– ರಾಘವೇಂದ್ರ ಅಡಿಗ ಎಚ್ಚೆನ್.

ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ, ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಲವ್ ಸೀಸನ್ಸ್ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರದ ಮೂಲಕ ನಾಯಕನಾಗಿ ಆಗಮಿಸುತ್ತಿರುವ ಮುಕುಂದ ರಾಮಸ್ವಾಮಿ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಈ ಟ್ರೈಲರ್ ಪ್ರೇಕ್ಷಕರ ಮುಂದೆ ಬಂದಿದೆ.

ಈ ಕುರಿತಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ರಮೇಶ್, ಜಯತೀರ್ಥ, ಎನ್.ಆರ್ ಮಂಜುನಾಥ (ನೀಲೇರಿ) ಮುಕುಂದ ರಾಮಸ್ವಾಮಿ, ಸಂಗೀತಾ ಅನಿಲ್, ದಿಯಾ ಕೀರ್ತಿ, ಶ್ವೇತಾ ಕೊಗ್ಲೂರು, ಚಂದನಾ ಗೌಡ, ಚೇತನ್ ದುರ್ಗ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ರಮೇಶ್ ಹಾಗೂ ಜಯತೀರ್ಥ ‘ಈ ಚಿತ್ರದಲ್ಲಿ ರಂಗಭೂಮಿಯಿಂದ ಬಂದವರೇ ಹೆಚ್ಚಾಗಿದ್ದಾರೆ. ರಂಗಭೂಮಿಯಿಂದ ಆಗಮಿಸಿದವರಲ್ಲಿ ಪ್ರತಿಭೆ ಮಾತ್ರವಲ್ಲದೆ ಶಿಸ್ತು, ಬದ್ಧತೆಯೂ ಇರುತ್ತದೆ. ನಿರ್ದೇಶಕ ಕೃತ್ವಿಕ್ ಮೊದಲ ಪ್ರಯತ್ನದಲ್ಲಿಯೇ ಚೆಂದದ ಚಿತ್ರ ಮಾಡಿದ್ದಾರೆ. ಈ ಟ್ರೈಲರ್ ಮೂಲಕ ನಿರ್ಮಾಪಕರ ಸಿನಿಮಾ ಪ್ರೇಮವೂ ಪ್ರತಿಫಲಿಸಿದೆ. ಈ ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರೆಲ್ಲ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿಕೊಂಡರು.

1001575010

ಈಗಾಗಲೇ ಲವ್ ಸೀಸನ್ಸ್ ಚಿತ್ರದ ಮೂರು ಹಾಡುಗಳು ಬಿಡುಗಡೆಗೊಂಡಿವೆ. ಅವೆಲ್ಲವೂ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇಂಥಾ ಹಾಡುಗಳ ಪ್ರಭೆಯಲ್ಲಿಯೇ ಟ್ರೈಲರ್ ಬಗೆಗಿನ ಕುತೂಹಲ ವ್ಯಾಪಕವಾಗಿ ಮೂಡಿಕೊಂಡಿತ್ತು. ಇನ್ನೇನು ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವಾಗಲೇ, ನಾಯಕನ ಹುಟ್ಟುಹಬ್ಬದಂದೇ ಚಿತ್ರತಂಡ ಟ್ರೈಲರ್ ಬಿಡುಗಡೆಗೊಳಿಸಿದೆ. ಈ ಚಿತ್ರ ಇದೇ ಜುಲೈ 3ರ ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

1001575016

ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಾಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ