ಕಳೆದ ಮೇ 14ರ ಆ ಸಂಜೆ ನವದೆಹಲಿಯ ಸಾಂಸ್ಕೃತಿಕ ಹೃದಯವಾದ `ದಿ ಪಿಯಾನೋ ಮ್ಯಾನ್‌’ ಆಡಿಟೋರಿಯಂನಲ್ಲಿ ದೊಡ್ಡ ಮ್ಯಾಜಿಕ್‌ ಶೋ ನಡೆದುಹೋಯಿತು. ಆಲಿಯಾ ಗುಪ್ತಾರ ಪರ್ಫಾರ್ಮೆನ್ಸ್ ಹಾಗೂ ಮಧುರಗೀತೆಗಳ ಗಾಯನ ಪ್ರೇಕ್ಷಕರಿಗೆ ರಸದೌತಣ ಒದಗಿಸಿತು. ಇದು ಕೇವಲ ಒಂದು ಆರಂಭ ಮಾತ್ರ. ಉಳಿದ ವಿಹಂಗಮ ನೋಟ ಇನ್ನೂ ಬಾಕಿ ಇತ್ತು. ಅಸಲಿಗೆ, ಈ ಸಂಜೆ ಮಹಿಳಾ ಉತ್ಥಾನಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಮಹಿಳೆಯರ ಸನ್ಮಾನಕ್ಕೆಂದೇ ಮೀಸಲಾಗಿತ್ತು. ಇದರಲ್ಲಿ ಅಸಾಧಾರಣ ಮಹಿಳೆಯರನ್ನು ಸನ್ಮಾನಿಸಲಾಯಿತು. ಇವರುಗಳು ತಮ್ಮ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಾನಪದ ಆಡಳಿತ, ಸಾರ್ವಜನಿಕ ನೀತಿ, ಸಾಮಾಜಿಕ ಕಾರ್ಯ, ವಾಣಿಜ್ಯೋದ್ಯಮ, ವಿಜ್ಞಾನ, ಆಟೋಮೋಟಿವ್‌, ಮನರಂಜನೆಯ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಸಾಧನೆ ಮಾಡಿದಂಥ ಮಹಿಳೆಯರನ್ನು ಸನ್ಮಾನಿಸಲಾಯಿತು. ಗೃಹಶೋಭಾ ಪತ್ರಿಕೆಯ ವತಿಯಿಂದ ಇದು ಮತ್ತೊಂದು ಹೊಸ `ಇನ್‌ ಸ್ಪೈರ್‌ ಅವಾರ್ಡ್ಸ್’ನ ಮಹಿಳಾ ಸೆಲೆಬ್ಸ್ ಗೆ ಸಮರ್ಪಿತ ಸನ್ಮಾನ ಸಮಾರಂಭವಾಗಿತ್ತು.

Anamika (1)Jamuna-Todo (1)

ಇಡೀ ಸಮಾರಂಭ ಝಗಮಗಿಸುವ ಬೆಳಕಿನಿಂದ ದೇದೀಪ್ಯಮಾನವಾಗಿತ್ತು. ಎಲ್ಲಾ ಮಹಿಳೆಯರ ಮುಖ ಹೆಮ್ಮೆ, ಸಾರ್ಥಕತೆ, ಆತ್ಮವಿಶ್ವಾಸದಿಂದ ಬೆಳಗುತ್ತಿತ್ತು. ಗೃಹಶೋಭಾ ಹಲವು ದಶಕಗಳಿಂದ ಪ್ರಕಟಿಸುತ್ತಿದ್ದ ಹೆಣ್ಣಿನ ಸಾಧನೆ ಇಲ್ಲಿ ಪ್ರತ್ಯಕ್ಷ ಸಾಕಾರಗೊಂಡಿತ್ತು. ಇದು ಮಹಿಳೆಯರ ಹಕ್ಕುಗಳ ಅಸಲಿ ವಿಜಯೋತ್ಸವವೇ ಆಗಿತ್ತು!

Aparna (1)Anju-Srivastava (1)

ಡೆಲ್ಲಿ ಪ್ರೆಸ್‌ ನ ಪ್ರಧಾನ ಸಂಪಾದಕ, ಪ್ರಕಾಶಕರಾದ ಪರೇಶ್‌ ನಾಥ್‌ ಮಾತನಾಡುತ್ತಾ, ಇಂಥ ಮೊದಲ ಅವಾರ್ಡ್‌ ಸಮಾರಂಭ 2025ರ ಮಾರ್ಚ್‌ ನಲ್ಲಿ ಏಕೆ ಆರಂಭಿಸಲಾಯಿತೆಂದು ಇಲ್ಲಿ ಸ್ಮರಿಸಿದರು. ಕಾರಣ ಇಷ್ಟೆ ಹೆಣ್ಣು ಹಿಂದಿನಿಂದ ಈಗ ಕೇವಲ 4 ಗೋಡೆಗಳ ನಡುವಿನ ಸೀಮಿತ ಲಯಕ್ಕಷ್ಟೇ ಕಟ್ಟುಪಟ್ಟಿಲ್ಲ. ಕೇವಲ ಮನೆಮಂದಿಯನ್ನಷ್ಟೇ ಸಂಭಾಳಿಸದೆ, ಆಕೆ ಇಡೀ ಸಮಾಜದ ದಿಕ್ಕನ್ನೇ ಬದಲಾಯಿಸಿದ್ದಾಳೆ. ಈ ಶತಮಾನದ ಮಾದರಿ ಹೆಣ್ಣು ಆಧುನಿಕ ಸಮಾಜದ ಡೊಂಕು ತಿದ್ದಿತೀಡಿ, ಪ್ರತಿ ಹೆಣ್ಣು ಆತ್ಮವಿಶ್ವಾಸದಿಂದ ಮುನ್ನಡೆಯಬಲ್ಲಳು ಎಂದು ತೋರಿಸಿಕೊಟ್ಟಿದ್ದಾಳೆ, ಇದೇ ಗೃಹಶೋಭಾ ಪತ್ರಿಕೆಯ ಅಂತರಾಳ!

Dr-Indiria-Hinduja (1)Nidhi (1)

`ದಿ ಪಿಯಾನೋ’ ಆಡಿಟೋರಿಯಂನ ಇಡೀ ಸಭಾಂಗಣ ಕರತಾಡನದಿಂದ ಕಿಕ್ಕಿರಿದಿತ್ತು. ವೇದಿಕೆ ಏರಿ ಬರುತ್ತಿದ್ದ ಪ್ರತಿಯೊಬ್ಬ ಮಹಿಳೆಯ ಕಥೆ, ಕೇವಲ ಪುಸ್ತಕೀಯ ವರ್ಣನೆಗೆ ಸೀಮಿತವಾಗದೆ, ವಾಸ್ತವದಲ್ಲಿ ಪ್ರೇರಣೆ ನೀಡುವಂತಾಗಿತ್ತು. ಆ ಸಂಜೆಯ ಎಲ್ಲಕ್ಕೂ ದೊಡ್ಡ ಆನರ್‌, ಲೈಫ್‌ ಟೈಂ ಅಚೀವ್‌ ಮೆಂಟ್‌ ಪ್ರಸಿದ್ಧ ಫಿಲ್ಮ್ ಮೇಕರ್‌ಕಲ್ಚರ್‌ ಐಕಾನ್‌ ಅಪರ್ಣಾ ಸೇನ್‌ ರಿಗೆ ಇಂಡಿಯನ್‌ ಸಿನಿಮಾ ಹಾಗೂ ಸ್ಟೋರಿ ಟೆಲ್ಲಿಂಗ್‌ ನಲ್ಲಿನ ಆಕೆಯ ಅಸಾಧಾರಣ ಕ್ರಿಯೇಟಿವಿಟಿಗಾಗಿ ನೀಡಲಾಯಿತು. ಇವರಂತೆಯೇ ಸನ್ಮಾನಿತ ಇತರ ಮಹಿಳೆಯರೆಂದರೆ ವಿನೀ ಮಹಾಜನ್‌, ನೇಶನ್‌ ಬಿಲ್ಡರ್‌ (ಐಕಾನ್‌) ಕೆಟೆಗರಿ, ಪ್ರಬಲೀನ್‌ ಕೌರ್ ಭೋಮ್ರಾಹ್‌, ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್‌ (ಬಾಡಿ ಪಾಸಿಟಿವಿಟಿ) ಕೆಟೆಗರಿ, ಟೈಮ್ಸ್ ಐಕಾನ್‌ ಕೆಟೆಗರಿಯಲ್ಲಿ ಡಾ. ಇಂದಿರಾ ಹಿಂದೂಜಾ, ಪೇಕ್‌ ಹೆರಿಟೇಜ್‌ ಐಕಾನ್‌ ಆಗಿ ತೀಜನ್‌ ಬಾಯೀ, ಸೋಶಿಯಲ್ ಇಂಪ್ಯಾಕ್ಟ್ ಅಚೀವರ್‌ ಕೆಟೆಗರಿಯಲ್ಲಿ ಜಮುನಾ ಟುಡೂ, ಲಿಟರೆರೀ ಆರ್ಟ್ಸ್ ಅಚೀವರ್‌ ಕೆಟೆಗರಿಯಲ್ಲಿ ಡಾ. ಅನಾಮಿಕಾ, ಬಿಸ್‌ ನೆಸ್‌ ಲೀಡರ್‌ ಶಿಪ್‌ ಅಚೀವರ್‌ ಕೆಟೆಗರಿಯಲ್ಲಿ ಶಾರ್ವರಿ ಪೊಹರ್ಕರ್‌ಹಾಗೂ ನೂಪುರ್‌ ಪೊಹರ್ಕರ್‌, ಪರ್ಫಾರ್ಮಿಂಗ್‌ ಆರ್ಟ್ಸ್ ಅಚೀವರ್‌ ಕೆಟೆಗರಿಯಲ್ಲಿ ನೀತೀ ಪಾಲ್ಟಾ, ಸ್ಪೋರ್ಟ್ಸ್ ಅಚೀವರ್‌ ಕೆಟೆಗರಿಯಲ್ಲಿ ಪಾಯಲ್ ನಾಗ್‌, ಎಜುಕೇಶನ್‌ ನಲ್ಲಿ ಆ್ಯಲ್ಕಾನ್‌ ವಿಷನರಿ ಲೀಡರ್‌ ಶಿಪ್‌ ಕೆಟೆಗರಿಯಲ್ಲಿ ಪ್ರೊ. ಅಂಜೂ ಶ್ರೀವಾಸ್ತವ್, ಬ್ರೇಕಿಂಗ್‌ ಬ್ಯಾರಿಯರ್‌ ಕೆಟೆಗರಿಯಲ್ಲಿ ನಿಧೀ ಗೋಯಲ್, ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್‌ (ಎಂಪವರ್ಮೆಂಟ್‌) ಕೆಟೆಗರಿಯಲ್ಲಿ ಮಿನಿ ಮಾಥುರ್‌ ಮುಂತಾದವರನ್ನು ಸನ್ಮಾನಿಸಲಾಯಿತು.

mini-mathur (1)Niti-Palta (1)

ಮಹಿಳೆಯರ ಮನಗೆದ್ದ ಮಾಸಪತ್ರಿಕೆ ಗೃಹಶೋಭಾ ಡೆಲ್ಲಿ ಪ್ರೆಸ್‌ ವತಿಯಿಂದ ಪ್ರಕಟಿತ ಗೃಹಶೋಭಾ ಮಾಸಪತ್ರಿಕೆ ಭಾರತದಾದ್ಯಂತ ಅತಿ ಜನಪ್ರಿಯಾದ ಮಹಿಳಾ ಪತ್ರಿಕೆಯಾಗಿ 8 ಭಾಷೆಗಳಲ್ಲಿ (ಕನ್ನಡ, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ) 85 ಲಕ್ಷಕ್ಕೂ ಹೆಚ್ಚು ಓದುಗರನ್ನು ತಲುಪುತ್ತಿದೆ!

Payal-Nagteejan-bai

ಗೃಹಶೋಭಾ ಮೂಲಕ ಹೆಂಗಳೆಯರು ಗೃಹಾಲಂಕಾರ, ಫ್ಯಾಷನ್‌, ಸೌಂದರ್ಯ, ಆರೋಗ್ಯ, ಹೊಸರುಚಿ, ಕೌಟುಂಬಿಕ, ಗ್ಲಾಮರ್‌, ಮನರಂಜನೆ, ಹೃದಯಸ್ಪರ್ಶಿ ಕಥೆಗಳು ಇತ್ಯಾದಿಗಳ ಕುರಿತು ಮಾಹಿತಿ ಪಡೆಯುತ್ತಾರೆ. ಹಲವು ದಶಕಗಳಿಂದ ಈ ಪತ್ರಿಕೆ ಹೃದಯಸ್ಪರ್ಶಿ ಕಥೆಗಳು, ಸಾರ್ಥಕ ಪ್ರಯೋಜಕಾರಿ ಮಾಹಿತಿ, ಮಹಿಳಾ ಹಕ್ಕು, ಸೌಲಭ್ಯ, ಆಕಾಂಕ್ಷೆ, ಧ್ವನಿಗೆ ವೇದಿಕೆಯಾಗಿ ಈ ಮಹೋತ್ಸವಕ್ಕೆ ನಾಂದಿ ಹಾಡಿದೆ. ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಇದೇ ವಿಚಾರಲಹರಿಯ ಪ್ರತಿಬಿಂಬವಾಗಿದೆ ಅಂಥ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಅವರ ಸಾಹಸ, ಉತ್ಕೃಷ್ಟತೆ, ದೃಢ ಸಂಕಲ್ಪಗಳ ಜೊತೆ ಭವಿಷ್ಯತ್ತಿನ ಹೆಣ್ಣುಮಕ್ಕಳ ಏಳಿಗೆಗೆ ಪೂರಕವಾಗಿದೆ.

PO-Harikar (1)Vini-Mahajan (1)

ಪ್ರೇರಣೆ ಹಾಗೂ ಮಹೋತ್ಸವದ ಅದ್ಭುತ ಸಂಜೆ

ಈ ಸಂಜೆ ಕಲಾತ್ಮಕ ಪ್ರಸ್ತುತಿ ಹಾಗೂ ಚಿಂತನೆಗಳ ಕ್ಷಣಗಳೊಂದಿಗೆ ಮೇಳೈಸಿತ್ತು. ಸಾರಾ ಜೇಕಬ್‌ ಸಂಚಾಲಿತ ಸಮಾರಂಭದ ಈ ಸಂಜೆಯ ಆರಂಭದಲ್ಲಿ ಆಲಿಯಾ ಗುಪ್ತಾರ ಪ್ರಶಂಸನೀಯ ಪ್ರಸ್ತುತಿ ಮೊದಲಿಟ್ಟಿತು. ಕೊನೆಯಲ್ಲಿ ಬ್ಯಾಂಡ್‌ ಸಿಲ್ವರ್‌ ಲೈನಿಂಗ್ ನ ಸಂಗೀತಮಯ ಪ್ರಸ್ತುತಿಯೊಂದಿಗೆ ಮುಗಿಯಿತು. ಈ ಕಾರ್ಯಕ್ರಮದಲ್ಲಿ ಎಡಿಟರ್‌ ಇನ್‌ ಚೀಫ್‌ಪಬ್ಲಿಶರ್‌ ಹಾಗೂ ಗೃಹಶೋಭಾ ಪತ್ರಿಕೆಯ ಫೌಂಡರ್‌ ಎಡಿಟರ್‌ ಪರೇಶ್‌ನಾಥ್‌ ತಮ್ಮ ವಿಚಾರ ಪ್ರಸ್ತುತಪಡಿಸಿದರು. ಅನೇಕ ಮಹಿಳಾ ಸೆಲೆಬ್ಸ್ ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಇಂಥ ಪ್ರಶಸ್ತಿ ನೀಡಿದ ಇನ್ನಿತರರು ಎಂದರೆ ಅರುಂಧತಿ ಕಾಟಜೂ, ಸುಪ್ರೀಂ ಕೋರ್ಟ್‌ ಆಫ್ ಇಂಡಿಯಾದ ಸೀನಿಯರ್‌ ಅಡ್ವೋಕೇಟ್‌ ಊರ್ವಶಿ ಬೂಟಾಲಿಯಾ, ಸುಪ್ರಸಿದ್ಧ ಸ್ತ್ರೀವಾದಿ ಲೇಖಕಿ, ಪ್ರಕಾಶಕಿ, ಕಾರ್ಯಕರ್ತೆ ಶೋಭನಾ ನಾರಾಯಣ್‌, ಪ್ರಸಿದ್ದ ಕಥಕ್‌ ನರ್ತಕಿ, ಸನ್ಮಾನಿತ ಜ್ಯೂರಿ ಸದಸ್ಯೆ. ಡೆಲ್ಲಿ ಪ್ರೆಸ್‌ ನ ಎಗ್ಸಿಕ್ಯೂಟಿವ್ ‌ಪಬ್ಲಿಶರ್‌ ಅನಂತ್ ನಾಥ್‌ ಅತಿಥಿಗಳಿಗೆ ಸ್ವಾಗತ ಕೋರಿದರು.

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಪಾರ್ಟ್‌ ನರ್‌ ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ 2026ರ ಏರ್‌ ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ಬ್ಯೂಟಿ ಪಾರ್ಟ್‌ನರ್‌ : ಗ್ರೀನ್‌ ಲೀಫ್‌, ಗಿಫ್ಟಿಂಗ್‌ ಪಾರ್ಟ್‌ ನರ್‌ ನ್ಯಾಸಾ ಬಾಯೀ ಲೀನಾ, ಎಲಿಗೆನ್ಸ್ ಪಾರ್ಟ್ ನರ್‌ ಕಾಶ್ಮೀರಿ ಶಾಲ್ ಎಂಪೋರಿಯಂ ಹಾಗೂ ಅಸೋಸಿಯೇಟ್‌ ಪಾರ್ಟ್‌ ನರ್‌ ಲೈಫ್‌ ಇನ್‌ ಶ್ಯೂರೆನ್ಸ್ ಕಾರ್ಪೊರೇಶನ್‌ ಆಫ್ ಇಂಡಿಯಾ, ಮೈಸೂರು ಸ್ಯಾಂಡಲ್ ಸೋಪ್‌, ಅಜ್ಮೇರಾ ಫ್ಯಾಷನ್‌, ಪವರ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿ. (ಪವರ್‌ ಗ್ರಿಡ್). ಬಂದಿದ್ದ ಪ್ರೇಕ್ಷಕರ ಮುಖಗಳೆಲ್ಲ ಬೆಳಗುತ್ತಿತ್ತು. ಆ ಸಂಜೆ ನಂಬಿಕೆ, ಭರವಸೆ, ಭಾವಾವೇಶ, ಆತ್ಮವಿಶ್ವಾಸಗಳ ಪ್ರತೀಕವಾಗಿತ್ತು. ಪ್ರೇಕ್ಷಕರು ಈ ಇಡೀ ಅವಾರ್ಡ್‌ ಸಮಾರಂಭವನ್ನು ಮನದಣಿಯೇ ಆನಂದಿಸಿದರು. ಒಂದು ಹೊಸ ಪ್ರೇರಣೆ ಹಾಗೂ ಸುಮಧುರ ನೆನಪುಗಳೊಂದಿಗೆ, ತುಂಬಿದ ಹೃದಯದಿಂದ ವಿದಾಯ ಕೋರಿ ಹೊರಟರು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ