– ರಾಘವೇಂದ್ರ ಅಡಿಗ ಎಚ್ಚೆನ್.
ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್ದಾರ್’. ಮಧು ಗೌಡ ಗಂಗೂರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ‘ಕೂಲ್ ಬ್ರದರ್’ ಹಾಡನ್ನು ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದರು. ಈಗಾಗಲೇ ಮಾಸ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಮಂಜು, ಈ ಚಿತ್ರದಲ್ಲಿ ಮತ್ತೊಂದು ಹಂತದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಏನ್ಸಿಯಂಟ್ ಮೂವೀಸ್ ಬ್ಯಾನರ್ ಅಡಿ ಆರ್. ಸಂತೋಷ್ ಕುಮಾರ್ (ಎಸ್ವಿಟಿ) ನಿರ್ಮಿಸಿದ್ದು, ಹರೇಕೃಷ್ಣ ರೆಡ್ಡಿ ಎಸ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಇದೊಂದು ವಿಭಿನ್ನ ಕಥಾನಕ ಒಳಗೊಂಡಿರೋ ಮನರಂಜನಾತ್ಮಕ ಚಿತ್ರ. ನಟ ಶರಣ್, ಶೃತಿ ಅವರ ಸಹೋದರಿಯ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡುತ್ತ ನಾವೆಲ್ಲ ರಾಜಕಾರಣದಲ್ಲಿ ತುಂಬಾ ನಾಟಕ, ಸಿನಿಮಾ ನಡೀತಿರುತ್ತೆ. ನಿರ್ಮಾಪಕ ಸಂತೋಷ್, ಹರಿಕೃಷ್ಣ ನಮ್ಮ ಕ್ಷೇತ್ರದವರೇ, ಅವರಿಗಾಗಿ ನಾನಿಲ್ಲಿಗೆ ಬಂದೆ. ಈ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಟ ಶ್ರೀಮುರಳಿ ಮಾತನಾಡುತ್ತ ಶ್ರೇಯಸ್ ಗೆ ಒಳ್ಳೆಯ ಭವಿಷ್ಯವಿದೆ. ನನಗೆ ಈ ಡಾನ್ಸ್ ನಂಬರ್ ಸಾಂಗಲ್ಲಿ ಆಕ್ಟ್ ಮಾಡಲು ಹೇಳಿದಾಗ ಆಗಲ್ಲ ಎಂದಿದ್ದೆ. ಶ್ರೇಯಸ್ ತುಂಬಾ ಚೆನ್ನಾಗಿ ಸ್ಟೆಪ್ಸ್ ಹಾಕಿದ್ದಾನೆ ಎಂದರು.

ಈವೇಳೆ ಕೆ.ಮಂಜು ಮಾತನಾಡುತ್ತ ಅರ್ಜುನ್ ಜನ್ಯ ಅವರ ಮ್ಯೂಸಿಕ್ ನಲ್ಲಿ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ನಿರ್ಮಾಪಕರಾದ ರಮೇಶ್ ಯಾದವ್, ಮಾಧವ್ ಕಿರಣ್ ಶುಭ ಹಾರೈಸಿದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಶ್ರೇಯಸ್ ನನಗೆ ಬಹಳ ವರ್ಷಗಳ ಸ್ನೇಹಿತ, ಚಂದನ್ ಈ ಹಾಡನ್ನು ನೆಕ್ಸ್ಟ್ ಲೆವೆಲ್ ಗೆ ತಗೊಂಡು ಹೋಗಿದ್ದಾರೆ ಎಂದರು.

ಗಾಯಕ ಚಂದನ್ ಮಾತನಾಡಿ ಶ್ರೇಯಸ್ ಮೊದಲ ಸಿನಿಮಾದಿಂದಲೂ ನಾನು ಹಾಡಿದ್ದೇನೆ. ಸಾಂಗ್ ಸಖತ್ತಾಗಿ ಬಂದಿದೆ ಎಂದರು.
ನಾಯಕ ಶ್ರೇಯಸ್ ಮಾತನಾಡುತ್ತ ಎರಡು ಗಂಟೆ ಕೂತು ಎಂಜಾಯ್ ಮಾಡಿಕೊಂಡು ಹೋಗುವಂಥ ಸಿನಿಮಾ. ಯಾವುದೇ ಮೆಸೇಜ್ ಹೇಳಿಲ್ಲ. ಚಿತ್ರದಲ್ಲಿ 4 ಹಾಡಿದ್ದು, ಇದೊಂದು ಡಾನ್ಸ್ ನಂಬರ್, ಈ ಹಾಡಿಂದ ಪ್ರಚಾರ ಶುರು ಮಾಡಿದ್ದೇವೆ. ಈಗಿನ ಕಾಲದ ಹುಡುಗ ಹುಡುಗಿ ಏನು ಮಾಡ್ತಾರೆ ಅದನ್ನೇ ಸಿನಿಮಾದಲ್ಲಿ ತೋರಿಸಿದ್ದೇವೆ. ಕೀರ್ತಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಲೋಕಿ ಅವರ ಕ್ರೆಡಿಟ್ ಈ ಚಿತ್ರಕ್ಕೆ ತುಂಬಾ ಇದೆ. ನಿರ್ಮಾಪಕ ಸಂತೋಷ್ ಅವರು ನನಗೋಸ್ಕರ ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಿರ್ದೇಶಕ ಮಧುಗೌಡ ಮಾತನಾಡಿ ಇದು ಪಕ್ಕಾ ಕಮರ್ಷಿಯಲ್ ಸಿನಿಮಾ, ನಾಯಕ ಯಾವುದಕ್ಕೂ ಕೇರ್ ಮಾಡದಂಥ ಹುಡುಗ, 80% ಮೈಸೂರಲ್ಲಿ ಕಾಲೇಜ್ ಪೋರ್ಷನ್ ಹಾಗೂ ಬೆಂಗಳೂರು, ಸಕಲೇಶಪುರ, ಮರವಂತೆಯಲ್ಲಿ ಚಿತ್ರೀಕರಿಸಿದ್ದೇವೆ. ಸಂಬಂಧಗಳಿಗೆ ಬೆಲೆ ಕೊಡದಿದ್ದರೆ ಏನಾಗುತ್ತದೆ ಅಂತ ತೋರಿಸಿದ್ದೇವೆ ಎಂದರು. ನಿರ್ಮಾಪಕ ಸಂತೋಷ್ ಮಾತನಾಡಿ ನಮ್ಮದು ರಿಯಲ್ ಎಸ್ಟೇಟ್, ವಾಟರ್ ಸಪ್ಲೈ ಬ್ಯುಸಿನೆಸ್, ನಿರ್ದೇಶಕರು ತುಂಬಾ ಕಷ್ಟಪಟ್ಟಿದ್ದಾರೆ ಎಂದರು. ನಾಯಕಿ ಕೀರ್ತಿಕೃಷ್ಣ, ಖಳನಾಯಕ ಲೋಕಿ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು.

ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ‘ದಿಲ್ ದಾರ್’ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಅರ್ಪಿತ್ ಕೂಡ ಚಿತ್ರದಲ್ಲಿದ್ದಾರೆ.





