1999ರಲ್ಲಿ ಸೂಪರ್ ಹಿಟ್ ಮೂವಿ ಉಪೇಂದ್ರದಲ್ಲಿ ಕೀರ್ತಿ ಅನ್ನೋ ಪಾತ್ರದಲ್ಲಿ ಮಿಂಚಿದ್ದ.. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಜೊತೆ ಆಕ್ಟ್ ಮಾಡಿ ಕನ್ನಡಿಗರಿಗೆ ಸಖತ್ ಕಿಕ್ ಕೊಟ್ಟಿದ್ದ.. ಕೆಜಿಎಫ್ – ಚಾಪ್ಟರ್ 2 ನಲ್ಲಿ ರಮಿಕಾ ಸೇನ್ ಆಗಿ ರಗಡ್ ಪಾತ್ರ ನಿರ್ವಹಿಸಿ ಇಡೀ ಕರುನಾಡ ಮನಗೆದ್ದಿದ್ದ ಬಾಲಿವುಡ್ ನ ಖ್ಯಾತ ನಟಿ ರವೀನಾ ಟಂಡನ್ ಕನ್ನಡಕ್ಕೆ ಮತ್ತೆ ರಿಟರ್ನ್ ಆಗಿದ್ದಾರೆ. ಆದ್ರೆ, ಈ ಬಾರಿ ಆ ದಿ ಮೋಸ್ಟ್ ಪವರ್ ಫುಲ್ ಪಾತ್ರವಲ್ಲ. ಬದಲಿಗೆ ಲವ್ಲಿ ಟೀಚರಮ್ಮನ ಪಾತ್ರದಲ್ಲಿ ಅನ್ನೋದು ವಿಶೇಷ. ಬಾಲಿವುಡ್ ನ ಹಲವು ಫಿಲ್ಮ್ ಗಳಲ್ಲಿ ಗ್ಲಾಮರ್ ಲುಕ್ ನಲ್ಲಿ ಬಾಲಿವುಡ್ ನ ಸಿನಿರಸಿಕರನ್ನ ಸೆಳೆದಿದ್ದ ರವೀನಾ ಸೀದಾ ಸಾದಾ ಟೀಚರಮ್ಮನ ಪಾತ್ರದಲ್ಲಿ ರೀ ಎಂಟ್ರಿ ಕೊಟ್ರೂ ಆ ಸೀರೆಯಲ್ಲೇ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಎಂ.ಜಿ ಶ್ರೀನಿವಾಸ್ ನಿರ್ದೇಶನದ ಎ ಫಾರ್ ಆನಂದ್ ನಲ್ಲಿ ರವೀನಾ ಟಂಡನ್ ನಟಿಸುತ್ತಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಅಂದ್ರೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರೋದು. ನಟ ಶಿವರಾಜ್ ಕುಮಾರ್ ಮುಖ್ಯ ಪಾತ್ರವಿರುವ ಈ ಸಿನಿಮಾದಲ್ಲಿ ರವೀನಾ ಶಿಕ್ಷಕಿಯಾಗಿ ನಟಿಸುತ್ತಿದ್ದಾರೆ. ರವೀನಾ ಟಂಡನ್ ಮತ್ತು ಶಿವಣ್ಣ ಸ್ಕ್ರೀನ್ ಶೇರ್ ಮಾಡ್ತಿರೋದು ಇದೇ ಮೊದಲು. ಈಗಾಗಲೇ ಎ ಫಾರ್ ಆನಂದ್ ಚಿತ್ರಕ್ಕೆ ಸೇರಿಕೊಂಡಿದ್ದು, ಫಸ್ಟ್ ದಿನವೇ ಸೆಟ್ ಗೆ ಆಗಮಿಸಿದ್ದಾರೆ.
ಮೊದಲ ದಿನವೇ ಶೂಟಿಂಗ್ ಮುಗಿದಿದ್ದು, ಶಿವಣ್ಣ ಜೊತೆಗಿನ ಸೀನ್ ಗಳಲ್ಲಿ ರವೀನಾ ಟಂಡನ್ ಕಾಟನ್ ಸೀರೆಯುಟ್ಟು ಚಂದದ ಟೀಚರ್ ಪಾತ್ರದಲ್ಲಿ ಸುಂದರವಾಗಿಯೇ ಮಿಂಚುತ್ತಿದ್ದಾರೆ. ಅಸಲಿಗೆ ರವೀನಾ ಟಂಡನ್ ಪಾತ್ರಕ್ಕೆ ಈ ಹಿಂದೆ ನಟಿ ಮಾಧುರಿ ದೀಕ್ಷಿತ್ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಅವರ ಬದಲಿಗೆ ರವೀನಾ ಸೆಲೆಕ್ಟ್ ಆಗಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಖುಷಿ ತಂದಿದೆ.





