ಬೆಲ್ಟ್ ಸೆಲ್ಲಿಂಗ್ ಲೇಖಕಿ, ಕೋಚ್ ಥೆರಪಿಲ್ಟ್ ಕ್ರಿಟಿಕಲ್ ಥಿಂಕಿಂಗ್ ಹಾಗೂ ಕಮ್ಯುನಿಕೇಶನ್ ಸ್ಕ್ಸಿಲ್ ಇಂಪ್ರೂವ್ ಮಾಡಿ, ಕೆರಿಯರ್ ದಾರಿ ಸುಗಮಗೊಳಿಸಿಕೊಳ್ಳಿ……
ಯಶೋಧರಾ ಲಾಲ್ ಒಬ್ಬ ಬೆಸ್ಟ್ ಸೆಲ್ಲಿಂಗ್ ಲೇಖಕಿ, ಕೋಚ್, ಥೆರಪಿಸ್ಟ್ ಆಗಿದ್ದು ಖಾಸಗಿ ಪ್ರಾಕ್ಟೀಸ್ ಮಾಡುತ್ತಾರೆ. ಈಕೆ ದೆಹಲಿ ಹಾಗೂ ಬೆಂಗಳೂರು (2002)ನಿಂದ ಪದವಿ ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ ಕಾರ್ಪೊರೇಟ್ ವರ್ಲ್ಡ್ ನಲ್ಲಿ ಸಕ್ರಿಯರಾಗಿದ್ದಾರೆ. ಈಕೆ ಎರಿಕ್ಸನ್ ಸಲ್ಯೂಶನ್ ಫಾಕ್ಸ್ ಕೋಚಿಂಗ್‌ಟ್ರಾನ್ಸಾಕ್ಷನ್ ಅನಾಲಿಸಿಸ್ (ಸೈಕೊಥೆರಪಿ)ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಟಿಫೈಡ್ ಸಹ.
ಕಪಲ್ಸ್ ಕೌನ್ಸಿಲರ್ ರೂಪದಲ್ಲಿ ಯಶೋಧರಾ ಸ್ಯಾನ್ ಫ್ರಾನ್ಸಿಸ್ಕೋದ ಕಪಲ್ಸ್ ಇನ್ ಸ್ಟಿಟ್ಯೂಟ್ ಜೊತೆ ಅಡ್ವಾನ್ಸ್ಡ್ ಟ್ರೇನಿಂಗ್‌ಮೆಂಟರ್ ಶಿಪ್ ಪ್ರೋಗ್ರಾಮ್ ನಲ್ಲಿದ್ದಾರೆ. ಈಕೆ ಒಬ್ಬ ಟೆಡ್ ಎಕ್ಸ್ ಸ್ಪೀಕರ್, ಫಿಟ್ ನೆಸ್ ಇನ್ ಸ್ಟ್ರಕ್ಟರ್ ಹಾಗೂ ಯೋಗಾ ಪ್ರಾಕ್ಟೀಶನರ್ ಕೂಡ. ಇವರಿಗೆ ಸಾಹಿತ್ಯದಲ್ಲೂ ಹೆಚ್ಚಿನ ಅಭಿರುಚಿ ಇದೆ. ಇವರ ಕಾದಂಬರಿಗಳಲ್ಲಿ `ಜಸ್ಟ್ ಮ್ಯಾರೀಡ್, ಪ್ಲೀಸ್ ಎಕ್ಸ್ ಕ್ಯೂಸ್, ಹೌ ಐ ಬಿಕೇಮ್ ಎ ಫಾರ್ಮರ್ಸ್ ಲೈಫ್’ ಇತ್ಯಾದಿ ಪ್ರಮುಖ. ಇವರ ಲೇಟೆಸ್ಟ್ ಕೃತಿ `ವಾಟ್ ದೇ ಡೋಂಟ್ ಟೆಲ್‌ಯೂ ಅಬೌಟ್ ಮ್ಯಾರೇಜ್’ ಸಾಕಷ್ಟು ಜನಪ್ರಿಯ. ಕಪಲ್ಸ್ ಹಾಗೂ ಥೆರಪಿಸ್ಟ್ ರಿಗೆ ಸಂಬಂಧಗಳನ್ನು ನ್ಯಾವಿಗೇಟ್ ಗೊಳಿಸಲು ಇದು ಉತ್ತಮ ಗೈಡ್. ಇವರೊಂದಿಗಿನ ಸಂದರ್ಶನದ ಸಾರಾಂಶ :
ನಿಮ್ಮ ಅಂಡರ್ ಗ್ರಾಜ್ಯುಯೇಟ್ ಎಜುಕೇಶನ್ ನಿಮ್ಮ ನಂತರದ ಮಾರ್ಕೆಟಿಂಗ್ ಕೆರಿಯರ್ ನಲ್ಲಿ ಸಹಾಯ ಮಾಡಿತೇ?
ಒಂದು ಹಂತದವರೆಗೆ ಹೌದು, ಬಿ.ಕಾಂ ಆನರ್ಸ್ ನಿಂದ ನನಗೆ ಮಾರ್ಕೆಟಿಂಗ್ ಎಕ್ಸ್ ಪರ್ಟ್ಸ್ ಜೊತೆ ಸಂಪರ್ಕ ಸಿಕ್ಕಿತು. ಬಿಸ್ ನೆಸ್, ಎಕನಾಮಿಕ್ಸ್, ಗಣಿತದ ಕುರಿತಾದ ನನ್ನ ಬೇಸಿಕ್ ತಿಳಿವಳಿಕೆ, ನಾನು ಬ್ರಾಂಡ್ಸ್ ಮ್ಯಾನೇಜ್ ಮಾಡಲು ಹಾಗೂ ಪ್ರಾಫಿಟೆಬಿಲಿಟಿಯ ಎಕ್ಸ್ ಪರ್ಟ್ಸ್ ಕುರಿತು ಅರಿಯಲು ಹೆಚ್ಚು ಸಹಕಾರಿಯಾಯ್ತು. ಮುಂದಿನ ಪೀಳಿಗೆಯರಿಗೆ ನನ್ನ ಸಲಹೆ ಎಂದರೆ, ಅವರಿಗೆ ಯಾವುದರಲ್ಲಿ ಹೆಚ್ಚಿನ ಆಸಕ್ತಿ ಇದೆಯೇ ಅದನ್ನೇ ಕಲಿಯಲಿ. ಅದು ಮುಂದಿನ ಸುದೀರ್ಘ ಕೆರಿಯರ್ ಗೆ ಹೇಗೆ ಪೂರಕ ಎಂದು ಚಿಂತಿಸುವುದು ಬೇಡ.
ನನ್ನ ದೃಷ್ಟಿಯಲ್ಲಿ ಕಲಿಯುವ ಸಾಮರ್ಥ್ಯ, ಆಲೋಚನಾತ್ಮಕ ಚಿಂತನೆ, ಉತ್ತಮ ಕಮ್ಯುನಿಕೇಶನ್, ಇತರರೊಂದಿಗೆ ರಿಯಲ್ ಕನೆಕ್ಷನ್ ಹೊಂದುವಿಕೆ, ಇವೆಲ್ಲ ಯಶಸ್ಸಿಗೆ ನೇರ ಸಂಬಂಧಿಸಿದ್ದು, ಇದಕ್ಕೂ ನೀವು ಡಿಗ್ರಿಯಲ್ಲಿ ಕಲಿಯುವುದಕ್ಕೂ ಸಂಬಂಧವಿಲ್ಲ.
ಬಿ.ಕಾಂ. ನಂತರ ಫೈನಾನ್ಸ್ ರೂಟ್ ಗೆ ಬದಲಾಗಿ ನೀವು ಮಾರ್ಕೆಟಿಂಗ್ ಏಕೆ ಆರಿಸಿಕೊಂಡಿರಿ? ನಿಮ್ಮ ಕಲಿಕೆ ಜಾಬ್ ಮಾರ್ಕೆಟ್ ನಲ್ಲಿ ಉಪಯುಕ್ತ ಎನಿಸೀತೇ? ಯಾವ ಇದು ಕೇವಲ ಥಿಯರಿ ಮಾತ್ರ ಅಂತೀರ?
ಈ ಸ್ಟೇಜ್ ನಲ್ಲೂ ನನ್ನ ಮೊದಲ ನೌಕರಿಯಿಂದಾಗಿ ಈ ಆಯ್ಕೆಗಳನ್ನು ಮುಗಿಸಿಬಿಡುವ ಪ್ರಕ್ರಿಯೆ ಆಗಿತ್ತು. ನನಗೆ ನೀಡಿದ ಎಕ್ಸ್ ಪೋಶರ್ ನಿಂದ ನಾನು ಕನ್ಸಲ್ಟಿಂಗ್ ಯಾ ಇನ್ ವೆಸ್ಟ್ ಮೆಂಟ್ ಬ್ಯಾಂಕಿಂಗ್ ನಲ್ಲಿ ಕೆರಿಯರ್ ಬಯಸಲಿಲ್ಲ. ಹೀಗಾಗಿ ಮಾರ್ಕೆಟಿಂಗ್ ನನ್ನ ಕ್ರಿಯೇಟಿವ್‌ಕಮ್ಯುನಿಕೇಟಿವ್ ಕ್ವಾಲಿಟಿಯನ್ನು ಆಕರ್ಷಿಸಿತು. ನನ್ನ ಪ್ರಕಾರ, ಯೂನಿಲಿವರ್ ನಲ್ಲಿ ನನ್ನ ಸಮ್ಮರ್ ಇಂಟರ್ನ್ ಶಿಪ್ ನಿಂದ ನಾನು ಮಾರ್ಕೆಟಿಂಗ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಕಲಿಸಿತು.
ಈಗ ನೀವು ಕಪಲ್ಸ್ ಕೌನ್ಸಿಲರ್ ರೂಪದಲ್ಲಿದ್ದೀರಿ. ಇದನ್ನೇ ನಿಮ್ಮ ಶಿಕ್ಷಣದಲ್ಲಿ ಪ್ರಧಾನವಾಗಿ ಆರಿಸಿಕೊಳ್ಳಲು ಕಾರಣವೇನು?
ಸುಮಾರು 17 ವರ್ಷಗಳವರೆಗೂ ಕಾರ್ಪೊರೇಟ್ ಜಗತ್ತಿನಲ್ಲಿ ಇದ್ದ ಮೇಲೆ, ನಾನು ಹಲವು ಕಂಪನಿ (ಯೂನಿಲಿವರ್, ಹಿಂದೂಸ್ಥಾನ್ ಟೈಮ್ಸ್, ಡೈಸನ್, ಬ್ರಾಂಡ್ಸ್) ಗಳಲ್ಲಿ ಮಾರ್ಕೆಟಿಂಗ್ ನ ಲೀಡರ್ ರೂಪದಲ್ಲಿ ಕೆಲಸ ಮಾಡಿರುವೆ. ಆದರೂ ಯಾಕೋ ನನಗೆ ತೃಪ್ತಿ ಎನಿಸಲಿಲ್ಲ. ನನ್ನದು ಯಶಸ್ವೀ ಕೆರಿಯರ್ ಆಗಿದ್ದರೂ, ಈ ಕೆಲಸ ನನ್ನ ಮುಖ್ಯ ಗುರಿ ಅಲ್ಲ ಎಂದೇ ಅನಿಸುತ್ತಿತ್ತು.
ನಾನು ನನ್ನ ಟೀಮ್ ನ್ನು ಮೆಂಟರ್ ಮಾಡುತ್ತಾ, `ಆರ್ಗನೈಸೇಶನ್ ಪಾಲಿಸೀಸ್ ನ್ನು ಅಬ್ಸರ್ವ್ ಮಾಡಲು ಹಾಗೂ ವ್ಯಕ್ತಿ ಮತ್ತು ಗ್ರೂಪ್ಸ್ ನ ಸೈಕಾಲಜಿಯನ್ನು ನೋಡಿ, ತಿಳಿಯುವುದರಲ್ಲಿ ಹೆಚ್ಚು ಆಸಕ್ತಿ ಬೆಳೆಯ ತೊಡಗಿತು.’ ಹೀಗಾಗಿ ನಾನು ಒಂದು ಕೋಚಿಂಗ್ ಸರ್ಟಿಫಿಕೇಶನ್ ಹಾಗೂ ನಂತರ 2020ರಲ್ಲಿ ಟ್ರಾನ್ಸಾಕ್ಷನ್ ಅನಾಲಿಸಿಸ್ ಮೂಲಕ ಸೈಕೋಥೆರಪಿಯ ಡೀಪ್ ಸ್ಟಡಿಗಾಗಿ ಪಾಸಿಬಿಲಿಟಿ ಹುಡುಕುತ್ತಿದ್ದಾಗ, ನಾನು ನನ್ನನ್ನು ಒಬ್ಬ ಥೆರಪಿಸ್ಟ್ ರೂಪದಲ್ಲಿ ಪ್ರಾಕ್ಟೀಸ್ ಮಾಡುವುದಕ್ಕಾಗಿ ರೀಎಜುಕೇಟ್ ಮಾಡಿಕೊಳ್ಳುವ ಕಾನ್ಛಿಡೆನ್ಸ್ ಕಂಡುಕೊಂಡೆ.
ಕ್ವಾಲಿಫಿಕೇಶನ್ ಜೊತೆಗೆ ಟ್ರೇನಿಂಗ್
ಇದ್ದಾಗ ಮಾತ್ರ ಜಾಬ್ ಸಿಗಲು ನೆರವಾಗುತ್ತದೆ ಅಂತೀರಾ?
ಸೈಕೋಥೆರಪಿಸ್ಟ್ ರೂಪದಲ್ಲಿ ಟ್ರೇನಿಂಗ್ ನನ್ನ ವಾಸ್ತವಿಕ ಕೆಲಸಕ್ಕೆ ಡೈರೆಕ್ಟ್ಲಿ ಕೋರಿವೇಟೆಡ್. ನಾನೀಗ ಪ್ರೈವೇಟ್ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ನನ್ನ ಟ್ರೇನಿಂಗ್ ನಲ್ಲಿ ಕಲಿತ ಫ್ರೇಮ್ ವರ್ಕ್ಸ್ ಹಾಗೂ ಥಿಯರಿ ನನ್ನ ಕ್ಲೈಂಟ್ಸ್ ಜೊತೆ ಕೆಲಸ ಮಾಡುತ್ತಾ ಹೆಚ್ಚು ಉಪಯುಕ್ತ ಅನಿಸಿತು. ಇದು ಏಕೆ ಅಂದ್ರೆ, ಟ್ರೇನಿಂಗ್ ಸಂದರ್ಭದಲ್ಲಿ ಪ್ರಾಕ್ಟೀಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ನಾವು ಸದಾ ನಮ್ಮ ಕೆಲಸವನ್ನು ಟ್ರಾನ್ಸಾಕ್ಷನ್ ಅನಾಲಿಸಿಸ್ ನ ಸಂದರ್ಭದಲ್ಲಿ ಅರ್ಥೈಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿತ್ತು.
ಒಬ್ಬ ಸರ್ಟಿಫೈಡ್ ಟ್ರಾನ್ಸಾಕ್ಷನ್ ಅನಲಿಸ್ಟ್ ಆಗಲು ಒಂದು ಎಗ್ಸಾಮ್ ತೆಗೆದುಕೊಳ್ಳಬೇಕು. ಇದು ಲಿಖಿತ ಹಾಗೂ ಮೌಖಿಕ ಎರಡೂ ಆಗಿರುತ್ತದೆ. ಇದರ ಮೂಲಕ ಆಯೋಜಿತಗೊಂಡಿರುತ್ತದೆ, ಅದು ಟ್ರಾನ್ಸಾಕ್ಷನ್ ಅನಲಿಸ್ಟ್ ರ ಒಂದು ಅಂತಾರಾಷ್ಟ್ರೀಯ ಸಂಸ್ಥೆ.
ಒಬ್ಬ ಕೌನ್ಸಿಲರ್ ರೂಪದಲ್ಲಿ ನನ್ನ ತರಬೇತಿ ಸ್ಯಾನ್ ಫ್ರಾನ್ಸಿಸ್ಕೋದ ಕಪಲ್ಸ್ ಇನ್ ಸ್ಟಿಟ್ಯೂಟ್ ನಲ್ಲಿ ಆಯ್ತು. ನಾನು ಭಾರತದಲ್ಲಿ ಕಪಲ್ಸ್ ಥೆರಪಿಗಾಗಿ ಉತ್ತಮ ಟ್ರೇನಿಂಗ್‌ಹುಡುಕಿಕೊಳ್ಳಲು ವೈಯಕ್ತಿಕವಾಗಿ ಬಹಳ ಕಷ್ಟ ಎದುರಿಸಬೇಕಾಯಿತು. ಇದಕ್ಕಾಗಿ ನಾನು ವಿದೇಶಕ್ಕೆ ಹೋಗಲು ಬಯಸಿದೆ. ನಾನು ಕಪಲ್ಸ್ ಥೆರಪಿಯಲ್ಲಿ ಲೀಡಿಂಗ್ ಆ್ಯಲಿನ್ ಬೇಡರ್ ಮತ್ತು ಪೇಟ್ ಪಿಯರ್ಸನ್ ನಲ್ಲಿ ಅಭ್ಯಸಿಸಿದೆ. ಅಮೆರಿಕಾ ಹಾಗೂ ಭಾರತದ ನಡುವೆ ಸಾಂಸ್ಕೃತಿಕ ಅಂತರದ ಕಾರಣ ಅವರ ವಿಕಾಸವಾದಿ ಮಾಡೆಲ್, ಮಾಡರ್ನ್ ಇಂಡಿಯನ್ ಕಪಲ್ಸ್ ಗೆ ಅತ್ಯಧಿಕ ಉಪಯುಕ್ತ.
ಕಾರ್ಪೊರೇಟ್ ಜಾಬ್ ಹಾಗೂ ಕ್ರಿಯೇಟಿವ್ ಪ್ಯಾಶನ್ ನಡುವೆ ಸಿಕ್ಕಿಕೊಂಡ ವಿದ್ಯಾರ್ಥಿಗಳಿಗೆ ನೀವು ಯಾವ ಒಂದು ಪ್ರಾಕ್ಟೀಸ್ ಯಾ ಮೈಂಡ್ ಸೆಟ್ ನ ಶಿಫಾರಸ್ಸು ಮಾಡುವಿರಿ?
ಈ ನಿಟ್ಟಿನಲ್ಲಿ ನಾನು ಶಿಫಾರಸ್ಸು ಮಾಡುವುದೆಂದರೆ, ಕಾರ್ಪೊರೇಟ್ ಜಾಬ್‌ಕ್ರಿಯೇಟಿವ್ ಪ್ಯಾಶನ್ ನ್ನು ಪರಸ್ಪರ ವಿರುದ್ಧ ಧ್ರುವ ಎಂದು ಭಾವಿಸದಿರಿ. ಎರಡೂ ಬೇರೆ ಬೇರೆ ಮಾಡೆಲ್ ಅಷ್ಟೆ. ನೀವು ನಿಮ್ಮ ಕಾರ್ಪೊರೇಟ್ ಜಾಬ್ ನ ಸಂದರ್ಭದಲ್ಲಿ ಬಹಳಷ್ಟು ಕ್ರಿಯೇಟಿವ್ ಪ್ಯಾಶನ್ ಕಂಡುಕ್ಳೊಬಹುದು. ಅದು ಆಗದಿದ್ದರೆ, ನೀವು ಈ ನಿಟ್ಟಿನಲ್ಲಿ ತೃಪ್ತಿ ಕಂಡುಕೊಳ್ಳಲು ಕಂಪನಿಗಳ ಪಾತ್ರ ಬದಲಾಯಿಸುವ ಬಗ್ಗೆ ವಿಚಾರ ಮಾಡಿ ಯಾ ನೀವು ನಿಮ್ಮ ಕಾರ್ಪೊರೇಟ್ ನೌಕರಿಯನ್ನು ನಿಮ್ಮ `ಕ್ರಿಯೇಟಿವ್ ಸ್ಪಾನ್ಸರ್’ ರೂಪದಲ್ಲೂ ನೋಡಬಹುದು ಯಾ ಧಾರಾಳವಾಗಿ ಬಂಡವಾಳ ರೆಡಿ ಮಾಡಿಕೊಳ್ಳಿ, ಆಗ ಮಾತ್ರ ವಾಸ್ತವದಲ್ಲಿ ನೀವು ಅಂದುಕೊಂಡಿದ್ದನ್ನು ಮಾಡಲು ಸಾಧ್ಯ. ಇದಕ್ಕೆ ಆರ್ಥಿಕ ಸ್ವಾತಂತ್ರ್ಯ ಬಲು ಮುಖ್ಯ. ನಿಮ್ಮ ಜೀವನವನ್ನು ಈ ನಿಟ್ಟಿನಲ್ಲಿ ಸ್ಟ್ರಕ್ಚರ್ ಮಾಡಿಕೊಳ್ಳಿ, ನಿಮ್ಮ ನೌಕರಿ ನಿಮ್ಮ ಬಿಲ್ಸ್ ಪೇ ಮಾಡುವಂತಿರಬೇಕು ಯಾ ಹಾಬೀಸ್ ಸ್ಪಾನ್ಸರ್ ಮಾಡುವಂತಿರಬೇಕು.
ನನ್ನ ಪ್ರಕಾರ ಫೈನಾನ್ಶಿಯಲ್ ಸ್ಟೆಬಿಲಿಟಿ ಹಾಗೂ ಕೆರಿಯರ್ ಸ್ಯಾಟಿಸ್ ಫ್ಯಾಕ್ಷನ್ ಎರಡನ್ನೂ ಬ್ಯಾಲೆನ್ಸ್ ಮಾಡಬಹುದು. ಆದರೆ ಪ್ರತಿಯೊಬ್ಬರಿಗೂ ಇದು ಬೇರೆ ಬೇರೆಯೇ ಆಗಿರುತ್ತದೆ. ನಿಮ್ಮ ಗುರಿ ನಿಶ್ಚಯಿಸಿಕೊಂಡು, ಬೇರೆಯವರಿಂದ ಪ್ರೇರಣೆ ಪಡೆದು, ನಿಮ್ಮ ದಾರಿ ಹಸನಾಗಿಸಿಕೊಳ್ಳಿ. ಆದರೆ ಬೇರೆ ಯಾರನ್ನೋ ನಕಲು ಮಾಡಲು ಹೋಗಬೇಡಿ.
ಯಾರಾದರೂ ಥೆರಪಿಸ್ಟ್ ಆಗಿ ಕೆರಿಯರ್ ರೂಪಿಸಿಕೊಳ್ಳಲು ಬಯಸಿದರೆ ಅವರ ಎಜುಕೇಶನ್ ಜರ್ನಿ ಬಗ್ಗೆ ನಿಮ್ಮ ಸಲಹೆ ಏನು?
ಯಾರಾದರೂ ಪ್ರಾಕ್ಟಿಕಲ್ ಆಗಿ ಈ ನಿಟ್ಟಿನಲ್ಲಿ ಕೆರಿಯರ್ ಬಯಸುವಿರಾದರೆ, ಬ್ಯಾಚುಲರ್‌ಮಾಸ್ಟರ್ಸ್ ಮಟ್ಟದಲ್ಲಿ ಸೈಕಾಲಜಿ ಸ್ಟಡಿ ಮಾಡುವುದೇ ಸರಿ. ಇದರ ಹೊರತಾಗಿ ನಾನು ಈಗಲೂ ಹೇಳುವುದೆಂದರೆ, ನಿಮ್ಮ ಜರ್ನಿಯ ಮುಖಾಂತರ ಹೊಸ ಸ್ಕಿಲ್ಸ್ ಕಲಿಯಲು ಹಿಂಜರಿಯದಿರಿ. ನಿಮ್ಮ ಈ ಕಲಿಕೆ ಒಂದು ಜೀವನ ಪರ್ಯಂತದ ಪ್ರಕ್ರಿಯೆ ಆಗಿರುತ್ತದೆ. ಬಲು ವೇಗವಾಗಿ ಬದಲಾಗುತ್ತಿರುವ ಈ ಗ್ಲೋಬಲ್ ಡಿಜಿಟಲ್ ವರ್ಲ್ಡ್ ನಲ್ಲಿ ಟ್ರೇನಿಂಗ್ ಯಾ ಸ್ಟಡಿಗಾಗಿ, ದೇಶದ ಹೊರಗೆ ಹೋಗಲಿಕ್ಕೂ ಸಿದ್ಧರಾಗಿರಿ!
– ಜಿ. ಪಂಕಜಾ





