ಕೊರೆಯುವ ಚಳಿಯಲ್ಲಿ ನಡುಗುತ್ತಾ ಹೊರಟಿದ್ದ ಹೆಂಗಸರ ಗುಂಪನ್ನು ಕಂಡು ಯಾರೋ ಪಾಪ ಅಂತ ಅವರಿಗೆ ಶಾಲು ಹೊದೆಯಲು ನೀಡಿದರೆ, ಕೋಪಗೊಂಡ ಆ ಹೆಂಗಸರು, `ಛೇ….ಛೇ! ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ! ನಾವು ಗತಿಗೆಟ್ಟವರು ಅಂದುಕೊಂಡ್ರಾ? ನಾವೆಲ್ಲರೂ ಗ್ರಾಂಡಾಗಿ ಡ್ರೆಸ್ ಮಾಡಿಕೊಂಡು, ಮದುವೆಗೆ ಹೊರಟಿದ್ದೇವೆ, ಗೊತ್ತಾ?” ಎನ್ನುವುದೇ?
ಪತಿಪತ್ನಿ ಇಬ್ಬರಲ್ಲೂ ಕೊನೆ ಮೊದಲು ಇಲ್ಲದಂತೆ ವಾದವಿವಾದ ಶುರುವಾಗಿತ್ತು. ಇಡೀ ದಿನ ಕಳೆದರೂ ವಾದಕ್ಕೆ ಅಂತ್ಯ ಕಾಣಲಿಲ್ಲ. ಕೊನೆಗೆ ಪತ್ನಿ ಹೇಳಿದಳು, “ನೀವೀಗ ವಾದದಲ್ಲಿ ಗೆಲ್ಲುವುದು ಮುಖ್ಯವೋ…… ನೆಮ್ಮದಿಯಾಗಿ ಮಲಗುವುದೋ….?” ಅಲ್ಲಿಗೆ ವಾದ ಮುಗಿಯಿತು!
ರೋಗಿ : ಡಾಕ್ಟರ್….. ಥಂಡಿ ಹೆಚ್ಚಾಗಿದೆ. ಹೀಗಾಗಿ ಬ್ಲೋಯರ್ ಆನ್ ಮಾಡಿಕೊಂಡೇ ಸರ್ಜರಿ ಮಾಡಿ.
ಡಾಕ್ಟರ್ : ಅದು ಏಕೆ?
ರೋಗಿ : ಏಕೆಂದರೆ ಸರ್ಜರಿಗೂ ವಿಸರ್ಜನೆಗೂ ಬಹಳ ಅಂತರವೇನಿಲ್ಲ. ಥಂಡಿಯಿಂದಾಗಿ ಸರ್ಜರಿ ಮಾಡುವಾಗ ನಿಮ್ಮ ಕೈ ನಡುಗಲಿಲ್ಲ ಅಂದ್ರೆ, ನೀವು ಯಶಸ್ವೀ ಸರ್ಜನ್! ಹಾಗಾಗದೆ ಕೈ ನಡುಗಿ ಸರ್ಜರಿ ಎಡವಟ್ಟಾದರೆ…. 1-2 ದಿನಗಳಲ್ಲಿ ನನ್ನ ಹೆಣದ ವಿಸರ್ಜನೆ ಆಗಿಹೋಗುತ್ತದೆ!
ಪತ್ನಿ : ಮದುವೆಯ ಆರಂಭದಲ್ಲಿ ನನ್ನನ್ನು ಬಹು ಸಿಹಿಯಾದ ಶಬ್ದಗಳಿಂದ ಹಾಲುಖೀರು, ರಸಮಲಾಯಿ, ಹಾಲು ಹೋಳಿಗೆ… ಅಂತೆಲ್ಲ ಕರೆಯುತ್ತಿದ್ದಿರಿ! ಮದುವೆ ಆಗಿ 6 ತಿಂಗಳಾಯಿತು, ಈಗೇಕೆ ಹಾಗೆ ಕರೆಯುತ್ತಿಲ್ಲ?
ಪತಿ : ಅಯ್ಯೋ ಮಹರಾಯ್ತಿ! ಹಾಲಿನಿಂದ ತಯಾರಿಸುವ ಸಿಹಿ ವ್ಯಂಜನ 6 ತಿಂಗಳಾದರೂ ಹಳಸದೆ ಹಾಗೇ ಇರುತ್ತದೆ ಅಂದುಕೊಂಡೆಯೇನು…..?
ಸುರೇಶ : ಎಷ್ಟೋ ಜಗಳಗಳ ನಂತರ ಎಲ್ಲಾ ಪತಿಪತ್ನಿಯರ ನಡುವೆ ನಿರಂತರ ವೈಮನಸ್ಯ ಹೆಚ್ಚುತ್ತಿರಲು ಕಾರಣವೇನು ಎಂದು ಸ್ಪಷ್ಟವಾಯಿತು.
ಮಹೇಶ : ಅದೇನಪ್ಪ ಅಂಥದ್ದು?
ಸುರೇಶ : ಎಲ್ಲೋ ಇದ್ದ ಈ 2 ಜೀವಗಳನ್ನು ಒಂದು ಮಾಡಿದ ಮದುವೆ ದಲ್ಲಾಳಿಯದು!
ಮಗ : ಅಮ್ಮ….. ನಾನು ಹೇಗೆ ಕಾಣ್ತೀದ್ದೀನಮ್ಮ?
ತಾಯಿ : ಅದನ್ನು ನಿನ್ನ ಗರ್ಲ್ ಫ್ರೆಂಡ್ ನ್ನೇ ಕೇಳಬೇಕಪ್ಪ.
ಮಗ : ಆದರೆ….. ನನಗೆ ಯಾರೂ ಗರ್ಲ್ ಫ್ರೆಂಡೇ ಇಲ್ಲವಲ್ಲಮ್ಮ…..?
ತಾಯಿ : ಹಾಗಿದ್ದರೆ ಈ ಪ್ರಶ್ನೆಯನ್ನು ನಿನಗೆ ನೀನೇ ಕೇಳಿಕೋ…. ಅದರಲ್ಲಿ ಅರ್ಥ ಮಾಡಿಕೋ!
ಒಬ್ಬ ಅತಿ ತೆಳ್ಳಗೆ ಎಲುಬುಗೂಡಿನಂತಿದ್ದ ವ್ಯಕ್ತಿ ಶೇವಿಂಗ್ ಮಾಡಿಸಲೆಂದು ಅಂಗಡಿಗೆ ಬಂದಿದ್ದ.
ಕಡ್ಡಿ ಪೈಲ್ವಾನ್ : ನನಗೆ ಮಾಡುವ ಶೇವಿಂಗ್ ಹೇಗಿರಬೇಕು ಅಂದ್ರೆ, ಮುಟ್ಟಿದರೆ ಐಸ್ ತುಂಡಿಗಿಂತಲೂ ನುಣುಪಾಗಿರಬೇಕು…..ಗೊತ್ತಾಯ್ತಾ?
ಅಂಗಡಿಯವನು : ಅದೇನೋ ಸರಿ, ಆದರೆ ನಿನ್ನ ಮುಖದಲ್ಲಿ ಎಲ್ಲೆಲ್ಲೂ ಮೂಳೆಗಳೇ ತುಂಬಿರುವಾಗ, ಅದರಲ್ಲಿ ಗಡ್ಡ ಎಲ್ಲಿದೆ ಎಂದು ಹುಡುಕುವುದು ಹೇಗೆ? ಆಮೇವೆ ತಾನೇ ಶೇವಿಂಗ್ ನ ಪ್ರಶ್ನೆ……?
ಪತ್ನಿ : ಏನ್ರಿ, ಈ ಸಲ ಬೇಸಿಗೆ ರಜೆಯಲ್ಲಿ ಎಲ್ಲಿಗೆ ಹೋಗೋಣ ಅಂತೀರಾ? ಪ್ರವಾಸ ಮಜವಾಗಿರಬೇಕು!
ಪತಿ : ಸಾಗುವ ದೂರ ದೂರ…. ಮೇಲೇರುವ ಬಾರಾ ಬಾರಾ…. ನಾವಾಗುವ ಚಂದಿರ ತಾರಾ…..
ಪತ್ನಿ : ಬಡ್ಕೊಂಡ್ರು ನಿಮ್ಮ ಬುದ್ಧಿಗೇ! ಮಕ್ಕಳೂ ಜೊತೇಲಿ ಬರ್ತಿದ್ದಾರೆ ಅಂತ ನೆನಪಿರಲಿ!
ಟೀಚರ್ : ಕಿಟ್ಟಿ…. ಮಾನವರಿಗೂ ಮೊಬೈಲ್ ಗೂ ಇರುವ ವ್ಯತ್ಯಾಸವೇನು?
ಕಿಟ್ಟಿ : ಬ್ಯಾಲೆನ್ಸ್ ಇಲ್ಲದಿದ್ದರೆ ಮಾನವರು ಸರಿಯಾಗಿ ಕಾಲು ಎತ್ತಿಟ್ಟು ನಡೆಯಲಾರರು ಅದೇ ಬ್ಯಾಲೆನ್ಸ್ ಇಲ್ಲದಿದ್ದರೆ ಮೊಬೈಲ್ ನಿಂದ ಕಾಲೇ ಹೋಗೋದಿಲ್ಲ….!
ಪತಿ : ಡಾರ್ಲಿಂಗ್, ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ? ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ!
ಪತ್ನಿ : ಹೌದೇ? ಎಲ್ಲಿ….. ಹಾಗಾದರೆ ಭುಜಂಗಾಸನದಿಂದ ಶೀರ್ಷಾಸನದವರೆಗೂ ಎಲ್ಲಾ ಆಸನ ಮಾಡಿ ತೋರಿಸಿ!
ಪತ್ನಿ : ನಿಮ್ಮ ಶರ್ಟ್ ನಲ್ಲಿ ಒಂದು ಉದ್ದದ ಕೂದಲೂ ಕಾಣಿಸುತ್ತಿಲ್ಲವಲ್ಲ….? ಅದು ಹೇಗೆ….?
ಪತಿ : ಅದಕ್ಕೆ ಈಗೇನು ಮಾಡಬೇಕು ಅಂತೀಯಾ?
ಪತ್ನಿ : ಈ ಸ್ಮಾರ್ಟ್ ನೆಸ್ ಖಂಡಿತಾ ನಿಮ್ಮದಲ್ಲ, ಯಾವ ಮನೆ ಹಾಳಿ ನಿಮಗೆ ಈ ಐಡಿಯಾ ಕಲಿಸಿದಳು?





