ಶಾಲೆಯಲ್ಲಿ ಶಿಕ್ಷಕರು‘ತಾಯಿಯ ಸೆರಗು’ ಕುರಿತು ಪ್ರಬಂಧ ಬರೆಯಿರಿ..!ಎಂದು ಹೇಳಿದರು.
ಆಮೇಲೆ ಒಬ್ಬ ವಿದ್ಯಾರ್ಥಿ ತಾಯಿಯ ಸೆರಗು ಬಗ್ಗೆ ಎಷ್ಟು ಸುಂದರವಾಗಿ ಬರೆದಿದ್ದಾನೆ ನೋಡಿ…
ಪೂರ್ತಿ ಓದಿದರೆ ಮನಸ್ಸು ತುಂಬಿ ಬರುತ್ತದೆ…
ಆದರಣೀಯ ಗುರುಗಳೇ,
ತಾಯಿಯ ಸೆರಗು ತಾಯಿಗೆ ಗೌರವಯುತವಾದ ರೂಪವನ್ನು ನೀಡುತ್ತಿತ್ತು.
ತಾಯಿಯ ಸೆರಗು ಅಡಿಗೆಯಲ್ಲಿರುವ ಬಿಸಿ ಪಾತ್ರೆಗಳನ್ನು ಎತ್ತಲು ಉಪಯೋಗವಾಗುತ್ತಿತ್ತು.
ತಾಯಿಯ ಸೆರಗು ಮಕ್ಕಳ ಬೆವರು ಮತ್ತು ಕಣ್ಣೀರನ್ನು ಒರೆಸಲು, ಮಸಿಯಾದ ಕಿವಿ ಮತ್ತು ಮುಖವನ್ನು ತೊಳೆಯಲು ಬಳಸಲಾಗುತ್ತಿತ್ತು.
ಊಟ ಮಾಡಿದ ನಂತರ ತಾಯಿಯ ಸೆರಗಿನಲ್ಲಿ ಬಾಯಿ ಒರೆಸಿಕೊಳ್ಳುವುದರಲ್ಲಿ ಮಕ್ಕಳಿಗೆ ಒಂದು ವಿಶೇಷ ಸಂತೋಷ ಇರುತ್ತಿತ್ತು.
ಕೆಲವೊಮ್ಮೆ ಕಣ್ಣಿಗೆ ಏನಾದರೂ ಬಿದ್ದರೆ, ತಾಯಿ ತನ್ನ ಸೆರಗಿನ ತುದಿಯನ್ನು ಗುಂಡಾಗಿ ಮಾಡಿ, ಉಸಿರಿನಿಂದ ಬಿಸಿ ಮಾಡಿ ಕಣ್ಣಿನ ಮೇಲೆ ಇಡುತ್ತಿದ್ದರು — ಆಗ ನೋವು ತಾನೇ ತಾನಾಗಿ ಕಡಿಮೆಯಾಗುತ್ತಿತ್ತು.

ತಾಯಿಯ ಮಡಿಲಲ್ಲಿ ಮಲಗಿದ ಮಕ್ಕಳಿಗೆ ತಾಯಿಯ ಮಡಿಲೇ ಹಾಸಿಗೆ, ತಾಯಿಯ ಸೆರಗು ಹೊದಿಕೆಯಾಗುತ್ತಿತ್ತು.
ಮನೆಗೆ ಅಪರಿಚಿತರು ಬಂದಾಗ, ಮಗು ತಾಯಿಯ ಸೆರಗಿನ ಹಿಂದೆ ಅಡಗಿಕೊಳ್ಳುತ್ತಿತ್ತು.
ಹಾಗೆಯೇ, ಮಗು ನಾಚಿಕೆಪಟ್ಟಾಗ ತನ್ನ ಮುಖವನ್ನು ತಾಯಿಯ ಸೆರಗಿನಿಂದ ಮುಚ್ಚಿಕೊಳ್ಳುತ್ತಿತ್ತು.
ಮಗು ಹೊರಗೆ ಹೋಗಬೇಕಾದಾಗ ತಾಯಿಯ ಸೆರಗನ್ನು ಹಿಡಿದುಕೊಂಡೇ ಹೋಗುತ್ತಿತ್ತು, ಆ ಸೆರಗು ಅವನಿಗೆ ದಾರಿದೀಪವಾಗುತ್ತಿತ್ತು.
ಮಗು ತಾಯಿಯ ಸೆರಗನ್ನು ಹಿಡಿದಿರುವವರೆಗೆ ಇಡೀ ಜಗತ್ತೇ ತನ್ನ ಕೈಯಲ್ಲಿದೆ ಎಂಬ ಭಾವನೆ ಇರುತ್ತಿತ್ತು.
ಚಳಿಗಾಲದಲ್ಲಿ ತಾಯಿಯ ಸೆರಗಿನಿಂದ ಮಗು ಚಳಿಯಿಂದ ರಕ್ಷಿಸಲು ಎಲ್ಲಾ ಕಡೆಗಳಿಂದ ಹೊದಿಸುತ್ತಿದ್ದರು.
ಮತ್ತೆ…
ಭಾರಿ ಮಳೆ ಬಂದಾಗ ತಾಯಿಯ ಸೆರಗು ಛತ್ರಿಯಂತೆ ಮುಖವನ್ನು ಮುಚ್ಚುತ್ತಿತ್ತು.
ತಾಯಿಯ ಸೆರಗು ಕೈ ಒರೆಸುವ ಟವೆಲ್ನ ಕೆಲಸವನ್ನೂ ಮಾಡುತ್ತಿತ್ತು.
ಮರದಿಂದ ಬಿದ್ದ ನೇರಳೆ ಹಣ್ಣುಗಳನ್ನು ಮತ್ತು ಸುಗಂಧ ಹೂಗಳನ್ನು ಕಲೆಹಾಕಿ ತರಲು ತಾಯಿಯ ಸೆರಗು ಉಪಯೋಗವಾಗುತ್ತಿತ್ತು.

ಕೆಲವೊಮ್ಮೆ…
ಧಾನ್ಯ, ದಾನ ಅಥವಾ ಪ್ರಸಾದ ಸಂಗ್ರಹಿಸಲು ತಾಯಿಯ ಸೆರಗು ಬಳಸಲಾಗುತ್ತಿತ್ತು.
ಮನೆಯಲ್ಲಿದ್ದ ವಸ್ತುಗಳ ಧೂಳನ್ನು ತಗೆಯಲು ಕೂಡ ತಾಯಿಯ ಸೆರಗು ಸಹಾಯ ಮಾಡುತ್ತಿತ್ತು.
ಕೆಲವೊಮ್ಮೆ ಏನಾದರೂ ಕಳೆದುಹೋದರೆ, ತಾಯಿಯ ಸೆರಗಿನಲ್ಲಿ ಗಂಟು ಹಾಕುತ್ತಿದ್ದೆವು. ಆಗ ಅದು ಸಿಗುತ್ತದೆ ಎಂಬ ನಂಬಿಕೆ ಬರುತ್ತಿತ್ತು — ಮತ್ತು ನಿಜವಾಗಿಯೂ ಸಿಗುತ್ತಿತ್ತು.
ತಾಯಿಯ ಸೆರಗಿನ ಗಂಟು ಒಂದು ಚಲಿಸುವ ಬ್ಯಾಂಕ್ ಅಥವಾ ಲಾಕರ್ನಂತಿತ್ತು. ಅದೃಷ್ಟವಿದ್ದರೆ ಕೆಲವೊಮ್ಮೆ ಅದರಲ್ಲಿ ಹಣವೂ ಸಿಗುತ್ತಿತ್ತು.
ತಾಯಿಯ ಸೆರಗು ಒಂದು ಮಾಯಾಮಯ ಅನುಭವ. ಇಂದಿನ ಪೀಳಿಗೆ ಅದನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರದು.
ಈಗ ಜೀನ್ಸ್ ಧರಿಸುವ ತಾಯಿಗೆ ಸೆರಗು ಎಲ್ಲಿಂದ ಬರುತ್ತದೆ …?
ನಮಗೆ ಸೀರೆ ತೊಟ್ಟ ತಾಯಿಯ ಸೆರಗಿನ ಅನುಭವ ನೀಡಿದ ಎಲ್ಲಾ ತಾಯಂದಿರಿಗೂ ಸಮರ್ಪಣೆ……





