ಹಬ್ಬದಂದು ಇಂತಹ ಸ್ಮಾರ್ಟ್ಉಪಕರಣಗಳನ್ನು ನಿಮ್ಮ ಸಂಗಾತಿಯನ್ನಾಗಿ ಮಾಡಿಕೊಂಡರೆ, ನೀವು ಕಡಿಮೆ ಸಮಯದಲ್ಲಿ ಮನೆಯ ಕೆಲಸವನ್ನು ಪೂರ್ಣಗೊಳಿಸಲು ಮಾತ್ರವಲ್ಲ, ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲಿಕ್ಕೂ ಸಾಧ್ಯವಾಗುತ್ತದೆ.......

ಸ್ಮಾರ್ಟ್‌ ಉಪಕರಣಗಳ ಬಳಕೆಯ ಸಹಾಯದಿಂದ ನೀವು ಉಳಿದ ಸಮಯವನ್ನು ನಿಮ್ಮ ಹವ್ಯಾಸಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳಬಹುದು. ನಿಮಗಿಷ್ಟವಾದ ಅಥವಾ ಹೊಸ ಹೊಸ ಕೌಶಲ್ಯಗಳನ್ನು ಸಹ ಕಲಿಯಬಹುದು. ಈ ಕೌಶಲ್ಯಗಳು ನಿಮ್ಮ ಭವಿಷ್ಯದಲ್ಲಿ ಖಂಡಿತವಾಗಿಯೂ ಉಪಯುಕ್ತವಾಗುತ್ತವೆ.

ಬನ್ನಿ, ನಿಮ್ಮ ಸಮಯವನ್ನು ಉಳಿಸಬಹುದಾದಂತಹ ಸ್ಮಾರ್ಟ್‌ ಉಪಕರಣಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ. ಇದರೊಂದಿಗೆ, ಈ ಉಪಕರಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀವು ಒಬ್ಬ ಸ್ಮಾರ್ಟ್‌ ಹೌಸ್‌ ಮೇಕರ್ ಎಂದು ಕರೆಸಿಕೊಳ್ಳುತ್ತೀರಿ.

ಡಿಶ್ವಾಷರ್

ಡಿಶ್‌ ವಾಷರ್‌ ನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ತೊಳೆದ ಪಾತ್ರೆಗಳು ಸ್ವಚ್ಛ, ನಿರ್ಮಲ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ. ಇವುಗಳ ಮೇಲೆ ಸೋಪಿನ ಅಂಶ ಒಂದಿಷ್ಟೂ ಉಳಿಯುವುದಿಲ್ಲ. ಒಂದು ಬಾರಿಗೆ ಅನೇಕ ಪಾತ್ರೆಗಳನ್ನು ಇದರಲ್ಲಿ ತೊಳೆಯಬಹುದು. ಇದರ ಬಳಕೆಗೆ ನೀರು ಕಡಿಮೆ ಖರ್ಚಾಗುತ್ತದೆ. ಇದರಲ್ಲಿ ತೊಳೆದ ಪಾತ್ರೆಗಳ ಮೇಲೆ ನೀರಿನ ಹನಿಗಳೂ ಉಳಿಯುವುದಿಲ್ಲ. ಮಾತ್ರವಲ್ಲ, ಬಹು ಮುಖ್ಯವಾಗಿ ಇದು ನಿಮ್ಮ ಸಮಯವನ್ನು ಉಳಿಸುತ್ತದೆ. ಡಿಶ್‌ ವಾಷರ್‌ ಗೆ ಪಾತ್ರೆಗಳನ್ನು ಹಾಕಿ, ನೀವು ನಿಮ್ಮ ಮುಂದಿನ ಕೆಲಸಗಳನ್ನು ಮಾಡಿಕೊಳ್ಳಬಹುದು.

ಡಿಶ್‌ ವಾಷರ್‌ ನ್ನು ಯಾವ ಕಂಪನಿಯಿಂದ ಖರೀದಿಸಬೇಕು ಮತ್ತು ಎಲ್ಲಿ ಖರೀದಿಸಬೇಕು ಎಂದು ನೋಡುವುದಾದರೆ, ಎಲ್.ಜಿ., ಸ್ಯಾಮ್ ಸಂಗ್‌,  ವರ್ಲ್‌ ಪೂಲ್‌, ಬುಷ್‌ ಮುಂತಾದ ಹಲವಾರು ಕಂಪನಿಗಳ ಡಿಶ್‌ ವಾಷರ್‌ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳ ಬೆಲೆ ರೂ.15-80 ಸಾವಿರದವರೆಗೆ ಇರುತ್ತದೆ. ನೀವು ಇವನ್ನು ಆನ್‌ ಲೈನ್‌ ಸೈಟ್‌ ಗಳಿಂದಲೂ ಖರೀದಿಸಬಹುದು. ಅಮೆಝಾನ್‌, ಜಿಯೋ ಮಾರ್ಟ್‌, ವಿಶಾಲ್ ‌ಮೆಗಾ ಮಾರ್ಟ್‌, ಫ್ಲಿಪ್‌ ಕಾರ್ಟ್‌ ನಂತಹ ಆನ್‌ ಲೈನ್‌ ಸೈಟ್‌ ಗಳಲ್ಲಿ ಇವು ಸುಲಭ ಲಭ್ಯ. ಹಬ್ಬ ಹರಿದಿನಗಳಲ್ಲಿ ಈ ಎಲ್ಲಾ ತಾಣಗಳಲ್ಲಿ ಮೆಗಾ ಸೇಲ್ ‌ಕೂಡಾ ನಡೆಯುತ್ತಿರುತ್ತದೆ.

ಹಿಟ್ಟನ್ನು ಕಲಸುವ ಯಂತ್ರ

ನೀವು ರೊಟ್ಟಿ ತಿನ್ನಲು ಬಯಸಿದರೆ, ಇದರಿಂದ ನೀವು ಹಿಟ್ಟನ್ನು ಬೆರೆಸಬಹುದು. ಹಿಟ್ಟು ಕಲಸುವ ಕಷ್ಟ ಯಾರಿಗೆ ಬೇಕು? ಈ ಕಷ್ಟದಿಂದ ಈಗ ಸುಲಭವಾಗಿ ಪಾರಾಗಬಹುದು. ಎಲೆಕ್ಟ್ರಿಕ್‌ ಹಿಟ್ಟು ಕಲಸುವ ಯಂತ್ರವನ್ನು ಬಳಸಿಕೊಂಡು 3-5 ನಿಮಿಷಗಳಲ್ಲಿ ನೀವು ರೊಟ್ಟಿ ಅಥವಾ ಪರೋಟ ತಯಾರಿಸಲು ಹಿಟ್ಟನ್ನು ಕಲಸಬಹುದು. ಹಿಟ್ಟನ್ನು ತಯಾರಿಸಲು ಯಂತ್ರದೊಂದಿಗೆ ಒದಗಿಸುವ ಜಾರ್‌ ಗೆ ಹಿಟ್ಟು ಮತ್ತು ನೀರನ್ನು ಹಾಕಿ ಮೆಷಿನ್‌ ಆನ್‌ ಮಾಡಿ. ಐದು ನಿಮಿಷದ ನಂತರ ಆಫ್‌ ಮಾಡಿ. ನಿಮ್ಮ ಹಿಟ್ಟು ಸಿದ್ಧ.

ವಾಸ್ತವವಾಗಾಗಿ ಮಾರುಕಟ್ಟೆಯಲ್ಲಿ ಅನೇಕ ಹಿಟ್ಟು ಕಲಸುವ ಯಂತ್ರಗಳು ಲಭ್ಯವಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಡೋ ಮೇಕರ್‌ ಯಂತ್ರ ಬಹಳ ಜನಪ್ರಿಯವಾಗಿದೆ. ಇದರ ಬೆಲೆ ಸುಮಾರು ರೂ. 4,000 ದಿಂದ ಆರಂಭವಾಗುತ್ತದೆ. ಈ ಯಂತ್ರ ಆನ್‌ ಲೈನ್‌ ಮತ್ತು ಆಫ್‌ ಲೈನ್‌ ನಲ್ಲೂ ಲಭ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ