ಬೆಣ್ಣೆಹಣ್ಣಿನ ಖೀರ್
ಬೇಕಾದ ಸಾಮಗ್ರಿ
ಬೆಣ್ಣೆ ಹಣ್ಣಿನ ತಿರುಳು (೧ ಹಣ್ಣು),ಗಸಗಸೆ ೪ ಚಮಚ,ಕಾಯಿತುರಿ ೨ ಚಮಚ, ಅಕ್ಕಿ ೧ ಚಮಚ,ಬೆಲ್ಲದ ತುರಿ ಒಂದು ಕಪ್, ಏಲಕ್ಕಿ ೨. (ಐಚ್ಛಿಕ-ಹಾಲು, ಒಣ ದ್ರಾಕ್ಷಿ ಗೋಡಂಬಿ ತುಂಡುಗಳು)
ಮಾಡುವ ವಿಧಾನ
ಗಸಗಸೆ ಮತ್ತು ಅಕ್ಕಿಯನ್ನು ಒಂದು ಗಂಟೆ ಕಾಲ ನೆನೆಸಿ, ಕಾಯಿತುರಿ,ಏಲಕ್ಕಿ ಯೊಂದಿಗೆ ನುಣ್ಣಗೆ ರುಬ್ಬಿ,ಕೊನೆಯಲ್ಲಿ ತಿರುಳನ್ನೂ ಸೇರಿಸಿ ಒಂದು ಸುತ್ತುಅರೆದುಕೊಳ್ಳಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲಕ್ಕೆ ನೀರು ಹಾಕಿ ಅದು ಕರಗಿದಾಗ ರುಬ್ಬಿದ ಮಿಶ್ರಣವನ್ನು ಸೇರಿಸಿ,ಮಧ್ಯ ಉರಿಯಲ್ಲಿ ತಳ ಹಿಡಿಯದಂತೆ ಆಗಾಗ ಕೈಯಾಡಿಸುತ್ತಿರಿ. ಹಸಿವಾಸನೆಯಿಲ್ಲದೆ ಮಿಶ್ರಣ ಬೆಂದ ನಂತರ ಪಾಯಸ ತಣಿಯಲು ಬಿಡಿ.
ಸೇವಿಸುವಾಗ ಬೇಕೆನಿಸಿದಲ್ಲಿ ಹಾಲು ಬೆರೆಸಿ,ದ್ರಾಕ್ಷಿ,ಗೋಡಂಬಿಗಳನ್ನು ಸೇರಿಸಿಕೊಳ್ಳಬಹುದು.
– ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





