1) ಅರುಂಧತಿ ರಾಯ್ – “ಕಾಶ್ಮೀರ ಭಾರತದ್ದಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದವರು.

2) ಕಾಲಿನ್ ಗೊನ್ಸಾಲ್ವಿಸ್ – 26/11 ಉಗ್ರ ಅಜ್ಮಲ್ ಕಸಬ್ ಪರವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದವರು.

3) ಪ್ರಶಾಂತ್ ಭೂಷಣ್ – ಉಗ್ರ ಯಾಕೂಬ್ ಮೆಮನ್ ಗಲ್ಲುಶಿಕ್ಷೆ ತಡೆಯಲು ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವರು.

4) ನಂದಿತಾ ನಾರಾಯಣ್ – CJP ವೇದಿಕೆಯಲ್ಲಿ ಪಾಕಿಸ್ತಾನದ ಕವಿ ಫೈಝ್ ಅಹ್ಮದ್ ಫೈಝ್ ಅವರ “ಬಸ್ ನಾಮ್ ರಹೇಗಾ ಅಲ್ಲಾಹ್ ಕಾ” ಕವಿತೆ ಹಾಡಿದವರು.

5) ಕುನಾಲ್ ಕಾಮ್ರಾ – CJP ವೇದಿಕೆಯಿಂದ “ಯೇ ಲೋಗ್ ಸೀತಾ ಕೆ ಪತಿ ಕಾ ನಾಮ್ ಲೇಕರ್, ನೀತಾ ಕೆ ಪತಿ ಕಾ ಕಾಮ್ ಕರ ರಹೇ ಹೈಂ” ಎಂದು ಹೇಳಿದವರು.

ಇಷ್ಟೆಲ್ಲ ನೋಡಿದ ಮೇಲೆ, ಇದು ನಿಜಕ್ಕೂ NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ಅಂತ ಕಾಣ್ತದಾ?

ನಿಜವಾಗಿಯೂ ಉದ್ದೇಶ NEET ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸೋದೇ ಆಗಿದ್ದರೆ, ಆ ವೇದಿಕೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೊಂದರೆ ಅನುಭವಿಸಿದ ವಿದ್ಯಾರ್ಥಿಗಳಿಗೆ, ಅವರ ಪಾಲಕರಿಗೆ ಅಥವಾ ಆ ಪ್ರಕರಣದಿಂದ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಿಗಬೇಕಿತ್ತು. ಆದರೆ ಹಾಗಾಗದೇ, ವೇದಿಕೆ ಬೇರೆ ಬೇರೆ ರಾಜಕೀಯ ಮತ್ತು ವೈಚಾರಿಕ ಧೋರಣೆ ಹೊಂದಿರುವ ವ್ಯಕ್ತಿಗಳಿಗೆ ಸಿಕ್ಕಿರುವುದು, ಪ್ರತಿಭಟನೆಯ ಆಯೋಜಕರ ಆದ್ಯತೆ ಏನಿತ್ತು ಎಂಬ ಪ್ರಶ್ನೆ ಎಬ್ಬಿಸುತ್ತದೆ.

ಸೋನಂ ವಾಂಗ್ಚುಕ್ ಅವರೂ ತಮ್ಮ ಸುತ್ತ ಏನು ನಡೆಯುತ್ತಿದೆ ಅನ್ನೋದನ್ನ ಒಮ್ಮೆ ಗಂಭೀರವಾಗಿ ಗಮನಿಸಬೇಕು. ಅವರ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ಗೌರವವನ್ನು ಬಳಸಿಕೊಂಡು ಬೇರೆ ಉದ್ದೇಶಗಳಿಗೆ ವೇದಿಕೆ ಸೃಷ್ಟಿಸಲಾಗ್ತಿದೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಕೆಲ ದಿನಗಳ ಹಿಂದೆ ಸೋನಂ ವಾಂಗ್ಚುಕ್ ಅವರೇ CJP ವೇದಿಕೆಯಿಂದ, “ನಾನು ಉಪವಾಸ ಮಾಡ್ತಿದ್ದೀನಿ, ಉಳಿದವರು ಊಟ ಮಾಡ್ತಿದ್ದಾರೆ. ಅನಿರ್ದಿಷ್ಟಾವಧಿ ಉಪವಾಸಕ್ಕೆ ಬರೋಕಾಗದಿದ್ದರೂ, ಕನಿಷ್ಠ ಒಂದು ದಿನದ ಉಪವಾಸವಾದರೂ ಮಾಡಿ, ಇಲ್ಲ ಅಂದ್ರೆ ಒಂದು ಹೊತ್ತಿನ ಊಟ ಬಿಟ್ಟು ಬೆಂಬಲ ಸೂಚಿಸಿ” ಎಂದು ಬೇಸರ ವ್ಯಕ್ತಪಡಿಸಿದ್ದರು.

ಅವರ ಈ ಕರೆಗೆ CJP ಪ್ರತಿಭಟನೆಯ ಎಷ್ಟು ಸಂಘಟಕರು ಸ್ಪಂದಿಸಿದರು?

ಹೀಗಾಗಿ, ತಾವು ಪ್ರತಿನಿಧಿಸುತ್ತಿದ್ದೇನೆ ಎಂದು ನಂಬಿರುವ ಮೂಲ ವಿಷಯಕ್ಕಿಂತ, ತಮ್ಮ ಹೋರಾಟವನ್ನು ಇನ್ನಾವುದೋ ರಾಜಕೀಯ ಅಥವಾ ವೈಚಾರಿಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗ್ತಿದೆಯೇ ಅನ್ನೋದನ್ನ ಸೋನಂ ವಾಂಗ್ಚುಕ್ ಅವರು ಸ್ವತಃ ಪರಿಶೀಲಿಸಿಕೊಳ್ಳುವುದು ಒಳಿತು. ಯಾಕಂದ್ರೆ, ಈ ಪ್ರತಿಭಟನೆ ನೋಡಿದರೆ ಅದು NEET ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕಿಂತ ಬೇರೆ ಅನೇಕ ವಿಚಾರಗಳ ವೇದಿಕೆಯಾಗಿಬಿಟ್ಟಿದೆಯೇ ಎನ್ನುವ ಅನುಮಾನ ಅನೇಕರಲ್ಲಿ ಮೂಡುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ