ಬ್ಲೂ ಲೈಟ್ ಕಲರ್ ನ ಕಾಂಬಿನೇಶನ್ ನಲ್ಲಿ ಈ ಬ್ಯೂಟಿಫುಲ್, ಫುಲ್ ಸ್ಲೀವ್ ನ ಫ್ಲವರ್ ಪ್ರಿಂಟೆಡ್ ಗೌನ್ ಅದ್ಭುತವಾಗಿ ಕಂಗೊಳಿಸುತ್ತಿದೆ. ಜೊತೆಗಿನ ಮ್ಯಾಚಿಂಗ್ ಲಾಂಗ್ ಇಯರ್ ರಿಂಗ್ಸ್ ನೊಂದಿಗೆ ಸಿದ್ಧಳಾದ ಈ ಷೋಡಶಿ, ಫೆಸ್ಟಿವ್ ಪಾರ್ಟಿಗೆ ಹೊರಡಲು ರೆಡಿಯಾಗಿದ್ದಾಳೆ!
ಅಚ್ಚ ನೀಲಿ ಬಣ್ಣದ ಈ ಬ್ಯೂಟಿಫುಲ್ ಸೂಟ್ ಕುರ್ತಾದ ಮುಂಭಾಗ ಹಾಗೂ ಅಂಚಿನಲ್ಲಿ ರೂಪಿಸಲಾಗಿರುವ ಸ್ಟೈಲಿಶ್ ಕಸೂತಿಯಿಂದ, ಈ ಉಡುಗೆ ಫೆಸ್ಟಿವ್ ಗೆಟಪ್ ಗಳಿಸಿದೆ! ಮ್ಯಾಚಿಂಗ್ ಆ್ಯಕ್ಸೆಸರೀಸ್ ಜೊತೆ ಓಪನ್ ಹೇರ್ ಸ್ಟೈಲ್, ಈ ಸಾಗರಕನ್ಯೆಯನ್ನು ಫೆಸ್ಟಿವ್ ಪಾರ್ಟಿಯ ಕೇಂದ್ರಬಿಂದು ಆಗಿಸಲಿದೆ!

ಗ್ರೇ ಮೆರೂನ್ ಬಣ್ಣದ ಸಂಗಮವುಳ್ಳ ಈ ಅತ್ಯಾಕರ್ಷಕ ಲಾಂಗ್ ಮಿಡೀ, ನಿಮ್ಮ ಯಾವುದೇ ಹಬ್ಬಕ್ಕೂ ಸೂಕ್ತ ಆಯ್ಕೆ ಎನಿಸುತ್ತದೆ!
ಕೇಸರಿ ಬಣ್ಣದ ಈ ಬ್ಯೂಟಿಫುಲ್ ಕುರ್ತಾದ ಫ್ರಂಟ್ ಡಿಸೈನಿಂಗ್ ಬಹಳ ಅಚ್ಚುಕಟ್ಟಾಗಿದೆ. ಜೊತೆಗಿನ ಮ್ಯಾಚಿಂಗ್ ಆ್ಯಕ್ಸೆಸರೀಸ್ ನಿಂದ ಇದು ಫೆಸ್ಟಿವ್ ಸಂದರ್ಭಕ್ಕೆ ಸೂಕ್ತವಾಗಿದೆ!

ಲೈಟ್ ಪರ್ಪಲ್ ಕಲರ್ ನ, ಅತ್ಯಾಕರ್ಷಕ ಕಸೂತಿಯಿಂದ ಸಜ್ಜುಗೊಳಿಸಲಾದ ಈ ಸ್ಟ್ರೇಟ್ ಕುರ್ತಾ ಪ್ಯಾಂಟ್, ಸೋಬರ್‌ಸ್ಟೈಲಿಶ್ ಲುಕ್ಸ್ ಗೆ ಪೂರಕಾಗಿದ್ದು, ನಿಮ್ಮ ಹಬ್ಬಕ್ಕೆ ಹೆಚ್ಚಿನ ಕಳೆ ತರಲಿದೆ!
ಈ ಕ್ರೀಂ ಕಲರ್ ನ ಬ್ಯೂಟಿಫುಲ್ ಕುರ್ತಾ ಸೆಟ್, ಹಬ್ಬಗಳಿಗೆಂದೇ ಹೇಳಿ ಮಾಡಿಸಿದಂತಿದೆ!





