ಈ ಹಬ್ಬದಂದು ಇಂತಹ ಸ್ಮಾರ್ಟ್ ಉಪಕರಣಗಳನ್ನು ನಿಮ್ಮ ಸಂಗಾತಿಯನ್ನಾಗಿ ಮಾಡಿಕೊಂಡರೆ, ನೀವು ಕಡಿಮೆ ಸಮಯದಲ್ಲಿ ಮನೆಯ ಕೆಲಸವನ್ನು ಪೂರ್ಣಗೊಳಿಸಲು ಮಾತ್ರವಲ್ಲ, ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲಿಕ್ಕೂ ಸಾಧ್ಯವಾಗುತ್ತದೆ…….
ಸ್ಮಾರ್ಟ್ ಉಪಕರಣಗಳ ಬಳಕೆಯ ಸಹಾಯದಿಂದ ನೀವು ಉಳಿದ ಸಮಯವನ್ನು ನಿಮ್ಮ ಹವ್ಯಾಸಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳಬಹುದು. ನಿಮಗಿಷ್ಟವಾದ ಅಥವಾ ಹೊಸ ಹೊಸ ಕೌಶಲ್ಯಗಳನ್ನು ಸಹ ಕಲಿಯಬಹುದು. ಈ ಕೌಶಲ್ಯಗಳು ನಿಮ್ಮ ಭವಿಷ್ಯದಲ್ಲಿ ಖಂಡಿತವಾಗಿಯೂ ಉಪಯುಕ್ತವಾಗುತ್ತವೆ.
ಬನ್ನಿ, ನಿಮ್ಮ ಸಮಯವನ್ನು ಉಳಿಸಬಹುದಾದಂತಹ ಸ್ಮಾರ್ಟ್ ಉಪಕರಣಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ. ಇದರೊಂದಿಗೆ, ಈ ಉಪಕರಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀವು ಒಬ್ಬ ಸ್ಮಾರ್ಟ್ ಹೌಸ್ ಮೇಕರ್ ಎಂದು ಕರೆಸಿಕೊಳ್ಳುತ್ತೀರಿ.
ಡಿಶ್ ವಾಷರ್
ಡಿಶ್ ವಾಷರ್ ನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ತೊಳೆದ ಪಾತ್ರೆಗಳು ಸ್ವಚ್ಛ, ನಿರ್ಮಲ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ. ಇವುಗಳ ಮೇಲೆ ಸೋಪಿನ ಅಂಶ ಒಂದಿಷ್ಟೂ ಉಳಿಯುವುದಿಲ್ಲ. ಒಂದು ಬಾರಿಗೆ ಅನೇಕ ಪಾತ್ರೆಗಳನ್ನು ಇದರಲ್ಲಿ ತೊಳೆಯಬಹುದು. ಇದರ ಬಳಕೆಗೆ ನೀರು ಕಡಿಮೆ ಖರ್ಚಾಗುತ್ತದೆ. ಇದರಲ್ಲಿ ತೊಳೆದ ಪಾತ್ರೆಗಳ ಮೇಲೆ ನೀರಿನ ಹನಿಗಳೂ ಉಳಿಯುವುದಿಲ್ಲ. ಮಾತ್ರವಲ್ಲ, ಬಹು ಮುಖ್ಯವಾಗಿ ಇದು ನಿಮ್ಮ ಸಮಯವನ್ನು ಉಳಿಸುತ್ತದೆ. ಡಿಶ್ ವಾಷರ್ ಗೆ ಪಾತ್ರೆಗಳನ್ನು ಹಾಕಿ, ನೀವು ನಿಮ್ಮ ಮುಂದಿನ ಕೆಲಸಗಳನ್ನು ಮಾಡಿಕೊಳ್ಳಬಹುದು.
ಡಿಶ್ ವಾಷರ್ ನ್ನು ಯಾವ ಕಂಪನಿಯಿಂದ ಖರೀದಿಸಬೇಕು ಮತ್ತು ಎಲ್ಲಿ ಖರೀದಿಸಬೇಕು ಎಂದು ನೋಡುವುದಾದರೆ, ಎಲ್.ಜಿ., ಸ್ಯಾಮ್ ಸಂಗ್, ವರ್ಲ್ ಪೂಲ್, ಬುಷ್ ಮುಂತಾದ ಹಲವಾರು ಕಂಪನಿಗಳ ಡಿಶ್ ವಾಷರ್ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳ ಬೆಲೆ ರೂ.15-80 ಸಾವಿರದವರೆಗೆ ಇರುತ್ತದೆ. ನೀವು ಇವನ್ನು ಆನ್ ಲೈನ್ ಸೈಟ್ ಗಳಿಂದಲೂ ಖರೀದಿಸಬಹುದು. ಅಮೆಝಾನ್, ಜಿಯೋ ಮಾರ್ಟ್, ವಿಶಾಲ್ ಮೆಗಾ ಮಾರ್ಟ್, ಫ್ಲಿಪ್ ಕಾರ್ಟ್ ನಂತಹ ಆನ್ ಲೈನ್ ಸೈಟ್ ಗಳಲ್ಲಿ ಇವು ಸುಲಭ ಲಭ್ಯ. ಹಬ್ಬ ಹರಿದಿನಗಳಲ್ಲಿ ಈ ಎಲ್ಲಾ ತಾಣಗಳಲ್ಲಿ ಮೆಗಾ ಸೇಲ್ ಕೂಡಾ ನಡೆಯುತ್ತಿರುತ್ತದೆ.
ಹಿಟ್ಟನ್ನು ಕಲಸುವ ಯಂತ್ರ
ನೀವು ರೊಟ್ಟಿ ತಿನ್ನಲು ಬಯಸಿದರೆ, ಇದರಿಂದ ನೀವು ಹಿಟ್ಟನ್ನು ಬೆರೆಸಬಹುದು. ಹಿಟ್ಟು ಕಲಸುವ ಕಷ್ಟ ಯಾರಿಗೆ ಬೇಕು? ಈ ಕಷ್ಟದಿಂದ ಈಗ ಸುಲಭವಾಗಿ ಪಾರಾಗಬಹುದು. ಎಲೆಕ್ಟ್ರಿಕ್ ಹಿಟ್ಟು ಕಲಸುವ ಯಂತ್ರವನ್ನು ಬಳಸಿಕೊಂಡು 3-5 ನಿಮಿಷಗಳಲ್ಲಿ ನೀವು ರೊಟ್ಟಿ ಅಥವಾ ಪರೋಟ ತಯಾರಿಸಲು ಹಿಟ್ಟನ್ನು ಕಲಸಬಹುದು. ಹಿಟ್ಟನ್ನು ತಯಾರಿಸಲು ಯಂತ್ರದೊಂದಿಗೆ ಒದಗಿಸುವ ಜಾರ್ ಗೆ ಹಿಟ್ಟು ಮತ್ತು ನೀರನ್ನು ಹಾಕಿ ಮೆಷಿನ್ ಆನ್ ಮಾಡಿ. ಐದು ನಿಮಿಷದ ನಂತರ ಆಫ್ ಮಾಡಿ. ನಿಮ್ಮ ಹಿಟ್ಟು ಸಿದ್ಧ.
ವಾಸ್ತವವಾಗಾಗಿ ಮಾರುಕಟ್ಟೆಯಲ್ಲಿ ಅನೇಕ ಹಿಟ್ಟು ಕಲಸುವ ಯಂತ್ರಗಳು ಲಭ್ಯವಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಡೋ ಮೇಕರ್ ಯಂತ್ರ ಬಹಳ ಜನಪ್ರಿಯವಾಗಿದೆ. ಇದರ ಬೆಲೆ ಸುಮಾರು ರೂ. 4,000 ದಿಂದ ಆರಂಭವಾಗುತ್ತದೆ. ಈ ಯಂತ್ರ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲೂ ಲಭ್ಯ.
ಅಮೆಝಾನ್, ಮಿತ್ರಾನ್, ಜಿಯೋ ಮಾರ್ಟ್, ರಸೋಯಿ ಶಾಪ್, ವಿಶಾಲ್ ಮೆಗಾ ಮಾರ್ಟ್, ಫ್ಲಿಪ್ ಕಾರ್ಟ್ ನಂತಹ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಿಂದ ನೀವು ಈ ಮೆಷಿನ್ ಗಳನ್ನು ಖರೀದಿಸಬಹುದು. ಇನ್ಲಾಸಾ, ಆ್ಯಗ್ರೋ, ಕ್ಯಾಂಟ್, ಹ್ಯಾವೆಲ್ಸ್, ಹೋಮ್ ಪ್ಲಸ್ ಮ್ಯಾಜಿಕ್, ಕ್ಲಿಯರ್ ಲೈನ್, ಮಹಾರಾಜ, ರಿಕೊ, ವಿನ್ನರ್ ಫೇಮಸ್ ಆಟಾ ಮೇಕರ್ ಯಂತ್ರಗಳಿವೆ. ಹಿಟ್ಟನ್ನು ತಯಾರಿಸುವ ಯಂತ್ರವನ್ನು ಬ್ರೆಡ್ ಅಥವಾ ಪಾಮ್ ಹಿಟ್ಟನ್ನು ತಯಾರಿಸಲು, ಕೆನೆ ಮಿಶ್ರಣ, ಇತರ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.
ನೀವು ಉತ್ತಮ ಮತ್ತು ಬಾಳಿಕೆ ಬರುವ ಡೋ ಮೇಕರ್ ಯಂತ್ರವನ್ನು ಖರೀದಿಸಲು ಬಯಸಿದರೆ, ನೀವು ಆ್ಯಗ್ರೋ ಬ್ರಾಂಡ್ ನ ರಾಯಲ್ ಸ್ಟ್ಯಾಂಡ್ ಮಿಕ್ಸರ್ ನ್ನು ಖರೀದಿಸಬಹುದು. ಇದರ ಬೆಲೆ ರೂ. 6,000 ಮಾತ್ರ. ಇದರಲ್ಲಿ 2023ರ ಅಗತ್ಯದ ಪ್ರಕಾರ ಎಲ್ಲಾ ಕಾರ್ಯಗಳು ಲಭ್ಯವಿವೆ. ಇದು 1000 ವ್ಯಾಟ್ ಮೋಟರ್ ಹೊಂದಿದೆ. ಇದು 8 ಸ್ಪೀಡ್ ಸೆಟ್ಟಿಂಗ್ ಗಳು ಮತ್ತು ಎಲ್ಇಡಿ ಸೂಚಕವನ್ನು ಹೊಂದಿದೆ. ಕಂಪನಿ 2 ವರ್ಷಗಳ ವಾರಂಟಿಯನ್ನೂ ಸಹ ನೀಡುತ್ತದೆ.

ರೋಟಿ ತಯಾರಿಸುವ ಯಂತ್ರ
ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಯಲ್ಲೂ ಬಗೆಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಕೆಲವರಿಗೆ ರೋಟಿ ತಿನ್ನಬೇಕು, ಇನ್ನೂ ಕೆಲವರಿಗೆ ಪೂರಿ, ಪರೋಟಾ ಬೇಕು. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರ ಬೇಡಿಕೆಗಳನ್ನು ಪೂರೈಸುವಾಗ ನಿಮಗೆ ಆಯಾಸವಾಗಿಬಿಡುತ್ತದೆ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರಂತೂ, ಇದು ನಿಮ್ಮ ದೈನಂದಿನ ಸಮಸ್ಯೆಯಾಗಿರುತ್ತದೆ. ಆದರೆ ನಿಮ್ಮ ಮನೆಗೆ ರೋಟಿ ತಯಾರಿಸು ಯಂತ್ರವನ್ನು ತರುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯುಬಹುದು.
ನೀವು ಗಂಟೆಗಳಲ್ಲಿ ತೆಗೆದುಕೊಳ್ಳುವ ಸಮಯವನ್ನು ಈ ಯಂತ್ರ ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ. ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ರೋಟಿ ಮಾಡುವ ಸಾಮರ್ಥ್ಯ ಇದಕ್ಕಿದೆ.
ನೀವು ಮಾಡಬೇಕಾಗಿರುವ ರೋಟಿ ಹಿಟ್ಟನ್ನು ಅದರಲ್ಲಿ ಇರಿಸಿ ಮತ್ತು ಬಿಸಿ ಬಿಸಿಯಾದ ತಾಜಾ ರೋಟಿ ಅಥವಾ ಪರೋಟ ನಿಮಿಷದಲ್ಲಿ ಸಿದ್ಧವಾಗುತ್ತದೆ. ಈ ಎಲೆಕ್ಟ್ರಿಕ್ ರೋಟಿ ತಯಾರಿಕ ಯಂತ್ರದ ಮೇಲೆ ನಾನ್ ಸ್ಟಿಕ್ ಕೋಟಿಂಗ್ ಇರುತ್ತದೆ. ಅದರ ಸಹಾಯದಿಂದ ನೀವು ಅದರಲ್ಲಿ ಸುಲಭವಾಗಿ ಪರೋಟ ಮಾಡಬಹುದು. ಅಷ್ಟೇ ಅಲ್ಲ, ರೋಟಿ ಮೇಕರ್ ಯಂತ್ರದಲ್ಲಿ ದೋಸೆ, ಆಮ್ಲೆಟ್, ಹಪ್ಪಳ ಇತ್ಯಾದಿಗಳನ್ನು ಸಹ ಮಾಡಬಹುದು.
ಈ ರೋಟಿ ಮೇಕರ್ ಯಂತ್ರ ಬೇಕೈಟ್ ಹ್ಯಾಂಡಲ್ ನೊಂದಿಗೆ ಬರುತ್ತದೆ. ಇದರಿಂದ ನಿಮ್ಮ ಕೈಗಳನ್ನು ಸುಡುವ ಆಪಾಯ ಇರುವುದಿಲ್ಲ. ಇದು ಸ್ಟೇನ್ ಲೆಸ್ ಸ್ಟೀಲ್ ಕವರ್ ಮತ್ತು ಡಬಲ್ ಇಂಡಿಕೇಟರ್ ರಾಂಪ್ ನ್ನು ಸಹ ಹೊಂದಿದೆ.
ಹಾಗೆಂದ ಮಾತ್ರಕ್ಕೆ ಈ ಯಂತ್ರ ಬಹಳ ದುಬಾರಿಯೇನೂ ಅಲ್ಲ. ಈ ಯಂತ್ರದ ಬೆಲೆ ನಿಮ್ಮ ಬಜೆಟ್ ಗೆ ಸರಿಹೊಂದುತ್ತದೆ. ರೂ.18-70 ಸಾವಿರದವರೆಗೂ ಯಂತ್ರಗಳ ಮೌಲ್ಯವಿರುತ್ತದೆ.
ಇದು ಅಮೆಝಾನ್, ಮಿತ್ರಾನ್, ಜಿಯೋ ಮಾರ್ಟ್, ರಸೋಯಿ ಶಾಪ್, ವಿಶಾಲ್ ಮೆಗಾ ಮಾರ್ಟ್, ಫ್ಲಿಪ್ ಕಾರ್ಟ್ ನಂತಹ ಇನ್ನಿತರ ಶಾಪಿಂಗ್ ಸೈಟ್ ಗಳಲ್ಲಿ ಸುಲಭವಾಗಿ ಲಭ್ಯವಿವೆ. ಪ್ರೆಸ್ಟೀಜ್, ಎವರಿಡೇ, ಐಬೆಲ್, ಎಲೆಕ್ಟ್ರೋ ಸ್ಕೈ, ಬಜಾಜ್, ಇಜಹಾರ್ರೋಟಿ ಮೇಕರ್ ನ ಕೆಲವು ಪ್ರಸಿದ್ಧ ಬ್ರಾಂಡ್ ಗಳಾಗಿವೆ.

ಮೊಸರು ತಯಾರಕ ಯಂತ್ರ
ಅನೇಕ ಬಾರಿ ಮೊಸರು ವಿಭಿನ್ನವಾಗಿ ಇರುತ್ತದೆ. ಸಮಸ್ಯೆಯೆಂದರೆ, ಮೊಸರಿನ ಹುಳಿ. ಚಳಿಗಾಲದಲ್ಲಿ ಹೆಪ್ಪುಗಟ್ಟಿದ ಮೊಸರಿನಲ್ಲಿ ಕನಿಷ್ಠ ಹುಳಿ ಇರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ದಹಿ ಮೇಕರ್ ನಲ್ಲಿ ಪರಿಹಾರವಿದೆ. ನೀವು ಅಮೆಝಾನ್, ಮಿತ್ರಾನ್, ಜಿಯೋ ಮಾರ್ಟ್, ರಸೋಯಿ ಶಾಪ್, ವಿಶಾಲ್ ಮೆಗಾ ಮಾರ್ಟ್, ಫ್ಲಿಪ್ ಕಾರ್ಟ್ ನಂತಹ ಶಾಪಿಂಗ್ ಸೈಟ್ ಗಳಿಂದ ಮೊಸರು ತಯಾರಿಸುವ ಯಂತ್ರವನ್ನು ಖರೀದಿಸಬಹುದು.
ಇದಲ್ಲದೆ, ನೀವು ಮಾಲ್ ಮತ್ತು ಅಂಗಡಿಗಳಿಗೆ ಹೋಗಿಯೂ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. 500 ರಿಂದ ಆರಂಭವಾಗುತ್ತದೆ. ಪ್ರಮಾಣ ಮತ್ತು ಗುಣಮಟ್ಟದ ಆಧಾರದ ಮೇಲೆ ಅದರ ಬೆಲೆ ನಿರ್ಧರಿಸಲಾಗುತ್ತದೆ.
ನೀವು ಉತ್ತಮ ಮತ್ತು ಅಗ್ಗದ ಮೊಸರು ತಯಾರಿಸುವ ಯಂತ್ರವನ್ನು ಹುಡುಕುತ್ತಿದ್ದರೆ, ಆ್ಯಗ್ರೋ ಕಂಪನಿಯಿಂದ ಯೋಗರ್ಟ್ ಮೇಕರ್ ಕ್ಲಾಸಿಕ್ ನ್ನು ಖರೀದಿಸಬಹುದು. ಅದರ ಬೆಲೆ ಕೇವಲ ರೂ.599. ಇದರಲ್ಲಿ ನೀವು 1.2 ಲೀಟರ್ ಬೌಲ್ ನ್ನು ಪಡೆಯುತ್ತೀರಿ. ಇದು ಕೆಲವೇ ಗಂಟೆಗಳಲ್ಲಿ ಮೊಸರು ಹೊಂದಿಸುತ್ತದೆ. ಇದರಲ್ಲಿ ಮಾಡಿದ ಮೊಸರು ಗಟ್ಟಿಯಾಗಿರುತ್ತದೆ. ಇದರಿಂದಾಗಿ ಇದು ತುಂಬಾ ರುಚಿಕರವಾಗಿಯೂ ಇರುತ್ತದೆ.
ಈ ಎಲೆಕ್ಟ್ರಿಕ್ ಮೊಸರು ತಯಾರಿಸುವ ಯಂತ್ರದ ತೂಕ ಬಹಳ ಕಡಿಮೆ ಇರುತ್ತದೆ. ಅದನ್ನು ಅಮೆಝಾನ್ ನಲ್ಲಿ ಅತ್ಯುತ್ತಮ ಉತ್ಪನ್ನ ಎಂದು ವಿವರಿಸಲಾಗಿದೆ. ಗ್ರಾಹಕರು ಸಹ ಉತ್ತಮ ವಿಮರ್ಶೆಗಳನ್ನು ಸಹ ನೀಡಿದ್ದಾರೆ. ಮ್ಯಾಕ್ಸಿಮಾ, ಎಚ್.ಎಸ್.ಆರ್, ಇಸ್ಟಾಕಪ್ ಪ್ರಸಿದ್ಧ ಮೊಸರು ತಯಾರಕ ಬ್ರಾಂಡ್ ಗಳಾಗಿವೆ.

ಅಲೆಕ್ಸಾ ಇದ್ದಾಳೆ ಚಿಂತೆ ಬಿಡಿ
ನೀವು ಯಾರೊಂದಿಗಾದರೂ ಮಾತನಾಡಲು ಬಯಸುತ್ತೀರಿ. ಆದರೆ, ನಿಮ್ಮ ಜೊತೆ ಮಾತನಾಡಲು ಯಾರೂ ಇಲ್ಲ ಎಂದರೆ ಚಿಂತಿಸಬೇಡಿ. ಏಕೆಂದರೆ ನಿಮ್ಮೊಂದಿಗೆ ಮಾತನಾಡಲು ಅಲೆಕ್ಸಾ ಇದ್ದಾಳೆ! ನೀವು ಅಲೆಕ್ಸಾ ಜತೆ ಮಾತನಾಡಬಹುದು. ಅಲೆಕ್ಸಾ ನಿಮ್ಮ ಮೂಡನ್ನು ರೀಫ್ರೆಶ್ ಮಾಡಲು ಸಹ ಸಹಾಯ ಮಾಡುತ್ತಾಳೆ. ಅಲೆಕ್ಸಾ ಚಿಕ್ಕ ಕೆಲಸಗಳನ್ನು ಮಾತ್ರ ಮಾಡುತ್ತಿದ್ದರೂ, ಅದು ಯಾವುದೇ ಸಹಾಯಕರಿಗಿಂತ ಕಡಿಮೆಯೇನಲ್ಲ.
ನಾವು ಅದರ ಬೆಲೆಯ ಬಗ್ಗೆ ಮಾತನಾಡುವುದಾದರೆ, ಅದರ ಬೆಲೆ ಸುಮಾರು ರೂ. 3,000 ದಿಂದ ಆರಂಭವಾಗುತ್ತದೆ. ನೀವು ಅದನ್ನು ಅಮೆಝಾನ್ ನಿಂದ ಸುಲಭವಾಗಿ ಖರೀದಿಸಬಹುದು. ಅತ್ಯುತ್ತಮ ಗುಣಮಟ್ಟದ ಎಕೋ ಡಾಟ್ ನ್ನು ನಾಲ್ಕನೇ ಜನರೇಷನ್ ಎಂದು ಪರಿಗಣಿಸಲಾಗಿದೆ. ಇದರ ಬೆಲೆ ಸುಮಾರು ರೂ. 3,799. ಇದಲ್ಲದೇ, ಇದರ ಐದನೇ ಜನರೇಷನ್ ಕೂಡ ಹೆಚ್ಚಿನ ಬೇಡಿಕೆಯಲ್ಲಿದೆ.
ನೀವು ಅಲೆಕ್ಸಾವನ್ನು ನಿಮ್ಮ ಫೋನ್ ಮತ್ತು ಪ್ಲೇ ಸ್ಟೋರ್ ನಿಂದ ಕನೆಕ್ಟ್ ಮಾಡಿಕೊಳ್ಳಬಹುದು ಹಾಗೂ ನಿಮ್ಮ ವೈಫೈ ಮತ್ತು ಹಾಟ್ ಸ್ಪಾಟ್ ನಿಂದಲೂ ಸಂಪರ್ಕಿಸಬಹುದು. ನಿಮ್ಮ ಬಿಡುವಿಲ್ಲದ ಜೀವನದಲ್ಲಿ ಅಲೆಕ್ಸಾ ನಿಮಗೆ ವರದಾನವಾಗಿದೆ.

ಆಟೋ ಕ್ಲೀನಿಂಗ್ ಸ್ಮಾರ್ಟ್ ರೋಬೋಟ್
ಈ ಸ್ಮಾರ್ಟ್ ರೋಬೋಟ್ ಯುಎಸ್ ಬಿ ಚಾರ್ಜಿಂಗ್ ಮೋಡ್ ನೊಂದಿಗೆ ಬರುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 2 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಕೆಲಸ ಮಾಡಿದ ನಂತರ ಅದು ಹಿಂತಿರುಗಿ ಚಾರ್ಜ್ ಮಾಡಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ಒಂದು ಪ್ರಯೋಜನವೆಂದರೆ, ನೀವು ಮನೆಯಲ್ಲಿ ಸಾಕುಪ್ರಾಣಿಗಳನ್ನು ಹೊಂದಿದ್ದರೆ, ಇದು ಅದರ ಕೆಳಗೆ ಬಿದ್ದ ಕೂದಲನ್ನು ಸುಲಭವಾಗಿ ಶುಚಿಗೊಳಿಸುತ್ತದೆ. ಟೀ ಸ್ಟೇನ್ ಅಥವಾ ಜೂಸ್ ಸ್ಟೇನ್ ಆಗಿರಲಿ, ಇದು ಎಲ್ಲವನ್ನೂ ಸ್ವಚ್ಛಗೊಳಿಸುತ್ತದೆ. ಅದರ ಒಂದು ವಿಶೇಷತೆ ಏನೆಂದರೆ, ಅದನ್ನು ಶುಚಿಗೊಳಿಸುತ್ತಿರುವಾಗ, ಯಾರಾದರೂ ಅಡ್ಡ ಬಂದರೆ, ಅವರಿಗೆ ಡಿಕ್ಕಿ ಹೊಡೆಯದೆ, ಇದು ತನ್ನ ದಾರಿಯನ್ನು ಬದಲಿಸಿಕೊಳ್ಳುತ್ತದೆ.
ಇದು ನಿಮ್ಮ ಲಿವಿಂಗ್ ರೂಮ್, ಡ್ರಾಯಿಂಗ್ ರೂಮ್, ಬೆಡ್ ರೂಮ್, ಬಾತ್ ರೂಮ್, ಕಿಚನ್ ನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಪ್ಯಾನಾಸೋನಿಕ್, ಇಂಡಿಗೊ, ದಿ ಸ್ಟೈಲ್ ಸೂತ್ರ, ಬೂಸ್ಟ್ ಐಕ್ಯೂ, ತ್ರೀ ಇನ್ ಒನ್, ಪ್ಯೂರ್ ಕ್ಲೀನ್, ಬೇಸ್ ಲೆಸ್, ಬೀ ವಿನ್ನರ್, ಡ್ರಮ್ ಸ್ಟೋನ್ ಇವು ಕೆಲವು ಪ್ರಸಿದ್ಧ ಆಟೋ ಕ್ಲೀನಿಂಗ್ ಸ್ಮಾರ್ಟ್ ರೋಬೋಟ್ ಕಂಪನಿಗಳು. ಇದರ ಆರಂಭಿಕ ಬೆಲೆ ಸುಮಾರು ರೂ.2,300. ಇದನ್ನು ಯಾವುದೇ ಅಂಗಡಿ ಅಥವಾ ಶಾಪಿಂಗ್ ಸೈಟ್ ನಿಂದ ಸುಲಭವಾಗಿ ಖರೀದಿಸಬಹುದು. ಇದು ಅಮೆಝಾನ್ ನಲ್ಲಿ ಸುಲಭವಾಗಿ ಲಭ್ಯವಿದೆ. ಗ್ರಾಹಕರು ಇದಕ್ಕೆ ಉತ್ತಮ ರೇಟಿಂಗ್ ಕೂಡ ನೀಡಿದ್ದಾರೆ.

ಸ್ಟೀಮ್ ಪೋರ್ಟೆಬಲ್ ಕ್ಲೀನರ್
ಈ ಸ್ಟೀಮರ್ ಸಹಾಯದಿಂದ ಅಡುಗೆ ಮನೆಯ ಶೆಲ್ಫ್, ಚಿಮಣಿ, ಟೈಲ್ಸ್, ಮಂಚ, ಸೋಫಾ, ಗ್ಲಾಸ್, ವೈಪರ್ ಸೆಟ್, ಪೋರ್ಟ್ ಬದಿಗಳು, ಕಾರ್ ಗ್ಲಾಸ್ ಗಳು, ಕಾರು ಮತ್ತು ಬೈಕಿನ ಚಕ್ರಗಳನ್ನು ಹೆಚ್ಚು ಶ್ರಮವಿಲ್ಲದೆ ಸ್ವಚ್ಛಗೊಳಿಸಬಹುದು. ಅಷ್ಟೇ ಅಲ್ಲ, ಈ ಸ್ಟೀಮರ್ ಸಹಾಯದಿಂದ ನಿಮ್ಮ ಬಟ್ಟೆಗಳನ್ನು ಸ್ಟೀಮ್ ಮಾಡಬಹುದು. ಬಟ್ಟೆಗಳ ಮೇಲಿನ ಕಲೆಗಳನ್ನು ತೆಗೆದು ಹಾಕಲು ಸಹ ಇದು ಸಹಾಯಕವಾಗಿದೆ.
ಈ ಕ್ಲೀನರ್ ನೊಂದಿಗೆ ಬೇರೆ ಬೇರೆ ಪ್ರದೇಶಗಳನ್ನು ಸ್ವಚ್ಛಗೊಳಿಸಲು ವಿಭಿನ್ನ ಸಾಧನಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಒಟ್ಟು 9 ಪರಿಕರಗಳನ್ನು ನೀಡಲಾಗುತ್ತದೆ. ಇದಕ್ಕೆ ರೂ. 2,699 ಆಗಿದ್ದು, ಇದು ಪಾಕೆಟ್ ಸ್ನೇಹಿ ಕ್ಲೀನರ್ ಎಂದೆನಿಸಿದೆ. ಇದು ನಿಮಗೆ ಸಹಾಯ ಮಾಡುವುದು ಮಾತ್ರವಲ್ಲ, ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ ಹಾಗೂ ನಿಮ್ಮ ಸಮಯ ಕೂಡ ಉಳಿಯುತ್ತದೆ.
ಇದನ್ನು ನೀವು ಅಮೆಝಾನ್, ಮಿತ್ರಾನ್, ಜಿಯೋ ಮಾರ್ಟ್, ರಸೋಯಿ ಶಾಪ್, ವಿಶಾಲ್ ಮೆಗಾ ಮಾರ್ಟ್, ಫ್ಲಿಪ್ ಕಾರ್ಟ್ನಂತಹ ಶಾಪಿಂಗ್ ಸೈಟ್ ನಿಂದ ಖರೀದಿಸಬಹುದು. ಗೂಗಲ್ ನಲ್ಲಿ ಹುಡುಕುವ ಮೂಲಕ ನೀವು ಇದನ್ನು ವಿವಿಧ ಶಾಪಿಂಗ್ ಸೈಟ್ ಗಳಿಂದ ಆರ್ಡರ್ ಮಾಡಬಹುದು. ಈ ಗ್ಯಾಜೆಟ್ಸ್ ಖರೀದಿಸುವ ಮೂಲಕ, ಇವು ನಿಮ್ಮ ಜೀವನವನ್ನು ಹೇಗೆ ಸುಲಭಗೊಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ಈ ಸ್ಮಾರ್ಟ್ ಗ್ಯಾಜೆಟ್ಸ್ ನ್ನು ಬಳಸಿದ ನಂತರ, ನಿಮ್ಮ ಸ್ನೇಹಿತರಲ್ಲಿ ನೀವು ಸ್ಮಾರ್ಟ್ ಹೌಸ್ ಮೇಕರ್ ಆಗಿ ಪ್ರಸಿದ್ಧರಾಗುತ್ತೀರಿ. ಇದರಿಂದ ತಂಟೆ ತಕರಾರು ಇರುವುದಿಲ್ಲ. ಇದರ ನಂತರ ಯಾರೂ ನಿಮ್ಮನ್ನು ಕೇವಲ ಹೌಸ್ ಮೇಕರ್ ಎಂದು ಕರೆಯುವುದಿಲ್ಲ. ಬದಲಾಗಿ ನಿಮ್ಮನ್ನು ಸ್ಮಾರ್ಟ್ ಹೌಸ್ ಮೇಕರ್ ಎಂದು ಕರೆಯುತ್ತಾರೆ. ಇದನ್ನು ಕೇಳಿದ ನಂತರ ನೀವು ಹೆಚ್ಚು ಆತ್ಮವಿಶ್ವಾಸ ಹೊಂದುವುದಂತೂ ಗ್ಯಾರಂಟಿ.
– ಪ್ರಿಯಾಂಕಾ.





