ಸಂಜನಾ ಆನಂದ್

ಕನ್ನಡದ ಅಪ್ಪಟ ಪ್ರತಿಭೆ ಸಂಜನಾ ಆನಂದ್‌, ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಾ, ಸ್ಯಾಂಡಲ್ ವುಡ್ನಲ್ಲಿ ತಾನು ಬೆಳೆದು ಬಂದ ಬಗೆಯನ್ನು ವಿವರಿಸಿದ್ದು ಹೀಗೆ.....!

ಸ್ಯಾಂಡಲ್ ವುಡ್‌ ನಲ್ಲಿ ಸದ್ಯಕ್ಕೆ ಬ್ಯುಸಿ ಆಗಿರುವ ನಾಯಕಿ ಅಂದ್ರೆ ಅದು ಸಂಜನಾ ಆನಂದ್‌. ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದ ನಾಯಕಿಯರಲ್ಲಿ ಇವರೂ ಒಬ್ಬರು. ಇವರ ಅಂದಕ್ಕೆ ಸಿನಿರಸಿಕರು ಫಿದಾ ಆಗಿರೋದು ನಿಜ. ಮೂಲತಃ ಕೊಡಗಿನವರಾದರೂ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು. ಪೋಷಕರ ಆಸೆಯಂತೆ ಕಂಪ್ಯೂಟರ್‌ ಸೈನ್ಸ್ ಮುಗಿಸಿಕೊಂಡು ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 2019ರಲ್ಲಿ `ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು.

ಮೊದಲ ಚಿತ್ರ

ಭರತನಾಟ್ಯ ಕಲಾವಿದೆಯೂ ಆಗಿದ್ದ ಈಕೆಗೆ ಆಕಸ್ಮಿಕವೆಂಬಂತೆ `ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಸದ್ಯ ಕನ್ನಡದ ಬೇಡಿಕೆಯ ಯುವನಟಿಯಾಗಿರುವ ಸಂಜನಾ ಆನಂದ್‌, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ವಿರಾಟ್‌ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ `ರಾಯ್‌' ಸಿನಿಮಾದಲ್ಲಿ ಸಂಜನಾ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರು.

GWPe-Nua4AAQ4Ox-1

ಸಾಲು ಸಾಲು ಚಿತ್ರಗಳು

`ಕೆಮಿಸ್ಟ್ರಿ ಆಫ್‌ ಕರಿಯಪ್ಪ, ಕುಷ್ಕ, ಸಲಗ, ಕ್ಷತ್ರಿಯ, ಮಳೆಬಿಲ್ಲು, ವಿಂಡೋ ಸೀಟ್‌, ಶೋಕಿವಾಲ, ಸೂತ್ರಧಾರಿ, ರಾಯ್‌, ಹಯಗ್ರೀವ, ಮುಧೋಳ್‌, ಗೌರಿ, ಎಕ್ಕ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪೈಕಿ ಕೆಲವೊಂದು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿವೆ. `ನೇನು ಮೀಕು ಬಾಗ ಕಾಲಿಸಿನಾಡಿನಿ, ಫುಲ್ ಬಾಟಲ್' ಎನ್ನುವ ತೆಲುಗು ಸಿನಿಮಾಗಳಲ್ಲಿ ಸಹ ಸಂಜನಾ ಅಭಿನಯಿಸಿದ್ದಾರೆ. ಇದಷ್ಟೇ ಅಲ್ಲದೆ, ಕನ್ನಡದ ಮೊದಲ ಪರಿಪೂರ್ಣ ಪ್ರಮಾಣದ ವೆಬ್‌ ಸೀರೀಸ್‌ ಎನಿಸಿದ್ದ `ಹನಿಮೂನ್‌' ವೆಬ್ ಸೀರೀಸ್‌ ನಲ್ಲಿ ಕೂಡ ಸಂಜನಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಮನದಾಳದ ಮಾತುಗಳು

``ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ, ಅದರಲ್ಲಿ ನನ್ನನ್ನು ನಾಯಕಿಯನ್ನಾಗಿ ಮಾಡಿಕೊಂಡರು. ``ಈ ಚಿತ್ರಕ್ಕಾಗಿ ಶೂಟ್‌ ಮಾಡಿದ್ದ ಪ್ರೊಮೋ ಯೂಟ್ಯೂಬ್‌ ನಲ್ಲಿ ಹಾಕಿದ್ದರು. ಅದನ್ನು `ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರ ತಂಡ ನೋಡಿ ಆಡಿಷನ್‌ ಗೆ ಕರೆಯಿತು. ಹಾಗೆ ನಾನು ಸಿನಿಮಾ ಜಗತ್ತಿಗೆ ಬಂದೆ.

``ಚಿತ್ರರಂಗಕ್ಕೆ ಆಗತಾನೇ ಆಗಮಿಸಿದ ನನಗೆ `ಸಲಗ' ಸಿನಿಮಾದ ಮೂಲಕ ಅದ್ಧೂರಿ ಸ್ವಾಗತ ದೊರಕಿತು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ಕೊರೋನಾ ಬಂದು ಚಿತ್ರರಂಗದ ಚಟುವಟಿಕೆಗಳೆಲ್ಲಾ ಸ್ತಬ್ಧವಾಯಿತು.

484647452_1169502411296592_5146374046489922886_n

ಕೊರೋನಾ ಕೊಟ್ಟ ಕಾಟ

``ಆಗೊಮ್ಮೆ ನಾನು ಕೆಲಸ ತೊರೆದು ಚಿತ್ರರಂಗಕ್ಕೆ ಬಂದ ನನ್ನ ನಿರ್ಧಾರದ ಕುರಿತು ಮರುಚಿಂತನೆ ಮಾಡಿಕೊಂಡಿದ್ದೂ ಉಂಟು,'' ಎನ್ನುತ್ತಾರೆ ಸಂಜನಾ.

``ಆದರೆ ದುನಿಯಾ ವಿಜಯ್‌ ಜೊತೆ ನಾಯಕಿಯಾಗುವ ಅವಕಾಶ ನನ್ನ ಜೀವನದ ಸರ್‌ ಪ್ರೈಸ್‌ ಸಂಭ್ರಮ ಅಥವಾ ಅವಕಾಶ ಎನ್ನಬಹುದು.

ನಿರ್ದೇಶಕ ದುನಿಯಾ ವಿಜಯ್

``ಏಕೆಂದರೆ ನಟರಾಗಿ ದುನಿಯಾ ವಿಜಯ್‌ ತಮ್ಮ ಛಾಪು ಮೂಡಿಸಿದರು. ಅಂಥವರು ಮೊದಲ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದರು. ಅವರ ಮೊದಲ ನಿರ್ದೇಶದಲ್ಲಿ ನಾನು ನಾಯಕಿ ಆಗಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಬಂದಿತು,'' ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ