ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರ: ಸಿಟಿ ಲೈಟ್ಸ್
ನಿರ್ದೆಶನ: ದುನಿಯಾ ವಿಜಯ್
ನಿರ್ಮಾಣ:  ವಿಜಯ್ ಮತ್ತು ವಿಕ್ರಮ್ ಆರ್ಯ 
ತಾರಾಗಣ: ವಿನಯ್ ರಾಜ್​ಕುಮಾರ್, ಮೋನಿಷಾ ವಿಜಯ್ ಕುಮಾರ್, ಉಮಾಶ್ರೀ, ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದವರು
ರೇಟಿಂಗ್: 3.5 / 5 ****

ಬೆಂಗಳೂರು ಅದರಲ್ಲೂ ಮೆಜೆಸ್ಟಿಕ್ ಎಂದರೆ ರಾಜಧಾನಿಯ ಕೇಂದ್ರ ಭಾಗ. ರಾಜ್ಯ ಹೊರರಾಜ್ಯದ ನಾನಾ ಜನರು ದಿನನಿತ್ಯ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಎಲ್ಲಾ ಬಗೆಯ ವ್ಯಾಪಾರ ವ್ಯವಹಾರಗಳು ನಡೆಯುತ್ತದೆ. ಹಗಲೆಲ್ಲ ಒಂದು ರೀತಿಯಲ್ಲಿ ಇದ್ದರೆ ರಾತ್ರಿಯಲ್ಲಿ ಮತ್ತೊಂದು ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ಇಂತಹಾ ವೈಚಿತ್ರ ಲೋಕವನ್ನು ದುನಿಯಾ ವಿಜಯ್ ನಿರ್ದೇಶನದ "ಸಿಟಿ ಲೈಟ್ಸ್" ಚಿತ್ರ ತೋರಿಸಿದೆ.
ಮೆಜೆಸ್ಟಿಕ್ ಬಗ್ಗೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ತೋರಿಸಲಾಗಿದೆ. ಆದರೆ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಮೆಜೆಸ್ಟಿಕ್ ಏರಿಯಾದ ಇನ್ನೊಂದು ಕರಾಳ ಮುಖವನ್ನು ತೆರೆದಿಡಲಾಗಿದೆ  'ಸಲಗ’ ಹಾಗೂ ‘ಭೀಮ’ ಸಿನಿಮಾಗಳ ನಂತರ ಅವರು ನಿರ್ದೇಶಿಸಿದ ಸಿನಿಮಾ 'ಸಿಟಿ ಲೈಟ್ಸ್ ' ವಿಶೇಷ ಎಂದರೆ ಈ ಚಿತ್ರದ ಮೂಲಕ ವಿಜಯ್ ಅವರ ಪುತ್ರಿ ಮೋನಿಕಾ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ.
ಊರಿನಿಂದ ಕೆಲಸ ಹುಡುಕಿಕೊಂಡು ಮೆಜೆಸ್ಟಿಕ್​ಗೆ ಬರುವ ಶಿವ ( ವಿನಯ್ ರಾಜ್ ಕುಮಾರ್)  ಗೆ ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತವೆ ಈ ನಡುವೆ ವೇಶ್ಯಾವಾಟಿಕೆಗೆ ಸಿಲುಕುವ ಅಮಾಯಕ ಯುವತಿ ( ಮೋನಿಕಾ ವಿಜಯ್) ಪರಿಚಯ ಆಗಿ ಅವರಿಬ್ಬರ ಪ್ರೀತಿ ಪ್ರಾರಂಭ ಆಗುತ್ತದೆ. ಅಲ್ಲಿಂದ ಮುಂದೆ ಏನು ಎನ್ನುವುದು ' ಸಿಟಿ ಲೈಟ್ಸ್ ' ಸಿನಿಮಾ ನೋಡಿ ನೀವು ತಿಳಿಯಬೇಕು.
ಲವ್ ಸ್ಟೋರಿ, ತೃತೀಯ ಲಿಂಗಿಗಳ ತಳಮಳ, ಪುಡಿ ರೌಡಿಗಳ ಅಟ್ಟಹಾಸ, ರಾಜಕೀಯದವರ ಭ್ರಷ್ಟಾಚಾರ, ಪೊಲೀಸರ ಕಳ್ಳಾಟ, ವೇಶ್ಯೆಯರ ಬದುಕಿನ ಸಂಕಟ ಸೇರಿದಂತೆ ಹಲವಾರು ವಿಷಯಗಳು ಇಲ್ಲಿವೆ. ಲವ್, ಸೆಂಟಿಮೆಂಟ್, ಕ್ರೈಂ ಹಾಗೂ ಆ್ಯಕ್ಷನ್, ಕಾಮಿಡಿ ಎಲ್ಲಾ ಬೆರೆತಿರುವ ಕಥೆ ಇದು.

1001830479

ಪಾತ್ರದ ವಿಷಯ ಬಂದರೆ ವಿನಯ್ ರಾಜ್ ಕುಮಾರ್ ಎಂದಿನಂತೆ ಸಹಜವಾಗಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೋನಿಕಾ ತಮ್ಮ ಮೊದಲ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಯಶಸ್ವಿ ಆಗಿದ್ದಾರೆ. ಇನ್ನು ಉಮಾಶ್ರೀ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಯಾವ ಪಾತ್ರಗಳನ್ನೂ ಅತಿಯಾಗಿ ವಿಜೃಂಭಿಸದೆ ಕತೆಗೆ ಎಷ್ಟು ಅಗತ್ಯವೋ ಅಷ್ಟೇ ಮಹತ್ವ ಕೊಡಲಾಗಿದೆ .
ತಾಂತ್ರಿಕ ವಿಷಯದಲ್ಲಿ ಹೇಳಬೇಕೆಂದರೆ ಚರಣ್ ರಾಜ್ ಅವರ ಸಂಗೀತ, ಶಿವ ಸೇನಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಗಮನ ಸೆಳೆದಿದೆ.
ಕೆಲವು ಕಡೆ ಬೇರೆ ಭಾಷೆಯ ಸಂಭಾಷಣೆ ಬಂದಾಗ ಕನ್ನಡದ ಸಬ್ ಟೈಟಲ್ಸ್ ಬರುತ್ತೆ. ಬಹುಶಃ ಏನೋ ತಾಂತ್ರಿಕ ದೋಷದಿಂದ ಕನ್ನಡ ಅಕ್ಷರಗಳ ಕೊಂಬು ದೀರ್ಘ ಒತ್ತಕ್ಷರಗಳೆಲ್ಲ ಯದ್ವಾತದ್ವ ಆಗಿ ವಿಚಿತ್ರವಾಗಿ ಕಾಣಿಸುತ್ತೆ. ಅಷ್ಟೆಲ್ಲ ಶ್ರಮವಹಿಸಿ ಸಿನಿಮಾ ಮಾಡಿರುವ ಚಿತ್ರತಂಡದವರು‌ ನಮ್ಮ ಕನ್ನಡ ಅಕ್ಷರಗಳ ಸಬ್ ಟೈಟಲ್ಸ್ ಬಗ್ಗೆ ಗಮನಹರಿಸದೆ ಇರೋದು ವಿಷಾದನೀಯ.
ಒಟ್ಟಿನಲ್ಲಿ ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಮೆಟ್ರೊ ಸಿಟಿ, ಸ್ಮಾರ್ಟ್ ಸಿಟಿ ಎಂದೆಲ್ಲ ವೈಭವದ ಪೋಷಾಕು ಧರಿಸಿರುವ ಬೆಂಗಳೂರಿಗೆ ಆ ಪೋಷಾಕಿನ ಒಳಗೊಂದು ಆಡಂಬರವಿಲ್ಲದ ಸರಳ ಸ್ನಿಗ್ಧ ಸೌಂದರ್ಯವಿದೆ; ಭೂಗತ ಲೋಕದ ಕರಾಳತೆಯೂ ಇದೆ. ಅವೆರಡರ ವೈರುಧ್ಯವನ್ನ ಸಮಾನವಾಗಿ ತೆರೆದಿಡುವ ಚಿತ್ರ 'ಸಿಟಿ ಲೈಟ್ಸ್'.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ