ಜಾಗೀರ್ದಾರ್*

ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಣ‌ ಸಂಸ್ಥೆಗಳಲ್ಲಿ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಒಂದು. ‘ಮಣ್ಣಿನ ದೋಣಿ’, “ಮುಸುಕು”, ಮುಂಜಾನೆಯ ಮಂಜು”, ” ಮೌನ ರಾಗ”, “ಮೊಮ್ಮಗ”, “ಮೇಘ ಬಂತು ಮೇಘ” “ಅಸುರ”, ” ಐರಾವತ”, “ಅಮರ್” “ಘೋಸ್ಟ್” ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ “ಸಿಂಗಾರವ್ವ” ಸೇರಿದಂತೆ ಅನೇಕ ಸದಭಿರುಚಿ ಚಿತ್ರಗಳು ಹಾಗೂ ತೆರೆಗೆ ಬರಲು ಸಿದ್ದವಾಗುತ್ತಿರುವ ಪ್ರಭುದೇವ ಅವರ ಅಭಿನಯದ “wolf” ಸೇರಿದಂತೆ ಈವರೆಗೂ ಮೂವತ್ತಾರು ಚಿತ್ರಗಳನ್ನು ಸಂದೇಶ್ ಪ್ರೊಡಕ್ಷನ್ಸ್ ಹಾಗೂ ಸಂದೇಶ್ ಕಂಬೈನ್ಸ್ ಸಂಸ್ಥೆ ನಿರ್ಮಿಸಿದೆ. ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಈ ಸಂಸ್ಥೆ ಸದ್ಯದಲ್ಲೇ “ಪ್ರೊಡಕ್ಷನ್ ನಂ 37” ಹಾಗೂ “ಪ್ರೊಡಕ್ಷನ್ ನಂ 38” ಎರಡು ನೂತನ ಚಿತ್ರಗಳನ್ನು ನಿರ್ಮಿಸಲಿದೆ‌. ಆ ಚಿತ್ರಗಳ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದೆ.

rover

ಕನ್ನಡದ ಹೆಮ್ಮೆಯ ನಿರ್ಮಾಪಕರಾಗಿ, ವಿಧಾನ‌ ಪರಿಷತ್ತಿನ ಸದಸ್ಯರಾಗಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಸಂದೇಶ್ ನಾಗರಾಜ್ ಅವರಿಗೆ ಈಗ 81 ವರ್ಷ. ಕಳೆದವರ್ಷ ಅವರ 80 ನೇ ಹುಟ್ಟುಹಬ್ಬವನ್ನು ಮಕ್ಕಳೆಲ್ಲಾ ಸೇರಿ ಅರಮನೆ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದರು. ಈ ಬಾರಿ 81ರ ಹುಟ್ಟುಹಬ್ಬ ಆರಿಸಿಕೊಳ್ಳುತ್ತಿರುವ ತಮ್ಮ ತಂದೆ ಸಂದೇಶ್ ನಾಗರಾಜ್ ಅವರಿಗೆ ಪುತ್ರ ಸಂದೇಶ್ “ರೇಂಜ್ ರೋವರ್ ಆಟೋಬಯಾಗ್ರಫಿ” ಐಶಾರಾಮಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಿಂದಲೂ ನನ್ನ ಎಲ್ಲಾ ಕೆಲಸಗಳಿಗೂ ಆಸರೆಯಾಗಿ ನಿಂತಿರುವ ನನ್ನ ಪ್ರೀತಿಯ ತಂದೆ ಅವರಿಗೆ ಇದು ನನ್ನ ಒಲವಿನ ಉಡುಗೊರೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಎನ್ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ