ಮಗಳ ಮದುವೆಯ ಸಂಭ್ರಮದಲ್ಲಿ ತಂದೆಯ ಸಾವು..! ಮಗಳ ಬಾಳಿನಲ್ಲಿ ಕತ್ತಲು ಕವಿಯಬಾರದೆಂದು ಸಾವಿನ ಸುದ್ದಿಯನ್ನೇ ಮರೆಮಾಚಿದ ಕುಟುಂಬ!

ಮಗಳ ಮದುವೆ ಎಂದರೆ ಪ್ರತಿಯೊಬ್ಬ ತಂದೆಯ ಬದುಕಿನ ಅತ್ಯಂತ ಮಹತ್ವದ ಕ್ಷಣ. ಮಗಳನ್ನು ಮದುವೆ ಮಂಟಪದಲ್ಲಿ ಕುಳ್ಳಿರಿಸಿ, ಆಕೆಯ ಹೊಸ ಬದುಕಿಗೆ ಆಶೀರ್ವದಿಸಿ, ಕಣ್ಣೀರಿನೊಂದಿಗೆ ಗಂಡನ ಮನೆಗೆ ಕಳುಹಿಸುವ ಕನಸು ಪ್ರತಿಯೊಬ್ಬ ತಂದೆಯ ಮನಸ್ಸಿನಲ್ಲಿರುತ್ತದೆ. ಆದರೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಈ ಘಟನೆ ಮಾತ್ರ ತಂದೆ–ಮಗಳ ಸಂಬಂಧದ ಆಳವನ್ನು ನೆನಪಿಸುವುದರ ಜೊತೆಗೆ ಮನಸ್ಸನ್ನು ಕಲಕುತ್ತದೆ. ಮಗಳ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ತಂದೆ ಹಠಾತ್ತನೆ ಸಾವನ್ನಪ್ಪಿದರು. ಆದರೆ ಮಗಳ ಮದುವೆ ನಿಂತುಹೋಗಬಾರದು, ಆಕೆಯ ಸಂತೋಷಕ್ಕೆ ತಂದೆಯ ಸಾವಿನ ಸುದ್ದಿ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕುಟುಂಬದವರು ಆ ಭೀಕರ ಸತ್ಯವನ್ನೇ ಮರೆಮಾಚಿದ ಹೃದ್ಯಯವಿದ್ರಾವಕ ಪ್ರಸಂಗ ಇದೋ ನಿಮಗಾಗಿ

ಸಂಭ್ರಮದ ಮನೆಯಲ್ಲಿ ವಿಧಿಯ ಕ್ರೂರ ಆಟ!

ರಾಜಸ್ಥಾನದ ಉದಯಪುರ ಜಿಲ್ಲೆಯ ಋಷಭದೇವ್ ಉಪವಿಭಾಗದ ಪಟಿಯಾರ್ (ಭೂಧರ್) ಗ್ರಾಮದಲ್ಲಿ 2026ರ ನವೆಂಬರ್ 20ರಂದು ಈ ಹೃದಯವಿದ್ರಾವಕ ಘಟನೆ ನಡೆದಿದೆ. ಅಹಮದಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ 51 ವರ್ಷದ ಶಂಕರ್‌ಲಾಲ್ ಮೇಘವಾಲ್ ತಮ್ಮ 26 ವರ್ಷದ ಮಗಳು ಪ್ರಿಯಾಂಕಾಳ ಮದುವೆಯನ್ನು ಬಹಳ ಸಂಭ್ರಮದಿಂದ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಮನೆಯ ಹಿರಿಯ ಮಗಳ ಮದುವೆ ಎಂಬ ಕಾರಣಕ್ಕೆ ಕುಟುಂಬದಲ್ಲಿ ಸಂತೋಷ ಮನೆಮಾಡಿತ್ತು. ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ಆಗಮಿಸಿದ್ದರು. ಮನೆಯಲ್ಲಿ ಮದುವೆಯ ಚಪ್ಪರ ಹಾಕಲಾಗಿತ್ತು. ಮಂಗಳವಾದ್ಯ, ಹಾಡು, ನೃತ್ಯಗಳೊಂದಿಗೆ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ನಡೆಯುತ್ತಿದ್ದವು.

ರಾಜಸ್ಥಾನದ ಕೆಲವು ಭಾಗಗಳಲ್ಲಿ ಮದುವೆಗೂ ಮುನ್ನ ವಧುವಿನ ಗೌರವಾರ್ಥವಾಗಿ ನಡೆಯುವ ಮೆರವಣಿಗೆಯನ್ನು ‘ಬಿಂದೋಲಿ’ ಎಂದು ಕರೆಯುತ್ತಾರೆ. ಈ ಸಂಪ್ರದಾಯದಂತೆ ಪ್ರಿಯಾಂಕಾಳ ಬಿಂದೋಲಿ ಮೆರವಣಿಗೆ ಹೊರಟಿತ್ತು. ಮಗಳ ಮದುವೆಯ ಸಂತೋಷದಲ್ಲಿ ಶಂಕರ್‌ಲಾಲ್ ಕೂಡ ಬಂಧುಗಳು ಮತ್ತು ಗ್ರಾಮಸ್ಥರೊಂದಿಗೆ ಹಾಡುತ್ತಾ, ಕುಣಿಯುತ್ತಾ ಸಂಭ್ರಮದಲ್ಲಿ ಭಾಗವಹಿಸಿದ್ದರು. ಆದರೆ ಯಾರಿಗೂ ತಿಳಿದಿರಲಿಲ್ಲ, ಆ ಸಂಭ್ರಮದ ಕ್ಷಣಗಳೇ ಅವರ ಬದುಕಿನ ಕೊನೆಯ ಸಂಭ್ರಮವಾಗಲಿವೆ ಎಂದು!

ಹಠಾತ್ ಎದೆನೋವು… ಆಸ್ಪತ್ರೆಗೆ ಧಾವಿಸಿದ ಕುಟುಂಬ!

ಮೆರವಣಿಗೆಯ ಸಂಭ್ರಮ ಮುಗಿದ ಸುಮಾರು ಒಂದು ಗಂಟೆಯ ನಂತರ ಶಂಕರ್‌ಲಾಲ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಕುಸಿದುಬಿದ್ದರು. ತಕ್ಷಣವೇ ಅವರ ಇಬ್ಬರು ಪುತ್ರರಾದ ದಿಲೀಪ್ ಮತ್ತು ಉಮೇಶ್ ಸೇರಿದಂತೆ ಕುಟುಂಬದವರು ಅವರನ್ನು ಋಷಭದೇವ್ ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರದ ಮಹಾರಾಣಾ ಭೂಪಾಲ್ (ಎಂ.ಬಿ.) ಆಸ್ಪತ್ರೆಗೆ ಕಳುಹಿಸಿದರು.

ಆದರೆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು. ಉದಯಪುರದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಶಂಕರ್‌ಲಾಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಮಗಳ ಮದುವೆಯ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದ ತಂದೆ ಇನ್ನು ಈ ಜಗತ್ತಿನಲ್ಲಿ ಇಲ್ಲ ಎಂಬ ಕಹಿಸತ್ಯ ಕುಟುಂಬದವರನ್ನು ದಿಕ್ಕೆಟ್ಟಿಸಿತು. ಒಂದು ಕಡೆ ತಂದೆಯನ್ನು ಕಳೆದುಕೊಂಡ ದುಃಖ. ಮತ್ತೊಂದು ಕಡೆ ಮರುದಿನವೇ ನಡೆಯಬೇಕಿದ್ದ ಮಗಳ ಮದುವೆ. ಏನು ಮಾಡಬೇಕು ಎಂಬುದೇ ಕುಟುಂಬದವರಿಗೆ ತಿಳಿಯದಂತಹ ಪರಿಸ್ಥಿತಿ ಎದುರಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ