ಮುಖದ ನ್ಯಾಚುರಲ್ ಗ್ಲೋ ಸದಾ ನಿರಂತರವಾಗಿ ಉಳಿಯಬೇಕೆಂದರೆ, ಈ ಕೆಳಗಿನ ಸಲಹೆಗಳನ್ನು ಅಗತ್ಯ ಅನುಸರಿಸಿ....!

ಬೇಸಿಗೆಯ ದಿನಗಳಲ್ಲಿ ಚರ್ಮದ ಆರೈಕೆಯ ಕಡೆ ಹೆಚ್ಚಿನ ಗಮನ ಕೊಡಬೇಕು. ಇಲ್ಲದಿದ್ದರೆ ಅದು ಡಲ್ ಆದೀತು. ಎಲ್ಲಕ್ಕೂ ಹೆಚ್ಚಾಗಿ ಡಸ್ಟ್  ಪೊಲ್ಯೂಶನ್‌ ಪರಿಣಾಮ ಆಗುವುದೇ ಮುಖದ ಮೇಲೆ. ಆಗ ಅದರ ಚರ್ಮ ಕಳಾಹೀನವಾಗುತ್ತದೆ. ಹೀಗಾಗಿ ಮುಖದ ಚರ್ಮದ ಆರೈಕೆಗಾಗಿ ನ್ಯಾಚುರಲ್ ಪ್ರಾಡಕ್ಟ್ಸ್ ಬಳಸುವುದೇ ಸರಿ. ಏಕೆಂದರೆ ಕೆಮಿಕಲ್ಸ್ ತುಂಬಿದ ಪ್ರಾಡಕ್ಟ್ಸ್ ಚರ್ಮಕ್ಕೆ ಹಾನಿ ತರುವುದರಲ್ಲಿ ಸಂದೇಹವಿಲ್ಲ.

ಡಸ್ಟ್ ಪೊಲೂಶ್ಯನ್‌ ನಿಂದ ಮುಖದ ಚರ್ಮವನ್ನು ರಕ್ಷಿಸುವುದಕ್ಕಾಗಿ, ದಿನಕ್ಕೆ ಕನಿಷ್ಟ 2-3 ಸಲ ತಣ್ಣೀರಿನಿಂದ ಮುಖ ತೊಳೆಯಿರಿ. ಜೊತೆಗೆ ಉತ್ತಮ ಹರ್ಬಲ್ ಫೇಸ್‌ ವಾಶ್‌ ಇರಲಿ. ನಿಮ್ಮ ಫೇಸ್‌ ವಾಶ್‌ ನಲ್ಲಿ ಪರಂಗಿಹಣ್ಣು, ಬೇವು, ನಿಂಬೆ, ಆ್ಯಲೋವೇರಾ, ಪುದೀನಾ, ತುಳಸಿ, ಮಲ್ಲಿಗೆ ಇತ್ಯಾದಿಗಳ ನೈಸರ್ಗಿಕ ಗುಣಾಂಶಗಳು ಇವೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇವು ಎಲ್ಲದರಲ್ಲೂ ಮುಖಕ್ಕೆ ನ್ಯಾಚುರಲ್ ಗ್ಲೋ ನೀಡುವಂಥ ಉತ್ತಮ ಕಾಸ್ಮೆಟಿಕ್‌ ಅಂಶಗಳು ಅಡಗಿವೆ. ನಡುನಡುವೆ ಲೈನ್‌ ಘಟಕಗಳುಳ್ಳ ಫೇಸ್ ವಾಶ್‌ ಸಹ ಬಳಸಿರಿ, ಇದು ಅತ್ಯುತ್ತಮ ಪರಿಣಾಮ ತೋರಿಸುತ್ತದೆ.

ವೈನ್‌ ಫೇಸ್‌ ವಾಶ್‌ ನಲ್ಲಿ ಅಡಗಿರುವ ಗುಣಾತ್ಮಕ ಅಂಶಗಳು : ದ್ರಾಕ್ಷಾರಸ ಮೂಲದ ವೈನ್‌ ನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ನ ಜೊತೆಜೊತೆಗೆ ಇನ್ನೊಂದಷ್ಟು ಪೌಷ್ಟಿಕ ಘಟಕಗಳೂ ಬೆರೆತಿದ್ದು, ಅವು ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗಿವೆ. ಇದರಿಂದ ಚರ್ಮದಲ್ಲಿ  ಕೊಲೋಜೆನ್‌ ಪ್ರೊಡಕ್ಷನ್‌ ಸಹಜವಾಗಿ ಹೆಚ್ಚುತ್ತದೆ. ಇಷ್ಟು ಮಾತ್ರವಲ್ಲ, ವೈನ್‌ ಅಂಶವುಳ್ಳ ಫೇಸ್‌ ವಾಶ್‌ ನ್ನು ಬಳಸುವುದರಿಂದ ಸೂರ್ಯನ ತೀಕ್ಷ್ಣ UV ಕಿರಣಗಳಿಂದಲೂ ರಕ್ಷಣೆ ಹೊಂದಬಹುದಾಗಿದೆ. ಇದರ ಗುಣಗಳ ಬಗ್ಗೆ ಒಂದಿಷ್ಟು ವಿವರವಾಗಿ ತಿಳಿಯೋಣ.

ವೈನಿನಲ್ಲಿ ಬಳಸಲಾಗುವ ಫ್ಲಾಮೋನಾಯ್ಡ್ಸ್ ಹಾಗೂ ಟ್ಯಾನಿನ್ಸ್ ಇತ್ಯಾದಿ ಆ್ಯಂಟಿಆಕ್ಸಿಡೆಂಟ್ಸ್, ಫ್ರೀರಾಡಿಕಲ್ಸ್ ವಿರುದ್ಧ ಹೋರಾಡಿ ಚರ್ಮವನ್ನು ಆಕ್ಸಿಡೇಟಿವ್ ‌ಸ್ಟ್ರೆಸ್‌ ನಿಂದ ರಕ್ಷಿಸುತ್ತದೆ. ಇದರಲ್ಲಿ ಕೊಲೋಜೆನ್‌ ಪ್ರೊಡಕ್ಷನ್‌ ಬೂಸ್ಟ್ ಮಾಡುವ ಅಂಶಗಳಿದ್ದು, ಅದರಿಂದ ಮುಖದಲ್ಲಿ ರಿಂಕಲ್ಸ್ ಬರುವ ಕಾಟ ತಪ್ಪುತ್ತದೆ. ಇಂಥ ಫೇಸ್‌ ವಾಶ್‌ ಬಳಸಿ ಚರ್ಮವನ್ನು ನೀಟಾಗಿ ಹೈಡ್ರೇಟ್ ಗೊಳಿಸಬಹುದಾಗಿದೆ.

ಇಂದಿನಿಂದಲೇ ನಿಮ್ಮ ಸ್ಕಿನ್‌ ಕೇರ್‌ ರೊಟೀನಿನಲ್ಲಿ ಇಂಥ ನ್ಯಾಚುರಲ್ ಪ್ರಾಡಕ್ಟ್ಸ್ ಬೆರೆಸಿಕೊಳ್ಳಿ, ಇದರಿಂದ ಸ್ಪಾಟ್‌ ಲೆಸ್ ಗ್ಲೋಯಿಂಗ್‌ ಸ್ಕಿನ್‌ ನಿಮ್ಮದಾಗಲಿದೆ!

- ಪ್ರತಿನಿಧಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ