– ರಾಘವೇಂದ್ರ ಅಡಿಗ ಎಚ್ಚೆನ್.
ವಿಜಯನಗರ:ಅದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ.

ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು, ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ, ಜಲಸಂಪನ್ಮೂಲ ಸಚವರಾದ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ನಿಕಟಪೂರ್ವ ಕ.ಸಾ.ಪ ನಗರ ಘಟಕದ ಅಧ್ಯಕ್ಷ ಮಾಯಣ್ಣ,ಅಧ್ಯಕ್ಷತೆ ಸೋಮಶೇಖರ್ ಗಾಂಧಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ್, ಖಜಾಂಚಿ ವಾಸುದೇವಹೊಳ್ಳ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಬಿ.ವಿ.ಮಲ್ಲಿಕಾರ್ಜುನಯ್ಯ, ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು* ಮಾತನಾಡಿ ಮನೆ, ಮನ, ಮನಸ್ಸುಗಳನ್ನು ತಲುಪಿಸುವ ಕಾರ್ಯ ಪತ್ರಿಕೆಗಳು ಮಾಡುತ್ತಿದೆ. ದುರ್ಯೋಧನ ಅಂತಿಮ ಸಾಯುವ ಕಾಲದಲ್ಲಿ ವಾರ್ತಕಾರರನ್ನ ಕರೆಸಿ ಸುದ್ದಿ ಮುಟ್ಟಿಸುತ್ತಿದ್ದರು.
ಆಧುನಿಕ ಯುಗದಲ್ಲಿ ಎ.ಐ.ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಬದಲಾಗಿ, ತಂತ್ರಜ್ಞಾನದ ಜೊತೆಯಲ್ಲಿ ಸಾಗಬೇಕು.

ಡಿ.ವಿ.ಗುಂಡಪ್ಪರವರು ತತ್ವಜ್ಞಾನಿಗಳು ಮುಕ್ತಿ ಪಡೆಯಲು ಮೂರು ಸನ್ಮಾರ್ಗಗಳು ಇವೆ ಅವುಗಳನ್ನು ಗುರುಗಳಿಂದ ಕಲೆಯಬೇಕು. ಚುಂಚನಗಿರಿ ಮಠ ಪತ್ರಿಕೆ ಮತ್ತು ಪತ್ರಕರ್ತರನ್ನ ಗೌರವಿಸುತ್ತಿದ್ದೇವೆ.
*ಶ್ರೀಶ್ರೀ ಶ್ರೀ ಸೌಮ್ಯನಾಥಸ್ವಾಮೀಜಿರವರು* ಮಾತನಾಡಿ ಮಾಧ್ಯಮ ಕ್ಷೇತ್ರದವರು ಗೌರವಿಸುವ ದಿನ ಪತ್ರಿಕಾ ದಿನಾಚರಣೆಯಾಗಿದೆ. ಮಾಧ್ಯಮ ಮೂಲಕ ವಿಷಯಗಳು ರಾಜ್ಯದ ಮೂಲೆ, ಮೂಲೆಗಳಿಗೆ ತಲುಪುತ್ತದೆ.ಪ್ರಪಂಚದಲ್ಲಿ ನಡೆಯುವ ವಿಷಯಗಳು ಕ್ಷಣ ಮಾತ್ರದಲ್ಲಿ ಜನರಿಗೆ ಮುಟ್ಟಿಸುತ್ತಿದೆ ಮಾಧ್ಯಮರಂಗ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸರಿಪಡಿಸುವ ಕ್ಷೇತ್ರ ಮಾಧ್ಯಮವಾಗಿದೆ. ಜೀವನ ಸೇವೆ ಮಾಡಿದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.ಗಿಡ,ಮರಗಳು ಹಣ್ಣು ತಿನ್ನುವುದಿಲ್ಲ, ನದೀ ನೀರು ನಾವು ಕುಡಿಯುತ್ತೇವೆ ಪರರಿಗಾಗಿ ತಮ್ಮ ಜೀವನವವನ್ನು ಸವೆಸುತ್ತಾದೆ. ಸಾರ್ವಜನಿಕರು ಅದರಂತೆ ಜೀವನ ಸಾಗಿಸಬೇಕು.

*ಸಚವರಾದ ರಾಮಲಿಂಗಾರೆಡ್ಡಿ* ರವರು ಮಾತನಾಡಿ ಮುದ್ರಣ ಮತ್ತು ಟಿಲಿವಿಷನ್ ಮೀಡಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
ಈ ಹಿಂದೆ 6ಪತ್ರಿಕೆಗಳು ಇತ್ತು ಅದರೆ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿದೆ.
ಒಳ್ಳೆಯ ಸುದ್ದಿ ಕೊಟ್ಟಗ ಜನರು ಇಷ್ಟು ಪಡುತ್ತಾರೆ. ನಗರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಮುಖ್ಯಮಂತ್ರಿಗಳಿಗೆ ಕಟ್ಟಡ ಕೊಡಲಾಗುವುದು ಎಂದು ಹೇಳಿದರು.

*ಮಲ್ಲಿಕಾರ್ಜುನಯ್ಯರವರು* ಮಾತನಾಡಿ ಪ್ರತಿವರ್ಷ ಪತ್ರಿಕಾ ದಿನಾಚರಣೆ ಮಾಡುತ್ತೇವೆ. ಪತ್ರಿಕೆ, ಟಿ.ವಿ.ಮಾಧ್ಯಮಗಳು ಬಹಳ ಸಂಕಷ್ಟಗಳು ಎದುರಿಸುತ್ತಿದೆ.ಪತ್ರಕರ್ತರು ಸರಸ್ವತಿ ಪುತ್ರರು, ವೃತ್ತಿಗೆ ಬದ್ದರಾಗಿ ಕೆಲಸ ಮಾಡಬೇಕು. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ನೂತನ ತಂತ್ರಜ್ಞಾನವನ್ನು ಪತ್ರಿಕೋದ್ಯಮದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
*ಶಿವಾನಂದ ತಗಡೂರು* ರವರು ಮಾತನಾಡಿ ಸಮುದ್ರ ನೀರು ಕುಡಿಯುವುದಕ್ಕೆ ಆಗುವುದಿಲ್ಲ, ಬಾವಿ ನೀರು ಕುಡಿಯಬಹುದು ಪತ್ರಕರ್ತರು ಸಿಹಿ ನೀರಿನಂತೆ.ಸಂಘವು ಎಲ್ಲರು ಒಟ್ಟಾಗಿ ಹೋಗಿ ಸಂಘಟಿತರಾಗಿ ಹೋರಾಟ ಮಾಡಬೇಕು. ಪತ್ರಕರ್ತರು ಗಟ್ಟಿತನ ಉಳಿಸಿಕೊಳ್ಳಬೇಕು.ಸಾರ್ವಜನಿಕರ ಸಂಘವಾಗಿದೆ. ಇದು ಯಾರ ಮನೆ ಆಸ್ತಿಯಲ್ಲ. ಸಮಾಜಕ್ಕೆ ಒಳ್ಳೆಯದು ಮಾಡುವುದಕ್ಕೆ ಇರುವುದು.ನಮ್ಮ ಸಂಘವು ರಾಜ್ಯ, ಹೊರ ರಾಜ್ಯ, ತಾಲ್ಲೂಕು ಮಟ್ಟದಲ್ಲಿಯೂ ಸಂಘ ಸಕ್ರಿಯವಾಗಿದೆ. ನಗರ ಜಿಲ್ಲೆಗೆ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇದೆ ಎಂದು ಹೇಳಿದರು.

*ಬಿ.ಸಿ.ಲೋಕೇಶ್* ರವರು ಮಾತನಾಡಿ ಮಂಗಳೂರು ಸಮಾಚಾರ್ ಸ್ಥಾಪನೆ ದಿನವು ಪತ್ರಕರ್ತರ ದಿನಾಚರಣೆಯಾಗಿ ಅಚರಿಸುತ್ತೇವೆ. 1926ಕಾರ್ಮಿಕ ಕಾಯಿದೆ ಪ್ರಕಾರ ಶತಮಾನ ಅಚರಿಸಲು ಸಿದ್ದವಾಗಿದೆ. ಕರ್ನಾಟಕ ಸರ್ಕಾರದ ಮಾನ್ಯತೇ ಪಡೆದಿದೆ ಎಂದು ಹೇಳಿದರು.*ಸೋಮಶೇಖರ್ ಗಾಂಧಿ* ರವರು ಮಾತನಾಡಿ 1932ರಲ್ಲಿ ಡಿ.ವಿ.ಗುಂಡಪ್ಪರವರು ಸಂಘ ಸ್ಥಾಪನೆಯಾಯಿತು.ಮೈಸೂರು ಮಹಾರಾಜರ ಸಹಯೋಗದಲ್ಲಿ ಮತ್ತು ಬೆಂಗಳೂರುನಗರ ಜಿಲ್ಲಾ ಸಂಘಸ್ಥಾಪನೆಯಾಗಿ16ವರ್ಷವಾಯಿತು.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಛೇರಿ ಜಾಗ ನೀಡಬೇಕು ಎಂದು ಮನವಿ, ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಜಾಹಿರಾತು ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.

*ಸನ್ಮಾನಿತರ ಪಟ್ಟಿ*
1) ಕೆ.ಎಸ್.ನಾಗೇಶ್ ಕುಮಾರ್, ಹಿರಿಯ ಸಿನಿಮಾ ಛಾಯಗ್ರಾಹಕ
2)ಪ್ರಭುದೇವ ಶಾಸ್ತ್ರಿ ಮಠ, ಸಹಾಯಕ ಸಂಪಾದಕರು ವಿಜಯವಾಣಿ
3) ರಂಗನಾಥ ಭಾರದ್ವಾಜ್ ನಿರ್ನಾಪಕರು ಟಿ.ವಿ.9
4)ಕೀರ್ತಿ ಪ್ರಸಾದ್, ವಿಶೇಷ ಪ್ರತಿನಿಧಿ ವಿಜಯಕರ್ನಾಟಕ
5)ಮಧು ಎಂ.ಉತ್ತವಳ್ಳಿ ಇನ್ ಪುಟ್ ಎಡಿಟರ್ ನ್ಯೂಸ್ 18
6) ಸಂಗಮದೇವ್, ಹಿರಿಯ ಪತ್ರಕರ್ತರು.
7) ಹೆಚ್.ಸಿ.ಶೋಭ, ಸಂಪಾದಕರು, ಸ್ತ್ರೀ ಜಾಗೃತಿ ಪತ್ರಿಕೆ.
8) ಬಿ.ಎಸ್.ಮಹೇಂದ್ರ, ಸಂಪಾದಕರು ಸಂಜೆ ಸಮಾಚಾರ್
9)ವೀರಣ್ಣಗೌಡ, ಉಪ ಸಂಪಾದಕ ಪೊಲೀಸ್ ನ್ಯೂಸ್
10) ಜಿ.ವಿ.ರಾಮರಾವ್,ಪ್ರಧಾನ ಸಂಪಾದಕರು ಅಮೂಲ್ಯವಾಣಿ
*ಸಂಘದ ಪದಾಧಿಕಾರಿಗಳಾದ* ಪ್ರಧಾನ ಕಾರ್ಯದರ್ಶಿ : ಆರ್ ಜಯಕುಮಾರ್ ಗೌಡ,ರಾಜ್ಯ ಸಮಿತಿ ಸದಸ್ಯ : ಹೆಚ್ ಆರ್ ರವೀಶ್,ಉಪಾಧ್ಯಕ್ಷರು : ಹೆಚ್ ಎಸ್ ಪರಿಮಳ,ಹೆಚ್ ಕೆ ಬಸವರಾಜು,ಡಾ. ಕೆ ಎಸ್ ಸ್ವಾಮಿ
ಕಾರ್ಯದರ್ಶಿಗಳು : ಕೆ ಎಲ್ ಲೋಕೇಶ್,ಡಿ ಎಸ್ ಗೋದಾವರಿ
ಕೆ ಹರೀಶ್, ಖಜಾಂಚಿ ಟಿ ಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಗಳಾದ
ಡಿ ಎಲ್ ಹರೀಶ್,ಆರ್ ರಾಜಗಿರಿ ಪ್ರದೀಪ್,ಎ ಹೆಚ್ ಶರಣ ಬಸಪ್ಪ,ಬಿ ಕೆ ಸುಂದರೇಶ್,ಲಿಂಗರಾಜು ಡಿ ನೊಣವಿನಕೆರೆ,ಎನ್ ಶಿವಾನಂದ,ಗಂಡಸಿ ಸದಾನಂದ ಸ್ವಾಮಿ,ಗಂಗರಾಜು,ಶ್ಯಾಮ್ ಎಸ್, ಬಿ ಎನ್ ರಾಮಚಂದ್ರ,ರಮಾಕಾಂತ ಗುಗ್ರಿ,ಹನುಮಂತರಾಜು ಬಿ ಕೆ.ಮೋಹನ್ ಕುಮಾರ್ ಬಿ ಎನ್
ರವಿಕಾಂತ ಕುಂದಾಪುರ,ನಟರಾಜ್ ಬಿ ಪಿರವರು ಉಪಸ್ಥಿತರಿದ್ದರು.





