ಪ್ರಸವದ ನಂತರ ನಿಮ್ಮ ಹಳೆಯ ಆಕರ್ಷಕ ಫಿಗರ್ವಾಪಸ್ಸು ಪಡೆಯಬೇಕೇ? ಇಲ್ಲಿದೆ ನಿಮಗೆ ಬೇಕಾದ ಮಾಹಿತಿ.....!

ಪ್ರಸವದ ನಂತರ ಹೆಣ್ಣು ಮೊದಲಿನ ತನ್ನ ಪರ್ಸನಾಲ್ಟಿ ಪಡೆಯಲು ಬಹಳ ಶ್ರಮ ಪಡಬೇಕಾಗುತ್ತದೆ. ಪ್ರಸವದ 3-6 ತಿಂಗಳ ನಂತರ ಹೆಣ್ಣು ವ್ಯಾಯಾಮಕ್ಕೆ ತೊಡಗಬಹುದು. ಆದರೆ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವವರೆಗೂ ಆಕೆ ವೆಯ್ಟ್ ಲಿಫ್ಟಿಂಗ್‌, ಪುಶ್‌ ಅಪ್ಸ್, ಮಾಡಬಾರದು. ಯಾವುದೇ ಹೊಸ ಬಗೆಯ ಡಯೆಟಿಂಗ್‌ ಯಾವ ವ್ಯಾಯಾಮ ಶುರು ಮಾಡುವ ಮೊದಲು, ಅಗತ್ಯ ವೈದ್ಯರ ಸಲಹೆ ಪಡೆಯಬೇಕು.

ಬ್ರೆಸ್ಟ್ ಫೀಡಿಂಗ್‌ : ಮಗುವಿಗೆ ನಿಯಮಿತವಾಗಿ ಸ್ತನ್ಯಪಾನ ಮಾಡಿಸುವುದರಿಂದ, ಸುಲಭವಾಗಿ ದೇಹತೂಕ ತಗ್ಗಿಸಬಹುದು. ಏಕೆಂದರೆ, ದೇಹದಲ್ಲಿ ಹಾಲಿನ ಉತ್ಪಾದನೆಯ ಪರಿಯೇ ಹಾಗಿದೆ, ಬೇಗ ಕ್ಯಾಲೋರೀಸ್‌ ಬರ್ನ್‌ ಆಗುತ್ತದೆ. ಈ ಕಾರಣದಿಂದಲೇ ಮಗುವಿಗೆ ಮೊಲೆಯುಣಿಸುವ ಹೆಂಗಸರು ಬೇಗ ದೇಹತೂಕ ಕರಗಿಸಬಲ್ಲರು.

ನೀರಿನ ಸೇವನೆ : ನೀವು ನಿಮ್ಮ ಸೊಂಟದ ಸೈಜ್‌ ಹಿಂದಿನಂತೆಯೇ ಬಳುಕುವಂತಿರಬೇಕೆಂದು ಬಯಸಿದರೆ, ಪ್ರತಿದಿನ ಕನಿಷ್ಠ 3 ಲೀ. ನೀರು ಕಡಿಯಲೇಬೇಕು. ಇದರಿಂದ ದೇಹದಲ್ಲಿನ ವಿಷ ಪದಾರ್ಥ ಹೊರಬರುತ್ತದೆ. ದೇಹದಲ್ಲಿ  ಫ್ಲೂಯೆಡ್‌ ಬ್ಯಾಲೆನ್ಸ್ ಮೆಯಿಂಟೇನ್‌ ಆಗುತ್ತದೆ. ಇಷ್ಟು ಮಾತ್ರವಲ್ಲದೆ, ದೇಹದ ಅನಗತ್ಯ ಕೊಬ್ಬು ಸಹ ಕರಗುತ್ತದೆ.

ನಿಂಬೆರಸ ಮತ್ತು ಜೇನು : ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಸು ಬಿಸಿ ನೀರಿಗೆ ಇವೆರಡನ್ನೂ ಬೆರೆಸಿಕೊಂಡು ಕುಡಿಯಿರಿ. ಇದರಿಂದ ದೇಹದಲ್ಲಿನ ಟಾಕ್ಸಿನ್ಸ್ ಹೊರಹೋಗುತ್ತದೆ, ಫ್ಯಾಟ್‌ ಬರ್ನ್‌ ಆಗುತ್ತದೆ. ಪ್ರತಿ ಸಲ ಊಟ ಮಾಡು ಮೊದಲೂ ಸಹ ಹೀಗೆ ಮಾಡಿ. ಹೀಗೆ ಮಾಡುವುದರಿಂದ ಪಚನಕ್ರಿಯೆ ಸಲೀಸಲಾಗುತ್ತದೆ, ಫ್ಯಾಟ್‌ ಬೇಗ ತಗ್ಗುತ್ತದೆ.

ಗ್ರೀನ್ಟೀ : ಇದರಲ್ಲಿನ ಘಟಕಗಳಿಂದಾಗಿ ಫ್ಯಾಟ್‌ ಬರ್ನಿಂಗ್‌ ಪ್ರಕ್ರಿಯೆ ಬೇಗ ಆಗುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ನಿಮ್ಮ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕಾಗಿಸುತ್ತದೆ. ಹೀಗಾಗಿ ದೈನಂದಿನ ಕಾಫಿ ಚಹಾ ಬದಲು, ಗ್ರೀನ್‌ ಟೀ ಸೇವನೆ ರೂಢಿಸಿಕೊಳ್ಳಿ. ಇದು ಆರೋಗ್ಯಕರ ಮಾತ್ರವಲ್ಲದೆ, ದೇಹ ತೂಕ ನಿಯಂತ್ರಣದಲ್ಲೂ ಸಹಕಾರಿ.

ಲೋಯರ್ಅಬ್ಡಾಮಿನಲ್ ಸ್ಲೈಡ್‌ : ಪ್ರಸವದ ನಂತರ ಈ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಲೇಸು. ಅದರಲ್ಲೂ ಮುಖ್ಯವಾಗಿ ಮಗು `ಸೀ ಸೆಕ್ಷನ್‌'ನಿಂದ ಹುಟ್ಟಿದ್ದರೆ ಇದು ಹೆಚ್ಚು ಪೂರಕ. ಏಕೆಂದರೆ ಸರ್ಜರಿ ನಂತರ ಹೊಟ್ಟೆಯ ಅಡಿ ಭಾಗಕ್ಕೆ ಹೆಚ್ಚು ಪರಿಣಾಮ ಆಗುತ್ತದೆ. ಈ ವ್ಯಾಯಾಮದಿಂದ ಆ ಭಾಗವನ್ನು ಸರಿಪಡಿಸಬಹುದು.

ಮೊದಲು ಅಂಗಾತ ಮಲಗಿರಿ. ಕಾಲನ್ನು ನೆಲದ ಮೇಲೆ ಹರಡಿರಿ. ಬಾಹುಗಳನ್ನು ಸೈಡ್‌ ನಲ್ಲಿ ನೇರವಾಗಿಡಿ. ಹಸ್ತವು ಕೆಳಭಾಗ ನೋಡುತ್ತಿರಲಿ. ನಿಮ್ಮ ಹೊಟ್ಟೆಯ ಮಾಂಸಖಂಡಗಳನ್ನು ಒಳಗೆಳೆದುಕೊಳ್ಳುತ್ತಾ, ಬಲಗಾಲನ್ನು ಹೊರಭಾಗಕ್ಕೆ ಸ್ಲೈಡ್‌ ಮಾಡಿ. ನಂತರ ಸೀದಾ ಮಲಗಿ. ಆಮೇಲೆ ಇದೇ ತರಹ ಎಡಗಾಲಿನಿಂದಲೂ ಮಾಡಿ. ಹೀಗೆ ಎರಡೂ ಕಾಲುಗಳಿಂದ 5-6 ಸಲ ಮಾಡಿ.

ಆರೋಗ್ಯಕರ ಪೌಷ್ಟಿಕ ಆಹಾರವನ್ನೇ ಸೇವಿಸಿ : ಹೆಚ್ಚು ಹೆಚ್ಚು ಕ್ಯಾಲೋರಿಭರಿತ ಹುರಿದ, ಕರಿದ ಪದಾರ್ಥ ಸೇವಿಸಬೇಡಿ. ಜೊತೆಗೆ ಕ್ಯಾಂಡಿ, ಚಾಕಲೇಟ್‌, ಬೇಕ್ಡ್ ಐಟಂ ಅಂದ್ರೆ ಕುಕೀಸ್‌, ಕೇಕ್‌, ಪೇಸ್ಟ್ರಿ, ಫಾಸ್ಟ್ ಫುಡ್‌, ಫ್ರೋಝನ್‌ ಪುಡ್‌, ಫ್ರೈಡ್‌ ಫುಡ್‌, ಫ್ರೈಸ್‌, ಚಿಕನ್‌ ನಗೆಟ್ಸ್, ಪ್ರೋಸೆಸ್ಡ್ ಫುಡ್‌, ಅತಿಯಾದ ಸ್ವೀಟ್ಸ್ ಇತ್ಯಾದಿ ಯಾವುದೂ ಬೇಡ. ಇಂಥವುಗಳಲ್ಲಿ ಧಾರಾಳ ಜಿಡ್ಡು, ಸಕ್ಕರೆ ತುಂಬಿರುತ್ತವೆ. ಇಂಥವುಗಳಲ್ಲಿ ಯಾವುದೇ ಪೋಷಣೆಯ ಅಂಶ ಇರುವುದಿಲ್ಲ. ಇದರ ಬದಲಾಗಿ ಆರೋಗ್ಯಕರ ಪೌಷ್ಟಿಕ ಆಹಾರ ಸೇವಿಸಿ. ಅಂದ್ರೆ ಆಯಾ ಋತುವಿನ ಹಣ್ಣು, ತರಕಾರಿ, ಫ್ರೆಶ್‌ ಸಲಾಡ್‌, ಮನೆಯ ಸೂಪ್‌, ಮೊಳಕೆಕಾಳಿನ ಕೋಸಂಬರಿ, ಹಣ್ಣಿನ ರಸ (ಸಕ್ಕರೆ ರಹಿತ) ಇತ್ಯಾದಿ ಸೇವಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ