ಎಂದಿನ ಮಾಮೂಲಿ ಅಡುಗೆ ಮಾಡಿ ಬೇಸರಗೊಂಡಿದ್ದೀರಾ…..? ಮಕ್ಕಳು ಹೊಸತೇನಾದರೂ ಬೇಕೆಂದು ಡಿಮ್ಯಾಂಡ್‌ಮಾಡಿದಾಗ, ಈ ರೀತಿ ವೆಸ್ಟರ್ನ್‌ ರೆಸಿಪೀಸ್‌ ಟ್ರೈ ಮಾಡಬಾರದೇಕೆ…..?

ಬಟರ್‌ ಪನೀರ್‌ ಲಸಾನಿಯಾ

Buter-Paneer-Lagania

ಸಾಮಗ್ರಿ : 10 ಲಸಾನಿಯಾ ಶೀಟ್‌, (ರೆಡಿಮೇಡ್‌ ಲಭ್ಯ), 300 ಗ್ರಾಂ ತುರಿದ ಪನೀರ್‌, 400 ಮಿ.ಗ್ರಾಂ, ಮಖನೀ ಸಾಸ್‌, 200 ಮಿ.ಗ್ರಾಂ ಕ್ರೀಂ, 150 ಗ್ರಾಂ ತುರಿದ ಮೋಜರೆಲಾ ಚೀಸ್‌, 4 ಚಮಚ ಬೆಣ್ಣೆ, ತುಸು ಕಸೂರಿಮೇಥಿ, ಉಪ್ಪು, ವೈಟ್‌ ಪೆಪ್ಪರ್‌, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲೇ ಓವನ್‌ ನ್ನು 180 ಡಿಗ್ರಿ ಶಾಖಕ್ಕೆ ಬಿಸಿ ಮಾಡಿಡಿ. 20 20 ಸೆಂ.ಮೀ.ನ ಬೇಕಿಂಗ್‌ ಡಿಶ್ಶ ನ್ನು ಬೆಣ್ಣೆಯಿಂದ ಸವರಿಡಿ. ಲಸಾನಿಯಾ ಶೀಟ್ಸ್ ಪ್ಯಾಕೆಟ್‌ ಮೇಲೆ ಆದೇಶಿಸಿರುವಂತೆ ಬಿಸಿ ನೀರಿಗೆ ಹಾಕಿ ಅದನ್ನು ಬೇಯಿಸಿ, ನೀರನ್ನು ಬಸಿದಿಡಿ. ಒಂದು ಬಾಣಲೆಯಲ್ಲಿ ಬೆಣ್ಣೆ, ಮಖನೀ ಸಾಸ್‌ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಕ್ರೀಂ, ಕಸೂರಿಮೇಥಿ, ಉಪ್ಪು, ಪೆಪ್ಪರ್‌ ಎಲ್ಲಾ ಸೇರಿಸಿ. ಇದೀಗ ಲೇಯರಿಂಗ್‌ ಆರಂಭಿಸಿ. ಎಲ್ಲಕ್ಕೂ ಮೊದಲು ಸಾಸ್‌ ಬರಲಿ. ನಂತರ ಇದರ ಮೇಲೆ 3 ಶೀಟ್ಸ್ ಬರಲಿ. ನಂತರ ಇದರ ಮೇಲೆ ಅರ್ಧರ್ಧ ಪನೀರ್‌ ಚೀಸ್‌ ಹರಡಿರಿ. ಇದೇ ಕ್ರಮವನ್ನು ಮತ್ತೆ ರಿಪೀಟ್‌ ಮಾಡಿ. ಕೊನೆಯಲ್ಲಿ ಇದರ ಮೇಲ್ಭಾಗಕ್ಕೆ ಉಳಿದ ಸಾಸ್‌, ಚೀಸ್‌ ಹರಡಿರಿ. ಇದನ್ನು ಅರ್ಧ ಗಂಟೆ ಬೇಕ್‌ ಮಾಡಿ. ಮೇಲ್ಭಾಗದಿಂದ (ಚಿತ್ರದಲ್ಲಿರುವಂತೆ) ಹೊಂಬಣ್ಣ ಕಾಣಿಸುತ್ತದೆ, ಬಬಲ್ಸ್ ಇರಬಾರದು. ಇದನ್ನು ಹೊರತೆಗೆದು ಆರಲು ಬಿಡಿ. ಅದರ ಮೇಲೆ ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

ಸಂಡೇ ಸ್ಪೆಷಲ್ ಗೆ ತೊಡಗಿದ್ದೀರಾ….? ಹಾಗಾದರೆ ಈ ಸಲ ಬಾಯಲ್ಲಿ ನೀರೂರಿಸುವ ಈ ಬಟರ್‌ ಪನೀರ್‌ ಲರನಿಯಾ ತಯಾರಿಸಿ ಎಲ್ಲರ ಮೆಚ್ಚುಗೆ ಪಡೆಯಿರಿ……!

 

ಪಾವ್ ‌ಭಾಜಿ ಸ್ಲೈಡರ್ಸ್

Pav-Bhaji‌

ಸಾಮಗ್ರಿ : 1-2 ಸಣ್ಣ  ಸ್ಲೈಡರ್‌ ಬನ್ಸ್, 250 ಗ್ರಾಂ ಪಾವ್ ಭಾಜಿ ಮಸಾಲ ಮ್ಯಾಶ್‌ (ರೆಡಿಮೇಡ್‌ ಪ್ಯಾಕ್‌, ತರಕಾರಿ + ಮಸಾಲೆ), 50 ಗ್ರಾಂ ಬೆಣ್ಣೆ, 50 ಗ್ರಾಂ ಶೇಡರ್‌ ಚೀಸ್‌ ಸ್ಲೈಸ್‌ ನಲ್ಲಿ ಕಟ್‌ ಮಾಡಿ, 2 ಚಮಚ ಪುದೀನಾ ಚಟ್ನಿ, 4 ಚಮಚ ಸೇಲ್‌, ಅಲಂಕರಿಸಲು ಒಂದಿಷ್ಟು ಕೊ.ಸೊಪ್ಪು.

ವಿಧಾನ : ಗುಂಡಗೆ ಬನ್ಸ್ ಕತ್ತರಿಸಿ. ಅದರ ಒಳಭಾಗಕ್ಕೆ ಬೆಣ್ಣೆ ಸವರಿಡಿ. ಇದನ್ನು ಟೋಸ್ಟ್ ಮಾಡಿ. ಪಾವ್ ಭಾಜಿ ಮ್ಯಾಶ್‌ ನ್ನು ಮತ್ತೆ ಬಿಸಿ ಮಾಡಿ. ಅಗತ್ಯಕ್ಕೆ ತಕ್ಕಂತೆ ಉಪ್ಪು, ಮಸಾಲೆ ಅಡ್ಜಸ್ಟ್ ಮಾಡಿ. ಪ್ರತಿ ಬನ್ನಿನ ಕೆಳಭಾಗದಲ್ಲಿ ಪುದೀನಾ ಚಟ್ನಿ ಹರಡಿರಿ. ಅದರ ಮೇಲೆ ತುಸು ಮ್ಯಾಶ್‌ ಬರಲಿ. ಇದರ ಮೇಲೆ ಚೀಸ್‌ ಸ್ಲೈಸ್‌ ಇರಿಸಿ. ಇದರ ಮೇಲೆ ಬೇರೆ ಬನ್‌ ಸ್ಲೈಸ್‌ ಇರಿಸಿ ಕ್ಲೋಸ್ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ ತಕ್ಷಣ ಸವಿಯಲು ಕೊಡಿ.

ಮಾಮೂಲಿ ಬರ್ಗರ್‌, ಪಿಜ್ಜಾ ನಿಮಗೆ ಬೇಸರ ಎನಿಸಿದೆಯೇ? ಒಂದು ಬದಲಾವಣೆಗಾಗಿ ಇಲ್ಲಿನ ಬಟರ್‌ ಕ್ರೀಮೀ ಪಾಸ್ತಾ ತಯಾರಿಸಿ ನೋಡಿ, ಎಲ್ಲರೂ ಮತ್ತಷ್ಟು ಬೇಕೆನ್ನುತ್ತಾರೆ…..!

 

ಪಿಕಲ್ ಪಿಜ್ಜಾ

Achari-Piza

ಸಾಮಗ್ರಿ : 1 ತಾಜಾ ಪಿಜ್ಜಾ ಬೇಸ್‌, 200 ಗ್ರಾಂ  ಈರುಳ್ಳಿ, ಟೊಮೇಟೋದ ಪಿಕಲ್ ಗ್ರೇವಿ, 100 ಗ್ರಾಂ ಮ್ಯಾರಿನೇಟೆಡ್‌ ಪಿಕಲ್, ಒಂದಿಷ್ಟು ಪನೀರ್‌ ಕ್ಯೂಬ್ಸ್ 1-2 ಈರುಳ್ಳಿ (ಬಿಲ್ಲೆಗಳಾಗಿಸಿ), 100 ಗ್ರಾಂ ತುರಿದ ಮೊಜರೆಲಾ ಚೀಸ್‌, ತುಸು ಪುದೀನಾ ಚಟ್ನಿ, ಅಲಂಕರಿಸಲು ಒಂದಿಷ್ಟು ಕೊ.ಸೊಪ್ಪು.

ವಿಧಾನ : ಮೊದಲೇ ಓವನ್‌ ನ್ನು 220 ಡಿಗ್ರಿ ಶಾಖದಲ್ಲಿ ಬಿಸಿ ಮಾಡಿಕೊಳ್ಳಿ. ಪಿಜ್ಜಾ ಬೇಸ್‌ ಮೇಲೆ ಪಿಕಲ್ ಗ್ರೇವಿ ಹರಡಿರಿ. ಇದರ ಮೇಲೆ ಪನೀರ್‌ ಕ್ಯೂಬ್ಸ್, ಈರುಳ್ಳಿ ಬಿಲ್ಲೆ, ಮೊಜರೆಲಾ ಚೀಸ್‌ ಹರಡಿರಿ. 12-15 ನಿಮಿಷ ಬೇಕ್‌ ಮಾಡಿ. ಆಗ ಬೇಸ್‌ ಕ್ರಿಸ್ಪಿಯಾಗಿ, ಚೀಸ್‌ ಕರಗಿ ಹೊಂಬಣ್ಣಕ್ಕೆ ತಿರುಗುತ್ತದೆ. ಇದರ ಮೇಲೆ ಪುದೀನಾ ಚಟ್ನಿ ಉದುರಿಸಿ, ಕೊ.ಸೊಪ್ಪಿನಿಂದ ಅಲಂಕರಿಸಿ ಸವಿಯಲು ಕೊಡಿ.

ಮಸಾಲ ಮೇಕ್‌ ಚೀಸ್

Masala-Mac-Cheese‌

ಸಾಮಗ್ರಿ : 250 ಗ್ರಾಂ ಎಲ್ಬೋ ಮ್ಯಾಕ್ರೋನಿ, ಅರ್ಧ ಸೌಟು ಬೆಣ್ಣೆ, ಹೆಚ್ಚಿದ 1 ದೊಡ್ಡ ಈರುಳ್ಳಿ, 1-2 ಹಸಿಮೆಣಸು, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, 300 ಮಿ.ಲೀ. ಹಾಲು, ಒಂದಿಷ್ಟು ತುರಿದ ಶೆಡಾರ್‌ ಚೀಸ್‌, ಬ್ರೆಡ್‌ ಕ್ರಂಬ್ಸ್.

ವಿಧಾನ : ಕುದಿ ನೀರಿಗೆ ಮ್ಯಾಕ್ರೋನಿ ಹಾಕಿ ಚೆನ್ನಾಗಿ ಬೇಯಿಸಿ. ಇದರ ನೀರು ಬೇರ್ಪಡಿಸಿ. ಪ್ಯಾನಿನಲ್ಲಿ ಬೆಣ್ಣೆ ಬಿಸಿ ಮಾಡಿ. ನಂತರ ಇದಕ್ಕೆ ಹಸಿ ಮೆಣಸು, ಈರುಳ್ಳಿ ಹಾಕಿ ಬಾಡಿಸಿ. ನಂತರ ಅರಿಶಿನ, ಗರಂಮಸಾಲ, ಉಪ್ಪು, ಖಾರ ಹಾಕಿ ಮತ್ತೆ 2 ನಿಮಿಷ ಕೆದಕಿರಿ. ನಂತರ ಇದಕ್ಕೆ ಹಾಲು, ಚೀಸ್‌ ಬೆರೆಸಿ. ಸತತ ಕೈಯಾಡಿಸಿ, ಸಾಸ್‌ ಗಟ್ಟಿ ಆಗುತ್ತದೆ. ನಂತರ ಇದಕ್ಕೆ ಬೆಂದ ಮ್ಯಾಕ್ರೋನಿ ಹಾಕಿ ಚೆನ್ನಾಗಿ ಬೆರೆಸಿರಿ. ಈ ಮಿಶ್ರಣವನ್ನು ಒಂದು ಬೇಕಿಂಗ್‌ ಡಿಶ್‌ ಗೆ ಹಾಕಿಡಿ, ಅದರ ಮೇಲೆ ಬ್ರೆಡ್‌ ಕ್ರಂಬ್ಸ್ ಉದುರಿಸಿ. ಇದನ್ನು ಓವನ್ನಿನಲ್ಲಿರಿಸಿ ಹೊಂಬಣ್ಣ ಬರುವವರೆಗೂ ಬೇಕ್‌ ಮಾಡಿ, ನಂತರ ಬಿಸಿಯಾಗಿ ಸವಿಯಲುಕೊಡಿ.

 

ವೆಸ್ಟರ್ನ್‌ ರೆಸಿಪೀಸ್‌ ನಲ್ಲಿ ಈ ಹೊಸ ಬಗೆಯ ಶೇರ್ವನ್‌ ನೂಡಲ್ಸ್ ಹಾಗೂ ಮಸಾಲಾ ಮೇಕ್‌ಚೀಸ್‌ಟ್ರೈ ಮಾಡಿ ನೋಡಿ…..!

ಬಟರ್‌ ಕ್ರೀಮೀ ಕಾರ್ಬೋನಾರಾ

Malai-Makhni-Carbonara

ಸಾಮಗ್ರಿ : 200 ಗ್ರಾಂ ಫೆಟ್ಟು ಚೀನೀ ಪಾಸ್ತಾ, 4-5 ಚಮಚ ಬೆಣ್ಣೆ, ಒಂದಿಷ್ಟು ಜಜ್ಜಿದ ಬೆಳ್ಳುಳ್ಳಿ ಹರಳು, 100 ಮಿ.ಲೀ. ಬಟರ್‌ ಕ್ರೀಮಿ ಸಾಸ್‌, ತುಸು ಪಾಸ್ತಾ ಬೆಂದ ನೀರು, 2 ಮೊಟ್ಟೆಗಳ ಬಿಳಿ ಭಾಗ, ತುರಿದ ಪ್ಯಾರಾಮಿಶನ್‌ ಚೀಸ್‌, ಉಪ್ಪುಮೆಣಸು, ಕಸೂರಿಮೇಥಿ.

ವಿಧಾನ : ಪಾಸ್ತಾ ತುಸು ಸುಮಾರಾಗಿರುವಂತೆ ಬೇಯಿಸಿಡಿ. ಇದರ ನೀರು ತೆಗೆದಿಡಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ ಹಾಕಿ ಬಾಡಿಸಿ, ಕೆಳಗಿಳಿಸಿ. ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ, ಬಟರ್‌ ಕ್ರೀಮೀ ಸಾಸ್‌, ಪಾಸ್ತಾ ನೀರು, ಪ್ಯಾರಾಮೀಶನ್‌ ಚೀಸ್‌ ಹಾಕಿ, ಇದು ಕ್ರೀಮೀ ಸಾಸ್‌ ಆಗುವಂತೆ ಗೊಟಾಯಿಸಿ. ಈ ಸಾಸ್‌ ಗೆ ಬೆಂದ ಪಾಸ್ತಾ ಸೇರಿಸಿ, ಚೆನ್ನಾಗಿ ಟಾಸ್‌ ಮಾಡಿ. ಕೊನೆಗೆ ರುಚಿಗೆ ತಕ್ಕಂತೆ ಉಪ್ಪು, ಮೆಣಸು ಸೇರಿಸಿ. ಕಸೂರಿಮೇಥಿ, ಗ್ರೇಟೆಡ್‌ ಪ್ಯಾರಾಮಿಶನ್‌ ಚೀಸ್‌ ನಿಂದ ಅಲಂಕರಿಸಿ ಸವಿಯಲು ಕೊಡಿ.

ಚಾಟ್‌ ಗಳ ರಾಜ ಎನಿಸಿದ ಮುಂಬೈ ಮಹಾನಗರಿಯ, ಈ ಹೊಸ ಪರಿಯ ಪಾವ್ ‌ಭಾಜಿ ಸ್ಲೈಡರ್ಸ್‌ ತಯಾರಿಸಿ, ಮಕ್ಕಳ ಬರ್ತ್ ಡೇಗೆ ಸ್ಪೆಷ್‌ ಟಚ್‌ ಕೊಡಿ……!

ಶೇಝ್ವಾನ್‌ ನೂಡಲ್ಸ್

Schezwan-Noodle

ಸಾಮಗ್ರಿ : 200 ಗ್ರಾಂ ಹಕ್ಕಾ ನೂಡಲ್ಸ್ (ರೆಡಿಮೇಡ್‌), 4 ಚಮಚ ಎಣ್ಣೆ, 1-2 ಈರುಳ್ಳಿ (ಬಿಲ್ಲೆಗಳಾಗಿಸಿದ್ದು), ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ ಹರಳು, ಶುಂಠಿ, ಬಿಲ್ಲೆಗಳಾಗಿಸಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶೇಝ್ವಾನ್‌ ಸಾಸ್‌, ಸೋಯಾ ಸಾಸ್‌, ರೈಸ್‌ ವಿನಿಗರ್‌, ಅಲಂಕರಿಸಲು ಹೆಚ್ಚಿದ ಈರುಳ್ಳಿ.

ವಿಧಾನ : ಪ್ಯಾಕೆಟ್‌ ನಲ್ಲಿ ತಿಳಿಸಿರುವಂತೆ ನೂಡಲ್ಸ್ ಬೇಯಿಸಿ. ನಂತರ ನೀರನ್ನು ಬೇರ್ಪಡಿಸಿ, ಇದಕ್ಕೆ ತುಸು ಎಣ್ಣೆ ಬೆರೆಸಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನೂ ಒಂದೊಂದಾಗಿ ಹಾಕಿ ಬಾಡಿಸಿ. ನಂತರ ಎಲ್ಲಾ ಬಗೆಯ ಸಾಸ್‌, ಉಪ್ಪು, ಮೆಣಸು ಹಾಕಿ ಬೆರೆಸಿಕೊಳ್ಳಿ. ಇದನ್ನು ಕೆಳಗಿಳಿಸಿ, ಈರುಳ್ಳಿಯಿಂದ ಅಲಂಕರಿಸಿ ಸವಿಯಲು ಕೊಡಿ.

ಕರ್ಜಿಕಾಯಿ

ಸಾಮಗ್ರಿ : 1-1 ಕಪ್‌ ಹುರಿಗಡಲೆ, ಬಿಳಿ ಎಳ್ಳು, ಕೊಬ್ಬರಿ ತುರಿ, ಕಾಲು ಕಪ್‌ ಗಸಗಸೆ, 4 ಅಚ್ಚು ಬೆಲ್ಲ ಅಥವಾ 3 ಕಪ್‌ ಸಕ್ಕರೆ, 4 ಏಲಕ್ಕಿ, 1 ಕಪ್‌ ಮೈದಾ ಅಥವಾ 1 ಕಪ್‌ ಚಿರೋಟಿ ರವೆ, ಕರಿಯಲು ಎಣ್ಣೆ.

ವಿಧಾನ : ಎಳ್ಳು, ಗಸಗಸೆಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಎಳ್ಳು, ಗಸಗಸೆ, ಹುರಿಗಡಲೆ ಎಲ್ಲವನ್ನೂ ಬೇರೆ ಬೇರೆಯಾಗಿ ಮಿಕ್ಸಿಯಲ್ಲಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಬೆಲ್ಲದ ಪುಡಿ ಹಾಕಿ ಬೆರೆಸಿಕೊಳ್ಳಿ. ಮೈದಾ ಹಿಟ್ಟಿಗೆ ಎರಡು ಸ್ಪೂನ್‌ ತುಪ್ಪ, ಚಿಟಕಿ ಉಪ್ಪು ಮತ್ತು ನೀರು ಹಾಕಿ ಗಟ್ಟಿಯಾಗಿ ಕಿವುಸಿಕೊಳ್ಳಿ. ನಂತರ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ತೆಳುವಾಗಿ ಪೂರಿಯಂತೆ ಲಟ್ಟಿಸಿ, ನಡುವೆ ಹೂರಣ ಇರಿಸಿ. ಕರ್ಜಿಕಾಯಿ ಮೋಲ್ಡ್ ‌ಗೆ ಹಾಕಿ ಒತ್ತಿರಿ.

ನಂತರ ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ, ಇದು ತಿನ್ನಲು ಬಲು ರುಚಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ