣ್ಣಿಟ್ಟು ಊಟ ಮಾಡಲು ಹೋಗಬೇಡಿ.

ದೈಹಿಕವಾಗಿ ಸಕ್ರಿಯರಾಗಿರಿ

ನಿಯಮಿತ ವ್ಯಾಯಾಮ, ಆಟೋಟಗಳಿಂದ ದೇಹದ ಮಾಂಸಖಂಡಗಳು ಸಕ್ರಿಯಕೊಂಡು ಪಚನಕ್ರಿಯೆ ಸಲೀಸಾಗುತ್ತದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣಗೊಂಡು ರಕ್ತದಲ್ಲಿ ವಿಲೀನವಾಗಲು ಸಹಕಾರಿ. ಅನಗತ್ಯ ವಸ್ತು ಮಲ ವಿಸರ್ಜನೆ ಮೂಲಕ ಹೊರಹೋಗಲಿಕ್ಕೂ ದಾರಿ. ನಿಮ್ಮ ಪಚನತಂತ್ರ ಸದಾ ಆ್ಯಕ್ಟಿವ್ ‌ಆಗಿರಲು ಹೆಚ್ಚು ಹೆಚ್ಚಾಗಿ ವಾಕಿಂಗ್‌, ಜಾಗಿಂಗ್‌, ಯೋಗಾಭ್ಯಾಸ, ದೈನಂದಿನ ವ್ಯಾಯಾಮ ಇತ್ಯಾದಿ ರೂಢಿಸಿಕೊಳ್ಳಿ.

ಆಧುನಿಕ ಜೀವನಶೈಲಿಯಿಂದ ಗಟ್‌ ಬಹಳ ಬೇಗ ಪ್ರಭಾವಿತಗೊಳ್ಳುತ್ತದೆ. ದಿನವಿಡೀ ಕುಳಿತೇ ಕೆಲಸ ಮಾಡುವುದು, ಆರಾಮವಾಗಿ ಸೋಫಾಗೆ ಅರ್ಧ ಒರಗಿ ಟಿವಿ ನೋಡುವುದು, ಬೇಸರಕ್ಕೆ ಸದಾ ಜಂಕ್‌ ಫುಡ್‌ ಸೇವನೆ, ಸೋಮಾರಿತನದಿಂದ ಮೇಲಿನ ಯಾವ ವ್ಯಾಯಾಯಾಮವನ್ನೂ ಮಾಡದೆ ಇರುವುದು ಇತ್ಯಾದಿಗಳೆಲ್ಲ ಗಟ್‌ ಹಾನಿಗೆ ಮೂಲ. ಗಟ್‌ ಹೆಲ್ತ್ ಇಡೀ ದೇಹದ ಆರೋಗ್ಯಕ್ಕೆ ನಾಂದಿ. ಹೀಗಾಗಿ ಇದನ್ನು ಎಂದೂ ನಿರ್ಲಕ್ಷಿಸದಿರಿ. ಮೇಲಿನ ಎಲ್ಲಾ ಸಲಹೆ ಅನುಸರಿಸಿ, ಈ ಮಳೆಗಾಲದ ದಿನಗಳಲ್ಲಿ ಉತ್ತಮ ಗಟ್‌ ಆರೋಗ್ಯ ಹೊಂದಿ, ಮಳೆಯನ್ನು ಆನಂದಿಸಿ!

ಚಂದ್ರಕಲಾ

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ