ಪ್ರಯಾಣ ಎಂಬುದರ ನೈಜ ಅರ್ಥ : ಇದು ಯಾವ ಪೇಂಟಿಂಗ್ ಅಲ್ಲ, ಇದಂತೂ ಅಮೆರಿಕಾದ ಎಲ್ಲಕ್ಕಿಂತಲೂ ಅತಿ ಬಣ್ಣಬಣ್ಣದ ಲೈವ್ಲೀ, ಫನ್, ಫುಡ್ ಮ್ಯೂಸಿಕ್ ನ ನಗರ ನ್ಯೂ ಆರ್ಲಿರ್ನ್ಸ್ ನ ಫಟೋ, ಅಲ್ಲಿ ನಿಮಗೆ ಪ್ರಾಚೀನ ನವೀನ ಸಂಸ್ಕೃತಿಗಳೆರಡೂ ಕಾಣಸಿಗುತ್ತವೆ. ಅಲ್ಲಿನವರಿಗೆ ಇದು ಹಳೆಯವನ್ನು ಮರಳಿ ನೆನಪಿಸುವ ನಗರ, ಹೀಗಾಗಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ. ಟೂರಿಸಮ್ ಗಾಗಿ ಯಾವುದೋ ಚರ್ಚು, ಮಂದಿರ, ಮಸೀದಿ ಹುಡುಕಿ ಹೋಗಬೇಡಿ, ಪ್ರವಾಸಿಗರಿಗೆ ಇಂಥ ರೋಮಾಂಚನ ಬೇಕು! ನಮ್ಮಲ್ಲಿ ಪ್ರವಾಸ ಅಂದ್ರೆ ಧಾರ್ಮಿಕ ಕ್ಷೇತ್ರ ಎಂಬಂತಾಗಿದೆ. ಹೀಗಾಗಿ ಜನ ಅಲ್ಲಿನ ಗೌಜುಗದ್ದಲ, ಗಲೀಜು, ದುರ್ವಾಸನೆ, ಕಚಡಾ ಆಹಾರ ತಿನ್ನುತ್ತಾ ಹೇಗೋ ಸಮಯ ಹಾಳು ಮಾಡಿಕೊಳ್ಳುತ್ತಾರೆ, ಛೇ…ಛೇ… ಈ ಪ್ರವಾಸ ಪ್ರಯಾಸ ಆಯ್ತು ಅಂತಾರೆ. ತೀರ್ಥಕ್ಷೇತ್ರ ಇಂಥ ರೋಮಾಂಚನ ನೀಡದು, ಮೂಢನಂಬಿಕೆ ಬೆಳೆಸುತ್ತದಷ್ಟೆ.

ಹ್ಯಾಪಿ ಲೈಫ್ : ಮುಂದಿನ ದಿನಗಳಲ್ಲಿ ಆಧುನಿಕ ಮನೆ ಅಂದ್ರೆ ಹೀಗೇ ಇರುತ್ತದೆ, ಮುಂದಿನ ಹಾಲ್ ನಲ್ಲಿ ಫೋರ್ ಸೀಟರ್ ನ ಒಂಟಿ ಸೋಫಾ ಇರುತ್ತದೆ, ಹಿಂಭಾಗದಲ್ಲಿ ಓಪನ್ ಕಿಚನ್, ಒಂದು ಮೂಲೆಯಲ್ಲಿ ಶವರ್. ಒಂದೇ ಸೋಫಾದಲ್ಲಿ ಇಡೀ ಕುಟುಂಬ ಇಡೀ ಜೀವನ ಹೇಗೆ ಕಳೆಯುತ್ತದೆ ಎಂಬುದನ್ನು ವಾಲ್ ಮಾರ್ಟ್ ಸ್ಟೋರ್ ಚೆನ್ನಾಗಿಯೇ ರಿಸರ್ಚ್ ಮಾಡಿಸುತ್ತದೆ, ಇದರಿಂದ ಸೋಫಾ ಸ್ಪ್ರಿಂಗ್ಸ್ ಹಾಳಾಗಬಾರದು, ಕಾಲೂ ಮುರಿಯಬಾರದು. ದಿನೇದಿನೇ ದುಬಾರಿ ಆಗುತ್ತಿರುವ ಮನೆಗಳು, ಸ್ಟುಡಿಯೋ ಅಪಾರ್ಟ್ ಮೆಂಟ್ ಗಳಲ್ಲಿ ಪೇರೆಂಟ್ಸ್, ಮಕ್ಕಳು, ಒಮ್ಮೊಮ್ಮೆ ಅಜ್ಜಿ ತಾತಾ ಅಡ್ಜಸ್ಟ್ ಆಗಿಬಿಡುತ್ತಾರೆ. ಹೀಗಾಗಿ ಇಲ್ಲಿ ಅನಗತ್ಯ ವಸ್ತುಗಳ ಹೊರೆಯಿಲ್ಲ. ಕೇವಲ ನಗು, ಸಂತಸ, ಗೇಮ್ಸ್, ಫ್ರೆಂಡ್ಸ್, ಜಾಗ ಸಾಲದೆಂಬ ಜಂಜಾಟವಿಲ್ಲ.

ಕಳಾಹೀನ ಆಗುತ್ತಿರುವ ಜೀವನ : ಓಪ್ಪೋ ರಿನೋ ಇನ್ ಫ್ಲೂಯೆನ್ಸರ್ಸ್ ಗೆಂದೇ ಒಂದು ವಿಶಿಷ್ಟ ಫೋನ್ ಕ್ಯಾಮೆರಾ ಇದ್ದು, ಇದು ಶಾರ್ಪ್ ಇಮೇಜ್ ಹಾಗೂ ಕ್ವಿಕ್ ಅಪ್ ಲೋಡ್ ಮಾಡುತ್ತದೆ, ಜೊತೆಗೆ ಎಡಿಟಿಂಗ್ ಟೂಲ್ಸ್ ಸಹ ಇವೆ. ಸೋಶಿಯಲ್ ಮೀಡಿಯಾದ ಮ್ಯಾಡ್ ಮ್ಯಾಡ್ ವರ್ಲ್ಡ್ ಹೀಗೆಯೇ ಅನೇಕ ವರ್ಷ ಮುಂದುವರಿಯಲಿದೆ. ಅಶಿಕ್ಷಿತ ಜನತೆ ತಮ್ಮ ಬೆಲೆ ಬಾಳುವ ಸಮಯವನ್ನು ಕೇವಲ ರೀಲ್ಸ್ ನೋಡುತ್ತಾ ಕಳೆದುಬಿಡುತ್ತದೆ. ಪ್ರತಿ ಮೊಬೈಲ್ ಕಂಪನಿಯೂ ಒಂದಕ್ಕಿಂತ ಒಂದು ಸ್ಪೆಷಲ್ ಡಿವೈಸ್ ಕ್ರಿಯೇಟ್ ಮಾಡುತ್ತಿದೆ. ಇದರಿಂದ ರೀಲ್ಸ್ ನೋಡುವ ಹುಚ್ಚರಿಗೆ ಆಹಾರ, ಆಸರೆ, ಆರೋಗ್ಯದ ಗಮನವಿಲ್ಲ…. ಬದಲಿಗೆ ಫಾಲೋರ್ಯೆಸ್ ಚಿಂತೆ ಮಾತ್ರ ಇರಲಿದೆ. ಇದೀಗ ಆಧುನಿಕ ಜೀವನ ಇಂಥ ಕಳಾಹೀನ ರೀಲ್ಸ್ ಮಾಡುವುದಕ್ಕಷ್ಟೇ ಸೀಮಿತ ಆಗಿಹೋಗಿದೆ.

ಇದರಲ್ಲಿ ಏನಿದೆ ವಿಶೇಷ? : ಪ್ಯಾಷನ್ ಇಂಡಸ್ಟ್ರಿ ಸಹ ಧರ್ಮದ ತರಹವೇ ಗಾಳಿಗೋಪುರದಂತೆ ಹೇಗ್ಹೇಗೋ ಬೆಳೆಯುತ್ತಿದೆ. ಈ ಲೈಟ್ ಗೌನ್ ನ್ನೇ ನೋಡಿ, ಇದರಲ್ಲಿ ಹೇಳಿಕೊಳ್ಳುವಂಥ ವಿಶೇಷ ಏನಿದೆ? ಈ ಪೋರ್ಚುಗೀಸ್ ಡಿಸೈನರ್ ಎಂಥಾ ಅದ್ಭುತ ಕ್ರಿಯೇಟ್ ಮಾಡಿದ್ದಾರೆ ಎಂದು ಹೇಳುವುದಕ್ಕೇನಿದೆ? ಪೋರ್ಚುಗೀಸ್ ನ ಒಂದು ಸಣ್ಣ ನಗರದಲ್ಲಿ ಪ್ಯಾರಿಸ್ ರನ್ ಅವೇ ಎಂಬಾಕೆ ಪೋರ್ಚುಗಲ್ ಫ್ಯಾಬ್ರಿಕ್ಟ್ರೆಡಿಶನಲ್ ಡಿಸೈನ್ ಮೇಳೈಸಿ ಒಂದು ಕಲೆಕ್ಷನ್ ರೆಡಿ ಮಾಡಿದ್ದಾಳೆ. ನಮ್ಮಲ್ಲಿ ಹೊಸ ಲೆಹಂಗಾಗೆ 4-6 ಹೊಸ ಬುಟ್ಟಾ ಜೋಡಿಸಿದಷ್ಟೇ ಸಾಧಾರಣವಾಗಿದೆಯೇ ಹೊರತು ಇನ್ನೇನೂ ಗಮ್ಮತ್ತಿಲ್ಲ.

ಗುಂಡಿನ ಮತ್ತು ಗಮ್ಮತ್ತಲ್ಲ, ಆಪತ್ತು ! : ಲೇಖಕಿ ಅನೀಸಾ ಮಿಲರ್ ತನ್ನ ಕಾದಂಬರಿ ಹಾಗೂ ನಾನ್ ಫಿಕ್ಷನ್ ಲೇಖನಗಳಲ್ಲಿ, ಈ ಬಾರಿ ಎಂಥಾ ವಿಷಯ ಆರಿಸಿಕೊಂಡಿದ್ದಾಳೆಂದರೆ, ಸಾಮಾನ್ಯವಾಗಿ ಜನ ಅಂಥವನ್ನು ಬಹಿರಂಗಗೊಳಿಸದೆ ಮುಚ್ಚಿಡುತ್ತಾರೆ. ಆಲ್ಕೋಹಾಲ್ ಸೇವನೆ ಎಷ್ಟೇ ಕಡಿಮೆ ಪ್ರಮಾಣದ್ದಿರಲಿ, ಸಣ್ಣ ವಯಸ್ಸಿಗೇ ಶುರುವಾಗಿಬಿಟ್ಟರೆ, ಅಡಿಕ್ಷನ್ ಆಗದಿದ್ದೀತೇ? ವಿಶ್ವದೆಲ್ಲೆಡೆ ಇತ್ತೀಚೆಗೆ ಡೀಅಡಿಕ್ಷನ್ ಕೇಂದ್ರಗಳು ತೆರೆಯಲ್ಪಡುತ್ತಿವೆ, ಅಲ್ಲಿ ರೋಗಿಗಳನ್ನು ಲೂಟಿ ಮಾಡುತ್ತಾರೆ ಎಂಬುದು ಬೇರೆ ವಿಷಯ. ಅವರೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತದೆ, ಕೊನೆಗೆ ಏನೂ ಬದಲಾವಣೆ ಆಗಿರುವುದಿಲ್ಲ. ದೆಹಲಿಯಲ್ಲಿ ಇತ್ತೀಚೆಗೆ ಇಂಥದ್ದೇ ಕೇಂದ್ರದ ವಿರುದ್ಧ ದೂರು ದಾಖಲಿಸಲಾಗಿತ್ತು. ಅಲ್ಲಿ ರೋಗಿಗಳನ್ನು ಸರಪಳಿಯಲ್ಲಿ ಕಟ್ಟಿ ಹಾಕುತ್ತಿದ್ದರಂತೆ, ಕೆಲವರು ಸತ್ತದ್ದೂ ದಿಟ! ಅಂಥವರ ಆಪ್ತರು ಸಧ್ಯ ಪೀಡೆ ಕಳೆಯಿತಲ್ಲ ಎಂದೇ ಭಾವಿಸುತ್ತಾರೆ. ಆಲ್ಕೋಹಾಲ್ಡ್ರಗ್ಸ್ ನ್ನು ಹಲವು ದಶಕಗಳಿಂದ ಧರ್ಮವೇ ತನ್ನ ಭಕ್ತರನ್ನು ಪ್ರಚೋದಿಸಲು ಬಳಸುತ್ತಿದೆ. ಅನೀಸಾಳ ಇಂಥ ಪುಸ್ತಕಗಳಿಂದ ಯಾರಾದರೂ ಒಳ್ಳೆಯದನ್ನು ಕಲಿಯುತ್ತಾರೆ ಎಂದರೆ ಅದು ಅಸಂಭವ!





