ಸಲಿಂಗ ಸಂಬಂಧಕ್ಕೆ ಮಾನ್ಯತೆ ಕೊಡಿಸಲು ಪ್ರಮುಖ ಪಾತ್ರ ವಹಿಸಿದವರು
ಸೋಶಿಯಲ್ ಇಂಪ್ಯಾಕ್ಟ್ ಚೇಂಜ್ ಮೇಕರ್ ಅವಾರ್ಡ್
ನಮ್ಮ ಸಮಾಜದಲ್ಲಿನ ಒಂದು ವಿಭಿನ್ನ ಸಮುದಾಯವೇ LGBTQ ಆ ಜನರ ಸಮಾನತೆ, ಅವರ ಹಕ್ಕುಗಳಿಗಾಗಿ ಸತತ ಹೋರಾಡುತ್ತಿರುವ ವಕೀಲೆಯರೇ ಈ ಮೇನಕಾ ಗುರುಸ್ವಾಮಿ ಹಾಗೂ ಅರುಂಧತಿ ಕಾಟ್ಜೂ. ಇವರು ನಮ್ಮ ಸಮಾಜದಲ್ಲಿ ಇಂಥ ಸಲಿಂಗಿಗಳಿಗಾಗಿ ಸೃಷ್ಟಿಸಿದ ವಾತಾವರಣ, ನಿಜಕ್ಕೂ ಪ್ರಶಂಸನೀಯ! ಈ ಇವೆಂಟ್ ಮುಖಾಂತರ ಈ ಇಬ್ಬರೂ ವಕೀಲೆಯರೂ ಲೈಮ್ ಲೈಟ್ ನಲ್ಲಿ ಮಿಂಚಿದರು. ಈ ಜೋಡಿಗೆ ಸೋಶಿಯಲ್ ಚೇಂಜ್ ಮೇಕಪ್ವಿಭಾಗದಲ್ಲಿ ಗೃಹಶೋಭಾ ಇನ್ ಸ್ಪೈರಿಂಗ್ ಅವಾರ್ಡ್ಸ್ ನಿಂದ ಸನ್ಮಾನಿಸಲಾಯಿತು.
ಇವರಿಬ್ಬರೂ ಯಶಸ್ವೀ ವಕೀಲೆಯರು. ಮೇನಕಾ ಹಾರ್ವರ್ಡ್ ಸ್ಕೂಲ್ ನಿಂದ LGBTQ ಹಾಗೂ ಆಕ್ಸ್ ಫರ್ಡ್ ಯೂನಿವರ್ಸಿಟಿಯಿಂದ ಡಿಗ್ರಿ ಪಡೆದಿದ್ದಾರೆ. ಆಕೆ ಬರ್ಲಿನ್ ನ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಫೆಲೋ ಕೂಡ ಹೌದು. ಅಷ್ಟು ಮಾತ್ರವಲ್ಲದೆ, ಕೊಲಂಬಿಯಾ ಲಾ ಸ್ಕೂಲ್, ನ್ಯೂಯಾರ್ಕ್ ಯೂನಿವರ್ಸಿಟಿ ಆಫ್ ಲಾ, ಮುಂತಾದ ವಿಶ್ವಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ವಿಸಿಟಿಂಗ್ ಫ್ಯಾಕಲ್ಟಿ ಕೂಡ ಹೌದು. ಅದೇ ತರಹ ಅರುಂಧತಿ ಸಹ ಕೊಲಂಬಿಯಾ ಯೂನಿವರ್ಸಿಟಿಯಿಂದ ಉನ್ನತ ಪದವಿ ಪಡೆದರು. ಇವರಿಗೆ ಕೊಲಂಬಿಯಾ ಲಾ ಸ್ಕೂಲಿನ ಹರ್ಮನ್. ಫಿಂಕಿಲಸ್ಟೀನ್ ಮೆಮೋರಿಯಲ್ ಫೆಲೋಶಿಪ್ (2018-19)ನಿಂದಲೂ ಸನ್ಮಾನಿಸಲಾಗಿದೆ.
ಸಲಿಂಗ ಸಂಬಂಧಗಳ ಮಾನ್ಯತೆ
ಈ ಜೋಡಿ ಕೂಡಿ ಕಲಂ 377 (ಯಾವ ಗಂಡು/ಹೆಣ್ಣೇ ಆಗಲಿ, ಪ್ರಾಣಿಗಳ ಜೊತೆಗಾಗಲಿ, ಅನ್ ನ್ಯಾಚುರಲ್ ಸೆಕ್ಸ್ ಹೊಂದಿದ್ದರೆ ಅಪರಾಧ ಎನ್ನುತ್ತದೆ)ರ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದರು. ಅಂತೂ ಇಂತೂ ಕೊನೆಗೆ ಅವರು ಐವರು ಜಜ್ ಗಳಿದ್ದ ಸುಪ್ರೀಂ ಕೋರ್ಟಿನ ಬೆಂಚ್ ನ್ನು, ಸಲಿಂಗ ಸಂಬಂಧ ಅಪರಾಧವಲ್ಲ ಎಂದು ಒಪ್ಪಿಸುವಲ್ಲಿ ಯಶಸ್ವಿಯಾದರು! ಸುಪ್ರೀಂ ಕೋರ್ಟ್ ನಲ್ಲಿ ದೊರೆತ ಈ ಗೆಲುವು, ಕೇವಲ ಅವರ ವೃತ್ತಿಯ ಗೆಲುವಲ್ಲ, ಬದಲಿಗೆ ಇವರಿಬ್ಬರ ಪರ್ಸನಲ್ ಯಶಸ್ಸು ಕೂಡ ಆಗಿತ್ತು! ಸುಪ್ರೀಂ ಕೋರ್ಟ್ ನಲ್ಲಿ ದೊರೆತ ಈ ಐತಿಹಾಸಿಕ ವಿಜಯದ ಸುಮಾರು 1 ವರ್ಷದ ನಂತರ, ಇವರಿಬ್ಬರೂ ತಾವು ಲೆಸ್ಬಿಯನ್ ದಂಪತಿ ಎಂದು ಖುಲ್ಲಂಖುಲ್ಲ ಅಂಗೀಕರಿಸಿದ್ದಾರೆ!
ಇಂಥ ಸಲಿಂಗ ವಿವಾಹನ್ನು ಲೀಗಲ್ ಗೊಳಿಸಬೇಕೆಂದು ಸೀನಿಯರ್ ಅಡ್ವೋಕೇಟ್ ಮೇನಕಾ ಮುಂದಿಟ್ಟ ತರ್ಕ ಎಂದರೆ, ಸೇಮ್ ಸೆಕ್ಸ್ ಮ್ಯಾರೇಜ್ ನ್ನು ಕಾನೂನುಬದ್ಧಗೊಳಿಸದಿದ್ದರೆ ಹಲವಾರು ಹಾನಿಗಳಾಗುತ್ತವೆ. ವಿಷಮಲಿಂಗ ಜೋಡಿಗಳಿಗೆ ಸಿಗುವಂಥ ಸೌಲಭ್ಯಗಳು ಇಂಥ ಸಲಿಂಗ ಜೋಡಿಗಳಿಗೆ ಸಿಗುತ್ತಿಲ್ಲ. LGBTQ ಸಮುದಾಯದ ಮಂದಿ ಬ್ಯಾಂಕ್ ಅಕೌಂಟ್, ಜೀವವಿಮೆ, ಮೆಡಿಕಲ್ ಇನ್ ಶ್ಯೂರೆನ್ಸ್ ಇತ್ಯಾದಿ ಸಾಧಾರಣ ಹಕ್ಕುಗಳಿಂದ ವಂಚಿತರಾಗಿದ್ದಾರೆ.

ಮಹಿಳೆ ವಕೀಲಿಗೆ ಮುಂದಾಗಬೇಕು
ಗೃಹಶೋಭಾ ತಂಡದೊಂದಿಗೆ ಮಾತುಕಥೆಯಲ್ಲಿ ಅರುಂಧತಿ. ಮೇನಕಾ ಜೋಡಿಗೆ, ಇಂದಿನ ಯುವತಿಯರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದಾಗ, ಇವರ ಉತ್ತರ ಸ್ಪಷ್ಟವಾಗಿತ್ತು. ನಿಮ್ಮ ಕನಸುಗಳನ್ನು ಕಡೆಗಣಿಸಬೇಡಿ, ಅವನ್ನು ನನಸಾಗಿಸಲು ಹಗಲು ರಾತ್ರಿ ದುಡಿಯಿರಿ. ವಕೀಲಿ ಎಂಬುದು ಒಂದು ಸುಪರ್ಬ್ ಪ್ರೊಫೆಶನ್. ಅದರಲ್ಲೂ ಭಾರತೀಯ ಯುವತಿಯರಿಗೆ ಇದು ಹೇಳಿಮಾಡಿಸಿದ್ದು. ಒಬ್ಬ ಹೆಣ್ಣಾಗಿ, ಮಹಿಳಾ ವಕೀಲರಾಗಿ ನಿಮ್ಮ ಮನಸ್ಸಿನ ಭಾವನೆಯಂತೆ ಮುನ್ನಡೆಯಿರಿ. ನಿಮ್ಮ ಗುರಿ ಖಂಡಿತ ಮುಟ್ಟುತ್ತೀರೆಂದು ಕೂಗಿ ಹೇಳಿ. ಏಕೆಂದರೆ ನಿಮ್ಮ ಸುತ್ತಲ ವಾತಾವರಣ, ನೀವು ಅದನ್ನು ಸಾಧಿಸಬಾರದೆಂದೇ ತಡೆಯೊಡ್ಡುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಹೀಗಾಗಿ ಇಂದಿನ ಆಧುನಿಕ ಯುವತಿಯರು ಕೋರ್ಟಿನ ಭಾಗವಾಗಲು ಮುಂದೆ ಬರಬೇಕಿದೆ. ವಕಾಲತ್ತು ನಿಮಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯ ನೀಡುತ್ತದೆ. ಇದು ವಿಶ್ವದ ಅತಿ ಉತ್ತಮ ವೃತ್ತಿಗಳಲ್ಲಿ ಒಂದು. ಹೆಚ್ಚು ಹೆಚ್ಚು ಮಂದಿ ತರುಣಿಯರು ಈ ರಂಗಕ್ಕೆ ಬರಬೇಕು ಎಂದರು.
ಸಲಿಂಗ ವಿವಾಹದ ಹಕ್ಕುಗಳಿಗಾಗಿ ಹೋರಾಡಿ ಜಯ ಗಳಿಸಿದ್ದಲ್ಲದೆ, ಅರುಂಧತಿ ಕಾಟ್ಜೂ ಟ್ರಾನ್ಸ್ ಜೆಂಡರ್ ರೈಟ್ಸ್, ಹೈ ಪ್ರೊಫೆಶನಲ್ ಕರಪ್ಶನ್ ಕೇಸುಗಳಲ್ಲೂ ದೊಡ್ಡ ವಿಜಯ ಸಾಧಿಸಿದ್ದಾರೆ. 2017ರಲ್ಲಿ ಮೇನಕಾ, ಆಕ್ಸ್ ಫರ್ಡ್ ಯೂನಿವರ್ಸಿಟಿಯ ರೋಡ್ಸ್ ಹೌಸ್ ನ ಮಿಲನರಲ್ ಹಾಲ್ ನಲ್ಲಿ ತಮ್ಮ ಫೋಟೋ ಅಳವಡಿಸಿಕೊಂಡಂಥ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ!
– ಶಕೀಲ್





