ಚಳಿಗಾಲದಲ್ಲಿ ಕಾರ್ಡ್ ಸೆಟ್ ಟ್ರೆಂಡ್ ಹೇಗೆ ಚೆನ್ನಾಗಿ ಹೊಂದುತ್ತದೆ? ಇದನ್ನು ನೀವು ಹೇಗೆ ನಿಮ್ಮ ವಾರ್ಡ್ ರೋಬ್ ನ ಭಾಗ ಆಗಿಸಿಕೊಳ್ಳಬಹುದು?
ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದು ತುಸು ಕಷ್ಟ. ಏಕೆಂದರೆ ಚಳಿಯಿಂದ ಬಚಾವಾಗಲು ನಮ್ಮ ರೆಗ್ಯುಲರ್ ಡ್ರೆಸ್ ಮೇಲೆ ಸ್ವೆಟರ್, ಶಾಲು ಇತ್ಯಾದಿ ಬಂದಿರುತ್ತವೆ. ಇಂದಿನ ಅಧುನಿಕ ಫ್ಯಾಷನ್ ನಲ್ಲಿ `ಕಾರ್ಡ್ ಸೆಟ್’ ಈ ಸಾಲಿಗೆ ಸೂಕ್ತ ಪರಿಹಾರ ಕಂಡುಕೊಂಡಿದೆ. ಚಳಿಗಾಲಕ್ಕೆಂದೇ ರೂಪಿಸಲಾದ ಈ ವಿಶೇಷ ಕೋಆರ್ಡಿನೇಟೆಡ್ ಸೆಟ್, ಆರಾಮದಾಯಕ ಮಾತ್ರವಲ್ಲ, ಬಲು ಟ್ರೆಂಡಿ ಸ್ಟೈಲಿಶ್ ಸಹ ಹೌದು.
ಕಾರ್ಡ್ ಸೆಟ್ ಇದು ಒಂದು ಬಗೆಯ ಮಾಡ್ ಔಟ್ ಫಿಟ್, ಇದರಲ್ಲಿ ಟಾಪ್‌ಬಾಟಂ ಒಂದೇ ರೀತಿಯ ವಸ್ತ್ರದಿಂದ ಡಿಸೈನ್ ಆಗಿರುತ್ತದೆ. ಇದು ಪರ್ಫೆಕ್ಟ್ ಮ್ಯಾಚಿಂಗ್ ಸೆಟ್, ಇದರ ಲುಕ್ ಸೇವ್ ಆಗಿರುತ್ತದೆ. ಇದರಿಂದ ಲುಕ್ಸ್ ಸ್ಟೈಲಿಶ್‌ಫ್ಯಾಷನೆಬಲ್ ಆಗುತ್ತದೆ.
ಕಾರ್ಡ್ ಸೆಟ್ ನ ಪ್ರಾಮುಖ್ಯತೆ
ಆರಾಮ ಹಾಗೂ ಸ್ಟೈಲ್ ನ ಮಿಕ್ಸ್ ಅಪ್ : ಈ ಕಾರ್ಡ್ ಸೆಟ್ ವಿಶೇಷವಾಗಿ ಡಿಸೈನ್ ಗೊಳಿಸಲ್ಪಟ್ಟಿರುತ್ತದೆ. ಇದು ನಮ್ಮನ್ನು ಬೆಚ್ಚಗೆ ಮಾತ್ರವಲ್ಲದೆ, ಸ್ಟೈಲಿಶ್ ಆಗಿಯೂ ಕಂಗೊಳಿಸುತ್ತದೆ. ಇದರಲ್ಲಿ ನಿಟೆಡ್ ಫ್ಯಾಬ್ರಿಕ್, ಫ್ಲೀಸ್ ನಂಥ ಉಣ್ಣೆ ಅಂಶಗಳಿದ್ದು, ನಮ್ಮನ್ನು ಚಳಿಯಿಂದ ರಕ್ಷಿಸುತ್ತವೆ.
ಆ್ಯಕ್ಸೆಸರೀಸ್ ನ ಅಗತ್ಯ ಇರುವುದಿಲ್ಲ : ಕಾರ್ಡ್ ಸೆಟ್ ತನ್ನಷ್ಟಕ್ಕೆ ತಾನೇ ಒಂದು ಕಂಪ್ಲೀಟ್ ಲುಕ್ ಒದಗಿಸುವುದರಿಂದ, ಸ್ಟೈಲ್ ಗಾಗಿ ಹೆಚ್ಚಿನ ಆ್ಯಕ್ಸೆಸರೀಸ್ ನ ಅಗತ್ಯವೇನೂ ಇಲ್ಲ. ಜೊತೆಗೊಂದು ಉತ್ತಮ ಜ್ಯಾಕೆಟ್, ಬೂಟ್ ಇದ್ದರೆ ಸಾಕು, ನೀವು ರೆಡಿ! ಮಿನಿಮಲಿಸ್ಟ್ ಲುಕ್ಸ್ : ಕಾರ್ಡ್ ಸೆಟ್ ನಿಂದ ನೀವು ಸ್ಲೀಕ್‌ಮಿನಿಮಲಿಸ್ಟ್ ಲುಕ್ ಒಳಗೊಂಡ ವ್ಯಕ್ತಿತ್ವ ಪಡೆಯಬಹುದು, ಇದು ಇಂದಿನ ಫ್ಯಾಷನ್ ಗೆ ಹೇಳಿ ಮಾಡಿಸಿದಂತಿದೆ. ಯಾರಿಗೆ ಹೆಚ್ಚು ಆಡಂಬರದ ಫ್ಯಾಷನ್ ಇಷ್ಟವಿಲ್ಲವೋ ಅಂಥವರಿಗೆ ಲೈಟ್ ಟಚ್ ಕೊಡಲು ಈ ಫ್ಯಾಷನ್ ಟ್ರೆಂಡ್ ರೂಪಿಸಿದಂತಿದೆ. ಇಂಥವರು ಸಾಧಾರಣ ವಿಧಾನದಿಂದಲೇ ಸ್ಟೈಲಿಶ್ ಆಗಿ ಕಂಗೊಳಿಸಬಲ್ಲರು.
ಚಳಿಗಾಲದಲ್ಲಿ ಕಾರ್ಡ್ ಸೆಟ್ ಧರಿಸುವಿಕೆ
ಲೇಯರಿಂಗ್ ನ ಜೊತೆ : ಚಳಿಗಾಲದಲ್ಲಿ ಕಾರ್ಡ್ ಸೆಟ್ ಜೊತೆ ಒಂದು ಸ್ಟೈಲಿಶ್ ಕೋಟ್, ಲಾಂಗ್ ಜ್ಯಾಕೆಟ್ ಯಾ ಶಾಲು ಇತ್ಯಾದಿ ಪದರಗಳಾಗಿ ಧರಿಸಿರಿ. ಇದರಿಂದ ನೀವು ಚಳಿ, ಥಂಡಿಯಿಂದ ಬಚಾವಾಗುವುದಲ್ಲದೆ, ನಿಮ್ಮ ಲುಕ್ಸ್ ಸಹ ಡಿಫರೆಂಟ್ ಆಗಲಿವೆ.
ಸರಿಯಾದ ಶೂಗಳ ಆಯ್ಕೆ? : ಕಾರ್ಡ್ ಸೆಟ್ ನ ಜೊತೆ ಆ್ಯಂಕಲ್ ಬೂಟ್ಸ್, ಸ್ನೀಕರ್ಸ್ ಯಾ ಹೀಲ್ ಬೂಟ್ಸ್ ಬಲ ಸೊಗಸಾಗಿರುತ್ತವೆ. ನೀವು ಫಾರ್ಮಲ್ ಲುಕ್ ಬಯಸುವಿರಾದರೆ, ಹೀಲ್ಸ್ ಆರಿಸಿ. ಬದಲಿಗೆ ಕ್ಯಾಶ್ಯುಯೆಲ್ ಲುಕ್ ಬಯಸಿದರೆ, ಸ್ನೀಕರ್ಸ್ ಉತ್ತಮ ಆಯ್ಕೆ.
ಸ್ಕಾರ್ಫ್ ಯಾ ಮಫ್ಲರ್ ಜೊತೆಗಿರಲಿ : ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು, ಕಾರ್ಡ್ ಸೆಟ್ ಜೊತೆ, ಸ್ಕಾರ್ಫ್ ಯಾ ಮಫ್ಲರ್ ಧರಿಸಿರಿ. ಇದು ನಿಮ್ಮ ಲುಕ್ಸ್ ನ್ನು ಮತ್ತಷ್ಟು ಅತ್ಯಾಕರ್ಷಕ ಗೊಳಿಸಲಿದೆ, ಜೊತೆಗೆ ನಿಮ್ಮನ್ನು ಬೆಚ್ಚಗೂ ಇಡುತ್ತದೆ.
ಕಾರ್ಡ್ ಸೆಟ್ ಟ್ರೆಂಡ್ ಇನ್ ವಿಂಟರ್ ಕಾಶ್ಮೀರಿ ಯಾ ವುಲ್ಲನ್ ಸೆಟ್ : ಥಂಡಿಯ ಸೀಸನ್ ನಲ್ಲಿ ಕಾಶ್ಮೀರಿ ಯಾ ವುಲ್ಲನ್ ಕಾರ್ಡ್ ಸೆಟ್ ಬಲು ಆರಾಮದಾಯಕ ಹಾಗೂ ಬೆಚ್ಚಗಿರುತ್ತದೆ. ಈ ಸೆಟ್ ಆಫೀಸ್ ನಿಂದ ಹಿಡಿದು ಕ್ಯಾಶ್ಯುಯೆಲ್ ಔಟಿಂಗ್ ವರೆಗೂ ಪರ್ಫೆಕ್ಟ್ ಆಗಿರುತ್ತದೆ.
ನಿಟೆಡ್ ಸೆಟ್ : ನಿಟೆಡ್ ಕಾರ್ಡ್ ಸೆಟ್ ಚಳಿಗಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಆಯ್ಕೆಯಾಗಿರುತ್ತದೆ. ಇದರ ಫ್ಯಾಬ್ರಿಕ್ ಬೆಚ್ಚಗಿಡುವುದು ಮಾತ್ರವಲ್ಲದೆ, ಧರಿಸಲಿಕ್ಕೂ ಲೈಟ್‌ಆರಾಮದಾಯಕ ಎನಿಸುತ್ತದೆ.
ಟ್ರಾಕ್ ಸೂಟ್ ಸ್ಟೈಲ್ ಕಾರ್ಡ್ ಸೆಟ್ : ಈ ಕಾರ್ಡ್ ಸೆಟ್ ವರ್ಕ್ ಫ್ರಮ್ ಹೋಂ ಯಾ ಕ್ಯಾಶ್ಯುಯೆಲ್ ಔಟಿಂಗ್ ಗಾಗಿ ಪರ್ಫೆಕ್ಟ್ ಚಾಯ್ಸ್ ಆಗಿದೆ. ಟ್ರಾಕ್ ಸೂಟ್ ಸ್ಟೈಲ್ ನ ಕಾರ್ಡ್ ಸೆಟ್ ನಿಮಗೆ ಸ್ಟೈಲ್ ಜೊತೆ ಆ್ಯಕ್ಟಿವ್ ಲುಕ್ ಸಹ ಒದಗಿಸುತ್ತದೆ.
ಫ್ಲಾಲೆಸ್ ಸೆಟ್ : ನೀವು ಚಳಿಗಾಲದಲ್ಲಿ ಹೆಚ್ಚು ಥಂಡಿ ಎದುರಿಸುತ್ತಿದ್ದರೆ, ಫ್ಲಾಲೆಸ್ ಸೆಟ್ ನಿಮಗೆ ಅತ್ಯುತ್ತಮ ಆಯ್ಕೆ. ಇದು ನಿಮ್ಮನ್ನು ಬಲು ಬೆಚ್ಚಗಿಡುತ್ತದೆ, ಆರಾಮದಾಯಕ ಕೂಡ. ಜೊತೆಗೆ ಇದು ಬಲು ಟ್ರೆಂಡಿಯೂ ಹೌದು.
– ಪೂಜಾ ಕೆ. ಭಟ್





