ಈ ಬೇಸಿಗೆಯಲ್ಲಿ ಯಾ ರೀತಿ ಹೆಣ್ಣುಮಕ್ಕಳು ತಮ್ಮ ದೇಹಾರೋಗ್ಯದ ಕಡೆ ಗಮನ ಕೊಡಬೇಕು ಎಂದು ವಿವರವಾಗಿ ತಿಳಿಯೋಣವೇ....?
ಬೇಸಿಗೆಯಲ್ಲಿ ನಾವು ನಮ್ಮ ಆರೋಗ್ಯದ ಕುರಿತಾಗಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಇದರಲ್ಲಿ ಪೌಷ್ಟಿಕ ಆಹಾರದ ಡಯೆಟ್, ವ್ಯಾಯಾಮ, ಯೋಗ ಎಲ್ಲವನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಇದರಿಂದ ಮಾತ್ರ ನಾವು ನಮ್ಮ ದೇಹವನ್ನು ಫಿಟ್ & ಫೈನ್ ಆಗಿ ಇರಿಸಿಕೊಳ್ಳಬಹುದು. ಇದಕ್ಕಾಗಿ ನಿಯಮಿತ ರೂಪದಲ್ಲಿ ಒಂದು ಹೆಲ್ದಿ ಡಯೆಟ್ ಪ್ಲಾನ್, ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮ್ಮ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಎಷ್ಟೋ ಪಟ್ಟು ಸುಧಾರಿಸುತ್ತದೆ, ಟೆನ್ಶನ್ ದೂರವಾಗಿ ನೆಮ್ಮದಿ ಎನಿಸುತ್ತದೆ.
ಪರ್ಫೆಕ್ಟ್ ಲೈಫ್ ಸ್ಟೈಲ್, ಹೆಲ್ದಿ ಡಯೆಟ್, ನಿಯಮಿತ ಸಮಯಕ್ಕೆ ಮಲಗುವುದು, ಏಳುವುದು, ದುರಭ್ಯಾಸಗಳಿಂದ ದೂರ ಉಳಿಯುವುದು, ಲಾಂಗ್ ಲಾಕ್, ಬ್ರಿಸ್ಕ್ ವಾಕ್, ಜಾಗಿಂಗ್, ಯೋಗ, ಸೈಕ್ಲಿಂಗ್, ಮೆಡಿಟೇಶನ್, ಸಕಾಲಕ್ಕೆ ಸರಿಯಾಗಿ ಧಾರಾಳ ನೀರು ಕುಡಿಯುವುದು ಇತ್ಯಾದಿ ಎಲ್ಲವನ್ನೂ ಸಮರ್ಪಕವಾಗಿ ಗಮನಿಸಿಕೊಂಡಾಗ ಈ ಬೇಸಿಗೆಯಲ್ಲಿ ನಾವು ಸದಾ ಆರೋಗ್ಯ ಸೌಂದರ್ಯ ಹೊಂದಿ ನಳನಳಿಸುತ್ತಾ ಇರಬಹುದು.
ದೇಹವನ್ನು ಸದಾ ಫಿಟ್ & ಫೈನ್ ಆಗಿರಿಸುವಲ್ಲಿ ವ್ಯಾಯಾಮದ ಮಹತ್ವ : ನಿಯಮಿತ ವ್ಯಾಯಾಮಗಳು ನಮ್ಮ ಹೆಚ್ಚುತ್ತಿರುವ ವಯಸ್ಸಿನ ವೇಗಕ್ಕೆ ತುಸು ಕಡಿವಾಣ ಹಾಕಿ ನಾವು ಸದಾ ಯೌವನ ಉಳಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ನಾವು ಹೆಚ್ಚು ಚುರುಕಾಗಿ, ಸದಾ ಆರೋಗ್ಯಕರವಾಗಿ ಇರಬಹುದು. ದೇಹವನ್ನು ಸದಾ ಫಿಟ್& ಫೈನ್ ಆಗಿರಿಸಿಕೊಳ್ಳಲು, ನಾವು ಪ್ರತಿದಿನ ಬೆಳಗ್ಗೆ ಕನಿಷ್ಠ 1 ಗಂಟೆ ಕಾಲ ವ್ಯಾಯಾಮ ಮಾಡಲೇಬೇಕು. ಇದಕ್ಕಾಗಿ ನೀವು ಯೋಗ, ಏರೋಬಿಕ್ಸ್, ಕಾರ್ಡಿಯೋ, ಸ್ಟ್ರೆಂಥ್ ಟ್ರೇನಿಂಗ್, ಬ್ಯಾಲೆನ್ಸಿಂಗ್‌ಫ್ಲೆಕ್ಸಿಬಿಲಿಟಿ, ಬ್ರಿಸ್ಕ್ ವಾಕಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಈಜು ಇತ್ಯಾದಿ ರೂಢಿಸಿಕೊಳ್ಳಿ. ಇದಕ್ಕಾಗಿ ವಾರದಲ್ಲಿ ಇಂತಿಂಥ ದಿನ ಇದಿರಲಿ ಎಂದು ಟೈಂಟೇಬಲ್ ಹಾಕಿಕೊಳ್ಳಿ. ಉದಾ: ಏರೋಬಿಕ್ಸ್ 2 ದಿನ, ಸ್ಟ್ರೆಂಥ್ ಟ್ರೇನಿಂಗ್ 2 ದಿನ, ಜಾಗಿಂಗ್ ಈಜು 2 ದಿನ..... ಹೀಗೆ ಬ್ಯಾಲೆನ್ಸ್ ಮಾಡಿ. ನೀವು ಈ ವ್ಯಾಯಾಮಗಳಲ್ಲಿ ಜುಂಬಾ ಯಾ ಡ್ಯಾನ್ಸ್ ಸಹ ಸೇರಿಸಿಕೊಳ್ಳಬಹುದು. ಕೆಲವು ಕಾರಣಗಳಿಂದ ನಿಯಮಿತವಾಗಿ ಮನೆಯಲ್ಲಿ ವ್ಯಾಯಾಮ ಮಾಡಲಾಗದಿದ್ದರೆ, ಅಗತ್ಯವಾಗಿ ಹೊರಗಿನ ಜಿಮ್ ಯಾ ಯೋಗ ಅಟೆಂಡ್ ಮಾಡಿ. ಒಟ್ಟಾರೆ ಯಾವುದಾದರೂ ಫಿಟ್ ನೆಸ್ ಕ್ಲಾಸ್ ಆಗಿರಬೇಕು, ಅಷ್ಟೆ.

ವ್ಯಾಯಾಮದಿಂದ ಆಗುವ ಲಾಭ : ಇದರಿಂದ ನಮ್ಮ ದೇಹದ ಮೆಟಬಾಲಿಸಂ ರೇಟ್ ಹೆಚ್ಚುತ್ತದೆ. ಆ ಕಾರಣದಿಂದ ನಮ್ಮ ಪಚನಕ್ರಿಯೆ, ರಕ್ತ ಸಂಚಾರ, ಮಲಮೂತ್ರ ವಿಸರ್ಜನೆ, ಉಸಿರಾಟ ಇತ್ಯಾದಿ ಎಲ್ಲವೂ ಚುರುಕಾಗುತ್ತದೆ. ಸುಸ್ತುಸಂಕಟ ನಿವಾರಣೆಗೊಂಡು ದೇಹದಲ್ಲಿ ಹೆಚ್ಚಿನ ಲವಲವಿಕೆ ಮೂಡುತ್ತದೆ. ಆಟೋಮೆಟಿಕಲಿ ದೇಹ ತೂಕ ನಿಯಂತ್ರಣ ಕಂಟ್ರೋಲಿಗೆ ಬರುತ್ತದೆ.
ನಮ್ಮ ಮಾಂಸಖಂಡಗಳನ್ನು ಸದಾ ಸ್ವಸ್ಥವಾಗಿಟ್ಟುಕೊಳ್ಳಬೇಕು. ಇದರಿಂದ ನಮಗೆ ಮೈಕೈ ನೋವು ತಗ್ಗಿ ಸುಸ್ತುಸಂಕಟ ದೂರವಾಗಿ, ರಕ್ತ ಸಂಚಾರ ವರ್ಧಿಸುತ್ತದೆ. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚುವುದರಿಂದ, ಬುದ್ಧಿ ಸಹ ಎಷ್ಟೋ ಚುರುಕಾಗುತ್ತದೆ, ಸಕಾರಾತ್ಮಕ ಆಲೋಚನ ಮೂಡುತ್ತದೆ. ಹೊಸ ಬ್ರೇನ್ ಸೆಲ್ಸ್ ಡೆವಲಪ್ ಆಗಲು ನೆರವಾಗುತ್ತದೆ.





