ನೀವು ಸಹ ಸ್ಟೋಲ್ ಜೊತೆ ತುಸು ಪ್ರಯೋಗ ನಡೆಸಿ, ಸ್ಟೈಲಿಶ್ಲುಕ್ಸ್ ನಿಮ್ಮದಾಗಿಸಿಕೊಳ್ಳಿ……

ಡಿಸೆಂಬರ್‌ ನ ಚಮು ಚುಮು ಚಳಿ ಎಂದರೆ ಶಾಲು, ಸ್ಟೋಲ್ ‌ಅಗತ್ಯವಾಗಿ ಬೇಕೇ ಬೇಕು. ಶಾಲುವಿಗೆ ಹೋಲಿಸಿದರೆ ಸ್ಟೋಲ್ ನ ಅಗಲ ಹಾಗೂ ಅಳತೆ ತುಸು ಕಡಿಮೆ ಎನ್ನಬಹುದು. ಇಂದು ನಮಗೆ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಡಿಸೈನಿನ ಶಾಲು, ಸ್ಟೋಲ್ಸ್ ‌ಲಭ್ಯವಿವೆ. ಇದು ಚಳಿಯಿಂದ ನಮ್ಮನ್ನು ರಕ್ಷಿಸಿ ಬೆಚ್ಚಗಿಡುವುದಲ್ಲದೆ ಗ್ಲಾಮರಸ್‌, ಸ್ಟೈಲಿಶ್‌, ಫ್ಯಾಷನ್‌ ಸ್ಟೇಟ್‌ ಮೆಂಟ್‌ ಸಹ ಆಗುತ್ತದೆ. ಇದರ ಜೊತೆ ಒಂದಿಷ್ಟು ಪ್ರಯೋಗ ನಡೆಸಿ, ಸ್ಟೈಲಿಶ್‌ ಲುಕ್ಸ್ ನಿಮ್ಮದಾಗಿಸಿಕೊಳ್ಳಿ. ಈ ತರಹ ಮಾಡುವುದರಿಂದ ನೀವು ಸಾಧಾರಣ ಶಾಲು, ಸ್ಟೋಲ್ ‌ನ್ನು ಸಹ ಸ್ಟೈಲಿಶ್‌ ಮಾಡಬಹುದು. ಇದಕ್ಕಾಗಿ ಅನುಸರಿಸಬೇಕಾದ ಟಿಪ್ಸ್ :

ಕ್ಲಾಸಿಕ್ಡ್ರೇಪ್ಲುಕ್‌ : ಇದೊಂದು ಕಾಮನ್‌ ಸೆಲ್‌. ಇದರಲ್ಲಿ ಶಾಲನ್ನು ಎರಡೂ ಭುಜಗಳಿಂದ ಬಳಸಿ, ಮುಂಭಾಗದ ಕಡೆಗೆ ಇಳಿಬಿಡಬೇಕು. ಇದು ಚುಮು ಚುಮು ಚಳಿಯ ಸಂಜೆಗೆ ಬಲು ಪರ್ಫೆಕ್ಟ್ ಆಯ್ಕೆ ಎನಿಸುತ್ತದೆ. ಚಳಿಯಿಂದ ಬೆಚ್ಚಗೆ, ಸ್ಟೈಲಿಶ್ ಆಗಿಯೂ ಮಿಂಚಲು ಇದು ಪೂರಕ.

ಬೆಲ್ಟ್ ಸ್ಟೈಲ್ ‌: ನಿಮ್ಮ ಬಳಿ ಉದ್ದನೆ, ಪ್ಲೇಯಿ, ತೆಳು ಫ್ಯಾಬ್ರಿಕ್‌ ನ ಸ್ಟೋಲ್ ಇದ್ದರೆ, ಇದನ್ನು ನೀವು ಖಂಡಿತಾ ಟ್ರೈ ಮಾಡಿ. ಇದಕ್ಕಾಗಿ ಸ್ಟೋಲ್ ನ್ನು ಸೊಂಟದ ಬಳಿ ಬೆಲ್ಟ್ ತರಹ ಫೋಲ್ಡ್‌ ಮಾಡಿಕೊಂಡು ಸುತ್ತಿಕೊಳ್ಳಿ, ಹಾಗೇ ಮುಂಭಾಗಕ್ಕೆ ಇಳಿಬಿಡಿ. ದೊಡ್ಡ ಬಳೆ, ರಿಂಗ್ಸ್ ನಂಥ ಆ್ಯಕ್ಸೆಸರೀಸ್‌ ಇರಲಿ ಅಥವಾ ಸ್ಟೋಲ್ ನ್ನು ಮುಂಭಾಗಕ್ಕೆ ಇಳಿಬಿಟ್ಟು, ಮೇಲಿನಿಂದಲೂ ಬೆಲ್ಟ್ ತರಹ ಕಟ್ಟಿಕೊಳ್ಳಬಹುದು.

ಹೆಡ್ಸ್ಕಾರ್ಫ್‌ : ಕ್ಯಾಶ್ಯುಯೆಲ್ ‌ಡೇ ಲುಕ್‌ ನಲ್ಲಿ ನೀವು ಸ್ಟೋಲ್ ‌ನ್ನು ನಡುವಿನಿಂದ ಫೋಲ್ಡ್ ‌ಮಾಡಿ, ನಿಮ್ಮ ತಲೆಯ ಸುತ್ತಲೂ ಬರುವಂತೆ ಮಾಡಿ, ಸ್ವಲ್ಪ ತಲೆಯ ಭಾಗ ಕಾಣಿಸದಂತೆ ಸುತ್ತಬೇಕು. ಈ ಸ್ಟೈಲ್ ‌ಗಾಗಿ ಲೈಟ್‌ ಪ್ರಿಂಟ್‌, ಪ್ಲೇನ್‌, ತೆಳು ಟೆಕ್ಸ್ ಚರ್ ನ ಸ್ಟೋಲ್ ‌ನ್ನೇ ಖರೀದಿಸಬೇಕು.

ರಾಪ್ಸ್ಕರ್ಟ್‌ : ಹೆಚ್ಚು ಥಂಡಿ ಇರುವಾಗ ಸ್ಟೈಲಿಶ್‌ ಆಗಿ ಮಿಂಚಲು ನೀವು ಉದ್ದನೆ ಶಾಲನ್ನು ರಾಂಪ್‌ ಲಾನ್‌ ಸ್ಕರ್ಟಿನ ತರಹ ಮಾಡಿ ಬಳಸಿಕೊಳ್ಳಬಹುದು. ಈ ತರಹದ ಸ್ಟೈಲ್ ನ್ನು ಈಶಾನ್ಯ ರಾಜ್ಯದ ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಇದರಡಿ ನೀವು ಲಂಗ್ಗಿಂಗ್‌ ಯಾ ಲೋಯರ್‌ ಸಹ ಕ್ಯಾರಿ ಮಾಡಬಹುದು.

ಟಾಪ್ಸ್ಟೈಲ್ ‌: ನೀವು ಹೆಚ್ಚು ಬೋಲ್ಡ್ ಲುಕ್ಸ್ ಬಯಸುತ್ತೀರಾದರೆ, ಶಾಲನ್ನು ಹಿಂಬದಿಯಿಂದ ಮುಂಭಾಗಕ್ಕೆ ತಂದು, ನಾಟ್‌ ಹಾಕಿ, ಟಾಪ್‌ ತರಹ ಧರಿಸಿರಿ. ಇದಕ್ಕಾಗಿ ತೆಳು ಫ್ಯಾಬ್ರಿಕ್‌ ನ ಶಾಲು ಮಾತ್ರ ಬಳಸಿರಿ.

ಒನ್ಶೋಲ್ಡರ್ಡ್ರೇಪ್‌ : ನೀವು ನಿಮ್ಮ ಲುಕ್ಸ್ ಗೆ ಡ್ರಮಾಟಿಕ್‌ಎಲಿಗೆನ್ಸ್ ಟಚ್‌ನೀಡ ಬಯಸಿದರೆ, ಸ್ಟೋಲ್ ‌ನ್ನು ಒಂದು ಭುಜದ ಮೇಲೆ ಸುತ್ತಿಕೊಳ್ಳಿ. ಫಾರ್ಮಲ್ ಅಕೇಶನ್ಸ್ ಗೆ ಇದು ಬಿಲ್ ‌ಕುಲ್ ‌ಪರ್ಫೆಕ್ಟ್ ಚಾಯ್ಸ್.

ಲೇಯರ್ಡ್ಲುಕ್‌ : ಹೆಚ್ಚು ಥಂಡಿ ಇರುವಾಗ ಸ್ವೆಟರ್‌ ಯಾ ಜ್ಯಾಕೆಟ್‌ ನ ಮೇಲೆ, ನೀವು ಶಾಲನ್ನು ಒಂದು ಪದರವಾಗಿಯೂ ಧರಿಸಬಹುದು. ಇದರಿಂದ ನೀವು ಥಂಡಿಯನ್ನು ಸುಲಭವಾಗಿ ಎದುರಿಸಬಹುದು. ಸ್ಟೋಲ್ ನ ಉದ್ದಳತೆ ಕಡಿಮೆ ಇರುವುದರಿಂದ, ನೀವು ಈ ಸ್ಟೈಲ್ ‌ನ್ನು ಶಾಲು ಜೊತೆ ಟ್ರೈ ಮಾಡಿ.

ನೆಕ್ಸ್ಟೈಲ್ ‌: ಸಿಲ್ಕ್ ಯಾ ಸ್ಯಾಟಿನ್‌ ಸ್ಟೋಲ್ ನ್ನು ನೀವು ಡಬಲ್ ಮಾಡಿ ಕುತ್ತಿಗೆಗೆ ಹಾಕಿಕೊಳ್ಳಿ. ಸ್ಟೋಲ್ ಮಧ್ಯದಿಂದ ಅದರ ತುದಿಯನ್ನು ಎಳೆದು ಬಿಗಿಗೊಳಿಸಿ. ಈ ಸ್ಟೈಲ್ ಕೋಟ್‌ಸ್ವೆಟರ್‌ ಮೇಲೆ ಬಹಳ ಒಪ್ಪುತ್ತದೆ. ಜೀನ್ಸ್ ವುಲ್ಲನ್‌ ಟಾಪ್‌ ಜೊತೆ ಸಹ ಇದನ್ನು ಟ್ರೈ ಮಾಡಿ ನೋಡಿ.

ಪೋಂಚೂ ಸ್ಟೈಲ್ ‌: ಸ್ಟೋಲ್ ನ್ನು ಹಿಂಬದಿಯಿಂದ ಮುಂಭಾಗಕ್ಕೆ ಹಾಕಿಕೊಳ್ಳುವಾಗ, ಅದರ ನಡುಭಾಗ ಹಿಂಭಾಗಕ್ಕೆ ಹೋಗುವಂತೆ ಮಾಡಿ. ಅದರ ತುದಿ ಮುಂಭಾಗದಲ್ಲಿರಲಿ. ಕುತ್ತಿಗೆ ಬಳಿ ಸೇಫ್ಟಿ ಪಿನ್‌ ಸಹಾಯದಿಂದ ಇದಕ್ಕೆ ಪೋಂಚೂ (ಬಾಲ) ಲುಕ್‌ ನೀಡಿ.

ಶಾಲಿನಿಂದ ಜ್ಯಾಕೆಟ್ಲುಕ್‌ : ಈ ಲುಕ್‌ ಗಾಗಿ ನೀವು ನಿಮ್ಮ ಶಾಲಿನ ಮಿಡಲ್ ಪಾಯಿಂಟ್‌ ಗುರುತಿಸಿಕೊಳ್ಳಿ. ನಂತರ ಅಲ್ಲಿಂದ ಒಂದು ತುದಿಗೆ ಪಿನ್‌ ನಿಂದ ಸೆಕ್ಯೂರ್‌ ಮಾಡಿ. ಇದೇ ತರಹ ಶಾಲಿನ ಇನ್ನೊಂದು ತುದಿಯನ್ನೂ, ಇದೇ ಪಿನ್‌ ಗೆ ಜಾಯಿಂಟ್ ಮಾಡಿ. ಹೀಗೆ ಮಾಡುವುದರಿಂದ, ಶಾಲು ಶ್ರಗ್‌ ತರಹ ಕಾಣಿಸುತ್ತದೆ! ನಂತರ ಶಾಲಿನ ಒಂದು ತುದಿಯನ್ನು ನೀವು ಕೈಯಲ್ಲಿ ಹಿಡಿದು, ಇನ್ನೊಂದು ತುದಿಯನ್ನು ಮತ್ತೊಂದು ಕೈಯಲ್ಲಿ ಹಿಡಿಯಿರಿ. ಹೀಗೆ ಮಾಡುವುದರಿಂದ ಇದು ಜ್ಯಾಕೆಟ್‌ ತರಹ ಕಂಡುಬರುತ್ತದೆ. ಇದಕ್ಕೆ ನಿಮ್ಮಿಷ್ಟದ ಪ್ರಕಾರ, ಇಂಡಿಯನ್‌ ಯಾ ವೆಸ್ಟರ್ನ್‌ ಲುಕ್‌ ನೀಡಬಹುದು.

ಸೀರೆಯ ಜೊತೆ ಸೆರಗಿನಂತೆ : ಸೀರೆಯ ಸೆರಗನ್ನು ಹಿಂಬದಿಯಿಂದ ಬಳಸಿ ತಂದು, ಎಡ ಬದಿಯಲ್ಲಿ ಬಂಗಾಳಿ ಶೈಲಿಯಲ್ಲಿ ಟಕ್ ಮಾಡಿ. ಸೀರೆಯ ಮ್ಯಾಚಿಂಗ್‌ ಯಾ ಕಾಂಟ್ರಾಸ್ಟ್ ಬಣ್ಣದ ಶಾಲು ಆರಿಸಿಕೊಳ್ಳಿ. ಇದನ್ನು ಬಿಲ್ ‌ಕುಲ್ ‌ಸೀರೆಯ ತರಹವೇ ಸೊಂಟಕ್ಕೆ ಸಿಗಿಸಿ, ಮಡಿಚಿರಿ. ಆ ಕಡೆಯಿಂದ ಸೆರಗು ಹಾದು ಬರುವಂತೆ ಮಾಡಿ. ಈ ಲುಕ್‌ ನಿಂದ ನೀವು ಹೆಚ್ಚು ಸ್ಟೈಲಿಶ್‌ಆಗುವಿರಿ.

ಪ್ರತಿಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ