ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಗೋವಾದ ಪಣಜಿ ಪೊಲೀಸರು ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 194 ರ ಅಡಿ ಅಸಹಜ ಸಾವು (UD) ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ನಾನಾ ಪಾಟೇಕರ್ ಅವರು ಡೋನಾ ಪೌಲಾದ ಓಷನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ಬಾಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ.

ನಾನಾ ಪಾಟೇಕರ್ ಸಾವಿಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿರುವ ಗೋವಾ ಪೊಲೀಸರು, ಪಿಎಸ್‌ಐ ನಿತಿನ್ ನಾಯಕ್ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಗುರುವಾರ ರಾತ್ರಿ ಪುಣೆಯ ಡಾಂಜೆಯಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ.

ಅಂತ್ಯಕ್ರಿಯೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್, “ನಾನಾ ಸಾಹೇಬ್ ಅವರಂತಹ ವ್ಯಕ್ತಿ ಎಂದಿಗೂ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗುವುದಿಲ್ಲ; ಅವರ ಸಾಧನೆಗಳು ಅವರನ್ನು ಅಮರರನ್ನಾಗಿ ಮಾಡಿವೆ. ಪ್ರತಿಯೊಬ್ಬರೂ ಒಗ್ಗೂಡಿ ಜಾಗತಿಕ ಮಟ್ಟದಲ್ಲಿ ಧರ್ಮದ ಅಥವಾ ಸನ್ಮಾರ್ಗದ ಹಾದಿಯಲ್ಲಿ ನಡೆಯಬೇಕು ಎಂದು ಅವರು ಯಾವಾಗಲೂ ಬಯಸಿದ್ದರು. ಭವಿಷ್ಯದ ವಿಷಯಕ್ಕೆ ಬಂದರೆ – ನಾನಾ ಸಾಹೇಬ್ ಬಿಟ್ಟುಹೋದ ದೃಷ್ಟಿಕೋನವನ್ನು ಮುಂದುವರಿಸಿಕೊಂಡು ಹೋಗುವುದೇ ತಾವು ಮುಂದಿನ ಜೀವನವನ್ನು ರೂಪಿಸಿಕೊಳ್ಳುವ ವಿಧಾನವಾಗಿದೆ” ಎಂದು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ