ಶಾರ್ಟ್ ಮೂವೀ ಪಾಯಲ್ ಸ್ಟೋರಿ
ಶಾರ್ಟ್ ಮೂವೀ ಮೂಲಕ ಮನೆಮಾತಾದ ನಟಿ ಪಾಯಲ್ ಚಂಗಪ್ಪ. ಈಗ ಕನ್ನಡ ಮಾತ್ರವಲ್ಲ, ತೆಲುಗು ಸಿನಿಮಾ, ವೆಬ್ ಸೀರೀಸ್ ಗಳಲ್ಲಿ ಮಿಂಚುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಜೋಡಿಯಾಗಿ `ಬ್ರ್ಯಾಟ್’ನಲ್ಲಿ ಮಿಂಚಿ, ಕನ್ನಡದ `ಅಮೃತಾ ಅಂಜನ್’ ಹಾಗೂ ತೆಲುಗಿನಲ್ಲಿ `ಬ್ಯಾಡ್ ಗರ್ಲ್ಸ್’ ಸಿನಿಮಾದಲ್ಲೂ ನಟಿಸಿದರು. ಸದ್ಯ ಕನ್ನಡದ `ಮುದ್ದು ಗುಮ್ಮ’ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಶಾರ್ಟ್ ಮೂವೀಗಳಲ್ಲಿ ಸಾಕಷ್ಟು ಬಿಝಿ ಇದ್ದೇನೆ. ಆದರೆ, ಸಿನಿಮಾ ನನ್ನ ಫ್ಯಾಷನ್, ದೊಡ್ಡ ಪರದೆಯಲ್ಲಿ ನನ್ನನ್ನು ನೋಡುವುದು ಕನಸು. ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ ಪಾಯಲ್.

ಸಾರಾ ಅರ್ಜುನ್ ಗೆ ಅಪ್ಪನೇ ಸ್ಛೂರ್ತಿ
ಭಾರತದ ಸೆನ್ಸೇಷನ್ ನಟಿ ಸಾರಾ ಅರ್ಜುನ್. ಸಾರಾ ತನ್ನ ತಂದೆ ರಾಜ್ ಅರ್ಜುನ್ ತನ್ನ ಜೀವನದ ದೊಡ್ಡ ಭಾಗವಾಗಿದ್ದಾರೆ. ನನ್ನ ತಂದೆ ತನ್ನ ನಟನೆಗೆ ಸಹಾಯ ಮಾಡುವುದರಿಂದ ಹಿಡಿದು ತನ್ನ ಜೀವನದ ಪ್ರತಿ ಹಂತದಲ್ಲೂ ಜೊತೆಯಾಗಿರುವ ಅವರು, ಕೇವಲ ತಂದೆ ಮಾತ್ರವಲ್ಲ, ಬಹುದೊಡ್ಡ ಸ್ಛೂರ್ತಿ ಎಂದು ಹೇಳಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ನಟಿಸಿರುವ ಅವರು, ನಾನು ಮಾಡುವ ಚಿತ್ರಗಳ ಮೂಲಕ ನನ್ನ ತಂದೆ ನನ್ನ ಬಗ್ಗೆ ಹೆಮ್ಮೆ ಪಡುವಂತಾಗಲು ಬಯಸುತ್ತೇನೆ. ಅವರಂತೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕು ಎಂಬುದು ನನ್ನ ಬಯಕೆ ಎನ್ನುತ್ತಾರೆ ಸಾರಾ ಅರ್ಜುನ್.

ಗಾಡ್ ಪ್ರಾಮಿಸ್ ಅಪ್ಸರೆ ಜೂಹಿ
ಮಲೆಯಾಳಂನ `ಪವಿ ಕೇರ್ ಟೇಕರ್, ಸುಮತಿ ಒಲವು’ ಹಾಗೂ ತಮಿಳಿನ ಸೂಪರ್ ಹಿಟ್ `ತಲೈವನ್ ತಲೈವಿ’ ಸಿನಿಮಾಗಳಲ್ಲಿ ನಟಿಸಿರುವ ಜೂಹಿ ಜಯಕುಮಾರ್, ಈಗ `ಗಾಡ್ ಪ್ರಾಮಿಸ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. `ಗಾಡ್ ಪ್ರಾಮಿಸ್’ ಹೊರತುಪಡಿಸಿ ತಮಿಳಿನ ಒಂದು ಬಿಗ್ ಸ್ಟಾರ್ ಸಿನಿಮಾ ಚಿತ್ರೀಕರಣ ಮುಗಿಸಿದ್ದೇನೆ. ನನ್ನ ನಟನೆಯ ಒಂದೆರಡು ಮಲೆಯಾಳಂ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಆದರೂ ಕನ್ನಡದಲ್ಲಿ ನನ್ನ ಚೊಚ್ಚಲ ಸಿನಿಮಾ ಬಗ್ಗೆ ತುಂಬಾ ಎಗ್ಸೈಟ್ ಮೆಂಟ್ ಇದೆ ಎಂದಿದ್ದಾರೆ ಜೂಹಿ.

ಮಹಾಕಾಳಿ ರೂಪದಲ್ಲಿ ಭೂಮಿ ಶೆಟ್ಟಿ
ದೂರದರ್ಶನದ ಕಿನ್ನರಿಯ ಪಾತ್ರದ ಮೂಲಕ ಮನೆಮಾತಾದ ಹುಡುಗಿ ಭೂಮಿಶೆಟ್ಟಿ. ತೆಲುಗಿನ `ನಿನ್ನೇ ಪೆಳ್ಳಾಡುತಾ’ದಲ್ಲೂ ಕಾಣಿಸಿಕೊಂಡರು. ಕನ್ನಡದ ಬಿಗ್ ಬಾಸ್ 7ನೇ ಸೀಸನ್ ನಲ್ಲೂ ಗುರುತಿಸಿಕೊಂಡ ಭೂಮಿಶೆಟ್ಟಿ, ಸ್ಯಾಂಡಲ್ ವುಡ್ ನ `ಇಕ್ಕಟ್’ ಚಿತ್ರದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಕನ್ನಡ, ತುಳು, ತೆಲುಗು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಭೂಮಿ, ಕನ್ನಡ ಮತ್ತು ತೆಲಗು ಚಿತ್ರಗಳಲ್ಲೂ ನಟಿಸಿದ್ದಾರೆ. ತೆಲುಗಿನಲ್ಲಿ `ಹನುಮಾನ್’ ಚಿತ್ರ ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ಪ್ರಶಾಂತ್ ವರ್ಮ ಬರೆದಿರುವ ಲೇಡಿ ಸೂಪರ್ ಹೀರೋ ಕಥೆಯಿರುವ `ಮಹಾಕಾಳಿ’ ಸಿನಿಮಾದಲ್ಲಿ ಮಹಾಕಾಳಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್ ನಲ್ಲಿ ರೆಡ್ ಬ್ಯಾಗ್ ಹಿಡಿದ ರಾಧ್ಯಾ
ಪಕ್ಕದ್ಮನೆ ಹುಡುಗಿ ಲುಕ್ ನಲ್ಲೇ ಗಮನ ಸೆಳೆದಿರುವ ನಟಿ ರಾಧ್ಯಾ ಈಗ ಬೋಲ್ಡ್ ಹಾಗೂ ಬ್ಯೂಟಿಫುಲ್ ಆಗಿ ರೆಡ್ ಬ್ಯಾಗ್ ಹಿಡಿದು ಟಾಲಿವುಡ್ ಗೆ ಹೋಗಿದ್ದಾರೆ. ಮೈಸೂರಿನಲ್ಲೇ ಹುಟ್ಟಿ ಬೆಳೆದ ರಾಧ್ಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎಂಬ ಕನಸು ಕಂಡರು. ರಂಗಾಯಣ ನಡೆಸುವ ನಟನಾ ಶಿಬಿರಗಳಲ್ಲಿ ನಟನೆ ಕಲಿತಿದ್ದು, ಹಲವು ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ `ನಮ್ಮ ಹುಡುಗರು’ ಸಿನಿಮಾದಲ್ಲಿ ಅವಕಾಶ ದೊರೆಯಿತು. ಆ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ರಾಧ್ಯಾ, ನಂತರ `ದೇಸಾಯಿ’ ಚಿತ್ರದಲ್ಲಿ ನಟಿಸಿದರು. `ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್
`ರಾನಿ’ ಸಿನಿಮಾದಲ್ಲಿ ನಾಯಕಿಯಾಗಿ ರಾಧ್ಯಾ ನಟಿಸಿದ್ದಾರೆ.

ಕನ್ನಡತಿ ನಭಾ ಡಬಲ್ ಧಮಾಕಾ
ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಟಾಲಿವುಡ್ ನ ಜನಪ್ರಿಯ ನಟಿಯಾಗಿರುವ ನಭಾ ನಟೇಶ್, ಈಗ ಸಣ್ಣ ಬ್ರೇಕ್ ಬಳಿಕ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ನ `ಸ್ವಯಂಭು’ ಸುಂದರವಲ್ಲಿ ಎಂಬ ರಾಜಕುಮಾರಿ, `ನಾಗಬಂಧಂ’ ಚಿತ್ರದಲ್ಲಿ ಪಾರ್ವತಿ ಎಂಬ ಎರಡು ಪಾತ್ರಗಳಲ್ಲಿ ತೆರೆಗೆ ಬರುತ್ತಿರುವ ನಭಾ, ಈ ಬಾರಿ ವಿಭಿನ್ನ ಆಯ್ಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದರೂ ವಿಭಿನ್ನವಾಗಿರುವುದನ್ನು ಮಾಡಬೇಕೆಂದು ಬೆಸ್ಟ್ ಆಯ್ಕೆಗೆ ಕಾಯುತ್ತಿದ್ದೇನೆ. ನಾನು ಥಿಯೇಟರ್ ಹಿನ್ನೆಲೆಯವಳಾದ ಕಾರಣ ವಿಭಿನ್ನ ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ಕನ್ನಡದಲ್ಲಿ ಉತ್ತಮ ಪ್ರಾಜೆಕ್ಟ್ ಜೊತೆ ಬರಬೇಕು ಎಂಬುದು ನನ್ನಾಸೆ ಎನ್ನುತ್ತಾರೆ ನಭಾ ನಟೇಶ್.

ಗ್ಲಾಮರ್ ಇಲ್ಲದೆಯೂ ಗಮನ ಸೆಳೆಯುವ ಅರ್ಚನಾ
ಸಣ್ಣ ಪಾತ್ರವಾದರೂ ಸೈ ಎನ್ನಿಸಿಕೊಳ್ಳುವ, ಗ್ಲಾಮರ್ ಇಲ್ಲದೆಯೂ ಗಮನ ಸೆಳೆಯುವ, ಮಿಂಚಿ ಮರೆಯಾಗುವುದಕ್ಕಿಂತಲೂ ಮಿನುಗುತ್ತಲೇ ಇರುವ ಆಲೋಚನೆ ನಟಿ ಅರ್ಚನಾ ಕೊಟ್ಟಿಗೆ ಅವರದ್ದು. ಸ್ಯಾಂಡಲ್ ವುಡ್ ನ `ಎಕ್ಕ’ ಸಿನಿಮಾದಲ್ಲಿ ಡ್ಯಾಡಿ ಮಡದಿ, `ಮಾರ್ಕ್’ ಸಿನಿಮಾದಲ್ಲಿ ಅಂಡರ್ ಕವರ್ ಕಾಪ್, `ಅಯ್ಯನ ಮನೆ’ ವೆಬ್ ಸಿರೀಸ್ ನಲ್ಲಿ ಅದ್ಭುತ ಪಾತ್ರದ ಮೂಲಕ ಗಮನ ಸೆಳೆದರು. `ರಕ್ಕಸಪುರದೋಳ್, ಅಲಂಕಾರ್ ವಿದ್ಯಾರ್ಥಿ’ ಚಿತ್ರಗಳಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿರುವ ಅವರು, ಕಾಲಿವುಡ್ ಸಿನಿಮಾ ಆಫರ್ ಗಳಿಗೂ ಕಾಯುತ್ತಿದ್ದೇನೆ ಎಂದಿದ್ದಾರೆ. ಬೋಲ್ಡ್ ಆದ ಭಾವನಾ ರಾವ್ ನಟಿ ಭಾವನಾ ರಾವ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ, ಅವರ ಪಾತ್ರಗಳು ವಿಭಿನ್ನತೆಯಿಂದ ಗಮನ ಸೆಳೆಯುತ್ತವೆ.

`ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ಅವರು ಮಾಡಿರುವ ಬೋಲ್ಡ್ ಪಾತ್ರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಗಾಳಿಪಟ ಸಿನಿಮಾದಲ್ಲಿ ಪಾವನಿಯಾಗಿದ್ದ ಭಾವನಾ, `ಲ್ಯಾಂಡ್ ಲಾರ್ಡ್’ ಚಿತ್ರದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನನ್ನ ನಟನೆಯ ಇನ್ನೊಂದೆರಡು ಸಿನಿಮಾಗಳು ಬಿಡುಗಡೆಯಾಗಬೇಕಿವೆ. ಕನ್ನಡದಲ್ಲಿ ಈಗ ಒಳ್ಳೊಳ್ಳೆಯ ಪ್ರಯೋಗಾತ್ಮಕ ಪಾತ್ರಗಳನ್ನು ಬರೆಯುತ್ತಿದ್ದಾರೆ. ಅಂಥದ್ದೇ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಭಾವನಾ ರಾವ್.





