1999ರಲ್ಲಿ ಸೂಪರ್ ಹಿಟ್ ಮೂವಿ ಉಪೇಂದ್ರದಲ್ಲಿ ಕೀರ್ತಿ ಅನ್ನೋ ಪಾತ್ರದಲ್ಲಿ ಮಿಂಚಿದ್ದ.. ಕನ್ನಡದ ಸೂಪರ್ ಸ್ಟಾರ್​ ಉಪೇಂದ್ರ ಜೊತೆ ಆಕ್ಟ್ ಮಾಡಿ ಕನ್ನಡಿಗರಿಗೆ ಸಖತ್ ಕಿಕ್ ಕೊಟ್ಟಿದ್ದ.. ಕೆಜಿಎಫ್ – ಚಾಪ್ಟರ್​ 2​​ ನಲ್ಲಿ ರಮಿಕಾ ಸೇನ್​​​ ಆಗಿ ರಗಡ್​ ಪಾತ್ರ ನಿರ್ವಹಿಸಿ ಇಡೀ ಕರುನಾಡ ಮನಗೆದ್ದಿದ್ದ ಬಾಲಿವುಡ್​ ನ ಖ್ಯಾತ ನಟಿ ರವೀನಾ ಟಂಡನ್​ ಕನ್ನಡಕ್ಕೆ ಮತ್ತೆ ರಿಟರ್ನ್​ ಆಗಿದ್ದಾರೆ. ಆದ್ರೆ, ಈ ಬಾರಿ ಆ ದಿ ಮೋಸ್ಟ್ ಪವರ್​ ಫುಲ್ ಪಾತ್ರವಲ್ಲ. ಬದಲಿಗೆ ಲವ್ಲಿ ಟೀಚರಮ್ಮನ ಪಾತ್ರದಲ್ಲಿ ಅನ್ನೋದು ವಿಶೇಷ. ಬಾಲಿವುಡ್​ ನ ಹಲವು ಫಿಲ್ಮ್ ಗಳಲ್ಲಿ ಗ್ಲಾಮರ್ ಲುಕ್ ನಲ್ಲಿ ಬಾಲಿವುಡ್ ನ ಸಿನಿರಸಿಕರನ್ನ ಸೆಳೆದಿದ್ದ ರವೀನಾ ಸೀದಾ ಸಾದಾ ಟೀಚರಮ್ಮನ ಪಾತ್ರದಲ್ಲಿ ರೀ ಎಂಟ್ರಿ ಕೊಟ್ರೂ ಆ ಸೀರೆಯಲ್ಲೇ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.ನಿರ್ದೇಶಕ ಎಂ.ಜಿ ಶ್ರೀನಿವಾಸ್ ನಿರ್ದೇಶನದ ಎ ಫಾರ್ ಆನಂದ್​​ ನಲ್ಲಿ ರವೀನಾ ಟಂಡನ್​ ನಟಿಸುತ್ತಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಅಂದ್ರೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರೋದು. ನಟ ಶಿವರಾಜ್ ಕುಮಾರ್ ಮುಖ್ಯ ಪಾತ್ರವಿರುವ ಈ ಸಿನಿಮಾದಲ್ಲಿ ರವೀನಾ ಶಿಕ್ಷಕಿಯಾಗಿ ನಟಿಸುತ್ತಿದ್ದಾರೆ. ರವೀನಾ ಟಂಡನ್​ ಮತ್ತು ಶಿವಣ್ಣ ಸ್ಕ್ರೀನ್ ಶೇರ್ ಮಾಡ್ತಿರೋದು ಇದೇ ಮೊದಲು. ಈಗಾಗಲೇ ಎ ಫಾರ್ ಆನಂದ್​ ಚಿತ್ರಕ್ಕೆ ಸೇರಿಕೊಂಡಿದ್ದು, ಫಸ್ಟ್​ ದಿನವೇ ಸೆಟ್​​ ಗೆ ಆಗಮಿಸಿದ್ದಾರೆ.ಮೊದಲ ದಿನವೇ ಶೂಟಿಂಗ್​​​ ಮುಗಿದಿದ್ದು, ಶಿವಣ್ಣ ಜೊತೆಗಿನ ಸೀನ್ ಗಳಲ್ಲಿ ರವೀನಾ ಟಂಡನ್​ ಕಾಟನ್​ ಸೀರೆಯುಟ್ಟು ಚಂದದ ಟೀಚರ್​ ಪಾತ್ರದಲ್ಲಿ ಸುಂದರವಾಗಿಯೇ ಮಿಂಚುತ್ತಿದ್ದಾರೆ. ಅಸಲಿಗೆ ರವೀನಾ ಟಂಡನ್​ ಪಾತ್ರಕ್ಕೆ ಈ ಹಿಂದೆ ನಟಿ ಮಾಧುರಿ ದೀಕ್ಷಿತ್​​​​ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಅವರ ಬದಲಿಗೆ ರವೀನಾ ಸೆಲೆಕ್ಟ್ ಆಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಖುಷಿ ತಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ