ಚಳಿಗಾಲಕ್ಕೆ ಸೂಕ್ತವಾಗುವಂತೆ ನಿಮ್ಮ ಬ್ಯೂಟಿ ರೊಟೀನ್ಬದಲಿಸಿಕೊಳ್ಳಲು ಕೆಳಗಿನ ಸಲಹೆಗಳನ್ನು ಅನುಸರಿಸಿ :

ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಹೆಚ್ಚು ಹೆಚ್ಚಾಗಿ ಮಾಯಿಶ್ಚರ್‌ ಕಳೆದುಕೊಳ್ಳುತ್ತಾ, ಡ್ರೈನೆಸ್‌ ಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಬೆಳಗೆದ್ದು ಮುಖ ತೊಳೆಯಲು, ಸ್ನಾನಕ್ಕೆ (ಒಟ್ಟಾರೆ ದಿನವಿಡೀ) ಸೋಪು ಬಳಸು ಬದಲು ಫೇಸ್‌ ವಾಶ್‌, ಬಾಡಿ ಲೋಶನ್‌ ಬಳಸಿರಿ. ಏಕೆಂದರೆ ಸೋಪುಗಳು ಚರ್ಮದ ಸಾಮಾನ್ಯ ಪಿಎಚ್‌ ಬ್ಯಾಲೆನ್ಸ್ ತಪ್ಪಿಸಿ, ಅದು ಮತ್ತಷ್ಟು ಶುಷ್ಕವಾಗುವಂತೆ ಮಾಡುತ್ತವೆ. ನಿಮ್ಮ ಫೇಸ್‌ ವಾಶ್‌ ನಲ್ಲಿ ಲೋಳೆಸರ (ಆ್ಯಲೋವೇರಾ), ಬೇವು, ನಿಂಬೆ, ನೆಲ್ಲಿ ಮುಂತಾದವು ಇದೆಯೇ ಎಂದು ಪರೀಕ್ಷಿಸಿ. ಆಯುರ್ವೇದದಲ್ಲಿ ಈ ಗಿಡಮೂಲಿಕೆಗಳನ್ನು ಅನಾದಿ ಕಾಲದಿಂದಲೂ ಚರ್ಮದ ಒಳಿತಿಗಾಗಿ ಬಳಸಲಾಗುತ್ತಿದೆ. ಉದಾ : ಆ್ಯಲೋವೇರಾ ಅತ್ಯುತ್ತಮ ಸ್ಕಿನ್‌ ಹೀಲರ್‌ ಎನಿಸಿದೆ! ಇದಕ್ಕೆ ಆ್ಯಸ್ಟ್ರಿಂಜೆಂಟ್‌, ಹೀಲಿಂಗ್‌, ಕೂಲಿಂಗ್‌ ಗುಣಗಳು ಧಾರಾಳವಾಗಿವೆ.

ಈ ಸೀಜನ್‌ ನಲ್ಲಿ ಡೆಡ್‌ ಸ್ಕಿನ್‌ ಸಹಜವಾಗಿಯೇ ಬಿಲ್ಡ್ ಅಪ್‌ ಆಗಿ ಹೆಚ್ಚತೊಡಗುತ್ತದೆ. ಆದ್ದರಿಂದ ವಾರದಲ್ಲಿ ಒಂದು ಸಲ ಅಗತ್ಯವಾಗಿ ಈ ಡೆಡ್‌ ಸ್ಕಿನ್‌ ನ್ನು ಅಗತ್ಯವಾಗಿ ಎಕ್ಸ್ ಪಾಲಿಯೇಟ್‌ ಮಾಡಿಸಿ. ಆಗ ಅಡಿಭಾಗದ ಉತ್ತಮ ಜೀವಕೋಶಗಳು ಮೇಲ್ಪದರಕ್ಕೆ ಬಂದು ನಳನಳಿಸುತ್ತವೆ. ಡೆಡ್‌ ಸ್ಕಿನ್‌ ತೊಲಗಿಸಲು ಆಗಾಗ ಅದನ್ನು ಏಪ್ರಿಕಾಟ್‌, ಅಖ್ರೋಟ್‌, ಬೇವು, ತುಳಸಿ ಎಲೆಗಳಿಂದ ಸ್ಕ್ರಬ್‌ ಮಾಡುತ್ತಿರಿ. ಇದರಿಂದ ಸಹಜವಾಗಿಯೇ ಬ್ಲ್ಯಾಕ್‌ ಹೆಡ್ಸ್, ವೈಟ್‌ ಹೆಡ್ಸ್, ಮೊಡವೆ ಇತ್ಯಾದಿಗಳನ್ನು ನಿವಾರಿಸಿ ಚರ್ಮಕ್ಕೆ ಒಳ್ಳೆಯ ಕಾಂತಿ ನೀಡುತ್ತವೆ.

ಇದಾದ ನಂತರ ಒಂದು ಫೇಸ್‌ ಪ್ಯಾಕ್‌ ಅಪ್ಲೈ ಮಾಡಿ. ಚಳಿಗಾಲದಲ್ಲಿ ಯಾವಾಗಲೂ ಫ್ರೂಟ್‌ ಪ್ಯಾಕ್‌ ಗೆ ಆದ್ಯತೆ ಕೊಡಿ. ಇದು ಚರ್ಮವನ್ನು ಶುಷ್ಕಗೊಳ್ಳಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪರಂಗಿಹಣ್ಣು ಹಾಗೂ ಸೇಬು ಅತ್ಯುತ್ತಮ ಫೇಸ್‌ ಪ್ಯಾಕುಗಳೆನಿಸಿವೆ. ಫೇಸ್‌ ಪ್ಯಾಕ್‌ ಹಚ್ಚಿಕೊಂಡ ನಂತರ 15 ನಿಮಿಷ ಹಾಗೇ ಒಣಗಲು ಬಿಡಿ. ಆಮೇಲೆ ತಣ್ಣೀರಿನಿಂದ ಮುಖ ತೊಳೆಯಿರಿ.

ಆದಷ್ಟೂ ಆಲ್ಕೋಹಾಲ್ ಬೇಸ್‌ ವುಳ್ಳ ಟೋನರ್ಸ್ ನ್ನು ಚಳಿಗಾಲದಲ್ಲಿ ಬಳಸಲೇಬೇಡಿ, ಇದು ಚರ್ಮದಿಂದ ನೈಸರ್ಗಿಕ ತೈಲೀಯ ಅಂಶಗಳು ನಷ್ಟವಾಗುವಂತೆ ಮಾಡಿಬಿಡುತ್ತದೆ. ಹೀಗಾಗಿ ನಿಂಬೆಯುಕ್ತ ಟೋನರ್‌ ನ್ನೇ ಆಯ್ದುಕೊಳ್ಳಿ. ನಿಂಬೆಯಲ್ಲಿನ ಆ್ಯಸ್ಟ್ರಿಂಜೆಂಟ್ ಗುಣಗಳು ಚರ್ಮವನ್ನು ನೀಟಾಗಿ ಟೋನ್‌ ಮಾಡಿ, ಅದು ಸಹಜವಾಗಿ ಹೊಳೆಯುವಂತೆ ಮಾಡುತ್ತದೆ.

ದಿನಕ್ಕೆ 2 ಸಲ  ಒಂದು ಉತ್ತಮ ಇಂಟೆನ್ಸಿವ್ ‌ಮಾಯಿಶ್ಚರೈಸರ್‌ ಬಳಸಿರಿ. ಹಿಮಾಲಯಾದ ಇಂಟೆನ್ಸಿವ್ ‌ಮಾಯಿಶ್ಚರೈಸಿಂಗ್ ಬಾಡಿ ಲೋಶನ್‌ ಹಾಗೂ ಇಂಟೆನ್ಸಿವ್ ‌ಫೇಸ್‌ ಮಾಯಿಶ್ಚರೈಸಿಂಗ್‌ ಲೋಶನ್‌, ಕೋಕೋಬಟರ್‌ ಹಾಗೂ ವೀಟ್‌ ಜೆರ್ಮ್ ಬೇಸ್ಡ್ ಆಗಿರುವುದರಿಂದ ಈ ಚಳಿಗಾಲದ ಮೇಕಪ್‌ ಗೆ ಇವನ್ನು ಅಗತ್ಯ ಬಳಸಿರಿ.

blosum-kochar

ಬೇಸಿಗೆಗ ಮಾತ್ರ ಸನ್‌ ಸ್ಕ್ರೀನ್‌ ಲೋಶನ್‌ ಬೇಕು ಎಂದು ಭಾವಿಸದಿರಿ. ಚಳಿಗಾಲದಲ್ಲೂ ಸಹ UV ಈ UV ಕಿರಣಗಳ ವಿರುದ್ಧ ರಕ್ಷಣೆ ನೀಡುವಂಥ SPF 15 ಅಂಶವುಳ್ಳ ಸನ್‌ ಸ್ಕ್ರೀನ್‌ ಕ್ರೀಮನ್ನು ಬಳಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ