- ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ತನ್ನ 15 ನೇ ವಾರ್ಷಿಕ ದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ.. ಈ ವೇಳೆ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಹೊಸ ಸೌಲಭ್ಯಗಳನ್ನು ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಲೋಕಾರ್ಪಣೆ ಮಾಡಿದರು.

ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (SSCHRC) 15 ನೇ ವಾರ್ಷಿಕೋತ್ಸವ ಭಾನುವಾರ, 27 ಸೆಪ್ಟೆಂಬರ್ 2026 ರಂದು ಅದ್ದೂರಿಯಾಗಿ ನಡೆಯಿತು. . ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಸ್ಪತ್ರೆಯ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು..

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವ ಯು. ಟಿ. ಖಾದರ್ ಅಪಾರ ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಬದ್ಧತೆಯಿಂದ ರೋಗಿಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡುತ್ತಿರುವ ಕೆಲವು ಆಸ್ಪತ್ರೆಗಳಲ್ಲಿ ಶಂಕರ ಆಸ್ಪತ್ರೆ ಪ್ರಮುಖವಾದದ್ದು. ಕಳೆದ 15 ವರ್ಷಗಳಿಂದ ಎಷ್ಟೇ ಸವಾಲುಗಳು ಎದುರಾದರೂ, ಸಂಸ್ಥೆಯು ತೋರಿದ ಛಲ, ಬದ್ಧತೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ದೊಡ್ಡ ಮಾದರಿಯಾಗಿದೆ. ಈ ಸಂಸ್ಥೆಗೆ ದಾನಿಗಳು ನೀಡುವ ಪ್ರತಿಯೊಂದು ಪೈಸೆಯೂ ಪಾರದರ್ಶಕವಾಗಿ ಈ ನಾಡಿನ ಬಡ ಜನಸಾಮಾನ್ಯರ ಚಿಕಿತ್ಸೆಗೆ ತಲುಪುತ್ತಿರುವುದು ಅತ್ಯಂತ ಶ್ಲಾಘನೀಯ.ಒಂದು ಆಸ್ಪತ್ರೆಯನ್ನು ಕೇವಲ ಚಿಕಿತ್ಸಾ ಕೇಂದ್ರವಾಗಿ ಮಾತ್ರವಲ್ಲದೆ, ಸಮಾಜಮುಖಿ ಮಾನವೀಯತೆಯ ನೆಲೆಯಲ್ಲಿ ಹೇಗೆ ಮುನ್ನಡೆಸಬೇಕು ಎಂಬುದಕ್ಕೆ ಶಂಕರ ಆಸ್ಪತ್ರೆ ಇಡೀ ದೇಶಕ್ಕೇ ಮಾದರಿಯಾಗಿದೆ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ. ಎಸ್. ಶ್ರೀನಾಥ್ ಮಾತನಾಡುತ್ತಾ ಕಳೆದ ಹದಿನೈದು ವರ್ಷಗಳಿಂದ ಸಂಸ್ಥೆ ಬೆಳೆದು ಬಂದ ಹಾದಿ ಮೆಲುಕು ಹಾಕಿದರು. ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಸೇವೆಯನ್ನು ತಮ್ಮ ಸಂಸ್ಥೆಯ ವತಿಯಿಂದ ನೀಡುವ ಉದ್ದೇಶ ಇದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ. ಎಸ್. ಶ್ರೀನಾಥ್, ಟ್ರಸ್ಟಿಗಳಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್, ಶ್ರೀ ನಾಗರಾಜ್, ಆಸ್ಪತ್ರೆಯ ಇತರ ಗೌರವಾನ್ವಿತ ಟ್ರಸ್ಟಿಗಳು, ಹಿರಿಯ ವೈದ್ಯರು, ವಿದ್ಯಾರ್ಥಿ ಮಿತ್ರರು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.





