ಈ ಟಿಪ್ಸ್ ಅನುಸರಿಸಿ, ಬಿರು ಬೇಸಿಗೆಯಲ್ಲೂ ನಿಮ್ಮ ಮೈಕಾಂತಿ ನಳನಳಿಸುವಂತೆ ಮಾಡಿ…..

ಬಿರು ಬೇಸಿಗೆಯ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಹೈಪರ್‌ ಪಿಗ್ಮೆಂಟೇಶನ್‌, ಸನ್‌ ಬರ್ನ್‌, ಆಯ್ಲಿ ಸ್ಕಿನ್‌, ಆ್ಯಕ್ನೆ, ಮೊಡವೆಗಳಂಥ ಎಷ್ಟೋ ಸಮಸ್ಯೆಗಳು ಹೆಂಗಸರನ್ನು ಸತಾಯಿಸುತ್ತವೆ. ಇವುಗಳಿಂದ ಪಾರಾಗಲು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುವ ತಲೆಬಾಲವಿಲ್ಲದ ಸಲಹೆ ಅನುಸರಿಸಲು ಹೋಗಿ ಮತ್ತಷ್ಟು ತೊಂದರೆಗೆ ಸಿಲುಕುತ್ತಾರೆ. ಹೀಗಾಗಿ ಇಲ್ಲಿ ತಿಳಿಸಲಾಗಿರುವ ಬೇಸಿಗೆಯ ಕೆಲವು ಚರ್ಮ ಸಮಸ್ಯೆಗಳ ಕಾರಣ ತಿಳಿಯಿರಿ, ಅವಕ್ಕೆ ಪರಿಹಾರವನ್ನೂ ಕಂಡುಕೊಳ್ಳಿ.

ಆಯ್ಲಿ ಸ್ಕಿನ್‌ : ಬೇಸಿಗೆಯಲ್ಲಿ ಬೆವರು ಹೆಚ್ಚು. ಇದರ ಜೊತೆ ಧೂಳು, ಮಣ್ಣು ಬೆರೆತು ಮುಖ ಅಂಟಂಟಾಗುತ್ತದೆ. ಇದರಿಂದ ಮುಖದ ರೋಮರಂಧ್ರಗಳು ಬ್ಲಾಕ್‌ ಆಗುತ್ತವೆ. ಇದರಿಂದ ಸ್ಕಿನ್‌ ಹೆಚ್ಚು ಆಯ್ಲಿ ಆಗುತ್ತದೆ. ಮುಖದಲ್ಲಿ ಸದಾ ಜಿಡ್ಡು ಜಿನುಗುಟ್ಟುತ್ತದೆ. ಇದು ನೋಡಲಿಕ್ಕೆ ಬಹಳ ಕೆಟ್ಟದಾಗಿರುತ್ತದೆ. ಜೊತೆಗೆ ಇದರಿಂದ ಅಲ್ಲಲ್ಲಿ ಗುಳ್ಳೆ, ದದ್ದುಗಳಾಗುತ್ತವೆ.

ಆಯ್ಲಿ ಚರ್ಮವನ್ನು ನಿಯಮಿತವಾಗಿ ಮಾಯಿಶ್ಚರೈಸಿಂಗ್‌ಹೈಡ್ರೇಟಿಂಗ್‌ ಮಾಡುತ್ತಿರಬೇಕು. ಹೀಗಾಗಿ ನಿಮ್ಮ ಚರ್ಮಕ್ಕೆ ನಿಯಮಿತವಾಗಿ ನಾನ್‌ ಆಯಿಲ್‌, ನಾನ್‌ ಕಾಮೆಡೋಜೆನಿಕ್‌, ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ ಹಚ್ಚುತ್ತಿರಬೇಕು.

ಬೇಸಿಗೆಯಲ್ಲಿ ಹೆಂಗಸರು ಫೌಂಡೇಶನ್‌ ಗೆ ಬದಲಾಗಿ ಪೌಡರ್‌ ಬೇಸ್ಡ್ ಮೇಕಪ್‌ ಬಳಸಬೇಕು. ಆದರೆ ಎಷ್ಟೋ ಸಲ ಹೆಚ್ಚಿನ ಬೆವರು ಆಯಿಲ್ ‌ಕಾರಣ ಮುಖದಲ್ಲಿ ಬ್ರೇಕ್‌ ಔಟ್ಸ್ ಎದ್ದು ಕಾಣುತ್ತವೆ. ಹೀಗಾಗಿ ಫೌಂಡೇಶನ್‌ ಯಾ ಪೌಡರ್‌ ಬೇಸ್ಡ್ ಮೇಕಪ್‌ ನ್ನು ಎಂದೂ ಮಾಡಿಕೊಳ್ಳಬೇಡಿ. ಯಾರಿಗೆ ಆಯ್ಲಿ ಸ್ಕಿನ್‌ ಇದೆಯೋ, ಅವರು ಜೆಲ್ ‌ಬೇಸ್ಡ್ ಕ್ಲೆನ್ಸರ್‌ ಬಳಸಬೇಕು. ಇದರಿಂದ ಚರ್ಮ ಇರಿಟೇಶನ್‌, ಬರ್ನಿಂಗ್‌ ಹಾಗೂ ಸೀಬಂ ಸೆಕ್ರೀಶನ್‌ ನಿಂದ ಮುಕ್ತಿ ಸಿಗುತ್ತದೆ. ಅಸಲಿಗೆ, ಆಯಿಲ್‌ಆಲ್ಕೋಹಾಲ್ ‌ಬೇಸ್ಡ್ ಕ್ಲೆನ್ಸರ್ ನಲ್ಲಿ ಫ್ಯಾಟಿ ಆ್ಯಸಿಡ್‌ ಇರುತ್ತದೆ. ಇದರಿಂದ ಚರ್ಮದ ಮೇಲೆ ಆಯಿಲ್ ‌ನ ಸಮಸ್ಯೆ ಹಾಗೆಯೇ ಉಳಿದುಬಿಡುತ್ತದೆ.

ಬೇಸಿಗೆಯಲ್ಲಿ ಹೆಚ್ಚು ಹೆಚ್ಚಾಗಿ ಸೌತೇಕಾಯಿ ಸೇವಿಸಿ. ಇದರಲ್ಲಿ ಹೆಚ್ಚಿನ ಅಂಶ ನೀರು ತುಂಬಿರುತ್ತದೆ. ಜೊತೆಗೆ ಇದು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿದೆ. ಇದು ಕೊಲೋಜೆನ್‌ ಬೂಸ್ಟ್ ಮಾಡಲು ಸಹಕಾರಿ. ಇದರ ಕೂಲಿಂಗ್‌ ಎಫೆಕ್ಟ್ ನಿಮ್ಮ ಚರ್ಮವನ್ನು ಆಂತರಿಕವಾಗಿ ಹೈಡ್ರೇಟ್‌ ಗೊಳಿಸುವಲ್ಲಿ ಸಹಕಾರಿ.

ಬ್ರೋಕ್ಲಿ, ಪಾಲಕ್‌ ಸೊಪ್ಪು, ಇನ್ನಿತರ ಹಸಿರು ತರಕಾರಿಗಳಲ್ಲಿ ಆಯಿಲ್ ‌ಯಾ ಫ್ಯಾಟ್‌ ಇರುವುದಿಲ್ಲ. ಬೇಸಿಗೆಯಲ್ಲಿ ಆಯ್ಲಿ ಸ್ಕಿನ್ನಿನ ಹೆಂಗಸರು ತಮ್ಮ ಡಯೆಟ್‌ ನಲ್ಲಿ ಫ್ಯಾಟ್‌/ಆಯಿಲ್ ಅಂಶವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು. ಇದರ ಬದಲಿಗೆ ಫೈಬರ್ ರಿಚ್‌ ಫುಡ್‌ ಬಳಸಬೇಕು.

face-ckeabser

ಸನ್‌ ಬರ್ನ್‌ ಸಮಸ್ಯೆ : ಬೇಸಿಗೆಯಲ್ಲಿ ವಿಪರೀತ ಬಿಸಿಲಿನ ಝಳದಿಂದ, ಚರ್ಮ ಬೇಗ ಮುದುಡಿ ಹೋಗುತ್ತದೆ, ಈ ಕಾರಣ ಮುಖದಲ್ಲಿ ಕೆಂಪು ದದ್ದು, ಪ್ಯಾಚೆಸ್‌, ಹೊಪ್ಪಳೆ ಏಳುತ್ತದೆ. ಇದರಿಂದ ನವೆ, ಕಡಿತ ಹೆಚ್ಚುತ್ತದೆ. ಇದರಿಂದ ಪಾರಾಗುವುದು ಹೇಗೆ?

ಆದಷ್ಟೂ ಬಿಸಿಲಿನಲ್ಲಿ ಸುತ್ತಾಡಬೇಡಿ. ನಿಮ್ಮ ಕೆಲಸಗಳನ್ನು ಬೆಳಗ್ಗೆ/ಸಂಜೆಗೆ ಪ್ಲಾನ್‌ ಮಾಡಿ.

ಮನೆಯಿಂದ ಹೊರಗೆ ಹೊರಡುವ ಮೊದಲು ಲೈಟ್‌, ನಾನ್‌ ಸ್ಟಿಕಿ SPF 50+ನ ಸನ್‌ ಸ್ಕ್ರೀನ್‌ ಹಚ್ಚಿಕೊಳ್ಳಲು ಮರೆಯದಿರಿ.

ಸಾಧ್ಯವಾದಷ್ಟೂ ಅತಿ ಸಡಿಲ, ಗಾಳಿಯಾಡುವಂಥ ಕಾಟನ್‌ ಉಡುಗೆ ಧರಿಸಿ. ಬೇಸಿಗೆಗೆ ಕಾಟನ್‌ ಒಂದೇ ಪರಿಹಾರ. ಇದರಿಂದ ಚರ್ಮ ಸದಾ ಕೂಲ್ ‌ಆಗಿರುತ್ತದೆ.

ಚರ್ಮವನ್ನು ಸದಾ ಹೆಲ್ದಿ ಆಗಿರಿಸಲು ಹೈಡ್ರೇಟೆಡ್‌ ಆಗಿರುವುದು ಬಲು ಮುಖ್ಯ. ಹೀಗಾಗಿ ಅವಕಾಶ ಸಿಕ್ಕಿದಾಗ ಧಾರಾಳ ನೀರು ಕುಡಿಯುತ್ತಿರಿ. ಇದರಿಂದ ನೀವು ಎಷ್ಟೋ ಹೈಡ್ರೇಟೆಡ್‌ ಆಗುವಿರಿ. ಹೀಗೆ ಧಾರಾಳ ನೀರು, ನೀರು ಮಜ್ಜಿಗೆ, ಎಳನೀರು ಇತ್ಯಾದಿ ಸೇವಿಸುವುದರಿಂದ ಚರ್ಮ ಸದಾ ನಳನಳಿಸುತ್ತಿರುತ್ತದೆ.

ಹ್ಯಾಟ್‌/ಸನ್‌ ಗ್ಲಾಸಸ್‌/ಸ್ಕಾರ್ಫ್‌ ಧರಿಸಲು ಮರೆಯದಿರಿ. ಇದರಿಂದ ನಿಮ್ಮ ಚರ್ಮ/ಕಂಗಳು ಬಿಸಿಲ ಬೇಗೆಯಿಂದ ದೂರಾಗುತ್ತವೆ.

face-scrub

ಫಂಗಲ್ ಇನ್‌ ಫೆಕ್ಷನ್‌ : ಬೇಸಿಗೆಯಲ್ಲಿ ಅತಿಯಾದ ಬಿಸಿಲ ಧಗೆ, ಸತತ ಬೆವರುವಿಕೆ ಫಂಗಲ್ ಇನ್‌ ಫೆಕ್ಷನ್‌ ಗೆ ದಾರಿ ಮಾಡುತ್ತದೆ. ಬೇಸಿಗೆಯಲ್ಲಿ ಬೆವರಿದಾಗೆಲ್ಲ ಬಟ್ಟೆ ದೇಹಕ್ಕೆ ಅಂಟಿಕೊಳ್ಳುತ್ತದೆ. ಆಗ ದೇಹಕ್ಕೆ ಗಾಳಿಯಾಡಲು ಆಗದು. ಈ ಕಾರಣದಿಂದ ಕಂಕುಳು, ತೊಡೆ ಭಾಗಗಳಲ್ಲಿ ಸೋಂಕು ಬೇಗ ಹರಡುತ್ತದೆ.

ಬೇಸಿಗೆಯಲ್ಲಿ ಸ್ವಚ್ಛತೆ/ಶುಭ್ರತೆ ಕಡೆ ಗಮನ ಹರಿಸದಿದ್ದರೆ, ಚರ್ಮಕ್ಕೆ ಸೋಂಕು ತಪ್ಪಿದ್ದಲ್ಲ. ಈ ಕುರಿತಾಗಿ ತಜ್ಞರು ಹೇಳುವುದೆಂದರೆ, ಈ ಸಮಸ್ಯೆ ಕೊಳಕು ಸಾಕ್ಸ್, ಒಗೆಯದೇ ಅದೇ ಕೊಳಕು ಅಂಡರ್‌ ಗಾರ್ಮೆಂಟ್ಸ್ ನ್ನು ಪದೇ ಪದೇ ಧರಿಸುವುದರಿಂದ ಇದು ಹೆಚ್ಚುತ್ತದೆ. ಹೆಚ್ಚು ಟೈಟ್‌ ಒಳವಸ್ತ್ರ, ಹೊರಗಿನ ಬಟ್ಟೆಗಳಿಂದಲೂ ಇದು ಉಲ್ಬಣಿಸುತ್ತದೆ. ಇದು ಫಂಗಸ್ ಹೆಚ್ಚಿಸುವುದರಿಂದ ಈ ಸಮಸ್ಯೆ ತಪ್ಪಿದ್ದಲ್ಲ. ಇದರಿಂದ ಪಾರಾಗುವ ಬಗೆ ಹೇಗೆ?

ಫಂಗಲ್ ಇನ್‌ ಫೆಕ್ಷನ್‌ ಆಗಿದೆ ಎಂದು ಖಚಿತವಾದಾಗ, ಆ ರೋಗಿಯ ಟವೆಲ್ ‌ನ್ನು ಇತರರು ಬಳಸಬಾರದು, ಇದು ಮೈಗೆ ಹಚ್ಚುವ ಸೋಪಿಗೂ ಅನ್ವಯ. ದೇಹದಲ್ಲಿ ಎಲ್ಲೆಡೆ ಕೆಂಪಾದ ಹೊಪ್ಪಳೆ ಎದ್ದಿದ್ದರೆ, ತಕ್ಷಣ ಚರ್ಮ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ಚರ್ಮ ಹೆಚ್ಚು ಹೊತ್ತು ತೇವಾಂಶದ ಸಂಪರ್ಕದಿಂದ ದೂರವಾಗಿರಲು, ಬಹಳ ಹೊತ್ತು ಬೆವೆತಾಗ, ತಕ್ಷಣ ಅಂಥ ಏರಿಯಾ ತೊಳೆದು, ಒರೆಸಿ, ಬಟ್ಟೆ ಬದಲಾಯಿಸಿ.

ಬೇಸಿಗೆಯಲ್ಲಿ ಕಾಟನ್‌ ಡ್ರೆಸೆಸ್‌ ಅಲ್ಲದೇ ಬೇರಾವುದೂ ಬೇಡ. ಇದು ಬೆವರನ್ನು ಹೀರಿಕೊಳ್ಳುತ್ತದೆ. ಇದರಿಂದ ಸೋಂಕು ತಗುಲುವುದಿಲ್ಲ. ಹೀಗಾಗಿ ಕಾಟನ್‌, ಲಿನೆನ್‌ ನ ಲೈಟ್‌ ಕಲರ್‌ ನ, ಸಡಿಲ ವಸ್ತ್ರ ಮಾತ್ರ ಧರಿಸಬೇಕು. ಇದರಿಂದ ಧಾರಾಳ ಗಾಳಿ ಆಡುತ್ತದೆ ಹಾಗೂ ಬೆವರು ಜಮೆಗೊಳ್ಳುವುದಿಲ್ಲ.

ಪ್ರತಿದಿನ ಕನಿಷ್ಠ 2 ಸಲ ಸ್ನಾನ ಮಾಡಿ. ಒಗೆದ ಶುಭ್ರ ವಸ್ತ್ರಗಳನ್ನೇ ಧರಿಸಿರಿ. ನಿಮ್ಮ ಒಳವಸ್ತ್ರ, ಸಾಕ್ಸ್ ಪ್ರತಿದಿನ ಬದಲಾಯಿಸಿ.

ಬೇಸಿಗೆಯಲ್ಲಿ ಬಟ್ಟೆ ಒಗೆಯುವಾಗ ಮೈಲ್ಡ್ ಡಿಟರ್ಜೆಂಟ್‌ ನ್ನು ಮಾತ್ರ ಬಳಸಬೇಕು. ಬಟ್ಟೆ, ಒಗೆದು ಜಾಲಿಸುವಾಗ, ಸೋಪಿನ ಅಂಶ ಒಂದಿಷ್ಟೂ ಉಳಿಯಬಾರದು ಎಂದು ನೆನಪಿಡಿ. ಅಕಸ್ಮಾತ್‌ ಇದರ ಅಂಶ ಉಳಿದುಬಿಟ್ಟರೆ, ಇದು ಅಲರ್ಜಿಗೆ ದಾರಿ ಆಗುತ್ತದೆ.

ಬೆವರನ್ನು ತಗ್ಗಿಸಲು ಹಾಗೂ ಅಥ್ಲೀಟ್‌ ಫುಟ್‌ ಆಗದಂತೆ ಎಚ್ಚರವಹಿಸಲು, ಗಾಳಿಯಾಡುವ ಉತ್ತಮ ಗುಣಮಟ್ಟದ ಶೂ/ಸ್ಯಾಂಡಲ್ಸ್ ಧರಿಸಿ, ತೇವಾಂಶ ಹೀರಿಕೊಳ್ಳುವಂಥ ಸಾಕ್ಸ್ ನ್ನೇ ಧರಿಸಿರಿ.

Sun-Protection

ವೈದ್ಯರ ಸಲಹೆ ಇಲ್ಲದೆ, ಕೆಮಿಸ್ಟ್ ಬಳಿ ದೊರಕುವ ಅಗ್ಗದ ಮಾತ್ರೆ, ಔಷಧಿ ಬಳಸದಿರಿ. ಇದರಿಂದ ನಿಮ್ಮ ಚರ್ಮ ಮತ್ತಷ್ಟು ಕೆಡುವ ಸಂಭವವಿದೆ.

ಈ ಸೋಂಕಿನ ಬಾಧೆಯಿಂದ ಪಾರಾಗಲು ಯಾವ ಬೇಗ ಗುಣ ಕಾಣಲು, ಆಗಾಗ ಮೊಸರಿನ ಸೇವನೆ ಒಳ್ಳೆಯದು. ಇದರಲ್ಲಿ ಪ್ರೊಬಯೋಟಿಕ್‌ ಅಂಶ, ಗುಡ್‌ ಬ್ಯಾಕ್ಟೀರಿಯಾ, ನಿಮ್ಮ ಹೊಟ್ಟೆಯನ್ನು ಸದಾ ಸ್ವಸ್ಥವಾಗಿಟ್ಟು, ಸೋಂಕಿನ ವಿರುದ್ಧ ಹೋರಾಡುತ್ತದೆ. ಜೊತೆಗೆ ಇದು ನಿಮ್ಮ ಇಮ್ಯುನಿಟಿ ಹೆಚ್ಚಿಸುತ್ತದೆ.

ಕೊಬ್ಬರಿ ಎಣ್ಣೆಯಲ್ಲಿನ ಫ್ಯಾಟಿ ಆ್ಯಸಿಡ್ಸ್, ಯಾವುದೇ ಬಗೆಯ ಸೋಂಕನ್ನೂ ನಿವಾರಿಸುತ್ತದೆ. ಸೋಂಕಿನ ಭಾಗದಲ್ಲಿ ಇದನ್ನು ಗಂಟೆಗೊಮ್ಮೆ ಸವರಿಕೊಳ್ಳಿ.

ಆ್ಯಕ್ನೆ ಮೊಡವೆಗಳ ಗೊಡವೆ : ಬೇಸಿಗೆಯಲ್ಲಿ ಬೆವರು, ಧೂಳು, ಮಣ್ಣು, ಇನ್ನಿತರ ಕೊಳಕು ಪರಿಸರ ಮಾಲಿನ್ಯದಿಂದ ಆ್ಯಕ್ನೆ, ಮೊಡವೆಗಳನ್ನು ಹೆಚ್ಚಿಸುತ್ತದೆ. ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಈ ಹಿಂಸೆ ಹೆಚ್ಚುತ್ತದೆ. ಮುಖದಲ್ಲಿನ ಕೆಂಪು ಮೊಡವೆಗಳಿಗೆ ದೇಹದ ಅತಿ ಉಷ್ಣತೆ, ಇತರ ಅನೇಕ ಕಾರಣ ಇರುತ್ತದೆ. ಈ ಕಾರಣದಿಂದ ಮೂಡುವ ಮೊಡವೆ, ಹೀಟ್‌ ಪಿಂಪಲ್ಸ್ ಎನಿಸುತ್ತದೆ. ಗಲ್ಲ, ಕೆನ್ನೆ, ಹಣೆ ಇದಕ್ಕೆ ಬೇಗ ಬಲಿಯಾಗುತ್ತವೆ.

ಹರಳೆಣ್ಣೆಯಲ್ಲಿ ರಿಸಿನೊವೆಯಿಕ್‌ ಆ್ಯಸಿಡ್‌ ಇದ್ದು, ಅದು ಆ್ಯಂಟಿ ಬ್ಯಾಕ್ಟೀರಿಯಾ ರೂಪದಲ್ಲಿ ಕೆಲಸ ಮಾಡುತ್ತದೆ. ಇದು ಹೀಟ್‌ ಪಿಂಪಲ್ಸ್ ದೂರ ಮಾಡಿ, ಮುಖದ ಊತ ಇಳಿಸುವಲ್ಲಿ ನೆರವಾಗುತ್ತದೆ.

ನೀವು ಸತತ ವ್ಯಾಯಾಮದ ಅಭ್ಯಾಸ ಹೊಂದಿದ್ದರೆ, ಮುಖಮೈನ ಬೆವರನ್ನು ತಕ್ಷಣ ಒರೆಸಿಕೊಳ್ಳಿ. ತಣ್ಣೀರಿನಿಂದ ಆಗಾಗ ಮುಖ ತೊಳೆಯಿರಿ. ಇದರಿಂದ ಆ ಭಾಗದಲ್ಲಿ ಕೊಳೆ ಕೂಡುವುದಿಲ್ಲ. ಹೀಗೆ ಆ್ಯಕ್ನೆ ಮೊಡವೆ ಎಷ್ಟೋ ತಗ್ಗುತ್ತವೆ.

ಬೇಸಿಗೆಯಲ್ಲಿ ಮುಖಕ್ಕೆ ಫೌಂಡೇಶನ್‌ ಬಳಸುತ್ತಾ ಪದರ ಪದರದ ಮೇಕಪ್‌ ಹಚ್ಚುವುದು ಸರಿಯಲ್ಲ. ಬೇಸಿಗೆಯಲ್ಲಿ ಚರ್ಮವನ್ನು ಆದಷ್ಟೂ ಫ್ರೆಶ್‌ನ್ಯಾಚುರಲ್ ಆಗಿಯೇ ಇರಿಸಿಕೊಳ್ಳಿ. ಇತ್ತೀಚೆಗೆ ಸನ್‌ ಸ್ಕ್ರೀನ್‌ ಮಾಯಿಶ್ಚರ್‌ ಯುಕ್ತ ದೊರಕುವುದರಿಂದ, ಅಂಥದ್ದನ್ನೇ ಬಳಸಿರಿ. ಜೊತೆಗೆ ನಿಮ್ಮ ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಸದಾ ಲೈಟ್‌ ವೆಯ್ಟ್ ಆಗಿರಬೇಕೆಂದು ನೆನಪಿಡಿ.

ಸಕಾಲಕ್ಕೆ ಸರಿಯಾಗಿ ನಿಮ್ಮ ಮುಖವನ್ನು ಸಾಫ್ಟ್ ಕ್ಲೆನ್ಸರ್‌ ನಿಂದ ತೊಳೆಯಿರಿ. ಮುಖಕ್ಕೆ ಆಗಾಗ ನೀರು ಚಿಮುಕಿಸುವುದರಿಂದ, ಮುಖದಲ್ಲಿ ಹೊಸ ತಾಜಾತನ ಕಳೆಗಟ್ಟುತ್ತದೆ. ಹೀಗೆ ಮಾಡುವುದರ ಜೊತೆ ಧಾರಾಳ ನೀರು ಕುಡಿಯುತ್ತಾ, ಸದಾ ಹೈಡ್ರೇಟೆಡ್ ಆಗಿರಿ. ಇದರಿಂದ ನಿಮ್ಮ ಆ್ಯಕ್ನೆ ಮೊಡವೆ ದೂರವಾಗುತ್ತವೆ. ಮುಖಕ್ಕೆ ಎಂದೂ ಹಾರ್ಶ್‌ ಸ್ಕ್ರಬ್‌ ಬಳಸಬೇಡಿ. ಇದರಿಂದ ಮುಖದಲ್ಲಿ ಶುಷ್ಕತೆ, ಉರಿ ಇತ್ಯಾದಿ ಹೆಚ್ಚುತ್ತದೆ.

ಪೇಮ್ ಯುಕ್ತ ಫೇಸ್‌ ಕ್ಲೆನ್ಸರ್‌ ನ್ನು ಹಗಲಲ್ಲಿ ಮುಖಕ್ಕೆ 2 ಸಲ ಹಚ್ಚಿಕೊಳ್ಳಿ. ನಿಮ್ಮ ಚರ್ಮದ ಟೈಪ್‌ ಗೆ ತಕ್ಕಂತೆ, ಬೇಕಾದ ಕ್ಲೆನ್ಸರ್ ಆರಿಸಿಕೊಳ್ಳಿ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಎಂದರೆ, ಬೇಸಿಗೆಯಲ್ಲಿ ಮುಖವನ್ನು ಹೆಚ್ಚಾಗಿ ಕ್ಲೆನ್ಸರ್‌ ಬಳಸಿ ತೊಳೆಯುವುದರಿಂದಲೂ ಸಮಸ್ಯೆ ಹೆಚ್ಚುತ್ತದೆ. ಇದರಿಂದ ಸ್ಕಿನ್‌ ಬೇಗ ಡ್ರೈ ಆಗಿಬಿಡುತ್ತದೆ, ಆ್ಯಕ್ನೆ ಮೊಡವೆ ಹೆಚ್ಚು ಸಾಧ್ಯತೆಗಳಿವೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ