ಹೆಚ್ಚುತ್ತಿರುವ ವಯಸ್ಸನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ದಿನಚರಿಯಲ್ಲಿ ಅಷ್ಟಿಷ್ಟು ಬದಲಾವಣೆ ತಂದುಕೊಂಡು ಆ್ಯಕ್ಟಿವ್ ಹಾಗೂ ಯಂಗ್ ಆಗಿರಬಹುದು.....
ನೀವು ನಿಮ್ಮ ವಯಸ್ಸು ಏರುವುದನ್ನಂತೂ ತಡೆಯಲು ಸಾಧ್ಯವಿಲ್ಲ. ಆದರೆ ಹೆಚ್ಚುತ್ತಿರುವ ವಯಸ್ಸಿನ ಪರಿಣಾಮಗಳನ್ನು ಮಾತ್ರ ಕಡಿಮೆಗೊಳಿಸಬಹುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಸೀನಿಯರ್ ಡಯೇಟಿಶಿಯನ್ ಡಾ. ನಿಧಿ ಹೇಳುವ ಪ್ರಕಾರ, ನಾವು ಏನನ್ನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಹಾಗೂ ಸಕ್ರಿಯತೆ ಇರುತ್ತದೆ.
ಏನನ್ನು ಸೇವಿಸಬೇಕು?
ಆ್ಯಂಟಿ ಆಕ್ಸಿಡೆಂಟ್ ಭರ್ತಿಯಾಗಿರುವ ಒಣಹಣ್ಣುಗಳು, ಕಾಳುಗಳು, ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಆ್ಯಂಟಿ ಆಕ್ಸಿಡೆಂಟ್ಸ್ ಫ್ರೀ ರಾಡಿಕಲ್ಸ್ ಜೊತೆಗೆ ಹೋರಾಡುತ್ತವೆ. ಅಷ್ಟೇ ಅಲ್ಲ, ವೃದ್ಧಾಪ್ಯದ ಲಕ್ಷಣಗಳನ್ನು ಮಂದಗೊಳಿಸುತ್ತವೆ. ಅವು ರೋಗ ನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸಿ ಸೋಂಕು ಉಂಟಾಗುವುದರಿಂದ ನಮ್ಮನ್ನು ರಕ್ಷಿಸುತ್ತವೆ.
ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿಯುವುದು ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡಿದಂತೆ.
ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಮತ್ತು ಮಾನೊಸ್ಯಾಚ್ಯುರೇಟೆಡ್ ನಿಂದ ತುಂಬಿ ತುಳುಕುವ ಆಹಾರ ಪದಾರ್ಥಗಳಾದ ಒಣ ಹಣ್ಣುಗಳು, ಆಲಿವ್ ಆಯಿಲ್, ಮೀನು ಇವನ್ನು ಬಳಸಿ. ಇವು ನಿಮ್ಮನ್ನು ಯಂಗ್ ಮತ್ತು ಸುಂದರವಾಗಿರಲು ನೆರವಾಗುತ್ತವೆ.
ವಿಟಮಿನ್ `ಸಿ' ದೇಹದಲ್ಲಿ ನೈಸರ್ಗಿಕ ಬೊಟಾಕ್ಸ್ ನ ಹಾಗೆ ಕೆಲಸ ಮಾಡುತ್ತದೆ. ಇದರಿಂದ ತ್ವಚೆಯ ಸ್ನಾಯುಗಳು ಆರೋಗ್ಯದಿಂದಿರುತ್ತದೆ ಮತ್ತು ಸುಕ್ಕುಗಳು ಉಂಟಾಗುವುದಿಲ್ಲ. ಇದಕ್ಕಾಗಿ ಕಿತ್ತಳೆ, ಮೂಸಂಬಿ, ಎಲೆಕೋಸು, ತರಕಾರಿಗಳನ್ನು ಬಳಸಿ.
ನಿಮಗೆ ಸಿಹಿ ತಿನ್ನುವ ಮನಸ್ಸಾದರೆ ಕಂದು ವರ್ಣದ ಚಾಕ್ಲೇಟ್ ತಿನ್ನಿ. ಅದರಲ್ಲಿ ಫ್ಲೆಲೆನಾಲ್ ಎಂಬ ಅಂಶವಿದ್ದು, ಅದು ರಕ್ತ ಪರಿಚಲನೆ ಸಮರ್ಪಕವಾಗಿರಲು ನೆರವಾಗುತ್ತದೆ.
ಮಧ್ಯಾಹ್ನ ಊಟದ ಜೊತೆಗೆ ಒಂದು ಕಪ್ ಮೊಸರು ಸೇವಿಸಿ. ಅದರಲ್ಲಿ ಕ್ಯಾಲ್ಶಿಯಂ ಅಂಶವಿದ್ದು, ಅದು ಆಸ್ಟಿಯೋಪೊರೊಸಿಸ್‌ಸಮಸ್ಯೆಯಿಂದ ರಕ್ಷಿಸುತ್ತದೆ.
ನೀವು ಯಂಗ್ ಆಗಿರಲು ಹಾಗೂ ಸಕ್ರಿಯರಾಗಿರಲು ಇಷ್ಟಪಟ್ಟರೆ ಓವರ್ ಈಟಿಂಗ್ ನಿಂದ ದೂರ ಇರಿ. ನಿಮಗೆ ಎಷ್ಟು ಹಸಿವಿರುತ್ತೊ, ಅದರ ಶೇ.80ರಷ್ಟು ಮಾತ್ರ ಸೇವಿಸಿ.

ಏನನ್ನು ಸೇವಿಸಬಾರದು?
ಯಾವ ಆಹಾರ ಪದಾರ್ಥಗಳಿಂದ ದೇಹದಲ್ಲಿ ಸಕ್ಕರೆ ಅಂಶ ಏರುತ್ತೊ, ಅಂತಹ ಪದಾರ್ಥಗಳನ್ನು ಕಡಿಮೆ ಸೇವಿಸಿ. ಸಿಹಿ ಹಣ್ಣುಗಳು, ಜ್ಯೂಸ್, ಸಕ್ಕರೆ ಮುಂತಾದವು.
ಸೋಯಾಬೀನ್, ಕಾರ್ನ್ ಕಿನೋಲಾ ಆಯಿಲ್ ಮುಂತಾದವುಗಳಿಂದ ದೂರ ಇರಿ. ಏಕೆಂದರೆ ಅದರಲ್ಲಿ ಪಾಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲಿವ್ ಆಯಿಲ್ ನ್ನು ಉಪಯೋಗಿಸಿ.
ಪನೀರ್, ಫುಲ್ ಫ್ಯಾಟ್ ಹಾಲು, ಕ್ರೀಮ್, ರೆಡ್ ಮೀಟ್ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ಅದರಿಂದ ಹೃದಯದ ಧಮನಿಗಳು ಬ್ಲಾಕ್ ಆಗಬಹುದು.
ಪಿಜ್ಜಾ, ಪಾಸ್ತಾ, ವೈಟ್ ಬ್ರೆಡ್ ಮುಂತಾದವುಗಳನ್ನು ಕಡಿಮೆ ಸೇವಿಸಿ.
ಡಾ. ನಿಧಿಯವರು ಹೇಗೆ ಹೇಳುತ್ತಾರೆ, ``ಬೊಜ್ಜು ಹಾಗೂ ಕ್ಯಾಲೋರಿ ಇವುಗಳಲ್ಲಿ ನೇರ ಸಂಬಂಧವಿದೆ. ಬೊಜ್ಜು ಹೆಚ್ಚುವುದರಿಂದ ಕೇವಲ ಆರೋಗ್ಯ ಸಮಸ್ಯೆ ಅಷ್ಟೇ ಅಲ್ಲ, ದೇಹದ ಕ್ರಿಯಾಶೀಲತೆ ಕೂಡ ಕಡಿಮೆಯಾಗುತ್ತದೆ.''
ಜೀವನಶೈಲಿಯಲ್ಲಿ ಬದಲಾವಣೆ
``ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಚಿಕ್ಕಪುಟ್ಟ ಬದಲಾವಣೆಗಳನ್ನು ತಂದುಕೊಂಡು ನಾವು ದೀರ್ಘಕಾಲದ ತನಕ ಯಂಗ್ ಆಗಿರಬಹುದು ಮತ್ತು ಸಕ್ರಿಯರಾಗಿರಬಹುದು,'' ಇದು ಡಾ. ಕರುಣಾ ಚತುರ್ವೇದಿ ಅವರ ಅಭಿಪ್ರಾಯ.





