– ರಾಘವೇಂದ್ರ ಅಡಿಗ ಎಚ್ಚೆನ್.

JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು, ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೃಜನಶೀಲತೆ ಮತ್ತು ಕಥೆ ಹೇಳುವ ಕಲೆಯನ್ನು ಸಂಭ್ರಮಿಸುವ “Cinemates 4.0” ಕಾರ್ಯಕ್ರಮವನ್ನು ಆಯೋಜಿಸಿತು. ಭಾರತೀಯ ಸಿನಿಮಾದ ಸಾರವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮದಲ್ಲಿ ಬರಹಗಾರ ಮತ್ತು  ನಿರ್ದೇಶಕರಾದ ಶ್ರೀನಿಧಿ ಬೆಂಗಳೂರು ಭಾಗವಹಿಸಿ, ಚಲನಚಿತ್ರ ನಿರ್ಮಾಣದ ಕಲೆ ಮತ್ತು ತಂತ್ರದ ಕುರಿತು ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು. Cinemates 4.0 ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಅಂತರ್-ಕಾಲೇಜು 48 ಗಂಟೆಗಳ ಕಿರುಚಿತ್ರ ನಿರ್ಮಾಣ ಸ್ಪರ್ಧೆ. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿ ಹಾಗೂ ವೃತ್ತಿಪರ ವಿಭಾಗಗಳಲ್ಲಿ ಭಾಗವಹಿಸಿದ ತಂಡಗಳು ಸಮಯ’ ಎಂಬ ವಿಷಯದ ಆಧಾರದ ಮೇಲೆ ಕಿರುಚಿತ್ರಗಳನ್ನು ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ಅತಿಥಿಗಳಾದ  ಶ್ರೀನಿಧಿ ಬೆಂಗಳೂರು, ಬರಹಗಾರ ಹಾಗೂ ನಿರ್ದೇಶಕ ‘Blink’, ‘Jerax’ ಮತ್ತು ‘Video’ ಚಿತ್ರಗಳಿಂದ ಚಿರ ಪರಿಚಿತರಾಗಿದ್ದಾರೆ, ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುತ್ತಾ, “ಒಂದು ಚಿತ್ರವು ಚಿತ್ರಕಥೆಯಿಂದ ಆರಂಭವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ” ಎಂದು ಹೇಳಿದರು. Cinemates 4.0 ನಂತಹ ಸವಾಲುಗಳಲ್ಲಿ ಭಾಗವಹಿಸುವುದರ ಮೂಲಕ ಮಹತ್ವವ ಪಡೆದುಕೊಳ್ಳುವುದು  ಒತ್ತಿ ಹೇಳಿದ ಅವರು, “ನಿಜವಾದ ಸಾಧನೆ ಯಾವಾಗಲೂ ಗೆಲ್ಲುವುದರಲ್ಲಿ ಇರುವುದಿಲ್ಲ; ಭಾಗವಹಿಸುವ ಧೈರ್ಯ ಹೊಂದುವುದು ಮತ್ತು ತಮ್ಮ ಕೆಲಸವನ್ನು ಜನರ ಮುಂದೆ ತರುವುದು ಮುಖ್ಯ. ಅದು 48 ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಾಗಿರಲಿ ಅಥವಾ ಒಂದು ಪೂರ್ಣಪ್ರಮಾಣದ ಚಿತ್ರವಾಗಿರಲಿ, ಈ ಪ್ರಕ್ರಿಯೆ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಆದರೂ, ಒಂದು ಚಿತ್ರವನ್ನು ಸೃಷ್ಟಿಸುವುದು ಜಗತ್ತಿನ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡೆಸಿದರು.

1001830491

JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಶ್ರದ್ಧಾ ಕನ್ವರ್ ಅವರು, “48 ಗಂಟೆಗಳ ಕಿರುಚಿತ್ರ ನಿರ್ಮಾಣ ಸವಾಲು ಮಾನವ ಸೃಜನಶೀಲತೆಯ ಸಂಭ್ರಮವಾಗಿದೆ. ಕಲ್ಪನೆ, ಭಾವನೆ ಮತ್ತು ಕಥೆ ಹೇಳುವ ಕಲೆಗಳು ಅಸಾಮಾನ್ಯ ಸವಾಲುಗಳ ನಡುವೆಯೂ ಇಲ್ಲಿ ಒಂದಾಗುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಮತ್ತಷ್ಟು ಒತ್ತಿ ಹೇಳುತ್ತಾ, “ತಂತ್ರಜ್ಞಾನವು ಚಲನಚಿತ್ರ ನಿರ್ಮಾಣಕ್ಕೆ ನೆರವಾಗಬಹುದು. ಆದರೆ ಮಾನವನ ಕಲ್ಪನೆಯೇ ಸಿನಿಮಾದ ಹಿಂದಿರುವ ಅತ್ಯಂತ ಶಕ್ತಿಶಾಲಿ ಶಕ್ತಿ” ಎಂದರು.

JAIN (ಡೀಮ್ಡ್-ಟು-ಬಿ ಯೂನಿವರ್ಸಿಟಿ)ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರು ಭಾಗವಹಿಸಿದವರನ್ನು ಅಭಿನಂದಿಸುತ್ತಾ, “ಭಾಗವಹಿಸಿದವರು ಹಾಳಾದ ಮೆಮೊರಿ ಕಾರ್ಡ್‌ಗಳು, ಕಳೆದುಹೋದ ಧ್ವನಿಗಳು, ಅನಿರೀಕ್ಷಿತ ಹಿನ್ನೆಲೆ ಶಬ್ದಗಳು ಮತ್ತು ನಿದ್ರಾಹೀನತೆಯಂತಹ ಹಲವು ಸವಾಲುಗಳನ್ನು ಎದುರಿಸಿದರೂ, ಅವರು ಪ್ರಯತ್ನವನ್ನು ನಿಲ್ಲಿಸಲಿಲ್ಲ. ಆ ದೃಢತೆಯೇ ಸಿನಿಮಾದ ನಿಜವಾದ ಅದ್ಭುತ” ಎಂದು ಹೇಳಿದರು. ಅವರು ಮತ್ತಷ್ಟು ಹೇಳುತ್ತಾ , “ನಿರ್ಬಂಧಗಳು ಸೃಜನಶೀಲತೆಯನ್ನು ಮಿತಿಗೊಳಿಸುವುದಿಲ್ಲ; ಬದಲಾಗಿ ಅವು ಸೃಜನಶೀಲತೆಯನ್ನು ಪ್ರೇರೇಪಿಸುತ್ತವೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಚಿತ್ರೀಕರಿಸಲಾದ Swayamwara ಮತ್ತು 51 ಗಂಟೆಗಳಲ್ಲಿ ನಿರ್ಮಿಸಲಾದ, ಪೂರ್ಣಪ್ರಮಾಣದ ಚಿತ್ರವಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿರುವ Vishwaguru ಚಿತ್ರಗಳಿಂದ ಪ್ರೇರಣೆ ಪಡೆಯಲಾಗಿದೆ. ಸರಿಯಾಗಿ 48 ಗಂಟೆಗಳ ಹಿಂದೆ ನಮ್ಮ ಭಾಗವಹಿಸುವವರು ಖಾಲಿ ಪುಟ, ಕೆಲವು ಸೂಚನೆಗಳು ಮತ್ತು ಸಮಯದ ಒತ್ತಡದೊಂದಿಗೆ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ಇಂದು ಅವರು 48 ಗಂಟೆಗಳಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸಿರುವ ಯುವ ಚಲನಚಿತ್ರ ನಿರ್ಮಾಪಕರಾಗಿ ನಮ್ಮ ಮುಂದೆ ನಿಂತಿದ್ದಾರೆ. ಸಾಮಾನ್ಯವಾಗಿ ಪರಿಣಿತರು ಇಂತಹ ಚಿತ್ರ ನಿರ್ಮಾಣಕ್ಕೆ ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳುತ್ತಾರೆ” ಎಂದು ಹೇಳಿದರು.

1001830492

ದೇಶದಾದ್ಯಂತ 25ಕ್ಕೂ ಹೆಚ್ಚು ತಂಡಗಳು Cinemates 4.0 ರಲ್ಲಿ ಭಾಗವಹಿಸಿದ್ದು, ಅವುಗಳಲ್ಲಿ 11 ತಂಡಗಳನ್ನು ತೀರ್ಪುಗಾರರು ಅಂತಿಮ ಹಂತಕ್ಕೆ ಆಯ್ಕೆ ಮಾಡಿದರು. Cinemates 4.0 ಕಾರ್ಯಕ್ರಮದ ಪೂರ್ವಭಾವಿಯಾಗಿ ಐದು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸೆಪ್ಟೆಂಬರ್ 7 ಮತ್ತು 8, 2026 ರಂದು ನಿರ್ದೇಶಕ, ಬರಹಗಾರ ಹಾಗೂ ನಟ ಆದರ್ಶ್ ಈಶ್ವರಪ್ಪ ಅವರು ಕಾರ್ಯಗಾರ ನಡೆಸಿದರು. ನಂತರ ಸೆಪ್ಟೆಂಬರ್ 9ರಿಂದ 11ರವರೆಗೆ ಕನ್ನಡ ರಂಗಭೂಮಿ ಕಲಾವಿದರಾದ  ಚಂದ್ರಕೀರ್ತಿ ಅವರು ಕಾರ್ಯಗಾರ ನಡೆಸಿ,  ವಿದ್ಯಾರ್ಥಿಗಳಿಗೆ ಚಿತ್ರಕಥೆ ಬರವಣಿಗೆ, ಕಥೆ ಹೇಳೋವಿಧಾನ , ರಂಗಭೂಮಿ ಮತ್ತು ದೃಶ್ಯ ಅಭಿವ್ಯಕ್ತಿಯ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡಿದರು.

ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಆಯೋಜಿಸಲಾದ Cinemates 4.0, ಸಿನಿಮಾ ಪ್ರೇಮಿಗಳು ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರನ್ನು ಒಂದೆಡೆ ಸೇರಿಸಿ, ಸಿನಿಮಾ, ಸೃಜನಶೀಲತೆ, ಸಂಸ್ಕೃತಿ ಮತ್ತು ಆಲೋಚನೆಗಳ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿತು. ಇದರ ಮುಂದುವರಿದ ಭಾಗವಾಗಿ, ಸೆಪ್ಟೆಂಬರ್ 22, 2026ರಂದು “Mise-en-Scène” ಎಂಬ ಅಂತರ-ಕಾಲೇಜು ಕಾರ್ಯಕ್ರಮ ನಡೆಯಲಿದ್ದು, ಭಯಾನಕ, ವೈಜ್ಞಾನಿಕ ಕಾಲ್ಪನಿಕ , ಹಾಸ್ಯ, ಪ್ರೇಮಕಥೆ, ಥ್ರಿಲ್ಲರ್ ಮತ್ತು ಜೀವನಚರಿತ್ರೆ ಸೇರಿದಂತೆ ವಿವಿಧ ವಿಷಯಗಳ ಮೂಲಕ ಭಾರತೀಯ ಸಿನಿಮಾದ ಸೃಜನಶೀಲ ವೈವಿಧ್ಯತೆಯನ್ನು ಅನಾವರಣಗೊಳಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ