ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆ ಶುಭ್ರತೆಯ ಕಡೆಗೆ ಎಷ್ಟು ಗಮನ ಹರಿಸಿದರೂ ಸಾಲದು. ಇದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣವೇ…..?

ಹೆಣ್ಣು ತಿಂಗಳಿಗೊಮ್ಮೆ ಮುಟ್ಟಾಗುವುದು ಪ್ರಾಕೃತಿಕ ಧರ್ಮ, ಆದರೆ ಇಂದಿಗೂ ನಮ್ಮ ಸಮಾಜದಲ್ಲಿ ಮುಟ್ಟಾದ ಹೆಣ್ಣನ್ನು ಅಪವಿತ್ರ ದೃಷ್ಟಿಯಿಂದಲೇ ನೋಡಲಾಗುತ್ತದೆ, ಇದೊಂದು ಕೊಳಕು ಪ್ರಕ್ರಿಯೆ ಎಂದೇ ಲೇಬಲ್ ಅಂಟಿಸಲಾಗಿದೆ. ಇದನ್ನು ಹಲವು ತಪ್ಪು ಅಭಿಪ್ರಾಯಗಳು, ಮೂಢನಂಬಿಕೆಗಳಿಗೆ ಜೋಡಿಸಲಾಗಿದೆ. ಅದು ಹೆಂಗಸಿನ ಆರೋಗ್ಯದ ಮೇಲೆ ದುಷ್ಪ್ರಭಾವ ಬೀರುತ್ತದೆ.

ಇಂಥ ಸಂದರ್ಭದಲ್ಲಿ ಸ್ವಚ್ಛತೆ ಶುಭ್ರತೆಗಳಿಗೆ ಹೆಚ್ಚಿನ ಆದ್ಯತೆ ನೀಡದಿದ್ದರೆ, ಆಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ. ಸೋಂಕು, ಜೀವಾಣು, ಗುಪ್ತಾಂಗಗಳಲ್ಲಿ ನವೆ, ಕಡಿತ, ತುರಿಕೆ, ಉರಿ ಇತ್ಯಾದಿ ಹೆಚ್ಚು ಕಾಡುತ್ತವೆ. ಯೋನಿಯಲ್ಲಿ ಗುಡ್‌ ಬ್ಯಾಕ್ಟೀರಿಯಾ ನಿಶ್ಚಿತ Ph ಬ್ಯಾಲೆನ್ಸ್ ಮೆಂಟೇನ್‌ ಮಾಡಲು ಸಹಕಾರಿ. ಆದರೆ ಬೇಸಿಗೆಯ ಉಷ್ಣತೆ, ಹ್ಯುಮಿಡಿಟಿ ಕಾರಣ ಆಗುವ ಸೋಂಕಿನಿಂದ ಬ್ಯಾಡ್ ಬ್ಯಾಕ್ಟೀರಿಯಾದ ಹೆಚ್ಚಳದಿಂದಾಗಿ ಈ ಬ್ಯಾಲೆನ್ಸ್ ತಪ್ಪುತ್ತದೆ. ಇದರಿಂದಾಗಿ ಹೆಂಗಸರು ಸೀರಿಯಸ್‌ ಯೂರಿನ್‌ ಇನ್‌ ಫೆಕ್ಷನ್‌ ಗೆ ಗುರಿಯಾಗುತ್ತಾರೆ.

ಭಾವನಾತ್ಮಕ ಸಪೋರ್ಟ್

ಬೇಸಿಗೆಯ ಝಳ, ಹ್ಯುಮಿಡಿಟಿ ಹೆಚ್ಚಿದಂತೆ ಅನೇಕ ಹೆಂಗಸರಿಗೆ ಮುಟ್ಟಿನಲ್ಲಿ ಏರುಪೇರುಗಾತ್ತಿರುವುದು ಗಮನಕ್ಕೆ ಬರುತ್ತದೆ. ಪೀರಿಯಡ್ಸ್ ನ ಈ ಬದಲಾವಣೆಗೆ ಹವಾಮಾನದ ಕುಪ್ರಭಾವವೇ ಕಾರಣ. ಬೇಸಿಗೆಯ ಝಳದಿಂದಾಗಿ  ಮುಟ್ಟಿನ ಅವಧಿ ವಿಸ್ತಾರಗೊಂಡು, ಅದರ ಸ್ರಾವ ಹೆಚ್ಚಾಗುತ್ತದೆ. ಟೀನೇಜ್‌ಹುಡುಗಿಯರು ಹಾಗೂ ರೀಮೆನೋಪಾಸ್‌ ವುಮನ್‌ ಗೆ ಹೆಚ್ಚು ತೊಂದರೆ ಕಾಡಬಹುದು. ಈ ಸಂದರ್ಭದಲ್ಲಿ ಅವರ ಹಾರ್ಮೋನ್ಸ್ ಬಲು ಅಸ್ಥಿರವಾಗುತ್ತದೆ.

ಮುಟ್ಟಂತ್ಯಕ್ಕೆ ಸಮೀಪ ಬರುತ್ತಿರುವ ಹೆಂಗಸರಿಗೆ ಸಾಧಾರಣವಾಗಿ ಫೈಬ್ರಾಯ್ಡ್ ಬಾಧೆ ತಪ್ಪಿದ್ದಲ್ಲ. ಇದರಿಂದಾಗಿ ಬಹಳಷ್ಟು ರಕ್ತಸ್ರಾವ ಆಗುತ್ತದೆ. ಆಗ ಕಾಡುವ ಕಿಬ್ಬೊಟ್ಟೆ ನೋವು ಸಹಿಸಲಸದಳ. ಹಾಗಿರುವಾಗ ಅವಳ ಮನೆಯವರ ಭಾವನಾತ್ಮಕ ಸಪೋರ್ಟ್‌ ಹಾಗೂ ಸಕಾಲಕ್ಕೆ ಚಿಕಿತ್ಸೆ ಅತ್ಯಗತ್ಯ. ಆದರೆ ಮುಟ್ಟು ಎಂದ ಕೂಡಲೇ ಮುಖ ಕಿವುಚುತ್ತಾ, ಅದನ್ನು ಅಪವಿತ್ರ ಎಂದು ಭಾವಿಸುವ ಮನೆಗಳಲ್ಲಿ, ಈ ನೋವಿಗೆ ಗುರಿಯಾದ ಹೆಂಗಸರು ಒಬ್ಬಂಟಿಯಾಗಿ ಇದನ್ನು ಎದುರಿಸಬೇಕಾಗುತ್ತದೆ.

ಮೆನ್ಸ್ಟ್ರುಯೆಲ್ ಹೈಜೀನ್ಗಾಗಿ ಟಿಪ್ಸ್

ಸದಾ ಹೈಡ್ರೇಟೆಡ್ಆಗಿರಿ : ದೇಹದಿಂದ ವಿಷಾಣು ಪದಾರ್ಥಗಳನ್ನು ಹೊರಹಾಕಲು, ದೇಹದ Ph ಬ್ಯಾಲೆನ್ಸ್ ಮೇಂಟೇನ್‌ ಮಾಡಲು ಪ್ರತಿದಿನ ಕನಿಷ್ಠ 8-10 ಗ್ಲಾಸು ನೀರು ಕುಡಿಯಲೇಬೇಕು. ಇದಕ್ಕಾಗಿ ತಾಜಾ ನೇರಳೆಹಣ್ಣು ಸೇವಿಸಿ, ಜೊತೆಗೆ ಸ್ವಾದಿಷ್ಟ ಹರ್ಬಲ್ ವಾಟರ್‌ ಕುಡಿಯುತ್ತಿರಿ.

ಕಾಟನ್ಅಂಡರ್ಗಾರ್ಮೆಂಟ್ಸ್ ಬದಲಾಯಿಸುತ್ತಿರಿ : ಋತು ಯಾವುದೇ ಇರಲಿ, ಮುಟ್ಟಿನ ದಿನಗಳಲ್ಲಿ ಸದಾ ಕಾಟನ್‌ ಅಂಡರ್ ಗಾರ್ಮೆಂಟ್ಸ್ ಮಾತ್ರ ಧರಿಸುತ್ತಿರಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ ದಿನಕ್ಕೆ 3-4 ಸಲ ಬದಲಾಯಿಸುತ್ತಿರಿ. ಇದರಿಂದಾಗಿ ಕಾಟನ್ ಪ್ಯಾಂಟಿಯಲ್ಲಿ ಈಝಿಯಾಗಿ ಗಾಳಿ ಪ್ರವಹಿಸುತ್ತದೆ.

ಇದು ಆ ಭಾಗದ ಚರ್ಮವನ್ನು ಸ್ವಚ್ಛ ಶುಭ್ರ ಡ್ರೈ ಆಗಿಡಲು ಸಹಕಾರಿ. ಈ ಸಂದರ್ಭದಲ್ಲಿ ಎಂದಿಗೂ ಕೃತಕ ಎಳೆಗಳ ವಸ್ತ್ರಗಳಾದ ನೈಲಾನ್‌, ಟೆರ್ಲಿನ್‌ ಇತ್ಯಾದಿ ಪ್ಯಾಂಟಿ ಧರಿಸದಿರಿ. ಆ ಭಾಗದಲ್ಲಿ ಹೆಚ್ಚು ಬೆವರುವ ಹೆಂಗಸರು, ಇಂಥವನ್ನು ಧರಿಸಿದರೆ, ಬ್ಯಾಡ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಇದರಿಂದ ತುರಿಕೆ, ಕಡಿತ, ಉರಿ ತಪ್ಪಿದ್ದಲ್ಲ.

ಸ್ವಚ್ಛ ಶುಭ್ರ ಕಾಟನ್ಟವೆಲ್ಸ್ ಮಾತ್ರ ಬಳಸಿರಿ : ಇಂಥ ಸಂದರ್ಭದಲ್ಲಿ ಸ್ವಚ್ಛ ಶುಭ್ರ ಕಾಟನ್‌ ಟವೆಲ್ಸ್ ‌ಮಾತ್ರ ಬಳಸಿರಿ. ಎಂದೆಂದೂ ಬೇರೆಯವರು ಬಳಸಿದ ಟವೆಲ್ಸ್‌ ಬಳಸಲೇಬೇಡಿ. ನಿಮ್ಮ ಟವೆಲ್‌ಆದಷ್ಟೂ ತೆಳು ಎಳೆಗಳಿಂದ ಕೂಡಿರಲಿ. ಇದನ್ನು ಶುಚಿಗೊಳಿಸಿ, ಒಣಗಿಸುವುದೂ ಸುಲಭ. ನೀವು ಬಳಸುವ ಈ ಟವೆಲಸ್ಸ್ ‌ನ್ನು ಇತರರಿಗೆ ಎಂದೂ ಕೊಡಬೇಡಿ. ಬೆಟರ್‌ ಹೈಜೀನ್‌ ಗಾಗಿ ನಿಮ್ಮ ಟವೆಲ್ಸ್‌, ಪ್ಯಾಂಟಿಗಳನ್ನು ದಿನ ಒಗೆಯಿರಿ.

ಗುಪ್ತಾಂಗಳ ಸ್ವಚ್ಛತೆ ಶುಭ್ರತೆ : ಪ್ರತಿದಿನ ಸ್ನಾನ ಮಾಡುವಾಗ ನಿಮ್ಮ ಗುಪ್ತಾಂಗಗಳನ್ನು, ಉಗುರು ಬೆಚ್ಚಗಿನ ನೀರು ಬಳಸಿ ಸ್ವಚ್ಛಗೊಳಿಸಿ, ಅತಿಯಾದ ಬಿಸಿ ನೀರು ಬೇಡ. ಜೊತೆಗೆ ಅಗತ್ಯವಾಗಿ `ಡೆಲಿಕೇಟ್‌ ಫೆಮಿನೈನ್‌ ವಾಶ್‌’ ಬಳಸಿ ಆ ಭಾಗ ಸ್ವಚ್ಛಗೊಳಿಸಿ. ಎಲಾನ್‌, ಓರಿಫ್ಲೇಮ್ ಇತ್ಯಾದಿ ಎಲ್ಲಾ ಬ್ರಾಂಡ್‌ ಗಳಲ್ಲೂ ಇದು ಲಭ್ಯ. ಸುಗಂಧಯುಕ್ತ ಸಾಬೂನುಗಳನ್ನು ಎಂದೂ ಬಳಸದಿರಿ. ಯೋನಿಯ Ph ಬ್ಯಾಲೆನ್ಸ್ ಮೇಂಟೇನ್‌ ಮಾಡಲು ರಾಸಾಯನಿಕಮುಕ್ತ, ಸಾಬೂನುಮುಕ್ತ ಕ್ಲೀನಿಂಗ್‌ ಹರ್ಬಲ್ ಲೋಶನ್ಸ್ ನ್ನೇ ಆರಿಸಿ. ಜಿಮ್, ಈಜು, ಆಟೋಟಗಳಲ್ಲಿ ಪಾಲ್ಗೊಂಡ ನಂತರ ಸದಾ ನಿಮ್ಮ ಈ ಇಂಟಿಮೇಟ್‌ ಏರಿಯಾಗಳನ್ನು ಹೀಗೆ ನೀಟಾಗಿ ಶುಭ್ರಗೊಳಿಸಿ, ಅಗತ್ಯವಾಗಿ ಒಣಗಿಸಿ.

ಆ್ಯಂಟಿ ಬ್ಯಾಕ್ಟೀರಿಯಲ್ ಸ್ಯಾನಿಟರಿ ನ್ಯಾಪ್ಕಿನ್‌ : ಮುಟ್ಟಿನ ದಿನಗಳಲ್ಲಿ ಕಂಫರ್ಟೆಬಲ್ ಆ್ಯಂಟಿ ಬ್ಯಾಕ್ಟೀರಿಯಲ್ ಸ್ಯಾನಿಟರಿ ನ್ಯಾಪ್‌ಕಿನ್ಸ್/ಪ್ಯಾಡ್ಸ್ ಬಳಸುತ್ತಿರಬೇಕು. ಪೀರಿಯಡ್ಸ್ ಹೈಜೀನ್‌ ಗಾಗಿ 3-4 ಗಂಟೆಗಳಿಗೊಮ್ಮೆ ಪ್ಯಾಡ್‌ ಬದಲಿಸುತ್ತಿರಿ. ಉತ್ತಮ ಗುಣಮಟ್ಟದ ಪೀರಿಯಡ್ಸ್ ಕಾಟನ್‌ ಪ್ಯಾಂಟಿಗಳನ್ನೇ ಬಳಸಿರಿ, ಆಗ ಮಾತ್ರ ಬ್ಯಾಕ್ಟೀರಿಯಾ ಬೆಳೆಯದು. ಇಂಟಿಮೇಟ್‌ ಏರಿಯಾದ ಕೂದಲನ್ನು ಶೇವ್ ‌ಮಾಡಿ ಸ್ವಚ್ಛಗೊಳಿಸಿ, ಇಲ್ಲದಿದ್ದರೆ ಈ ಭಾಗದಲ್ಲಿ ಬ್ಯಾಕ್ಟೀರಿಯಾ ಹೆಚ್ಚಲು ಅನುಕೂಲ ಆಗುತ್ತದೆ. ಇದರಿಂದ ಯೀಸ್ಟ್ ಇನ್‌ ಫೆಕ್ಷನ್‌ಬಾಧೆಗಳಿಂದ ಪಾರಾಗಬಹುದು.

ಮುಟ್ಟಿನ ದಿನಗಳಲ್ಲಿ ಸ್ನಾನ ಕಡ್ಡಾಯ : ಪ್ರಾಚೀನ ಕಾಲದಿಂದ ಬೆಳೆದುಬಂದಿರುವ ಮೌಢ್ಯವೆಂದರೆ, ಮುಟ್ಟಿನ ದಿನಗಳಲ್ಲಿ ಸ್ನಾನ ಬೇಡ ಎಂಬುದು. ಇದು ತಪ್ಪು, ಬದಲಿಗೆ ಮುಟ್ಟಿನ ದಿನಗಳಲ್ಲಿ ಸ್ನಾನ ಮಾಡಬೇಕಾದುದು ಬಲು ಸುರಕ್ಷಿತ. ಇದರಿಂದ ಸುಸ್ತು, ಸಂಕಟ, ನೋವು ಎಷ್ಟೋ ಪಾಲು ತಗ್ಗುತ್ತದೆ. ಇದರಿಂದ ಮೂಡ್‌ ಸದಾ ಫ್ರೆಶ್‌ ಆಗುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನದಿಂದ ಪೀರಿಯಡ್ಸ್ ಕ್ರಾಂಪ್ಸ್ ನ್ನು ತಗ್ಗಿಸಬಹುದು, 4ನೇ/5ನೇ ದಿನದ ತಲೆ ಸ್ನಾನ ನೆಮ್ಮದಿ ತರುತ್ತದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ