*ಮೊದಲು, "ಯೋಗ ದೇಹಕ್ಕೆ ಬಹಳ ಒಳ್ಳೆಯದು" ಅಂದರು;*

*ಬೆಳಗ್ಗೆ ಐದು ಗಂಟೆಗೆ ಎದ್ದು ಯೋಗಾಸನ ಕಲಿತೆವು,*

*"ಹೃದಯ ಗಟ್ಟಿಯಾಗಬೇಕಾದ್ರೆ ದಿನಾ ಓಡಲೇಬೇಕು" ಅಂದರು;*

*ಶೂ ಹಾಕಿಕೊಂಡು ರಸ್ತೆಯಲ್ಲಿ ಓಡುವುದನ್ನೂ ಕಲಿತೆವು.*

*"ಹೊಟ್ಟೆ ಕರಗಿಸಬೇಕಾ? ಮೊದಲು ಆ ಸಕ್ಕರೆ ಬಿಡಿ" ಅಂದರು;*

*ನಮ್ಮಿಷ್ಟದ ಜಿಲೇಬಿ, ಮೈಸೂರ್‌ಪಾಕ್ ಎಲ್ಲವನ್ನೂ ತ್ಯಜಿಸಿದೆವು.*

*"ಊಟವಾದ ತಕ್ಷಣ ಮಲಗದೆ , ನೂರು ಹೆಜ್ಜೆ ನಡೆಯಿರಿ" ಅಂದರು;*

*ರಾತ್ರಿ ಊಟವಾದ  ಮೇಲೆ ಗಲ್ಲಿ ಗಲ್ಲಿಯಲ್ಲೆಲ್ಲ ನಡೆಯುವುದನ್ನೂ ಕಲಿತೆವು.*

suggestions1

*"ಮನಸ್ಸಿನ ಹತೋಟಿಗೆ ಪ್ರಾಣಾಯಾಮ ಒಂದೇ ದಾರಿ" ಅಂದರು;*

*ಮೂಗು ಹಿಡಿದುಕೊಂಡು ಉಸಿರು ಬಿಡುವುದನ್ನೂ ಕಲಿತೆವು.*

*"ತೂಕ ಇಳಿಯಬೇಕಾದ್ರೆ ಉಪವಾಸ (Intermittent Fasting) ಮಾಡಿ" ಅಂದರು;*

*ಹೊಟ್ಟೆ ಹಸಿದು ಉರಿಯುತ್ತಿದ್ದರೂ ಪತ್ಯ ಕಾಯುವುದನ್ನು ಪಾಲಿಸಿದೆವು.*

*"ವಯಸ್ಸಾದಂತೆ ಸ್ನಾಯು ಕರಗಬಾರದು, ವೈಟ್ಸ್ (Weights) ಎತ್ತಿ" ಅಂದರು;*

, *ಜಿಮ್ಮಿಗೆ ಹೋಗಿ ಕಬ್ಬಿಣ ಎತ್ತಲು ಆರಂಭಿಸಿದೆವು!*

*"ನೆಮ್ಮದಿಯ ನಿದ್ರೆಗೆ ರಾತ್ರಿ ಮೊಬೈಲ್ ನೋಡಬೇಡಿ" ಅಂದರು;*

*ರಾತ್ರಿ ಒಂಬತ್ತಕ್ಕೇ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದೆವು.*

*"ಆಯುಷ್ಯ ಗಟ್ಟಿಯಾಗಲು ಅಲ್ಕಲೈನ್ (Alkaline) ನೀರೇ ಕುಡಿಯಿರಿ" ಅಂದರು;*

*ಮನೆಯ ದುಬಾರಿ  RO ಫಿಲ್ಟರ್ ಅನ್ನೇ ಕಿತ್ತು ಎಸೆದೆವು!*

*"ಮನಸ್ಸಿಗೆ ಶಾಂತಿಗೆ  ಪ್ರಕೃತಿಯ ಮಡಿಲಿಗೆ ಹೋಗಿ, ಟ್ರೆಕ್ಕಿಂಗ್ ಮಾಡಿ" ಅಂದರು;*

*ಕೈಯಲ್ಲಿ ಕೋಲು ಹಿಡಿದುಕೊಂಡು ಊರೂರು, ಗುಡ್ಡ-ಬೆಟ್ಟಗಳನ್ನೆಲ್ಲ ಅಲೆದೆವು.*

*ಕುಳಿತುಕೊಳ್ಳುವುದು ಹೊಗೆಸೊಪ್ಪಿಗಿಂತ ಅಪಾಯಕಾರಿ, ನಿಂತುಕೊಂಡೇ ಕೆಲಸ ಮಾಡಿ" ಅಂದರು;*

*ಕಾಲಿನ ನರಗಳು ಹಿಡಿದುಕೊಳ್ಳುವವರೆಗೆ ನಿಂತುಕೊಂಡೇ ಕೆಲಸ ಮಾಡಿದೆವು!*

*"ದೇಹದಲ್ಲಿ 'ವಿಟಮಿನ್ ಡಿ' ಕಮ್ಮಿಯಾಗಿದೆ, ಬೆಳಗಿನ ಬಿಸಿಲಿಗೆ ಮೈ ಒಡ್ಡಿ" ಅಂದರು;*

*ಬೆಳಗ್ಗೆ ಎದ್ದು ಸೂರ್ಯನ ಕಡೆ ಮುಖ ಮಾಡಿ, ಕಾಗೆಗಳು ತಲೆಯ ಮೇಲೆ* *ಹಾದುಹೋಗುವವರೆಗೆ ಬಿಸಿಲಿನಲ್ಲಿ ನಿಂತುಕೊಂಡೆವು.*

*"ಸಾಮಾನ್ಯ ಎಣ್ಣೆ ಬೇಡ, ಕೋಲ್ಡ್ ಪ್ರೆಸ್ಡ್ ಗಾಣದ ಎಣ್ಣೆ ಅಥವಾ ಆಲಿವ್ ಆಯಿಲ್ ಬಳಸಿ" ಅಂದರು;*

suggestions

*ದುಬಾರಿ  ಎಣ್ಣೆ ತಂದು, ತರಕಾರಿ ಒಗ್ಗರಣೆಗೆ ಬೊಗಸೆ ಗಟ್ಟಲೆ ದುಡ್ಡು ಸುರಿದೆವು.*

*ಸಾದಾ ಅಕ್ಕಿಯಿಂದ Glycemic  ಇಂಡೆಕ್ಸ್ ಹೆಚ್ಚಾಗುತ್ತೆ ಬ್ರೌನ್ ರೈಸ್ ಬಳಸಿ ಎಂದರು*

*ಕಷ್ಟಪಟ್ಟು ಹುಡುಕಿ ತಂದು ತಿಂದೆವು*

*ಸಕ್ಕರೆಯಿಂದ ಇನ್ಸುಲಿನ್ ಹೆಚ್ಚಾಗುತ್ತೆ ಬೆಲ್ಲ ತಿನ್ನಿ ಅಂದರು*

*ಬೆಲ್ಲದ ಚಹಾ ಕುಡಿಯುವರ* *ಮುಖ ನೋಡದವರು ಬೆಲ್ಲದ ಪೆಂಟಿ ತಂದೆವು*

*ಈಗ ಹೊಸದಾಗಿ ರಿಸರ್ಚ್ ಬಂದಿದೆಯಂತೆ—"ಇಷ್ಟೆಲ್ಲಾ ಮಾಡಿ ದಿನಾ 'ಸ್ಟ್ರೆಸ್' ತಗೊಂಡ್ರೆ ಎಲ್ಲವೂ ವೇಸ್ಟ್, ಸುಮ್ಮನೆ ಪ್ರಶಾಂತವಾಗಿ ವಿಶ್ರಾಂತಿ ತಗೊಳ್ಳಿ!" ಅಂತಿದ್ದಾರೆ*

*ಅಲ್ಲಾ ಸ್ವಾಮಿ, ಇಷ್ಟೆಲ್ಲಾ ಸಾಯುವಷ್ಟು ಕಷ್ಟಪಟ್ಟು ಬದುಕುವುದು ಬದುಕುವುದಕ್ಕೋ?*

*ಅಥವಾ ಜೀವಂತವಾಗಿದ್ದೇವೆ ಅಂತ ಲೋಕಕ್ಕೆ ತೋರಿಸುವುದಕ್ಕೋ?*

*ಇಷ್ಟೆಲ್ಲಾ ಮಾಡಿದ ಮೇಲೆಯೂ, "ಆ ಬಿಸ್ಕತ್ತು ತಿಂದ್ಯಾ? ಈ ಎಣ್ಣೆ ತಿಂದ್ಯಾ?" ಅಂತ ಇನ್ನೊಬ್ಬರು ಬೆಟ್ಟು ಮಾಡಿ ತೋರಿಸುತ್ತಾರೆ.*

*ಕೊನೆಗೆ ನಾವು ಬದುಕುವುದು ನಮಗಾಗಿಯೋ? ಅಥವಾ ಇನ್ನೊಬ್ಬರಿಗೆ ನಮ್ಮ ದೇಹ ತೋರಿಸಲಿಕ್ಕೋ*

*ಕಾಪಾಡು ಗುರು ನಾರಾಯಣ  ನರಸಿಂಹ ಶಿವಾ  ಕಾಪಾಡು ಈ ದಿನಕ್ಕೊಂದು  ಸಲಹೆ ಕೊಡುವ 'ಆರೋಗ್ಯ ಜ್ಞಾನಿಗಳಿಂದ'!*

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ