ಯಶೋದಾ ಪ್ರಕಾಶ್ ರಿಗೆ ಅವಾರ್ಡ್ ನೀಡುತ್ತಾ ಸುಪರ್ಣಾ ಮಿತ್ರಾಮಂಜು ಗುಪ್ತಾ ಹಾಗೂ ಡೆಲ್ಲಿ ಪ್ರೆಸ್ ನ ಪ್ರಮುಖ ಸಂಪಾದಕ ಪರೇಶ್ ನಾಥ್ ಗಾಯನ ಪ್ರಸ್ತುತ ಪಡಿಸುತ್ತಿರುವ ಗಾಯಕಿ ಅನನ್ಯಾ ಗೌರವ್ ಜ್ಯೂರಿ ಸದಸ್ಯರು ಹಾಗೂ ಡೆಲ್ಲಿ ಪ್ರೆಸ್ ಸಂಪಾದಕರಾರ ಪರೇಶ್ ನಾಥ್ ನೇಹಾ ಬಗಾರಿಯಾ ಹಾಗೂ ಸುಪರ್ಣಾ ಮಿತ್ರಾಸಂತಿ ಹರಿಪ್ರಕಾಶ್ ಹಾಗೂ ನಿಗಾರ್ ಶಾಜಿ ದಿಲ್ ಶಾದ್ ಮಾಸ್ಟರ್ ಹಾಗೂ ಭುವನಾ ದೇವಿಯ ತಾಯಿ ರಮಣಿ ದಿಲ್ ಶಾದ್ ಮಾಸ್ಟರ್, ಮಂಜು ಗುಪ್ತಾ ಹಾಗೂ ಐಶ್ವರ್ಯಾ ಪಿಸ್ಸೆ ಶೋಭಾ ನಾರಾಯಣ್ ಹಾಗೂ ಊರ್ವಶಿಯರ ಮಗಳು ತೇಜಾಲಕ್ಷ್ಮಿಅಪರ್ಣಾ ತ್ಯಾಗರಾಜನ್ ಹಾಗೂ ಸುಜೀತ್ ಕುಮಾರ್ ಚಕ್ರವರ್ತಿ ದಿನಾಜ್ ಹಾಗೂ ರಿಚಾ ಶಾಹ್ ರಿಚಾ ಶಾಹ್ ಹಾಗೂ ದಿವ್ಯಾ ವಿಕ್ರಮ್ ದಿನಾಜ್ ಹಾಗೂ ಆಕೆಯ ಪತಿ, ಡಾ.

ಸುನೀತಾ ಕೃಷ್ಣನ್ ರ ಜೊತೆಯಲ್ಲಿ ಶ್ವೇತಾ ರಾಬರ್ಟ್ಸ್ ಹಾಗೂ ಯಶೋದಾ ಪ್ರಕಾಶ್ ಕೆ. ಶೋಭಾ ನಾರಾಯಣ್ ಹಾಗೂ ಪಾರ್ವತಿ ತಿರುವೋತ್ತು ಮಧು ನಟರಾಜ್ ಹಾಗೂ ಡಾ. ಸುನೀತಾ ಕೃಷ್ಣನ್ ಡೆಲ್ಲಿ ಪ್ರೆಸ್ ಡೈರೆಕ್ಟರ್ ಅನಂತ್ ನಾಥ್ ಇವೆಂಟ್ ಗೆ ಬಂದಿದ್ದ ಗೌರಾವನ್ವಿತ ಗೆಸ್ಟ್ ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ಬೆಂಗಳೂರು, ಸಮಾರಂಭವನ್ನು 3ನೇ ನವೆಂಬರ್ 2025ರಂದು `ಬೆಂಗಳೂರು ಇಂಟರ್ ನ್ಯಾಶನಲ್ ಸೆಂಟರ್'ನಲ್ಲಿ ಸಂಜೆ 6 ಗಂಟೆಗೆ ಬಲು ಅನನ್ಯ ರೀತಿಯಲ್ಲಿ ಆರಂಭಿಸಲಾಯಿತು. ಇದನ್ನು ನೀವು ಮಹಿಳೆಯರ ನೈಜ ಕಳಕಳಿಯ ಸಮಾರಂಭ ಎನ್ನಬಹುದು. ಇಲ್ಲಿ ಅಸಲಿ ಕಥೆಗಳನ್ನು ಹೊತ್ತು ಎಷ್ಟು ಮಹಿಳಾ ಸೆಲೆಬ್ಸ್ ವೇದಿಕೆ ಏರಿದ್ದರೆಂದರೆ, ಇವರುಗಳ ಪ್ರತಿಭಾಪೂರ್ಣ ಅಸಲಿ ಪ್ರಭಾವ ಕಂಡು, ಇವೆಂಟ್ ಗೆ ಬಂದಿದ್ದ ಎಲ್ಲರೂ ದಂಗಾದರು.

ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಬಂದಿದ್ದ ಪ್ರೇರಣಾದಾಯಿ ಮಹಿಳೆಯರನ್ನು ಸನ್ಮಾನಿಸಲೆಂದೇ ರೂಪುಗೊಂಡಿತ್ತು. ಇವರುಗಳು ಜೀವನದ ವಿವಿಧ ಸಮಸ್ಯೆಗಳನ್ನು ಎದುರಿಸಿ, ಮಾನದಂಡಗಳನ್ನೇ ಸವಾಲಾಗಿ ಸ್ವೀಕರಿಸಿ, ಬದಲಾವಣೆಯ ಕಾಂತ್ರಿಗೀತೆ ಹಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಾಹಸ, ರಚನಾತ್ಮಕತೆ, ಪ್ರತಿಬದ್ಧತೆಗಳಿಗೆ ಹೊಸ ವ್ಯಾಖ್ಯಾನ ಒದಗಿಸಲಾಯಿತು. ಈ ಪ್ರಶಸ್ತಿಗಳು 8 ಭಾಷೆಗಳು, ವಿವಿಧ ಕ್ಷೇತ್ರಗಳು, ಅಸಾಧಾರಣ ಮಹಿಳೆಯರ ಸಮಾವೇಶದ ಕುರಿತಾಗಿ ಗೃಹಶೋಭಾ ಪತ್ರಿಕೆಯ ಪ್ರತಿಬದ್ಧತೆ ಪ್ರದರ್ಶಿಸುತ್ತದೆ.

ಕಾರ್ಯಕ್ರಮ ಸಂಜೆ 6.45ಕ್ಕೆ ಗಾಯಕಿ ಅನನ್ಯಾ ಗೌರವ್ ರ ಹಾಡುಗಾರಿಕೆಯೊಂದಿಗೆ ಆರಂಭಗೊಂಡಿತು. ಈಕೆ ಒಬ್ಬ ಕಲಾವಿದೆ, ಸಂಗೀತಗಾರ್ತಿ, ಸಂಶೋಧಕಿ, ವೃತ್ತಾಚಿತ್ರ ನಿರ್ಮಾಪಕಿ ಆಗಿದ್ದು ಇವರು ಗಾಯನ ಎಲ್ಲರ ಮನಸೂರೆಗೊಂಡಿತು. ಇವರ ಗಾಯನದಲ್ಲಿ ಉರ್ದು ಅರಬ್, ಗಂಗಾಜಮುನಾ ತಹಜೀಬ್ ಹಾಗೂ ಸಮನ್ವಯಾತ್ಮಕ ಮೌಲ್ಯಗಳೊಂದಿಗೆ ನಾರಿನಾಡಿ ದೃಷ್ಟಿಕೋನ ಬೆರೆತಿತ್ತು. ಈ ಕಾರ್ಯಕ್ರಮದ ಸಂಚಾಲಕಿ ವಸಂತಿ ಹರಿಪ್ರಕಾಶ್, ಇಡೀ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸುಗ್ರಾಸ ಭೋಜನದೊಂದಿಗೆ ವೀಕ್ಷಕರಿಗೆ ವಿದಾಯ ಕೋರಲಾಯಿತು.





