ಪ್ರತಿದಿನ ಸ್ವಲ್ಪ ಹೊತ್ತು ಸೈಕಲ್ ಓಡಿಸುವುದರಿಂದ ಅದೆಷ್ಟು ಲಾಭಗಳಿವೆ ಎನ್ನುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು.....!

ಕೆಲವು ವರ್ಷಗಳ ಹಿಂದಿನತನಕ ಜನರಿಗೆ ಸೈಕಲ್ ಓಡಿಸುವುದೆಂದರೆ ಏನೋ ಹಿಂಜರಿಕೆ, ಕೀಳರಿಮೆಯ ಭಾವನೆ. ಆದರೆ ಈಗ ಕಾಲ ಬದಲಾಗಿದೆ. ಯಾರ ಮನೆಯಲ್ಲಿ ಐಷಾರಾಮಿ ಕಾರು ಇದೆಯೋ, ಅವರು ಕೂಡ ಸೈಕಲ್ ಹೊಂದುವುದು ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಿದ್ದಾರೆ. ಒಂದೆಡೆ ಯುವಕರು ಚುರುಕಿನಿಂದಲೂ ಸೈಕಲ್ ಓಡಿಸುತ್ತಾರೆ. ಮತ್ತೊಂದೆಡೆ ಯುವತಿಯರು ತಮ್ಮ ದೇಹ ತೆಳ್ಳಗಿರಲೆಂದು  ಸೈಕಲ್ ಚಲಾಯಿಸುತ್ತಿದ್ದಾರೆ.

ಸೈಕಲ್ ಓಡಿಸುವುದರಿಂದ ಏನೇನು ಲಾಭಗಳಿವೆ ಎನ್ನುವುದನ್ನು ತಿಳಿದುಕೊಂಡರೆ ನಿಮಗೆ ಅಚ್ಚರಿಯಾಗುತ್ತದೆ. ಪ್ರತಿದಿನ 30 ನಿಮಿಷ ಸೈಕಲ್ ಓಡಿಸುವುದರ ಲಾಭಗಳು ಏನೇನು ಎನ್ನುವುದನ್ನು ತಿಳಿದುಕೊಳ್ಳಿ :

ನೀವು ಪ್ರತಿದಿನ 2 ಕಿ.ಮೀ. ಅಥವಾ 30 ನಿಮಿಷಗಳ ಕಾಲ ಸೈಕಲ್ ಓಡಿಸಿದರೆ ನೀವು ಹೆಚ್ಚು ವರ್ಷಗಳ ಕಾಲ ಯೌವನದಲ್ಲಿರುವಂತೆ ಅನುಭವ ಪಡೆಯುವಿರಿ. ಇದಕ್ಕೆ ಕಾರಣವೇನೆಂದರೆ, ರಕ್ತ ಪರಿಚಲನೆ ಸಮರ್ಪಕವಾಗುತ್ತದೆ ಹಾಗೂ ನಿಮ್ಮ ಸ್ಛೂರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಅರ್ಧ ಗಂಟೆಗಳ ಕಾಲ ಸೈಕಲ್ ಚಾಲನೆಯಿಂದ ದೇಹದ ಎಲ್ಲ ಅಂಗಗಳು ಕ್ರಿಯಾಶೀಲವಾಗಿರುತ್ತವೆ ಹಾಗೂ ರಾತ್ರಿ ಒಳ್ಳೆಯ ನಿದ್ರೆ ಲಭಿಸುತ್ತದೆ.

ಅರ್ಧ ಗಂಟೆಯ ಸೈಕಲ್ ಚಾಲನೆಯಿಂದ ಇಮ್ಯೂನ್‌ ಸೆಲ್ಸ್ ಹೆಚ್ಚುವ ಆ್ಯಕ್ಟಿವ್ ‌ಆಗಿರುತ್ತವೆ. ಜೊತೆಗೆ ನೀವು ಅನಾರೋಗ್ಯ ಪೀಡಿತರಾಗುವುದು ಕಡಿಮೆಯಾಗುತ್ತದೆ.

ಸೈಕಲ್ ನಡೆಸುವುದರಿಂದ ದೇಹದ ಎಲ್ಲ ಮಾಂಸಖಂಡಗಳು ಆರೋಗ್ಯವಂತ ಮತ್ತು ಬಲಿಷ್ಠವಾಗುತ್ತವೆ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ಸೈಕಲ್ ಓಡಿಸುವುದರಿಂದ ಮೆದುಳಿನ ಶಕ್ತಿ ತೀವ್ರಗೊಳ್ಳುತ್ತದೆ. ದಿನ ಸೈಕಲ್ ಓಡಿಸುವವರ ನಿರ್ಣಯ ಸಾಮರ್ಥ್ಯ ಸಾಮಾನ್ಯ ಜನರಿಗಿಂತ ಹೆಚ್ಚಿಗೆ ಇರುತ್ತದೆ.

ಅರ್ಧ ಗಂಟೆ ಕಾಲ ಸೈಕಲ್ ಓಡಿಸುವುದರಿಂದ ವ್ಯಕ್ತಿಯೊಬ್ಬನ ಕ್ಯಾಲೋರಿ ಎಷ್ಟೊಂದು ನಷ್ಟವಾಗುತ್ತದೆ ಎಂದರೆ, ಇದರಿಂದಾಗಿ ದೇಹದ ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ.

ನಿಯಮಿತವಾಗಿ ಸೈಕಲ್ ಓಡಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಯೂನಿವರ್ಸಿಟಿ ಆಫ್‌ ಕೆರೊಲಿನಾದಲ್ಲಿ ನಡೆದ ಒಂದು ಸಂಶೋಧನೆಯ ಬಳಿಕ ತಿಳಿದುಬಂದ ವಿಷಯವೆಂದರೆ, ಯಾರು ವಾರದಲ್ಲಿ 5 ದಿನಗಳ ಕಾಲ, ದಿನಕ್ಕೆ ಅರ್ಧ ಗಂಟೆಯಂತೆ ಸೈಕಲ್ ಓಡಿಸುತ್ತಾರೊ ಅವರು ರೋಗ ಪೀಡಿತರಾಗುವ ಸಾಧ್ಯತೆ ಶೇ.50ರಷ್ಟು ಕಡಿಮೆಯಾಗುತ್ತದೆ. ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದರಲ್ಲಿ ಸೈಕಲ್ ಚಾಲನೆ ಅತ್ಯಂತ ಲಾಭಕರ.

ಸೈಕಲ್ ಓಡಿಸುವಾಗ ಹೃದಯದ ಗತಿ ಹೆಚ್ಚುತ್ತದೆ. ಅದರಿಂದ ರಕ್ತ ಪರಿಚಲನೆ ಸಮರ್ಪಕಗೊಳ್ಳುತ್ತದೆ. ಅದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉದ್ಭವಿಸುವುದಿಲ್ಲ. ಹೃದಯಕ್ಕೆ ಸಂಬಂಧಪಟ್ಟ ಇತರೆ ರೋಗಗಳು ಉಂಟಾಗುವ ಸಂಭವಗಳು ಕೂಡ ಕಡಿಮೆಯಾಗುತ್ತವೆ.

ಬೇರೆ ಬೇರೆ ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಸೈಕಲ್ ಓಡಿಸುವವರು ಬೇರೆಯವರಿಗೆ ಹೋಲಿಸಿದರೆ ಒತ್ತಡ ಹಾಗೂ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಸೈಕ್ಲಿಂಗ್‌ ನಿಂದ ಬ್ಲಡ್‌ ಸೆಲ್ಸ್ ಹಾಗೂ ತ್ವಚೆಗೆ ಆಮ್ಲಜನಕ ಪೂರೈಕೆ ಸಮರ್ಪಕವಾಗಿ ಆಗುತ್ತದೆ. ಇದರಿಂದ ಚರ್ಮ ಇನ್ನಷ್ಟು ಹೊಳಪುಳ್ಳದಾಗಿ ಗೋಚರಿಸುತ್ತದೆ. ಬೇರೆ ಸಮವಯಸ್ಕರಿಗೆ ಹೋಲಿಸಿದರೆ, ಅವರು ಚಿರ ಯೌವನ ಹೊಂದಿರುವಂತೆ ಕಂಡುಬರುತ್ತಾರೆ. ಕೇವಲ ಯಂಗ್‌ ಆಗಿ ಕಂಡುಬರುವುದು ಅಷ್ಟೇ ಅಲ್ಲ, ದೇಹ ವಾಸ್ತವದಲ್ಲಿ ಮತ್ತಷ್ಟು ಯೌವನ ಪಡೆದುಕೊಳ್ಳುತ್ತದೆ. ತಮ್ಮ ಸ್ಟೆಮಿನಾ ಹೆಚ್ಚಾಗಿದೆ ಹಾಗೂ ದೇಹದಲ್ಲಿ ಹೊಸ ಶಕ್ತಿ ಸ್ಛೂರ್ತಿಯ ಸಂಚಲನವಾಗುತ್ತಿದೆ ಎಂಬ ಅನುಭವ ಪಡೆದುಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ