– ರಾಘವೇಂದ್ರ ಅಡಿಗ ಎಚ್ಚೆನ್.

ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಸಿಟಿ ಲೈಟ್ಸ್ ಚಿತ್ರದ ನಾಯಕರಾಗಿದ್ದಾರೆ. ಡೈರೆಕ್ಟರ್ ದುನಿಯಾ ವಿಜಯ್ ಕುಮಾರ್‌ ಅವರಿಗೆ ವಿನಯ್ ರಾಜ್‌ಕುಮಾರ್ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ದೊಡ್ಮನೆ ವಿನಯ್ ರಾಜ್‌ಕುಮಾರ್‌ ‘ಬಂಗಾರ’; ದುನಿಯಾ ವಿಜಯ್ ಹೇಳಿದರು.

1001651850

ದುನಿಯಾ ವಿಜಯ್ ನಿರ್ದೇಶನದ ಸಿಟಿ ಲೈಟ್ಸ್ ಚಿತ್ರದ ಚಿತ್ರದ ಮತ್ತೊಂದು ಹಾಡು ಕಂದಮ್ಮ ರಿಲೀಸ್ ಆಗಿದೆ.ಇದರ ಸಂಭ್ರಮದಲ್ಲಿಯೇ ಪತ್ರಕರ್ತರ ಪ್ರಶ್ನೆಗೆ ದುನಿಯಾ ವಿಜಯ್ ಕುಮಾರ್ ವಿನಯ್ ರಾಜ್ ಕುಮಾರ್ ‘ಬಂಗಾರ’ ಎಂದ ದುನಿಯಾ ವಿಜಯ್ ಏನು ಹೇಳಿದರು. ಅಲ್ಲದೆ  ತಮ್ಮ ಚಿತ್ರದ ನಾಯಕ ಮತ್ತು ನಾಯಕಿಯನ್ನ ಕೊಂಡಾಡಿದ್ದಾರೆ. ನಾಯಕಿಯನ್ನ ‘ಕಂದಮ್ಮ’ ಎಂದು ಬಣ್ಣಿಸಿದ್ದಾರೆ.. . ವಿಶೇಷ ಎಂದರೆ ಚಿತ್ರದ ನಾಯಕಿ ದುನಿಯಾ ವಿಜಯ್ ಚಿಕ್ಕಮಗಳು ಮೋನಿಷಾ ವಿಜಯ್‌ಕುಮಾರ್ ಅವರೇ  ಆಗಿದ್ದಾರೆ.
ದುನಿಯಾ ವಿಜಯ್ ಮಾತನಾಡಿ  ವಿನಯ್ ರಾಜ್ ಕುಮಾರ್ ಒಳ್ಳೆಯ ಮನಸ್ಸಿನ ವ್ಯಕ್ತಿ  ಇವರಲ್ಲಿ ಸಾಕಷ್ಟು ವಿಷಯ ಇದೆ. ಅದನ್ನ ತೆಗೆದಷ್ಟು ಬರ್ತಾನೇ ಇರುತ್ತದೆ. ಈ ಸಿಟಿ ಲೈಟ್ಸ್ ಅಲ್ಲಿ ಆ ಪ್ರಯತ್ನ ಆಗಿದೆ ಅಂತ ಹೇಳಬಹುದು.

1001651844

ವಿನಯ್ ನಿಜಕ್ಕೂ ಬಂಗಾರ ವಿನಯ್ ರಾಜ್‌ಕುಮಾರ್ ತುಂಬಾನೆ ಒಳ್ಳೆಯವರಾಗಿದ್ದಾರೆ. ಅವರ ಸಿನಿಮಾಗಳನ್ನ ನೋಡ್ತಾನೇ ಬಂದಿದ್ದೇನೆ. ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಲೇ ಇದ್ದಾರೆ.ಈ ಸಿಟಿ ಲೈಟ್ಸ್ ಅಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಹೇಳೋದನ್ನ ಆ ಕೂಡಲೇ ಕೊಡುವಷ್ಟು ಸಾಮರ್ಥ್ಯ ಇದೆ ಅಂತಲೂ ದುನಿಯಾ ವಿಜಯ್ ಹೇಳಿದ್ದಾರೆ.
ಇನ್ನು ಸಿಟಿ ಲೈಟ್ಸ್ ಚಿತ್ರದಲ್ಲಿ ಕಂದಮ್ಮ ಕಂದಮ್ಮ ಅನ್ನುವ ಹಾಡಿದೆ. ಈ ಹಾಡನ್ನ ಚಿತ್ರದ ನಾಯಕಿ ಮಗಳು ಮೋನಿಷಾಗಾಗಿಯೇ ಬರೆಸಿದ್ದಾರೆ. ತಮ್ಮ ಈ ಚಿಕ್ಕ ಮಗಳನ್ನ ಕಂದಮ್ಮ ಅಂತಲೂ ಕರೆಯುತ್ತಾರೆ.

1001651859

ಅದೇ ಪದವನ್ನೆ ಇಟ್ಟುಕೊಂಡು ನಾಗಾರ್ಜುನ್ ಶರ್ಮಾ ಅವರಿಂದ ಈ ಹಾಡನ್ನ ಬರೆಸಿದ್ದಾರೆ. ಚರಣ್ ರಾಜ್ ಇದಕ್ಕೆ ಸಂಗೀತ ಕೊಟ್ಟಿದ್ದಾರೆ. ಸಂಜಿತ್ ಹೆಗ್ಡೆ ಈ ಗೀತೆಯನ್ನ ಹಾಡಿದ್ದಾರೆ.
ಸಿಟಿ ಲೈಟ್ಸ್ ಚಿತ್ರದ ಬಹುತೇಕ ಕೆಲಸ ಕಂಪ್ಲೀಟ್ ಆಗಿದೆ. ಇದರ ಬೆನ್ನಲ್ಲಿಯೇ ಚಿತ್ರದ  ಸಾಂಗ್ ಈಗ ರಿಲೀಸ್ ಆಗಿದೆ. ಕಂದಮ್ಮ ಅನ್ನುವ ಈ ಹಾಡಿನಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ವಿಜಯ್‌ಕುಮಾರ್ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ.

1001651862

ಕಂದಮ್ಮ ಅನ್ನು ಈ ಹಾಡಿನಲ್ಲಿ ಮೋನಿಷಾ ವಿಜಯ್ ಕುಮಾರ್ ತುಂಬಾನೆ ಚೆನ್ನಾಗಿಯೇ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಪ್ರೀತಿ ತುಂಬಿದ ಕಣ್ಣಿನಿಂದ ನೋಡುವ ಅದೆಷ್ಟೋ ದೃಶ್ಯಗಳು ಇಷ್ಟ ಆಗುತ್ತವೆ. ವಿನಯ್ ರಾಜಕುಮಾರ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಈ ಗೀತೆ ಎಲ್ಲರ ಗಮನ ಸೆಳೆಯುತ್ತದೆ.

1001651853

ಇದಲ್ಲದೆ ಹಾಡಿನ ದೃಶ್ಯಾವಳಿಯಲ್ಲಿ ಮಕ್ಕಳಿಗೆ ಜಂಕ್ ಫುಡ್ ಹಾಗೂ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಸಣ್ಣ ಸಂದೇಶವನ್ನೂ ಸೇರಿಸಲಾಗಿದೆ. ಸಮಾಜದಲ್ಲಿ ಮಂಗಳಮುಖಿಯರನ್ನು ಗೌರವಯುತವಾಗಿ ನೋಡಬೇಕು ಎಂಬ ಉದ್ದೇಶದಿಂದ ಸಿನಿಮಾದಲ್ಲಿ ಉಮಾಶ್ರೀ ಅವರೊಂದಿಗೆ ಪ್ರಮುಖ ಪಾತ್ರವನ್ನು ನೀಡಲಾಗಿದೆ. ರಂಗಭೂಮಿ ಕಲಾವಿದರು (ಉದಾ: ಭುವನವಲ್ಲಿ) ಸೇರಿದಂತೆ ಹಲವು ಹೊಸ ಮುಖಗಳಿಗೆ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಸಿನಿಮಾದಲ್ಲಿ ಮಾಸ್ ಹಾಡುಗಳು ಹಾಗೂ ಥೀಮ್ ಸಾಂಗ್ ಸೇರಿದಂತೆ ಒಟ್ಟು ೫-೬ ಉತ್ತಮ ಹಾಡುಗಳಿವೆ. ಮುಂಬರುವ ದಿನಗಳಲ್ಲಿ ಈ ಚಿತ್ರದ ಕುರಿತು ಮತ್ತಷ್ಟು ಮಾಹಿತಿ ಹೊರಬೀಳಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ