ಸ್ಮೂಥ್ನಿಟ್ಟಿಂಗ್ಮಾಡಬಯಸಿದರೆ, ಅಗತ್ಯ ಟಿಪ್ಸ್ ಅನುಸರಿಸಿ……!

ಚಳಿಗಾಲ ಅಡಿಯಿಡುತ್ತಿದ್ದಂತೆ ಮಾರುಕಟ್ಟೆ ತುಂಬಾ ಉಣ್ಣೆ ವಸ್ತ್ರಗಳ ರಾಶಿ ಕಾಣಿಸುತ್ತದೆ. ಗ್ರಾಹಕರು ಮುಗಿಬಿದ್ದು ಇವನ್ನು ಕೊಳ್ಳುತ್ತಿರುತ್ತಾರೆ. ಇದೇನೇ ವಾಣಿಜ್ಯ ಯಹಾರ ಇರಲಿ, ನಮ್ಮ ಕುಟುಂಬದ ಸದಸ್ಯರಿಗಾಗಿ ನಾೀ ಪ್ರೀತಿಯಿಂದ ಸ್ವೆಟರ್‌ಹೆಣೆಯುವುದರಲ್ಲಿ ಇರುವ ಕಾಳಜಿ, ಯಾಂತ್ರಿಕ ಉತ್ಪನ್ನಗಳಲ್ಲಿ ಇರುವುದಿಲ್ಲ. ಮನೆಯವರಿಗಾಗಿ ನಾವು ಹೆಣೆಯುವ ಇಂಥವುಗಳ ಹಿಂದಿನ ಪ್ರೀತಿ ವಾತ್ಸಲ್ಯವನ್ನು ಧರಿಸಿಯೇ ಸವಿಯಬೇಕು.

ಹೀಗೆ ಹೆಣಿಗೆಯಲ್ಲಿ ಪರಿಣಿತರಾದ ಹೆಂಗಸರು, ಮಾರುಕಟ್ಟೆಯ ಉಣ್ಣೆ ವಸ್ತ್ರಗಳನ್ನು ತಮ್ಮ ಮನೆಯವರಿಗಾಗಿ ಎಂದೂ ಬಯಸುವುದಿಲ್ಲ. ಅಂಗಡಿಗಳಲ್ಲಿನ ದುಬಾರಿ ಯಾಂತ್ರಿಕ ಉತ್ಪನ್ನ ಕೊಳ್ಳುವುದಕ್ಕಿಂತ, ಹೆಂಗಸರು ಬಿಡುವಿನ ವೇಳೆಯಲ್ಲಿ ಮನೆಯವರಿಗಾಗಿ ಕೈಗಳಿಂದಲೇ (ಹೆಚ್ಚಾದಾಗ ಯಂತ್ರ ಬಳಕೆಯೂ ಸಹ) ಹೆಣೆದ ಈ ವಸ್ತ್ರಗಳ ಬೆಚ್ಚನೆಯ ಅನುಭವ ಅತಿ ವಿಶಿಷ್ಟಪೂರ್ಣ.

ಸಮರ್ಪಕ ನಿಟ್ಟಿಂಗ್ಯಾರ್ನ್‌: ಹೆಣಿಗೆಯ ವಿಷಯ ಬಂದ ತಕ್ಷಣ, ಮೊತ್ತ ಮೊದಲಿಗೆ ಹೊಳೆಯುವುದು ಎಂದರೆ, ಉತ್ತಮ ಗುಣಮಟ್ಟದ ಉಲ್ಲನ್‌ ಬಳಕೆ. ನಿಟ್ಟಿಂಗ್‌ ಯಾರ್ನ್‌ ಉತ್ತಮ ಅಲ್ಲದಿದ್ದರೆ, ಡ್ರೆಸ್‌ ರೆಡಿ ಆಗುವಷ್ಟರಲ್ಲಿ ನಮಗೆ ಸಾಕಷ್ಟು ಕೆಟ್ಟ ರಿಸಲ್ಟ್ ಎದುರಾಗುತ್ತವೆ. ಇದರಿಂದ ನಮ್ಮ ಹಲವು ತಿಂಗಳ ಶ್ರಮ ವ್ಯರ್ಥವಾಗುತ್ತದೆ. ಅಂದ್ರೆ ಮುಂದೆ ವುಲ್ಲನ್‌ ಕಲರ್‌ ಫೇಡ್‌ ಆಗುವುದು, ಹೆಣೆದ ಸ್ವೆಟರ್‌ ನಿಂದ ಎಳೆ ಎಳೆಯಾಗಿ ಯಾರ್ನ್‌ ಕಿತ್ತುಬರುವುದು, ಒಟ್ಟಾರೆ ಆಕಾರ ಕೆಡುವುದು…. ಇತ್ಯಾದಿ.

ಹೀಗಾಗಿ ನಾವು ನಿಟ್ಟಿಂಗ್‌ ಯಾರ್ನ್‌ ನ್ನು ಬಲು ಎಚ್ಚರಿಕೆಯಿಂದ ಆರಿಸಬೇಕು. ನಾವು ಕೊಳ್ಳುವ ವುಲ್ಲನ್‌ ಲಡಿ, ಅಗ್ಗ ಎಂದು ಯಾವುದೋ ಲೋಕಲ್ ಗೆ ಮಾರುಹೋಗಬಾರದು, ಸದಾ ಬ್ರಾಂಡೆಡ್‌ ವುಲ್ಲನ್‌ ನ್ನು ನಂಬಿಕಸ್ಥ ಅಂಗಡಿಯಲ್ಲೇ ಕೊಳ್ಳಬೇಕು. ನಕಲಿ ಲೇಬಲ್ ಇರುವಂಥ ಲೋಕಲ್ ವುಲ್ಲನ್‌ ಸಹ ಬ್ರಾಂಡೆಡ್‌ ತರಹವೇ ಮೋಸಗೊಳಿಸುತ್ತದೆ, ಎಚ್ಚರ!

ಇತ್ತೀಚೆಗೆ ವರ್ಧಮಾನ್‌, ಓಸ್ವಾಲಾ, ಗಂಗಾ ಕಂಪನಿಗಳ ನಿಟ್ಟಿಂಗ್‌ ಯಾರ್ನ್‌ ಬಲು ಸುಂದರ ಬಣ್ಣಗಳಲ್ಲಿ, ವೈವಿಧ್ಯಮಯ ರೀತಿಗಳಲ್ಲಿ ಲಭ್ಯ. ನೀವು ಇಷ್ಟೆಲ್ಲ ಕಾಳಜಿವಹಿಸಿ, ಬೆನ್ನು ನೋಯಿಸಿಕೊಂಡು ನಿಮ್ಮವರಿಗಾಗಿ ಒಂದೊಂದೇ ಪರ್ಲ್/ನಿಟ್‌ಹೆಣೆಯುತ್ತಿರುವಾಗ, ಅಂದದ ಡಿಸೈನ್‌ ಬರಲಿ ಎಂದು ನಿರೀಕ್ಷಿಸುವಾಗ, ಯಾರ್ನ್‌ ಕ್ವಾಲಿಟಿ ಉತ್ತಮ ಆಗಿರುವಂಥದ್ದನ್ನೇ ಆರಿಸಿ! ಹೆಣಿಗೆ ಮುಗಿಸಿದ ನಂತರ ನೀವು ಬಯಸಿದ ಉತ್ತಮ ಪರಿಣಾಮ ಬರದಿದ್ದರೆ, ಬಲು ಬೇಸರವಾಗುತ್ತದೆ.

ಉತ್ತಮ ಬಣ್ಣಗಳ ಸಂಯೋಜನೆ : ಸಮರ್ಪಕ ನಿಟ್ಟಿಂಗ್‌ ಯಾರ್ನ್‌ ನ ಆಯ್ಕೆಯೊಂದಿಗೆ ಉತ್ಕೃಷ್ಟ ಬಣ್ಣಗಳ ಸಂಯೋಜನೆಯೂ ಅತಿ ಮುಖ್ಯ, ಇದಕ್ಕಾಗಿ ಸೂಕ್ತ ತಿಳಿವಳಿಕೆ ಅಗತ್ಯ. ಉತ್ತಮ ಗುಣಮಟ್ಟದ ಬ್ರಾಂಡೆಡ್‌ ನಿಟ್ಟಿಂಗ್‌ ಯಾರ್ನ್‌ ನ ಕಲರ್‌ ಬಲು ಉತ್ಕೃಷ್ಟ ಹಾಗೂ ಯೂನಿಕ್‌ ಆಗಿರುತ್ತದೆ. ಲೋಕಲ್ ಲೆವೆಲ್ ‌ನಲ್ಲಿ ಈ ಗುಣಮಟ್ಟ ಅಸಾಧ್ಯ.

ಸಣ್ಣ ಮಕ್ಕಳಿಗಾಗಿ ಬೇಬಿ ಪಿಂಕ್‌, ಪಿಸ್ತಾ ಗ್ರೀನ್‌, ಬಾದಾಮಿ ಕ್ರೀಂ, ಲೈಟ್‌ ಶೇಡ್ಸ್ ಬಲು ಚೆನ್ನಾಗಿ ಒಪ್ಪುತ್ತವೆ. ದೊಡ್ಡ ಮಕ್ಕಳು, ಕಾಲೇಜು ಕಿಶೋರರಿಗಾಗಿ ರಾಯಲ್ ಬ್ಲೂ, ಹಳದಿ, ರೆಡ್‌, ಡಾರ್ಕ್‌ ಗ್ರೀನ್‌, ಬದನೆ, ಬ್ಲ್ಯಾಕ್‌ ಇತ್ಯಾದಿ ಚೆನ್ನಾಗಿರುತ್ತದೆ. ವೃದ್ಧರಿಗಾಗಿ ಬಾದಾಮಿ ಗ್ರೇ, ತೆಳು ನೀಲಿ, ಮೆರೂನ್‌, ಲೈಟ್‌ ಶೇಡ್ಸ್ ಹೆಚ್ಚು ಒಪ್ಪುತ್ತವೆ.

ನಿಟ್ಟಿಂಗ್ಟೂಲ್ಸ್ ಆಯ್ಕೆ : ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ನಕಲಿ ಸಾಮಗ್ರಿಗಳಿಗೆ ಮಾರುಹೋಗಬೇಡಿ. ಆದ್ದರಿಂದ ಉತ್ತಮ ನಿಟ್ಟಿಂಗ್‌ ಯಾರ್ನ್‌ ತರಹವೇ ಅತ್ಯುತ್ತಮ ಸಾಧನ (ಟೂಲ್ಸ್‌) ಆರಿಸುವುದು ಸಹ ಅಷ್ಟೇ ಅಗತ್ಯವಾಗುತ್ತದೆ.

ನಿಟ್ಟಿಂಗ್ಕಡ್ಡಿ : ಉತ್ತಮ ಕ್ವಾಲಿಟಿಯ ಈ ನಿಟ್ಟಿಂಗ್‌ ಕಡ್ಡಿಗಳು, ಸ್ಮೂಥ್‌ ಹೆಣಿಗೆಗೆ ಬಲು ಮುಖ್ಯ. ಈ ದೃಷ್ಟಿಯಲ್ಲಿ `ಪೋನಿ’ ಕಡ್ಡಿಗಳು ಹೆಚ್ಚು ಲಾಭಕರ. ಇಲ್ಲಿ ಸ್ಟೀಲ್‌ಬಿದಿರು ಎಂದು 2 ವಿಧಗಳಿವೆ. ನಿಮ್ಮ ಮನಸ್ಸಿಗೆ ಒಪ್ಪುವಂಥದ್ದನ್ನೇ ನೋಡಿ ಆರಿಸಿ. ನಾರ್ಮಲ್ ಸ್ವೆಟರ್‌ ಗಳಲ್ಲಿ ಇತ್ತೀಚೆಗೆ 9, 10, 11, 12 ನಂಬರ್‌ ನ ಕಡ್ಡಿಗಳು ಹೆಚ್ಚು ಬಳಕೆಯಲ್ಲಿವೆ.

ಸ್ವೆಟರ್‌ ನ ಬಾರ್ಡರ್‌ ಗಾಗಿ 11 ಯಾ 12 ನಂಬರಿನ ಕಡ್ಡಿಯೇ ಸರಿ. ಇಡೀ ಸ್ವೆಟರ್‌ ಗಾಗಿ 9 ಯಾ 10 ನಂ. ಕಡ್ಡಿ ಇರಲಿ. ಇವುಗಳ ನಂಬರ್‌ ವುಲ್ಲನ್‌ಯಾರ್ನ್‌ ಎಷ್ಟು ದಪ್ಪ ಯಾ ತೆಳು ಎಂಬುದನ್ನು ಅವಲಂಬಿಸಿದೆ.

ಸಾಮಾನ್ಯವಾಗಿ ಇದರ ನಾರ್ಮಲ್ ಉದ್ದಳತೆ 10 ಇಂಚು ಹಾಗೂ ಲೆಂತೀ ಅಳತೆ 14 ಇಂಚು ಇರುತ್ತದೆ. ಫ್ರಾಕ್‌ ಯಾ ಶಾಲುವಿನಂಥ್‌ ಮೆಟೀರಿಯಲ್ಸ್ ಗೆ ಹೆಚ್ಚು ಬಲೆಗಳಿರುವ ಡ್ರೆಸ್‌ ನ್ನು ಅವಲಂಬಿಸಿದೆ, ಅವನ್ನು ಸಿದ್ಧಪಡಿಸಲು ಉದ್ದನೇ ಕಡ್ಡಿಗಳೇ ಬೇಕು.

ಎರಡೂ ಬದಿ ಚೂಪು ತುದಿಯುಳ್ಳ ಕಡ್ಡಿಗಳು ಕುತ್ತಿಗೆ ರೂಪಿಸಲು ಯಾ ರೌಂಡ್‌ ಶೇಪ್‌ ನೀಡಲು ಹೆಚ್ಚು ಸಹಕಾರಿ. ಇವು ಮಾರುಕಟ್ಟೆಯಲ್ಲಿ ನಂ.4 ಎಂದೇ ಲಭ್ಯ.

ಸ್ವೆಟರ್‌ ನಂಥ ಡ್ರೆಸ್‌ ಹೆಣೆಯಲು ವೈರ್ಡ್‌ ಕಡ್ಡಿಗಳು ಬಲು ಪ್ರಯೋಜನಕಾರಿ. ಇದನ್ನು ಹೊರತುಪಡಿಸಿ ಕುತ್ತಿಗೆ, ಸಾಕ್ಸ್, ಕ್ಯಾಪ್ ಯಾ ಬೇಬಿ ಸ್ವೆಟರ್‌ (ಜೋಡಿ ಅಲ್ಲ, ಸಿಂಗ್‌) ಹೆಣೆಯಬೇಕಾದಾಗಲೂ ಇದು ಬಹಳ ಸಹಕಾರಿ.

ಕೇವಲ ನೀಡಲ್ ಯಾ ಕಡ್ಡಿ : ಕೇವಲ ಡಿಸೈನಿನಲ್ಲಿ ಬಿ (ನಿಟ್‌/ಪರ್ಲ್) ಬದಲಾಯಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಈ ತರಹದ ಕಡ್ಡಿಯಿಂದ ಕೇವಲ ಡಿಸೈನ್‌ ನ್ನು ಬಲು ಸುಲಭವಾಗಿ ರೆಡಿ ಮಾಡಬಹುದಾಗಿದೆ.

ನೀಡಲ್ ಕ್ಯಾಪ್‌ : ಇದನ್ನು ಕಡ್ಡಿಗಳ ತುದಿಗೆ ಸಿಗಿಸಿಡಲು ಬಳಸುತ್ತಾರೆ. ನೀವು ನಿಟ್ಟಿಂಗ್‌ ಬದಗಿರಿಸಿ, ಬೇರೆ ಕೆಲಸಗಳಲ್ಲಿ ತೊಡಗಿಕೊಂಡಾಗ, ನೀವು ಹಾಕುತ್ತಿದ್ದ ಡ್ರೆಸ್‌ ನ ಬಿ (ನಿಟ್‌/ಪರ್ಲ್) ಬಿಟ್ಟುಕೊಳ್ಳದಿರಲು ಇದು ಪೂರಕ.

ಸ್ವಿಚ್ಹೋಲ್ಡರ್‌ : ಇವು ಸ್ವೆಟರ್‌ ನ ಹೆಗಲು ಇತ್ಯಾದಿಗಳ ಬಲೆ (ನಿಟ್‌/ಪರ್ಲ್) ಹೆಣೆಯಲು ಸಹಕಾರಿ. ಇದನ್ನು ಇತರ ಜಾಗಗಳಲ್ಲಿಯೂ ಬಲೆ (ನಿಟ್‌/ಪರ್ಲ್) ಸ್ಟೋರ್‌ ಮಾಡಲು ಬಳಸುತ್ತಾರೆ. ಆಗ ಸ್ವೆಟರ್‌ ನ ಈ ಹೆಣೆದ ಭಾಗ ಜಾಳು ಜಾಳಾಗುವುದಿಲ್ಲ.

U ಪಿನ್‌ : ಇದು U ಆಕಾರದ ಕಡ್ಡಿ. ಇದರಿಂದ. ನಿಟ್ಟಿಂಗ್‌ ಯಾರ್ನ್‌ ಬಳಸಿಕೊಂಡು, ಕ್ರೋಶಿಯಾದ ನೆರವಿನಿಂದ ಬಗೆಬಗೆಯ ಬಲು ಸುಂದರ ಡಿಸೈನುಗಳಲ್ಲಿ ಫ್ಯಾನ್ಸಿ ಶಾಲು, ಸ್ಟೋಲು, ಸ್ವೆಟರ್‌ ಕೋಟ್‌, ಹಾಫ್‌ ಸ್ವೆಟರ್‌, ಜ್ಯಾಕೆಟ್‌ ಇತ್ಯಾದಿ ರೆಡಿ ಮಾಡಬಹುದು.

ಪಾಮ್ : ಈ ಪಾಮ್ ಮೇಕರ್‌ ಟೂಲ್ ಬಲು ಉಪಯುಕ್ತ. ಇದರ ನೆರವಿನಿಂದ ಪಾಮ್ ಪಾಮ್ ಬಲು ಸುಂದರ ಹಾಗೂ ಅತ್ಯಾಕರ್ಷಕವಾಗಿ ಮೂಡಿಬರುತ್ತದೆ. ಎರಡೂ ಬದಿಯಲ್ಲಿ ನಿಟ್ಟಿಂಗ್‌ ಯಾರ್ನ್‌ ಸುತ್ತಿಕೊಂಡು, ಕಟಿಂಗ್‌ ಮಾಡಲಾಗುತ್ತದೆ. ಸಣ್ಣ ಮಕ್ಕಳ ಕ್ಯಾಪ್‌, ಕುಲಾವಿ, ಸಾಕ್ಸ್, ಸ್ವೆಟರ್‌ ಇತ್ಯಾದಿಗಳಿಗಾಗಿ ನಿಮ್ಮ ಮೆಚ್ಚಿನ ಡಿಸೈನಿನ ಬಣ್ಣಬಣ್ಣದ ಪಾಮ್ ಪಾಮ್ ನ್ನು ಸುಲಭವಾಗಿ ರೆಡಿ ಮಾಡಿಕೊಳ್ಳಬಹುದು.

ಈ ಮೇಲಿನ ಎಲ್ಲಾ ಸಲಹೆಗಳನ್ನೂ ಅನುಸರಿಸುತ್ತಾ, ನಿಮ್ಮ ಮನೆಯವರಿಗಾಗಿ ಈ ಸಲದ ಚಳಿಗಾಲದಲ್ಲಿ ಒಂದು ಸ್ವೆಟರ್‌ ಹೆಣೆದು ಏಕೆ ಉಡುಗೊರೆಯಾಗಿ ನೀಡಬಾರದು? ಇದರಿಂದ ಅವರುಗಳ ಮಧುರ ನೆನಪಿನಲ್ಲಿ ನಿಮಗೂ ಉತ್ತಮ ಹವ್ಯಾಸ ರೂಢಿಸಿಕೊಂಡ ತೃಪ್ತಿ ಇರುತ್ತದೆ. ಹ್ಯಾಪಿ ನಿಟ್ಟಿಂಗ್‌!

ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ