ವ್ಯಾಲೆಂಟೈನ್ಸ್ ಡೇ ಪಾರ್ಟಿಗಾಗಿ ಪರ್ಫೆಕ್ಟ್ ಫಿಗರ್ಬಾಡಿ ಶೇಪ್ಗಾಗಿ ಡಯೆಟ್ಮಾಡುತ್ತಿದ್ದೀರಾ? ಹಾಗಾದರೆ ಅಗತ್ಯ ನೀವು ಬಳಸಬೇಕಾದುದು ಪ್ರೇಮಿಗಳ ಪ್ರಿಯ ಆಯ್ಕೆಯಾದ ಪಿಸ್ತಾ…..!

ಸಾಮಾನ್ಯವಾಗಿ ಜನರಲ್ಲಿ ಇರುವ ತಪ್ಪು ಗ್ರಹಿಕೆ ಎಂದರೆ, ಡ್ರೈ ಫ್ರೂಟ್ಸ್ ಆದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಸೇವಿಸಿದ ತಕ್ಷಣ ದಪ್ಪ ಆಗಿಬಿಡ್ತೀವಿ ಎಂಬುದು. ಹೀಗಾಗಿಯೇ ಇದನ್ನು ಆದಷ್ಟೂ ಕನಿಷ್ಠ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬ ನಂಬಿಕೆ ಇದೆ. ಈ ನಂಬಿಕೆಯಿಂದಾಗಿಯೇ ಜನ ಈ ಡ್ರೈ ಫ್ರೂಟ್ಸ್ ನ್ನು ಅತಿ ಕನಿಷ್ಠ ಪ್ರಮಾಣದಲ್ಲಿ ಅಂದ್ರೆ ಹಬ್ಬಗಳಂಥ ಅಪರೂಪದ ದಿನಗಳಲ್ಲಿ ಪಾಯಸ, ಖೀರು ಇತ್ಯಾದಿ ಸಿಹಿಗಳಿಗೆ ಮಾತ್ರ ಬಳಸುತ್ತಾರೆ.

ಮಹಾನಗರಗಳ ಪ್ರಮುಖ ಡಯೆಟಿಷಿಯನ್ಸ್, ಪಿಸ್ತಾ ಕುರಿತಾಗಿ ಹೀಗೆ ವಿವರಿಸುತ್ತಾರೆ.

ನ್ಯೂಟ್ರಿಶನ್‌ ಪವರ್‌ ಹೌಸ್‌ ಸಾಮಾನ್ಯವಾಗಿ ಪಿಸ್ತಾವನ್ನು ಭಾರತೀಯ ಸಿಹಿ ವ್ಯಂಜನಗಳಲ್ಲಿ, ಗಾರ್ನಿಶಿಂಗ್‌ ರೂಪದಲ್ಲಿ ಕೊನೆಯಲ್ಲಿ ಸೇರಿಸುವ ಪರಿಕರವಾಗಿ ಮಾತ್ರ ಬಳಕೆಯಲ್ಲಿದೆ. ಆದರೆ ವಾಸ್ತವದಲ್ಲಿ ಇದು ಒಂದು ನ್ಯೂಟ್ರಿಶನ್‌ ಪವರ್‌ ಹೌಸ್‌ ಎಂದೇ ಹೇಳಬಹುದು. ಈ ಸಣ್ಣ ಸಣ್ಣ ನಟ್ಸ್ 30ಕ್ಕೂ ಅಧಿಕ ಬಗೆಯ ವಿಟಮಿನ್ಸ್, ಮಿನರಲ್ಸ್ ಹಾಗೂ ಇತರ ಪೌಷ್ಟಿಕಾಂಶಗಳ ಗೂಡಾಗಿದೆ. ಇದು 100% ಸ್ವಾದಿಷ್ಟ ರುಚಿ ಒದಗಿಸುವುದಲ್ಲದೆ, ನಮ್ಮ ದೇಹ ಬೇಡುವ ಸಕಲ ಬಗೆಯ ಪೌಷ್ಟಿಕಾಂಶಗಳನ್ನೂ ಒದಗಿಸಬಲ್ಲದು. ನೀವು ನಿಮ್ಮ ಆಹಾರದಲ್ಲಿ ಇದನ್ನು ನಿಯಮಿತವಾಗಿ ಬಳಸಿಕೊಂಡಿದ್ದೇ ಆದಲ್ಲಿ, ಅಪಾರ ಪೌಷ್ಟಿಕಾಂಶಗಳು ನಿಮ್ಮದಾಗಲಿದೆ.

ಬಿ‌.ಪಿ, ಶುಗರ್‌ ವುಳ್ಳವರು ಸಹ ಇದನ್ನು ದೈನಂದಿನ ಆಹಾರದಲ್ಲಿ ಬೆರೆಸಿಕೊಂಡು ಬಳಸಬಹುದಾಗಿದೆ. ಹೆಚ್ಚಿನ ಪೌಷ್ಟಿಕಾಂಶ ಬಯಸುವವರು ಅದನ್ನು ಪಡೆಯಲು, ಇದರ ಸೇವನೆ ಒಂದು ಸರಳ ಮಾರ್ಗವಾಗಿದೆ.

ಪೌಷ್ಟಿಕಾಂಶಗಳ ಗಣಿ ಪ್ರೋಟೀನ್‌ : ನಿಮ್ಮ ದೇಹ ಬೇಡುವ ಎಲ್ಲಾ ಬಗೆಯ ಪ್ರೋಟೀನ್‌ ಗಳ ಒಂದು ಅತ್ಯುತ್ತಮ ಮೂಲ ಇದಾಗಿದೆ. ಇದರಲ್ಲಿ 9 ಬಗೆಯ ಅಮೀನೋ ಆ್ಯಸಿಡ್ಸ್ ಇವೆ. ಪ್ರೋಟೀನ್‌ ಒಂದು ಮೈಕ್ರೋನ್ಯೂಟ್ರಿಯೆಂಟ್‌ ಆಗಿದ್ದು, ಸಸ್ಯಾಹಾರಿಗಳಿಗೆ ಹೆಚ್ಚು ಮುಖ್ಯವಾಗುತ್ತದೆ. ಎಲ್ಲಿ ಸಸ್ಯಮೂಲದ ಪ್ರೋಟೀನ್‌ ನ ಕೊರತೆ ಕಾಡುತ್ತದೋ, ಅಲ್ಲಿ ಪಿಸ್ತಾ ತನ್ನ ಪಾತ್ರ ತೋರುತ್ತದೆ.

ಫೈಬರ್‌ : ಪಿಸ್ತಾ ಎಂಬುದು ಉತ್ತಮ ನಾರುಬೇರುಗಳನ್ನು ಒದಗಿಸುವ ಭಂಡಾರ. ಇದರಲ್ಲಿನ ವಿಭಿನ್ನ ನ್ಯೂಟ್ರಿಶನ್ಸ್ ಹೆಚ್ಚಿನ ಲಾಭ ಒದಗಿಸುತ್ತದೆ. ಇತರ ಪ್ರೋಟೀನ್‌ ಫ್ಯಾಟ್‌ ಗಳ ಜೊತೆ ಬೆರೆತು, ನಿಮ್ಮನ್ನು ಸುದೀರ್ಘ ಕಾಲ ಸಂತೃಪ್ತರನ್ನಾಗಿ ಇಡಬಲ್ಲದು.

ಹೆಲ್ದಿ ಫ್ಯಾಟ್‌ : ಪಿಸ್ತಾ ಮಾನೋ ಅನ್‌ ಸ್ಯಾಚುರೇಟೆಡ್‌ಪಾಲಿ ಅನ್‌ ಸ್ಯಾಚುರೇಟೆಡ್‌ ಫ್ಯಾಟ್‌ ಅಂಶ ಹೊಂದಿದೆ. ಇದು ನಮ್ಮ ಪರಿಪೂರ್ಣ ಆರೋಗ್ಯಕ್ಕೆ ಹೆಚ್ಚು ಪೂರಕ. ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ನಿಂದ ನಮಗೆ ಮುಕ್ತಿ ಕೊಡಿಸುತ್ತದೆ.

ಆ್ಯಂಟಿ ಆಕ್ಸಿಡೆಂಟ್‌ : ಇದರಲ್ಲಿ ಬಹು ಬಗೆಯ ಅಂದ್ರೆ ಗ್ರೀನ್‌, ರೆಡ್‌, ಪರ್ಪಲ್ ಕಲರ್‌ ಗಳಲ್ಲಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಅಡಗಿವೆ. ಇವು ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್ ಜೊತೆ ಹೋರಾಡಲು ಸಹಾಯ ಮಾಡುತ್ತದೆ.

ನ್ಯೂಟ್ರಿಶಿಯಸ್ಬ್ರೇಕ್ಫಾಸ್ಟ್ ಪೋಷಕಾಂಶ ಭಂಡಾರವಾಗಿದೆ ಇದರ ವ್ಯಂಜನಗಳು : ಪಿಸ್ತಾವನ್ನು ಯಾವುದೇ ಬಗೆಯಲ್ಲಿ ನಿಮ್ಮ ಬೆಳಗಿನ ಉಪಾಹಾರ, ಮಧ್ಯಾಹ್ನ ರಾತ್ರಿ ಊಟಕ್ಕಾಗಿ ಯಾವ ವಿಧದಲ್ಲಿಯಾದರೂ ಉಪಯೋಗಿಸಿಕೊಳ್ಳಿ. ಅನೇಕ ಪೋಷಕಾಂಶಗಳ ಭಂಡಾರವಾದ ಪಿಸ್ತಾ ನಿಮ್ಮ ದೈನಂದಿನ ಆಹಾರಕ್ಕೆ ಅತ್ಯಗತ್ಯ.

ಇತರ ಡ್ರೈ ಫ್ರೂಟ್ಸ್ ಗೆ ಹೋಲಿಸಿದರೆ, ನಿಮಗೆ ಪ್ರತಿ ಸರ್ವಿಂಗ್‌ ನಲ್ಲೂ ಪಿಸ್ತಾದಿಂದ ಹೆಚ್ಚಿನ ಲಾಭವಿದೆ. 49 ಪಿಸ್ತಾಗಳ ಪೌಷ್ಟಿಕಾಂಶ 23 ಬಾದಾಮಿ ಅಥವಾ 18 ಗೋಡಂಬಿಗಳ ಸೇವನೆಗೆ ಸಮ. ಇದರ ಪ್ರತಿ ಸೇವನೆಯಿಂದಲೂ 2 ಪಟ್ಟು ಹೆಚ್ಚಿನ ಪೌಷ್ಟಿಕಾಂಶ ದೊರಕಲಿದೆ, 30ಕ್ಕೂ ಅಧಿಕ ಬಗೆಯ ನ್ಯೂಟ್ರಿಯೆಂಟ್ಸ್ ಒಂದೇ ಸಲ ನಿಮಗೆ ಸಿಗಲಿದೆ.

ನಿಮಗೆ ಒಂದು ಸಲಕ್ಕೆ 100 ಕ್ಯಾಲೋರಿ ಬೇಕಿದ್ದರೆ, 30 ಪಿಸ್ತಾಗಳನ್ನು ಸೇವಿಸಬೇಕು. ಇದರಿಂದ ಸ್ವಾದಿಷ್ಟ ಬ್ರೇಕ್‌ ಫಾಸ್ಟ್ ನಿಮ್ಮದಾಗುತ್ತದೆ. ಇದರಲ್ಲಿ ಕ್ರಿಸ್ಪಿನೆಸ್‌, ಸ್ಪೈಸ್‌ ಮತ್ತು ನ್ಯೂಟ್ರಿಶನ್ಸ್ ಕೂಡಿಕೊಳ್ಳುತ್ತದೆ.

ಹೆಲ್ದಿ ಇಂಡಿಯನ್‌ ಡಯೆಟ್‌ ಪ್ರತಿ 28 ಗ್ರಾಂ ಪಿಸ್ತಾದಲ್ಲಿ ಅತ್ಯುತ್ತಮ ಗುಣಮಟ್ಟದ 6 ಗ್ರಾಂ ಪ್ರೋಟೀನ್‌ (ಇದು ಒಂದು ಪರಿಪೂರ್ಣ ಪ್ರೋಟೀನ್‌ ಆಗಿದ್ದು, ಇದರಲ್ಲಿ ಎಲ್ಲಾ ಬಗೆಯ 9 ಅತ್ಯಗತ್ಯ ಅಮೀನೋ ಆಮ್ಲಗಳ ಮಿಶ್ರಣವಿದೆ) ಹಾಗೂ 3 ಗ್ರಾಂ ಫೈಬರ್ ಸಿಗುತ್ತದೆ, ಹೀಗಾಗಿ ಇದನ್ನು ನಮ್ಮ ಹೆಲ್ದಿ ಇಂಡಿಯನ್‌ ಡಯೆಟ್‌ ನಲ್ಲಿ ಅತ್ಯಗತ್ಯವಾಗಿ ಬೆರೆಸಿಕೊಳ್ಳಲೇಬೇಕು.

ಮುಂದೆ ನಿಮಗೆ ಯಾರಾದರೂ, ಡ್ರೈ ಫ್ರೂಟ್ಸ್ ಸೇವಿಸಬೇಡಿ, ಅದರಿಂದ ದಪ್ಪ ಆಗುತ್ತೀರಿ ಎಂದರೆ, ಅವರಿಗೆ ಈ ಸಂಪೂರ್ಣ ಶಕ್ತಿಶಾಲಿ ಪಿಸ್ತಾದ ಅತ್ಯುತ್ತಮ ಗುಣಗಳ ಬಗ್ಗೆ ಪರಿಚಯಿಸಿ. ಸಲ್ಮಾನ್, ಟೇಸ್ಟಿ, ನ್ಯೂಟ್ರಿಶನ್‌ ವ್ಯಾಲ್ಯೂದಿಂದ ತುಂಬಿ ತುಳುಕುತ್ತಿರುವ ಪಿಸ್ತಾ ನಿಮ್ಮ ಸ್ಮಾರ್ಟ್‌ ಸ್ನಾಕ್ಸ್ ಆಗಬಲ್ಲದು. ಇದನ್ನು ನಮ್ಮ ಎಂದಿನ ಸಸ್ಯಾಹಾರಿ ಡಯೆಟ್‌ ನಲ್ಲಿ ಬೆರೆಸಿಕೊಂಡು, ಡೇಲಿ ನ್ಯೂಟ್ರಿಶನ್‌ ಗೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸಲು ಅತಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.

ಪ್ರಭಾ ಮಾಧವ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ