ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ. ಈಗ ಕರ್ನಾಟಕದ ಅಮ್ಮಂದಿರ ಸರಣಿ. ಕನ್ನಡಿಗರನ್ನು ಕುಣಿಸಿ, ಮನರಂಜಿಸಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಅತೀ ಶೀಘ್ರದಲ್ಲಿ ಶುರುವಾಗಲಿದ್ದು ಇದರ ಆಡಿಷನ್ ಆಗಸ್ಟ್​ 2 ರಂದು ನಡೆಯಲಿದೆ.

ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಸದಾ ಪರರಿಗೋಸ್ಕರ ದುಡಿಯುವ ಅಮ್ಮಂದಿರಿಗೆ ಇದೊಂದು ಉತ್ತಮ ಅವಕಾಶ. ಡ್ಯಾನ್ಸ್ ಬಗ್ಗೆ ಆಸಕ್ತಿ ಇರುವ, ಚೆನ್ನಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರು ಈ ಆಡಿಷನ್ ನಲ್ಲಿ ಭಾಗವಹಿಸಬಹುದು. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ. 2 ಆಗಸ್ಟ್ 2026 ಭಾನುವಾರದಂದು ಬೆಳಗ್ಗೆ 9 ಗಂಟೆಗೆ,ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ), ನಾಯ್ಡು ಲೇಔಟ್ , ಹನುಮಗಿರಿ , ಚಿಕ್ಕಲಸಂದ್ರ , ಉತ್ತರಹಳ್ಳಿ ಹೋಬಳಿ, ಬೆಂಗಳೂರು ಇಲ್ಲಿ ಆಡಿಷನ್ ನಡೆಯಲಿದೆ.

ವಿಶೇಷ ಸೂಚನೆ: ಈ ಆಡಿಷನ್ ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.

ಅಮ್ಮಂದಿರಿಗೆ ಸಿಕ್ಕಿದೆ ಹೆಜ್ಜೆ ಹಾಕೋ ಅವಕಾಶ; ತಡ ಯಾಕೆ, ಆಡಿಷನ್ ನಲ್ಲಿ ಭಾಗವಹಿಸಿ ಮುಂದಿನ ಸುತ್ತಿಗೆ ಆಯ್ಕೆಯಾಗಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ