ಕೇವಲ 15 ಹರೆಯದ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ಸ್ಟಾರ್ಸಿಂಡ್ರೆಲಾ ದಾಸ್ ಮುಂದಿನ ಗುರಿ ಒಲಿಂಪಿಕ್ನಲ್ಲಿ ಸ್ವರ್ಣಪದಕ ಗೆಲ್ಲುವುದಾಗಿದೆ! ಆಕೆ ತನ್ನ ಯಶಸ್ಸು, ಸಾಧನೆ, ಕನಸುಗಳ ಕುರಿತು ಏನು ಹೇಳಿದ್ದಾರೆ ಎಂದು ವಿವರವಾಗಿ ಗಮನಿಸೋಣವೇ.....?

ಕೋಲ್ಕತಾ, ದ.ಬಂಗಾಳ ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಹೆಸರನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆಯ ಸಾಧನೆ ಈಕೆಯದು. ಈ ಸಲ ಆಕೆಯ ಗುರಿ ಮುಂದಿನ ಒಲಿಂಪಿಕ್‌ ನಲ್ಲಿ ಸ್ವರ್ಣಪದಕ ಗೆಲ್ಲುವುದಾಗಿದೆ. ಒಂದೊಂದೇ ಹೆಜ್ಜೆ ಇಡುತ್ತಾ ಈಕೆ ಅದರತ್ತ  ಹೊರಟಿದ್ದಾರೆ. ಹೀಗಾಗಿ ಈಗಿನಿಂದಲೇ ಇದರ ತಯಾರಿ ಆರಂಭಿಸಿದ್ದಾರೆ. ತನ್ನ ಬಿಡುವಿರದ ದಿನಚರಿ ಮಧ್ಯೆ, ಕೇವಲ 15ರ ಹರೆಯದ, ಕೋಲ್ಕತಾ ಮೂಲದ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್‌ ಸ್ಟಾರ್‌ ಸಿಂಡ್ರೆಲಾ ದಾಸ್‌ ತಮ್ಮ ಸಾಧನೆ, ಕನಸು, ಯಶಸ್ಸಿನ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.

ನೀವು ನಿಮ್ಮ ಟೇಬಲ್ ಟೆನಿಸ್‌ (ಟಿಟಿ) ಕೆರಿಯರ್ನ್ನು ಶುರು ಮಾಡಿದ್ದು ಹೇಗೆ?

ನಾನು 4 ವರ್ಷದವಳಿದ್ದಾಗಲೇ ಟಿಟಿ ರಾಕೆಟ್‌ ಹಿಡಿಯುವುದನ್ನು ಕಲಿತೆ. ನನ್ನ ತಂದೆ ಬಳಿ ಅಂಥ ಒಂದು ರಾಕೆಟ್‌ ಇತ್ತು, ಅದರಿಂದ ಆಡುವುದು ನನಗೆ ಬಲು ಇಷ್ಟವಾಗುತ್ತಿತ್ತು. ಗಂಟೆಗಟ್ಟಲೆ ಗೋಡೆಗೆ ನಾನು ಬಾಲ್ ‌ಹೊಡೆಯುತ್ತಿದ್ದೆ. ಈ ರೀತಿ ನಾನು ಅಭ್ಯಾಸ ಶುರು ಮಾಡಿದೆ. ನಂತರ ನನ್ನ ಹೆತ್ತವರಾದ ಸುಶ್ಮಿತಾ ಸುಪ್ರಿಯ್‌ ನನ್ನನ್ನು ಇಲ್ಲಿನ ಒಂದು ಲೋಕಲ್ ಟಿಟಿ ಕ್ಲಬ್‌ ಗೆ ಸೇರಿಸಿದರು. ಜೊತೆಗೆ ನಾನು ಈಜು, ಚಿತ್ರಕಲೆ, ಗಾಯನ, ನೃತ್ಯಾಭ್ಯಾಸ ನಡೆಸುತ್ತಾ ಟಿಟಿ ಕಲಿಯತೊಡಗಿದೆ. ನಾನು 8ರ ಹರೆಯದಲ್ಲಿ ಇಲ್ಲಿನ ಒಂದು ಲೋಕಲ್ ಟಿಟಿ ಟೂರ್ನಮೆಂಟ್‌ ನಲ್ಲಿ ಪಾಲ್ಗೊಂಡೆ, ಚಾಂಪಿಯನ್‌ ಎನಿಸಿದೆ! ಇದು ಜೂನಿಯರ್ ಮಟ್ಟದ ಟೂರ್ನಮೆಂಟ್‌ ಆಗಿತ್ತು, ಹೀಗಾಗಿ ಇದರಲ್ಲಿ ಯಾವುದೇ ಲಿಂಗಭೇದ ತಾರತಮ್ಯ ಇರಲಿಲ್ಲ. ನಾನು ಹುಡುಗ/ಹುಡುಗಿ ಇಬ್ಬರ ಜೊತೆಯೂ ಪೈಪೋಟಿ ನಡೆಸಿದೆ. ಆ ಸ್ಪರ್ಧೆ ನಿಜಕ್ಕೂ ನನ್ನ ಜೀವನ ಬದಲಾಯಿಸಿತು. ಆ ದಿನ ನಾನು ಮನೆಗೆ ಬಂದು `ಈ ಆಟ ನನಗೆ ಬಲು ಇಷ್ಟ!' ಎಂದು ಹೇಳಿದೆ.

4_Syndrela-Das

ನಿಮ್ಮ ಕೆರಿಯರ್ಆರಂಭಿಸಲು ಪ್ರೇರಣೆ ನೀಡಿದವರು ಯಾರು?

ನಾನು 9ರ ಹರೆಯದಲ್ಲಿ ನನ್ನ ಕೋಚ್‌ ಸೌಮ್ಯ ದೀಪ್‌ ರಾಯ್‌ ಹಾಗೂ ಪಾಲಮೀ ಘಟಕ್‌ ಇಬ್ಬರಿಂದಲೂ ತರಬೇತಿ ಪಡೆದೆ. ಅವರ ಮಾರ್ಗದರ್ಶನದಲ್ಲಿ ಈ ಆಟ ನನ್ನ ಬದುಕಿನಲ್ಲಿ ಮಹತ್ವಪೂರ್ಣ ತಿರುವು ಪಡೆಯಿತು. ಅವರುಗಳ ಪ್ರೋತ್ಸಾಹ, ಮಾರ್ಗದರ್ಶನ, ಸಕಾರಾತ್ಮಕ ದೃಷ್ಟಿಕೋನಗಳಿಂದ ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಮೂಡಿತು. ಆಗ ನಾನು, ಈ ಆಟವನ್ನು ಕೇವಲ ಮನರಂಜನೆಗೆ ಮಾತ್ರವಲ್ಲದೆ, ಒಬ್ಬ ಪ್ರೊಫೆಶನಲ್ ಕ್ರೀಡಾಪಟುವಾಗಲು ದಾರಿ ತೋರಿತು. ಇದರಿಂದ ದೊಡ್ಡ ಕನಸುಗಳನ್ನು ಕಂಡೆ. ನನ್ನನ್ನು ನಾನು ಇಡಿಯಾಗಿ ಈ ಆಟಕ್ಕೆ ಅರ್ಪಿಸಿಕೊಂಡೆ. ಅಂತಾರಾಷ್ಟ್ರೀಯ ಕೋಚ್‌ ವಾಂಗ್‌ ಮನ್ಯು ಈಗ ನನ್ನ ಆದರ್ಶ ಗುರುಗಳಲ್ಲಿ ಒಬ್ಬರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ