ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಮಿಶನ್‌ ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ವಿಶಿಷ್ಟ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಸಂಭ್ರಮಾಚರಣೆ ಹಾಗೂ ಅವರನ್ನು ಪ್ರಮುಖ ಸುದ್ದಿಗೆ ತರುವುದು, ಅವರ ಧ್ವನಿಗೊಂದು ಉಚ್ಚಸ್ಥಾಯಿ ನೀಡುವುದು, ಅವರು ನಡೆದು ಬಂದ ದಾರಿಯ ಪ್ರದರ್ಶನ, ನಮ್ಮ ಓದುಗರು ಕನಸು ಕಾಣಲು, ನೇತೃತ್ವ ವಹಿಸಲು, ಹೊಸತೇನಾದರೂ ಮಾಡಲು ಪ್ರೇರೇಪಿಸುವುದಾಗಿದೆ.

1763554172365

ಆಯ್ಕೆಯ ಪ್ರಕ್ರಿಯೆ

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್‌ ಗಾಗಿ ಹೆಸರುಗಳ ಆಯ್ಕೆಯು ಒಂದು ಸುದೀರ್ಘ ಪ್ರಕ್ರಿಯೆ ಆಗಿತ್ತು. ಎಲ್ಲಕ್ಕೂ ಮೊದಲು ದೇಶಾದ್ಯಂತ ಹಲವು ಭಾಷೆಗಳಲ್ಲಿ ಹರಡಿರುವ ಗೃಹಶೋಭಾದ ಸಂಪಾದಕೀಯ ವಿಭಾಗ 300-400 ಹೆಸರುಗಳ ದೊಡ್ಡ ಪಟ್ಟಿ ರೂಪಿಸಿತು. ಇದನ್ನು ಕ್ಯಾಟೆಗರಿವೈಸ್‌ ಡಿವೈಡ್‌ ಮಾಡಲಾಯಿತು. ನಂತರ ಪ್ರತಿ ಕ್ಯಾಟೆಗರಿಯಿಂದ ಕೆಲವು ಹೆಸರುಗಳನ್ನು ಶಾರ್ಟ್‌ ಲಿಸ್ಟ್ ಮಾಡಲಾಯಿತು, ಹೀಗೆ ಒಂದು ಲಾಂಗ್‌ ಲಿಸ್ಟ್ ಸಿದ್ಧವಾಯ್ತು.

1763555664818

ಇಂಟರ್ನಲ್ ಜ್ಯೂರಿ ಆ ಲಾಂಗ್‌ ಲಿಸ್ಟ್ ನ್ನು ಶಾರ್ಟ್‌ ಲಿಸ್ಟ್ ಮಾಡಿದರು. ಇಂಟರ್ನಲ್ ಜ್ಯೂರಿಗಳಲ್ಲಿ ಈ ಸಲ 6 ಜನರಿದ್ದರು ಪ್ರಿಯದರ್ಶಿನಿ ನರೇಂದ್ರ, ಪ್ರೋಗ್ರಾಂ ಡೈರೆಕ್ಟರ್‌ ಶ್ವೇತಾ ರಾಬರ್ಟ್ಸ್, ಅವಾರ್ಡ್ಸ್ ಪ್ರೊಡ್ಯೂಸರ್‌ ಗರಿಮಾ ಪಂಕಜ್‌, ಸೀನಿಯರ್‌ರೈಟರ್‌ಎಡಿಟೋರಿಯಲ್ ಕೋಆರ್ಡಿನೇಟರ್‌ ಇಂದ್ರಾಗಂಟಿ, ಜನರಲ್ ಮ್ಯಾನೇಜರ್‌ ಸೌತ್‌ ಗೀತಾ ಸುಧಾಕರನ್‌, ಬ್ರಾಂಚ್ ಹೆಡ್‌ ಕೊಚ್ಚಿ ಹಾಗೂ ಸುನೀತಾ ರುದ್ರೇಶ್‌.

1763556580822

ಇಂಟರ್ನಲ್ ಜ್ಯೂರಿ ಕೆಲವು ಪ್ಯಾರಾಮೀಟರ್ಸ್‌ ಆಧಾರದಿಂದ ಇವರಿಗೆ ಸ್ಕೋರ್‌ ನೀಡಿದರು. ಈ ಪ್ಯಾರಾಮೀಟರ್ಸ್‌ ಅಂದ್ರೆ ಸಾಹಸ ಹಾಗೂ ರಿಸ್ಕ್ ಹೊರುವ ಸಾಮರ್ಥ್ಯ, ಇನೋವೇಶನ್‌ಕ್ರಿಯೇಟಿವಿಟಿ, ನೇತೃತ್ವ ಸಾಮರ್ಥ್ಯ, ಪ್ರಭಾವ ಇತ್ಯಾದಿ.

1763554178996

ನಂತರ ಈ ಶಾರ್ಟ್‌ ಲಿಸ್ಟ್ ಎಕ್ಸ್ ಟರ್ನ್‌ ಜ್ಯೂರಿ ಬಳಿ ಹೋಯಿತು. ಎಕ್ಸ್ ಟರ್ನ್‌ ಜ್ಯೂರಿಯಲ್ಲಿ 8 ಜನರಿದ್ದರು. ಇವರಲ್ಲಿ ಸತ್ಯಾ ಸರನ್‌ ಲೇಖಕಿ ಹಾಗೂ ಫೆಮೀನಾದ ಮಾಜಿ ಸಂಪಾದಕಿ, ಶೋಭಾ ನಾರಾಯಣ್‌ ಲೇಖಕಿ ಪತ್ರಕರ್ತೆ, ಸುಪರ್ಣಾ ಮಿತ್ರಾ ಟೈಟನ್‌ ವಾಚಸ್‌ಲೇರೆಬ್ಸ್‌ ಡಿವಿಷನ್ನಿನ ಮಾಜಿ ಪದ್ಮಪ್ರಿಯಾ ಜಾನಕಿ ರಾಮನ್‌ ರಿಚಾ ಶಾಹ್‌, ಚಂಪಕ ಸಂಪಾದಕಿ ನೂರಿಯಾ ಅನ್ಸಾರಿ,

1763556573058

ಭಾರತಿ ಏರ್‌ ಟೆಲ್ ‌ಫೌಂಡೇಶನ್ನಿನ ಅಧ್ಯಕ್ಷೆ ದಿಲ್ ‌ಶಾದ್‌ ಮಾಸ್ಟರ್‌, ಔಟ್‌ ವರ್ಡ್‌ ಬೌಂಡ್‌ ಹಿಮಾಲಯದ ನಿರ್ದೇಶಕಿ ಹಾಗೂ ಸುರಭಿ ಕಾಂಗಾ, ದಿ ಕಾರ್‌ ವಾನ್‌ ನ ವೆಬ್‌ ಸಂಪಾದಕಿ, ಮುಂತಾದವರೆಲ್ಲ ಕೂಡಿದ್ದರು. ಇವರುಗಳ ಫೈನಲ್ ಸ್ಕೋರ್‌ ನ ಆಧಾರದಿಂದ ಟಾಪ್‌ ಸ್ಕೋರರ್‌ ವಿನ್ನರ್‌ ಆರಿಸಲ್ಪಟ್ಟರು.

1763556581655

ಇಂಟರ್ನಲ್ ಜ್ಯೂರಿ ಗರಿಮಾ ಪಂಕಜ್‌ ಸೀನಿಯರ್‌ ರೈಟರ್‌ ಶ್ವೇತಾ ರಾಬರ್ಟ್ ಅವಾರ್ಡ್ಸ್ ಪ್ರೊಡ್ಯೂಸರ್‌ ಸುನೀತಾ ರುದ್ರೇಶ್ ಪ್ರೋಗ್ರಾಂ ಡೈರೆಕ್ಟರ್‌ ಪ್ರಿಯದರ್ಶಿನಿ ನರೇಂದ್ರ ಪ್ರೋಗ್ರಾಂ ಡೈರೆಕ್ಟರ್‌ ಗೀತಾ ಸುಧಾಕರನ್‌ ಬ್ರಾಂಚ್‌ ಹೆಡ್‌ ಕೊಚ್ಚಿ ಇಂದ್ರಾಗಂಟಿ ಮಾಧುರಿ ಜನರಲ್ ಮ್ಯಾನೇಜರ್‌ ಸೌತ್‌ ಸನ್ಮಾನ್ಯ ಜ್ಯೂರಿ ತಂಡ ಸತ್ಯಾ ಸರನ್‌ (ಜ್ಯೂರಿ ಪ್ರಮುಖರು) ಸತ್ಯಾ ಸರನ್‌ ಒಬ್ಬ ಫೇಮಸ್‌ ಜರ್ನಲಿಸ್ಟ್, ರೈಟರ್‌ ಹಾಗೂ ಫೆಮಿನಾದ ಮಾಜಿ ಸಂಪಾದಕಿ.

1763556591168

ಈಕೆ ಭಾರತೀಯ ಫ್ಯಾಷನ್‌ ಲೈಫ್‌ ಸ್ಟೈಲ್ ಜರ್ನಲಿಸಮ್ ನಲ್ಲಿನ ತಮ್ಮ ಉನ್ನತ ಸಾಧನೆಯಿಂದ ಗುರುತಿಸಲ್ಪಡುತ್ತಾರೆ. ಈಕೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ, ಅದರಲ್ಲಿ ಸಿನಿಮಾ ದಿಗ್ಗಜರ ಬಯಾಗ್ರಫಿ ಸಹ ಉಂಟು. ಆಕೆ ಸಾಹಿತ್ಯ ಹಾಗೂ ಮೀಡಿಯಾದಲ್ಲೂ ಒಬ್ಬ ಪ್ರಭಾವಶಾಲಿ ಧ್ವನಿಯಾಗಿ ನಿಲ್ಲುತ್ತಾರೆ.

1763556563960

ದಿಲ್ ಶಾದ್ಮಾಸ್ಟರ್

ದಿಲ್ ಶಾದ್‌ ಮಾಸ್ಟರ್‌ ಔಟ್‌ ವರ್ಡ್‌ ಬೌಂಡ್‌ ಹಿಮಾಲಯದ ಡೈರೆಕ್ಟರ್‌ ಹಾಗೂ ಮೋಟಿವೇಶನ್‌ ಸ್ಪೀಕರ್‌. ಈಕೆ ಝೀ ಸಿನಿಮಾ, ಸ್ಟಾರ್‌ ಪ್ಲಸ್‌, ಸ್ಟಾರ್‌ ನ್ಯೂಸ್‌, ನ್ಯಾಶನಲ್ ಜಿಯಾಗ್ರಫಿಕ್‌ ಚ್ಯಾನೆಲ್‌, ಹಿಸ್ಟರಿ ಚ್ಯಾನೆಲ್‌ಹಾಗೂ ಎಂಟರ್‌ ಟೇನ್ಮೆಂಟ್‌ ನಂಥ ವಿಭಿನ್ನ ಟಿವಿ ಚ್ಯಾನೆಲ್ ‌ಗಳಿಗಾಗಿ ಪ್ರೋಗ್ರಾಮಿಂಗ್‌, ಮಾರ್ಕೆಟಿಂಗ್‌ ಹಾಗೂ ಸಂಚಾಲನದ ನೇತೃತ್ವ ವಹಿಸಿದ್ದಾರೆ.

1763555669874

ಪದ್ಮಪ್ರಿಯಾ ಜಾನಕಿರಾಮನ್

ಪದ್ಮಪ್ರಿಯಾ ಜಾನಕಿರಾಮನ್‌ ಮೂಲತಃ ನಟಿ. ತಮ್ಮ ಪ್ರತಿಭಾಶಾಲಿ ನಟನೆಗಾಗಿ ಅನೇಕ ಫಿಲ್ಮ್ ಫೇರ್‌ಸ್ಟೇಟ್‌ ಅವಾರ್ಡ್ಸ್ ಪಡೆದಿದ್ದಾರೆ. ಈಕೆ ಫಿಲ್ಮ್ ಇಂಡಸ್ಟ್ರಿಯಲ್ಲಿ ಈಕ್ವಾಲಿಟಿಯ ಆ್ಯಕ್ಟಿವಿಸ್ಟ್ ಸಹ ಹೌದು.

1763555667433

ಶೋಭಾ ನಾರಾಯಣ್

ಶೋಭಾ ನಾರಾಯಣ್‌ ಒಬ್ಬ ಪ್ರಸಿದ್ಧ ಬರಹಗಾರ್ತಿ ಹಾಗೂ ಅಂಕಣಗಾರ್ತಿ. ಆರ್ಟ್‌, ಕಲ್ಚರ್‌, ಫ್ಯಾಷನ್‌, ಟ್ರಾವೆಲ್‌, ಫುಡ್‌ನೇಚರ್‌ ನಂಥ ವಿಷಯಗಳ ಕುರಿತಾಗಿ ಬರೆಯುತ್ತಾರೆ.

1763555672895

ನೂರಿಯಾ ಅನ್ಸಾರಿ

ನೂರಿಯಾ ಅನ್ಸಾರಿ ಭಾರತಿ ಏರ್‌ ಟೆಲ್ ‌ಫೌಂಡೇಶನಿನ್ನ ಸಿಇಓ. ಈಕೆ ಸುಮಾರು 2 ದಶಕಗಳಿಂದ ಸೋಶಿಯಲ್ ಇಂಪ್ಯಾಕ್ಟ್ ಹಾಗೂ ಎಜುಕೇಶನ್‌ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

1763556556932

ರಿಚಾ ಶಾಹ್

ರಿಚಾ ಶಾಹ್‌ ಚಂಪಕ ಸಂಪಾದಕಿ ಹಾಗೂ ಡೆಲ್ಲಿ ಪ್ರೆಸ್‌ ನ ಡೈರೆಕ್ಟರ್‌. ಮಕ್ಕಳ ಪತ್ರಿಕೆಗಳಲ್ಲಿ ಚಂಪಕ ದೇಶಾದ್ಯಂತ ಅತಿ ದೊಡ್ಡ ಹೆಸರು, ಹಲವು ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಡೆಲ್ಲಿ ಪ್ರೆಸ್‌ ನಿಂದ ಗೃಹಶೋಭಾ ಹಾಗೂ ಚಂಪಕ ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ.

1763556567189

ಸುಪರ್ಣಾ ಮಿತ್ರಾ

ಸುಪರ್ಣಾ ಮಿತ್ರಾ ಟೈಟನ್‌ ವಾಚಸ್‌ ನ ಸಿಇಓ ಆಗಿ ಸೇವೆ ಸಲ್ಲಿಸಿದ್ದಾರೆ. ಒಬ್ಬ ಬಿಸ್‌ ನೆಸ್‌ ಲೀಡರ್‌ ಆಗಿ ಆಕೆ ಮಹಿಳೆಯರನ್ನು ಸದಾ ಪ್ರೋತ್ಸಾಹಿಸುತ್ತಾರೆ.

1763556559088

ಸುರಭಿ ಕಾಂಗಾ

ಸುರಭಿ ಕಾಂಗಾ ದಿ ಕಾರವಾನ್‌ ಪತ್ರಿಕೆಯ ವೆಬ್‌ ಸಂಪಾದಕಿ. ಈಕೆ ವಾಡ್ಲಿ ಮೀಡಿಯಾ ಪುರಸ್ಕೃತ ವಿಜೇತೆ. ಈಗೆ ಶಿಕಾಗೋದ `ಸ್ಕೂಲ್ ಆಫ್‌ ದಿ ಆರ್ಟ್‌ ಇನ್ಸ್ ಟಿಟ್ಯೂಟ್‌’ನಿಂದ ಜರ್ನಲಿಸಮ್ ನಲ್ಲಿ ಸ್ನಾತಕೋತ್ತರ ಪದವೀಧರೆ ಎನಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ