ಹಬ್ಬಕ್ಕೆ ನಿಮ್ಮ ಶೃಂಗಾರ ಹೇಗಿರಬೇಕು ಎಂಬುದನ್ನು ಬ್ಯೂಟಿ ಎಕ್ಸ್ ಪರ್ಟ್ರಿಂದ ಸಲಹೆ ಪಡೆಯೋಣವೇ....?

ದೀಪಾವಳಿಯಂಥ ದೊಡ್ಡ ಹಬ್ಬ ಬಂದ ಮೇಲೆ ಉಟ್ಟು ತೊಟ್ಟು ಶೃಂಗಾರ ಮಾಡಿಕೊಂಡು ಪುಟ್ಟಕ್ಕ ತಯಾರಾಗದಿದ್ದರೆ ಹೇಗೆ? ಈ ಸಡಗರ ಸಂಭ್ರಮದ ಸಂದರ್ಭವೇ ಹಾಗೆ, ಎಲ್ಲರೂ ತಂತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ. ಹೆಣ್ಣುಮಕ್ಕಳಂತೂ ಈ ಹಬ್ಬ ಬರಲಿ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಬ್ಯೂಟಿಫುಲ್ ಡ್ರೆಸೆಸ್‌, ಜ್ಯೂವೆಲರಿ, ಮೇಕಪ್‌ ನಿಂದ ತಮ್ಮ ಸೌಂದರ್ಯ ಇಮ್ಮಡಿಗೊಳ್ಳುವಂತೆ ಮಾಡಿಕೊಳ್ಳುತ್ತಾರೆ. ದೀಪಾವಳಿಯ ಹಬ್ಬ ಪ್ರಮುಖವಾಗಿ 3 ದಿನಗಳದ್ದು. ಅದರಲ್ಲಿ ಹಿಂದಿನ ಸಂಜೆ ನೀರು ತುಂಬೋ ಹಬ್ಬ, ಮನೆ ಮುಂದೆ ಸಗಣಿಯಿಂದ ನೆಲ ಸಾರಿಸಿ, ರಂಗೋಲಿ ಇಟ್ಟು, ತಳಿರು ತೋರಣಗಳಿಂದ ಮನೆ ಶೋಭಾಯಮಾನವಾಗುತ್ತದೆ. ಮೊದಲ ದಿನ ನರಕಚತುರ್ದಶಿ, ನಡುವಿನದು ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಕೊನೆಯದು ಬಲಿಪಾಡ್ಯಮಿ. ನವವಧು ಹೊಸ ಅಳಿಯನೊಂದಿಗೆ ತವರಿನಲ್ಲಿ ಮೊದಲ ದೀಪಾವಳಿ ಆಚರಿಸುವ ಭರ್ಜರಿ 3 ದಿನಗಳ ಹಬ್ಬ. ಪ್ರತಿದಿನ ನಳನಳಿಸುವ ಶೃಂಗಾರ ಕಡ್ಡಾಯ!

ಸೌಂದರ್ಯ ತಜ್ಞೆಯರ ಸಲಹೆಗಳಂತೆ ಈ ರೀತಿ ಶೃಂಗಾರ ಮಾಡಿಕೊಂಡು ಹಬ್ಬಕ್ಕೆ ಸಿದ್ಧರಾಗಿ :

ಹಬ್ಬಕ್ಕಾಗಿ ಸ್ಪೆಷಲ್ ಫೇಶಿಯಲ್, ಮೆನಿಕ್ಯೂರ್‌, ಪೆಡಿಕ್ಯೂರ್‌, ಬಾಡಿ ಪಾಲಿಶಿಂಗ್ಟಿಪ್ಸ್ : ಹಬ್ಬದ ತಯಾರಿ ಬಲು ಜೋರಾಗಿ ನಡೆದಿರುತ್ತದೆ. ಶಾಪಿಂಗ್‌ ಭರಾಟೆಯಿಂದ ನಿಮ್ಮ ಚರ್ಮ ಸಹಜವಾಗಿಯೇ ಟ್ಯಾನಿಂಗ್‌ ಬಾಧೆಗೆ ಒಳಗಾಗುತ್ತದೆ. ಮುಖದಲ್ಲಿ ಸುಸ್ತು ಕುಂಡುಬಂದು ಲವಲವಿಕೆ ಹಿಂದೆ ಸರಿಯುತ್ತದೆ. ಹೀಗಾಗಿ ಹಬ್ಬಕ್ಕೆ ಮೊದಲೇ ನೀಟಾಗಿ ಸ್ಪೆಷಲ್ ಫೇಶಿಯಲ್ ಮಾಡಿಸಿಕೊಳ್ಳಿ. ಜೊತೆಗೆ ಬಾಡಿ ಮಸಾಜ್‌ ಇರಲಿ. ಫುಲ್ ಬಾಡಿ ಪಾಲಿಶಿಂಗ್‌, ವ್ಯಾಕ್ಸಿಂಗ್‌, ಐಬ್ರೋಸ್‌ ಇತ್ಯಾದಿ ಮಾಡಿಸಿ. ಇದರಿಂದ ನಿಮ್ಮ ಮುಖದಲ್ಲಿನ ಸುಸ್ತಿನ ಭಾವ ತಂತಾನೇ ಕಡಿಮೆ ಆಗುತ್ತದೆ. ಹಬ್ಬದ ದಿನ ನೀವು ಲವಲವಿಕೆಯಿಂದ ಮಿಂಚಬಹುದು.

ಫೇಶಿಯಲ್ ಗಾಗಿ C10 ಫೇಶಿಯಲ್, ಶಹನಾಜ್‌ ಫೇಶಿಯಲ್ ಕಿಟ್‌, ಹೈಡ್ರಾ ಫೇಶಿಯಲ್ ಇತ್ಯಾದಿ ಬಲು ಉತ್ತಮ ಮಟ್ಟದ್ದಾಗಿವೆ. ಇವು ಫೇಶಿಯಲ್ ಫೇಸ್‌ ನ ಟ್ಯಾನಿಂಗ್‌ ಪೂರ್ತಿ ತೆಗೆದುಬಿಡುತ್ತದೆ. ಆಗ ಮೇಕಪ್‌ ಇಲ್ಲದೆಯೂ ಮುಖ ಗ್ಲೋ ಆಗುತ್ತದೆ. ಇದರ ಪರಿಣಾಮ ಉತ್ತಮವಾಗಿರುತ್ತದೆ.

ಹಬ್ಬಕ್ಕೆ ಬೇಕಾದ ಶೃಂಗಾರಕ್ಕಾಗಿ ಟಿಪ್ಸ್ : ಮೊದಲ ದಿನ ಲೈಟ್‌ ಕಲರ್‌ ಡ್ರೆಸೆಸ್‌ ಇರಲಿ. ಆಫ್‌ ವೈಟ್‌, ಲೈಟ್‌ ಯೆಲ್ಲೋ, ಅರಿಶಿನ, ಲೈಟ್‌ ಪಿಂಕ್‌, ಆರೆಂಜ್‌ ಕಲರ್‌ ಡ್ರೆಸೆಸ್‌ ಕಣ್ಣಿಗೆ ತಂಪೆನಿಸುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೂ ಅತಿಯಾದ ಗಾಡಿ ಕಲರ್ ಡ್ರೆಸೆಸ್‌ ಬೇಡ. ಇದಕ್ಕೆ ತಕ್ಕಂತೆ ಸಾಫ್ಟ್ ಮೇಕಪ್‌ ಇರಲಿ. ಲೈಟ್‌ ಕಲರ್‌ ಡ್ರೆಸೆಸ್‌ ಗೆ ಇದೇ ಸರಿ. ಡ್ರೆಸ್‌ ಗೆ ತಕ್ಕಂತೆ ಲಿಪ್‌ ಸ್ಟಿಕ್ ಇರಲಿ. ಐ ಶ್ಯಾಡೋ ಲೈಟ್‌ ಇರಲಿ, ಕಂಗಳಿಗೂ ಲೈಟ್‌ ಮೇಕಪ್‌ ಇರಲಿ. ಹೇರ್‌ ಸ್ಟೈಲ್‌ಗಾಗಿ ಇತ್ತೀಚೆಗೆ ಎಲ್ಲರ ಆಯ್ಕೆ ಅರ್ಧ ಓಪನ್‌ ಹೇರ್‌, ಪೋನಿಟೇಲ್ ‌ಬಯಸುತ್ತಾರೆ. ಇದಕ್ಕೆ ಬ್ಯೂಟಿಫುಲ್ ಬ್ರಾಂಚ್‌ ಸಿಗಿಸಿಡಿ. ಮನೆಯ ಕೆಲಸಗಳು ಸಲೀಸಾಗಿ ಜರುಗುವಂತೆ ಹೇರ್‌ ಸ್ಟೈಲಿಂಗ್‌ ಇರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ