ಸಿಂಗಲ್ ಸುಖಿ ಡೈಸಿ ಶಾ

ಬಹುಭಾಷಾ ನಟಿ ಡೈಸಿ ಶಾ `ಭದ್ರ' ಚಿತ್ರದ ಮೂಲಕ ಸ್ಯಾಂಡಲ್ ವುಡ್‌ ಗೆ ಕಾಲಿಟ್ಟರು. ಜಗ್ಗೇಶ್‌ ಅಭಿನಯದ `ಬಾಡಿ ಗಾರ್ಡ್‌' ಚಿತ್ರದಲ್ಲಿ ನಟಿಸಿದ್ದರು. `ಗಜೇಂದ್ರ, ಬಚ್ಚನ್‌, ಆಕ್ರಮಣ' ಚಿತ್ರಗಳಲ್ಲೂ ನಟಿಸಿದ್ದಾರೆ. ಸಲ್ಮಾನ್‌ ಖಾನ್‌ ರ `ಜೈ ಹೋ' ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿ ಸಾಕಷ್ಟು ಜನಪ್ರಿಯತೆ ಕೂಡಾ ಪಡೆದಿದ್ದಾರೆ. ತಾನು ಸಿಂಗಲ್ ಆಗಿಯೇ ಸಂತೋಷವಾಗಿದ್ದೇನೆ ಎನ್ನುವ ಡೈಸಿ ಶಾ, ಕುಟುಂಬ ಅಥವಾ ಮದುವೆಯಾಗುವ ಉದ್ದೇಶ ತನಗಿಲ್ಲ ಎಂದು ಬೋಲ್ಡ್ ಆಗಿಯೇ ಹೇಳುತ್ತಾರೆ.

Hrithika-srinivas-(9)

ಲಕ್ಕಿ ಹೃತಿಕಾ ನಟನೆಯಲ್ಲಿ ಪಾಸ್‌

ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ಹೃತಿಕಾ ಶ್ರೀನಿವಾಸ್‌. `ಆರಾಮ್ ಅರವಿಂದ ಸ್ವಾಮಿ, ಔಟ್‌ ಆಫ್ ಸಿಲಬಸ್‌' ಚಿತ್ರಗಳಲ್ಲಿ ನಟಿಸಿರುವ ಹೃತಿಕಾ, `ಉಡಾಳ' ಸಿನಿಮಾದ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅವರ `ನಮ್ ಗಣಿ ಬಿಕಾಂ ಪಾಸ್‌, ಜಾಕಿ 42' ಸಿನಿಮಾಗಳು ಬಿಡುಗಡೆಯಾಗಬೇಕಿವೆ. `ನನಗೆ ಸೂಕ್ತವಾಗುವ ಪಾತ್ರ ಮತ್ತು ಕಂಟೆಂಟ್ ಆಯ್ಕೆಯ ಬಗ್ಗೆಯಷ್ಟೇ ನಾನು ಯೋಚಿಸುತ್ತೇನೆ. ಆ ಪಾತ್ರಕ್ಕೆ ನಾನೆಷ್ಟು ನ್ಯಾಯ ಕೊಡಬಲ್ಲೆ ಎಂಬುದಷ್ಟೇ ನನ್ನ ಗುರಿಯಾಗಿರುತ್ತದೆ. ನನ್ನ ಕೆಲಸ ನಾನು ಮಾಡುತ್ತೇನೆ, ಉಳಿದದ್ದು ದೇವರಿಗೆ ಬಿಡುತ್ತೇನೆ,' ಎನ್ನುತ್ತಾರೆ ಹೃತಿಕಾ.

Mandara-battalahalli-6

ಚಂದನವನದಲ್ಲಿ ಅರಳಿದ ಮಂದಾರಾ

`ಹೊಸ ದಿನಚರಿ, ಬ್ಲಿಂಕ್‌, ಆಚಾರ್‌ಕೋ, ಓಲ್ಡ್ ಮಾಂಕ್‌' ಚಿತ್ರಗಳಲ್ಲಿ ನಟಿಸಿದ್ದಾರೆ ಮಂದಾರಾ ಬಟ್ಟಲಹಳ್ಳಿ. ಎಂಜಿನಿಯರಿಂಗ್ ಓದುತ್ತಿರುವಾಗಲೇ ನಟನೆಯತ್ತ ಆಕರ್ಷಿತರಾಗಿದ್ದ ಅವರು, ಮಕ್ಕಳ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.  ಮಾಡೆಲಿಂಗ್‌ ಹಾಗೂ ಜಾಹೀರಾತುಗಳಲ್ಲೂ ಸಕ್ರಿಯರಾಗಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಮಂದಾರಾ ಇತ್ತೀಚೆಗಷ್ಟೇ ನಟಿಸಿರುವ `ಚಿತ್ರಸಮುದ್ರ ಮಥನ' ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ನಟನೆ ಮಾತ್ರವಲ್ಲ, ನಿರ್ದೇಶನ ಮಾಡುವುದೂ ನನಗಿಷ್ಟ, ಎನ್ನುತ್ತಾರೆ ಮಂದಾರಾ.

Priyanka-kumar-(1)

ಸೀತೆಯಾದ ಪ್ರಿಯಾಂಕಾ ಕುಮಾರ್‌

ಕಿರುತೆರೆಯಿಂದ ಸಿನಿಮಾ ಲೋಕಕ್ಕೆ ಎಂಟ್ರಿಯಾಗಿ ಕ್ಲಾಸ್‌ ಚಿತ್ರಗಳ ಕ್ಲಾಸಿಕ್‌ ಪಾತ್ರಗಳ ಮೂಲಕ ಜನರಿಗೆ ಆಪ್ತವಾಗಿರುವ ನಟಿ ಹಾಗೂ ಮಾಡೆಲ್ ‌ಪ್ರಿಯಾಂಕಾ ಕುಮಾರ್‌, ಎ.ಪಿ. ಅರ್ಜುನ್‌ ನಿರ್ದೇಶನದ `ಅದ್ಧೂರಿ ಲವರ್‌'ನಲ್ಲಿ ಅಭಿನಯಿಸಿದ್ದಾರೆ. `ಬ್ಯಾಡ್ ಮ್ಯಾನರ್ಸ್‌, ರುದ್ರ ಗರುಡ ಪುರಾಣ' ಚಿತ್ರಗಳಲ್ಲೂ ಗಮನ ಸೆಳೆದರು. ಇದೀಗ `ಸೀತಾ ರಾಮ ರಾಜು' ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ, ನನಗೆ ನನ್ನ ಎತ್ತರವೇ ಪ್ಲಸ್‌ ಪಾಯಿಂಟ್‌. ನನಗೆ ಸರಿಹೊಂದು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಕಾಯುತ್ತಿದ್ದೇನೆ. ನನ್ನ ತಂದೆಗೆ ನಾನು ಐಎಎಸ್‌ ಮಾಡಬೇಕೆಂಬ ಕನಸಿತ್ತು. ಆದ್ದರಿಂದ ತೆರೆಯ ಮೇಲಾದರೂ ಆ ಪಾತ್ರ ಮಾಡಬೇಕೆಂಬುದು ನನ್ನಾಸೆ ಎನ್ನುತ್ತಾರೆ.

Nivishka-patil-(3)

ಸ್ಯಾಂಡಲ್ ವುಡ್‌ ನಲ್ಲಿ ಮಿಂಚುತ್ತಿರುವ ಬೆಳಗಾವಿ ಬೆಡಗಿ

ಉದಯೋನ್ಮುಖ ಕಲಾವಿದೆ, ಪ್ರತಿಭಾವಂತ ನಟಿ ನಿವಿಷ್ಕಾ ಪಾಟೀಲ್ ‌ಸ್ಯಾಂಡಲ್ ವುಡ್‌ ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಟೀನ್‌ ಮಿಸ್‌ ಬೆಳಗಾವಿ ಕಿರೀಟ ಮುಡಿಗೇರಿಸಿಕೊಂಡು ತಮ್ಮ ಕನಸಿನ ಹಾದಿ ಆರಂಭಿಸಿದ ನಿವಿಷ್ಕಾ, `ಮಹಾಸತಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಡಾ. ಶಿವರಾಜ್‌ ಕುಮಾರ್‌ ಬ್ಯಾನರ್‌ ಅಡಿ ನಿರ್ಮಾಣವಾದ `ಮಾನಸ ಸರೋವರ' ಧಾರಾವಾಹಿಯಲ್ಲಿ ಗಮನ ಸೆಳೆದರು. ತಮಿಳು ಕಿರುತೆರೆಗೂ ಕಾಲಿಟ್ಟ ನಿವಿಷ್ಕಾ, `ಬೆಂಕಿ, ಮರೀಚಿ, ಸೋಮು ಸೌಂಡ್‌ ಇಂಜಿನಿಯರ್‌, ಅನಂತ ಪಯಣ, ಅಕ್ಷಯ್‌, ಮುಜುಗರ, ಬೃಂದಾವಿಹಾರಿ,' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ `ಕ್ಯಾಲೆಂಡರ್‌' ಸಿನಿಮಾದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ