– ರಾಘವೇಂದ್ರ ಅಡಿಗ ಎಚ್ಚೆನ್.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ನಟ Darshan Thoogudeepa ಜೈಲಿನಲ್ಲಿ ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

ಜೈಲಿನಲ್ಲಿ ಪತ್ನಿ ಹಾಗೂ ಮಗನನ್ನು ಭೇಟಿಯಾದ ದರ್ಶನ್, ಕುಟುಂಬದ ಜೊತೆ ಕೆಲಕಾಲ ಭಾವನಾತ್ಮಕವಾಗಿ ಮಾತನಾಡಿ ಮನಸ್ಸಿನ ಭಾರ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. “ನೀವೇನು ಬೇಜಾರಾಗ್ಬೇಡಿ, ಧೈರ್ಯವಾಗಿರಿ. ನಾನು ಆರಾಮಾಗಿದ್ದೀನಿ” ಎಂದು ಪತ್ನಿ ಮತ್ತು ಮಗನಿಗೆ ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ವಿಶೇಷ ಸಂದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಮಾಧಾನ ತಂದಿದೆ. ನಿಮ್ಮಿಬ್ಬರನ್ನ ಹತ್ತಿರದಿಂದ ಮಾತಾಡಿಸಿ ಮನಸ್ಸು ಹಗುರವಾಯ್ತು” ಎಂದು ದರ್ಶನ್ ಹೇಳಿರುವುದಾಗಿ ತಿಳಿದುಬಂದಿದೆ.

ಇನ್ನೂ “ಹೇಗೋ ಇಷ್ಟು ದಿನ ಕಳೆದಿದ್ದಾಗಿದೆ. ಭಗವಂತ ಇದ್ದಾನೆ, ಇನ್ನೊಂದು ವರ್ಷವೂ ಕಳೆಯುತ್ತೇನೆ” ಎಂದು ಕುಟುಂಬದವರ ಮುಂದೆ ಮನದ ಮಾತು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ ದರ್ಶನ್, “ಮೊದಲು ಹೈಕೋರ್ಟ್‌ನಲ್ಲಿ ಬೇಲ್ ಅರ್ಜಿ ಹಾಕಿದ್ದರೆ ಒಂದು ಅವಕಾಶ ಇರುತ್ತಿತ್ತು” ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಭೇಟಿಯ ಅಂತ್ಯದಲ್ಲಿ ಪತ್ನಿ ತಂದಿದ್ದ ಡ್ರೈಫ್ರೂಟ್ಸ್ ಹಾಗೂ ಹಣ್ಣುಗಳನ್ನು ಪಡೆದುಕೊಂಡ ದರ್ಶನ್, ಪತ್ನಿ ಮತ್ತು ಮಗನನ್ನು ಪ್ರೀತಿಯಿಂದ ಮಾತಾಡಿಸಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ