ಸನ್ ಸ್ಕ್ರೀನ್ ಲೋಶನ್ ಆರಿಸುವ ಮೊದಲು ಯಾವ ವಿಷಯಗಳಿಗೆ ಗಮನ ಕೊಡಬೇಕು ಎಂಬುದರತ್ತ ಗಮನಹರಿಸೋಣವೇ….?
ನಮ್ಮ ಚರ್ಮಕ್ಕೆ ಹಾನಿ ಮಾಡುವ ಸೂರ್ಯನ UV ಕಿರಣಗಳಿಂದ ರಕ್ಷಣೆ ಹೊಂದಬೇಕಾದುದು ಅತಿ ಅನಿವಾರ್ಯ. ಹಾಗೆ ಮಾಡದಿದ್ದರೆ ಚರ್ಮದ ಬಣ್ಣ ಹಾಳಾಗಿ ಕಪ್ಪಾಗಬಹುದು, ಡ್ಯಾಮೇಜ್ ಆಗಬಹುದು. ಅದರಲ್ಲೂ ಈಗಾಗೀ ಆರಂಭಗೊಂಡಿರುವ ಬೇಸಿಗೆಯ ದಿನಗಳಿಗೆ ಅತಿ ಅಗತ್ಯ ಎಂದೇ ಹೇಳಬೇಕು. ಹಾಗೆಂದು ಇಡೀ ವರ್ಷ ಬಳಸದೇ ಇರಬೇಡಿ, ಆಗ ನಿಮ್ಮ ಚರ್ಮ ಹೆಚ್ಚು ಸನ್ ಪ್ರೊಟೆಕ್ಟೆಡ್ ಆಗಿರುತ್ತದೆ.
ಸನ್ ಸ್ಕ್ರೀನ್ ಲೋಶನ್ ಆರಿಸುವಾಗ, ಅದರಲ್ಲಿನ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (SPF)ನತ್ತ ಖಂಡಿತಾ ಗಮನ ಕೊಡಬೇಕು. ಇದರ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿ ಇರಲೇಬೇಕು. SPF 50 ಪ್ರಮಾಣವುಳ್ಳ ಸನ್ ಸ್ಕ್ರೀನ್ 93% UV ಕಿರಣಗಳನ್ನು ಫಿಲ್ಟರ್ ಮಾಡಬಲ್ಲದೆಂದು ನಿಮಗೆ ಗೊತ್ತೇ? ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚಿನ ಸುರಕ್ಷತೆಯ ಅಗತ್ಯವಿದೆ. ಇದು ಸೂರ್ಯನ ಕಿರಣಗಳ ಸಂಪರ್ಕವನ್ನು ಅವಲಂಬಿಸಿದೆ.
SPF ನ ಮಹತ್ವ
SPF ಅಂದ್ರೆ ಸನ್‌ಪ್ರೊಟೆಕ್ಷನ್ ಫ್ಯಾಕ್ಟರ್. ನೀವು ಬಳಸು ಸನ್ ಸ್ಕ್ರೀನ್ ಲೋಶನ್ ಎಷ್ಟು ಬೆಟರ್‌ಎಫೆಕ್ಟಿವ್ ಎಂಬುದು, ಈ ಅಂಶವನ್ನು ಆಧರಿಸಿದೆ. ಅಂದ್ರೆ ಆ ಲೋಶನ್ನಿನಲ್ಲಿ ಎಷ್ಟು ಪ್ರಮಾಣ SPF ಇದೆ ಎಂಬುದನ್ನು. SPF ನಂಬರ್ UV ಕಿರಣಗಳಿಂದ ಎಷ್ಟು ಮಟ್ಟಿನ ರಕ್ಷಣೆ ಸಿಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಒಂದು ಥಿಯರಿ ಪ್ರಕಾರ, ನಿಮ್ಮ ಸನ್ ಸ್ಕ್ರೀನ್ ನಲ್ಲಿ SPF ಪ್ರಮಾಣ ಎಷ್ಟು ಹೆಚ್ಚಿರುತ್ತದೋ, ನಿಮ್ಮ ಚರ್ಮ ಸೂರ್ಯನ UV. ಈ UV ಕಿರಣಗಳಿಂದ ಅಷ್ಟೇ ಸುರಕ್ಷಿತವಾಗಿರುತ್ತದೆ ಎಂದು ಅರ್ಥ.
ಬಿಸಿಲು ತುಸು ಲೈಟ್ ಆಗಿದ್ದರೆ 15 SPF ಇದ್ದರೂ ಸಾಕು. ಏಕೆಂದರೆ ಇದೂ ಸಹ 93% ಚರ್ಮದ ಸುರಕ್ಷತೆಯತ್ತ ಕೇಂದ್ರೀಕರಿಸುತ್ತದೆ. ಆದರೆ ಬಿಸಿಲು ತೀವ್ರವಾಗುತ್ತಿದ್ದಂತೆ, ಎಷ್ಟೋ ಸಲ ಟೆಂಪರೇಚರ್ 40-45 ಡಿಗ್ರಿವರೆಗೂ ಹೆಚ್ಚಿದಾಗ, SPF ಪ್ರಮಾಣ ಸಹ 30-50 ಆಗಬೇಕಾದೀತು. ಅದರಲ್ಲೂ 50 SPF ನ ಕ್ರೀಂ 98% ಸೂರ್ಯನ ಹಾನಿ ತಪ್ಪಿಸುತ್ತದೆ ಎಂದೇ ಸಾಬೀತಾಗಿದೆ. ನಿಮ್ಮ ಅವಶ್ಯಕತೆ ಗಮನಿಸಿಕೊಂಡೇ ಎಂಥ ಪ್ರಮಾಣದ SPF ಸ್ಕ್ರೀನ್ ಬೇಕೋ ನಿರ್ಧರಿಸಿ.
ಸನ್ ಸ್ಕ್ರೀನ್ ನ ಅಗತ್ಯ : ಸ್ಟಾಂಡರ್ಡ್ ಸನ್ ಸ್ಕ್ರೀನ್‌ನಮ್ಮ ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವಂಥ ಮಹತ್ವಪೂರ್ಣ ಅಂಶಗಳನ್ನು ಹೊಂದಿರುತ್ತದೆ. ಅಂದ್ರೆ ಇದರಲ್ಲಿ ಝಿಂಕ್ ಆಕ್ಸೈಡ್, ಟೈಟೇನಿಯಂ ಆಕ್ಸೈಡ್ ಮುಂತಾದವನ್ನು ಒಳಗೊಂಡಿದ್ದು, ಚರ್ಮದ ರಕ್ಷಣೆಗೆ ಪೂರಕವಾಗಿವೆ. ಇವು ನಮ್ಮ ಚರ್ಮದ ಏಜಿಂಗ್ ಎಫೆಕ್ಟ್ ಅಂದ್ರೆ ವಯಸ್ಸಿಗೆ ಮುನ್ನ ಮುದಿಯಾದಂತೆ ಕಂಡುಬರುವ ಲಕ್ಷಣಗಳನ್ನು ತಗ್ಗಿಸುತ್ತವೆ, ಜೊತೆಗೆ ಸನ್ ಬರ್ನ್ ನ್ನೂ ಹಿಂದಿಕ್ಕುತ್ತದೆ. ಹೀಗಾಗಿ ಸನ್ ಸ್ಕ್ರೀನಿನ ಹೆಚ್ಚಿನ ಲಾಭ ಪಡೆಯಲು, ನೀವು ಬಿಸಿಲಿಗೆ ಹೋಗುವ ಕನಿಷ್ಠ 10 ನಿಮಿಷಗಳ ಮೊದಲು, ಅಗತ್ಯವಾಗಿ ಇದನ್ನು ಮುಖಮೈ ಕೈಗೆ ಸವರಿಕೊಳ್ಳಿ. ಪ್ರತಿ 2 ತಾಸಿಗೊಮ್ಮೆ ತಪ್ಪದೆ ಇದನ್ನು ಹಚ್ಚುತ್ತಿರಬೇಕು. ಸನ್ ಸ್ಕ್ರೀನ್ ನ್ನು ನಿಯಮಿತವಾಗಿ ಬಳಸುವುದರಿಂದ ಇನ್ನೂ ಅನೇಕ ಲಾಭಗಳಿವೆ.
ಸನ್ ಬರ್ನ್ ನಿಂದ ಬಚಾವು : ಸನ್ ಬರ್ನ್ ನಿಂದ ಮುಖದಲ್ಲಿ ಹಾಗೂ ಬಿಸಿಲು ತಗುಲುವ ಭಾಗಗಳಲ್ಲಿ ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಹೀಗಾಗಿ ಬೇಸಿಗೆಯ ಬಿಸಿಲಿನ ಝಳದಲ್ಲಿ, ಹೊರಗೆ ಹೋಗುವ ಮುನ್ನ 50 SPFನ ಸನ್ ಸ್ಕ್ರೀನ್ ಹಚ್ಚಿಕೊಳ್ಳಲು ಮರೆಯದಿರಿ. ಮುಖ್ಯವಾಗಿ ಕಂಗಳ ಕೆಳಗೆ ಇದನ್ನು ಸವರುವುದರಿಂದ, `ಐ ಬ್ಯಾಗ್ಸ್’ ಸಮಸ್ಯೆ ತಗ್ಗುತ್ತದೆ.
ಮೆಲಾಸ್ಮಾದಿಂದ ಪಾರಾಗಲು : ಎಷ್ಟೋ ಸಲ ನಮ್ಮ ಮುಖದ ಚರ್ಮದಲ್ಲಿ ಬೂದು/ಕಪ್ಪು ಬಣ್ಣದ ಥಿನ್ ಲೈನ್ಸ್ ಕಾಣಿಸಿಕೊಳ್ಳುತ್ತವೆ. ಅತ್ಯಧಿಕ ಬಿಸಿಲಿನ ತಿರುಗಾಟದಿಂದ ಚರ್ಮದ ಅಂಥ ಜಾಗಗಳಲ್ಲಿ ಮೆಲಾಸ್ಮಾ ಅಂಶ ತಂತಾನೇ ಹೆಚ್ಚಾಗುತ್ತದೆ. ಹೀಗಾಗಿ ಆ ಭಾಗಕ್ಕೆ ಧಾರಾಳವಾಗಿ ಸನ್ ಸ್ಕ್ರೀನ್ ಸವರಿದಾಗ, ಚರ್ಮದ ಈ ಸಮಸ್ಯೆ ಸುಲಭವಾಗಿ ತಗ್ಗುತ್ತದೆ.
ಟ್ಯಾನಿಂಗ್ ತಡೆಯಿರಿ : ನಮ್ಮ ದೇಹದ ಯಾವುದೇ ತೆರೆದ ಭಾಗ ಸೂರ್ಯನ ಸಂಪರ್ಕಕ್ಕೆ ಬಿದ್ದು, ಬಹಳ ಹೊತ್ತು ಬಿಸಿಲಲ್ಲಿ ಇರುವಂತಾದಾಗ, ಆ ಭಾಗ ಕ್ರಮೇಣ ಕಪ್ಪಾಗ ತೊಡಗುತ್ತದೆ, ಇದೇ ಟ್ಯಾನಿಂಗ್. ಇದಕ್ಕೆ ಒಂದೇ ಪರಿಹಾರ, ನಿಮ್ಮ ತೆರೆದ ಭಾಗಗಳನ್ನು ಸೀರೆಯ ಸೆರಗು, ದುಪಟ್ಟಾದಿಂದ ಮರೆ ಮಾಡಿ. ಜೊತೆಗೆ 30-50 SPF ನ ಸನ್ ಸ್ಕ್ರೀನ್ ಹಚ್ಚಲು ಮರೆಯದಿರಿ.
ಏಜಿಂಗ್ ನಿಂದ ಸುರಕ್ಷತೆ : ಸೂರ್ಯನ ಅತಿ ತೀಕ್ಷ್ಣ ಕಿರಣಗಳಿಂದ ಚರ್ಮದ ಮೇಲೆ ಅಲ್ಲಲ್ಲಿ ಸುಕ್ಕು, ಕಪ್ಪು ಕಲೆ, ಫೈನ್ ಲೈನ್ಸ್ ಇತ್ಯಾದಿ ಮೂಡುತ್ತವೆ. ಇದರಿಂದ ನಿಮಗಾಗಿರುವ ವಯಸ್ಸಿಗಿಂತ ಹಿರಿಯರಂತೆ ಕಾಣುವಿರಿ. ಇದನ್ನು ತಪ್ಪಿಸಲು ಒಂದೇ ಉಪಾಯ ಎಂದರೆ ಸನ್ ಸ್ಕ್ರೀನ್ ಬಳಕೆ. ಇದು ಚರ್ಮದ ಮೇಲೆ, ರಕ್ಷಾಪದರವಾಗಿ ಎದ್ದು ನಿಲ್ಲುತ್ತದೆ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ನಿಮ್ಮ ಚರ್ಮಕ್ಕೆ ತಗುಲಿ ಯಾವ ಹಾನಿಯನ್ನೂ ಮಾಡದು.
ಡಾರ್ಕ್ ಪ್ಯಾಚೆಸ್ ತಡೆಯಲು : ಪ್ರತಿದಿನ ಬಿಸಿಲಿನ ಸುತ್ತಾಟದಿಂದ, ಚರ್ಮದ ಮೇಲೆ ಅಲ್ಲಲ್ಲಿ ಡಾರ್ಕ್ ಪ್ಯಾಚೆಸ್ ಮೂಡುತ್ತವೆ. ಇದು ನೋಡಲು ಅತಿ ಕೆಟ್ಟದಾಗಿರುತ್ತದೆ. ಇದರ ನಿವಾರಣೆಗಾಗಿ ಮರೆಯದೆ, ಪ್ರತಿ ಸಲ ಹೊರಗೆ ಹೊರಟಾಗಲೂ 50 SPF ನ ಸನ್ ಸ್ಕ್ರೀನ್ ಹಚ್ಚಬೇಕು, ಹೊರಗಿದ್ದಷ್ಟು ಹೊತ್ತೂ ಪ್ರತಿ 2 ಗಂಟೆಗಳಿಗೊಮ್ಮೆ ಇದನ್ನು ಹಚ್ಚುತ್ತಿರಬೇಕು.
– ಸುಶೀಲಾ ಜೈನ್





